ಹೊಸದಿಲ್ಲಿ: ದೇಶದ 11 ರಾಜ್ಯಗಳಲ್ಲಿ ಕನಿಷ್ಠ ಮೂರನೇ ಎರಡರಷ್ಟು ಜನಸಂಖ್ಯೆ ಆಂಟಿಬಾಡಿಗಳನ್ನು ಹೊಂದಿರುವುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ () ಜೂನ್ 14 ರಿಂದ ಜುಲೈ 6ರವರೆಗೆ ನಡೆಸಿದ ಸೆರೋ ಸಮೀಕ್ಷೆಯಿಂದ ಪತ್ತೆಯಾಗಿದೆ. ಶೇ 79ರಷ್ಟು ಫಲಿತಾಂಶದೊಂದಿಗೆ ಈ ಪಟ್ಟಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಶೇ 44.4ರಷ್ಟು ಸಾಮರ್ಥ್ಯ ಹೊಂದಿರುವ ಕೇರಳ ಕೊನೆಯ ಸ್ಥಾನದಲ್ಲಿದೆ. ಈ 11 ರಾಜ್ಯಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ 69.8ರಷ್ಟು ಮಂದಿಯಲ್ಲಿ ಕೊರೊನಾ ವೈರಸ್ ಪ್ರತಿಕಾಯಗಳಿವೆ ಎಂದು ವರದಿ ತಿಳಿಸಿದೆ. ಕೇರಳಕ್ಕಿಂತ ಕೊಂಚ ಮೇಲಿರುವ ಅಸ್ಸಾಂ ಶೇ 50.3 ಹಾಗೂ ಮಹಾರಾಷ್ಟ್ರ ಶೇ 58ರಷ್ಟು ಪ್ರತಿಕಾಯ ರಕ್ಷಣೆ ಹೊಂದಿವೆ. ದೇಶದ 70 ಜಿಲ್ಲೆಗಳಲ್ಲಿ ಐಸಿಎಂಆರ್ ತನ್ನ ನಾಲ್ಕನೇ ಸುತ್ತಿನ ರಾಷ್ಟ್ರೀ ಸೆರೋ ಸಮೀಕ್ಷೆ ನಡೆಸಿದ್ದು, ಇದರ ಮಾಹಿತಿಯನ್ನು ಆರೋಗ್ಯ ಸಚಿವಾಲಯ ಹಂಚಿಕೊಂಡಿದೆ. ಸಮೀಕ್ಷೆಗೆ ಒಳಪಟ್ಟ ಜನಸಂಖ್ಯೆಯಲ್ಲಿ, ರಾಜಸ್ಥಾನದಲ್ಲಿ ಶೇ 76.2ರಷ್ಟು ಪ್ರತಿಕಾಯ ಸಾಮರ್ಥ್ಯ ಕಂಡುಬಂದಿದೆ. ಬಿಹಾರದಲ್ಲಿ ಶೇ 75.9, ಗುಜರಾತ್ನಲ್ಲಿ ಶೇ 75.3, ಛತ್ತೀಸಗಡ ಶೇ 74.6, ಉತ್ತರಾಖಂಡ ಶೇ 73.1, ಉತ್ತರ ಪ್ರದೇಶದಲ್ಲಿ ಶೇ 71, ಆಂಧ್ರಪ್ರದೇಶದಲ್ಲಿ ಶೇ 70.2, ಕರ್ನಾಟಕದಲ್ಲಿ ಶೇ 69.8, ತಮಿಳುನಾಡಿನಲ್ಲಿ ಶೇ 69.2 ಮತ್ತು ಒಡಿಶಾದಲ್ಲಿ ಶೇ 68.1ರಷ್ಟು ಜನರಲ್ಲಿ ಆಂಟಿಬಾಡಿ ಶಕ್ತಿ ಇದೆ ಎಂದು ವರದಿ ತಿಳಿಸಿದೆ.
from India & World News in Kannada | VK Polls https://ift.tt/3i93uzq