ಬೊಮ್ಮಾಯಿ ತಂದೆಯ ಹೆಸರಿನಲ್ಲಿದೆ ಐತಿಹಾಸಿಕ 'ಸುಪ್ರೀಂ' ತೀರ್ಪು: ಸರ್ಕಾರ ಬಿದ್ದಾಗೆಲ್ಲಾ ಇದರದ್ದೇ ನೆನಪು..!

ಬೆಂಗಳೂರು: ರಾಜಕೀಯ ಕ್ಷಿಪ್ರ ಕ್ರಾಂತಿಯಿಂದಾಗಿ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿ, ಪ್ರಕರಣ ಕೋರ್ಟ್‌ ಮೆಟ್ಟಿಲೇರಿದಾಗ ಪ್ರತೀ ಬಾರಿಯೂ 'ಬೊಮ್ಮಾಯಿ ಪ್ರಕರಣ'ವನ್ನು ಉಲ್ಲೇಖಿಸಲಾಗುತ್ತದೆ. ಆ ಬಗೆಗಿನ ಚರ್ಚೆಗಳು ನಡೆಯುವಾಗ ಈಗಲೂ ಚಾಲ್ತಿಗೆ ಬರುತ್ತದೆ. 2019ರಲ್ಲಿ ಕುಮಾರಸ್ವಾಮಿ ಸರ್ಕಾರ ಪತನವಾದಾಗ, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್‌ ಸರ್ಕಾರ ಪತನವಾದಾಗ 'ಬೊಮ್ಮಾಯಿ ಪ್ರಕರಣ' ಭಾರೀ ಸದ್ದು ಮಾಡಿತ್ತು. ಹಾಗಾದ್ರೆ ಏನದು ಬೊಮ್ಮಾಯಿ ಪ್ರಕರಣ..? ಈ ಬೊಮ್ಮಾಯಿ ಪ್ರಕರಣಕ್ಕೂ ನೂತನ ಸಿಎಂಗೂ ಇರುವ ಸಂಬಂಧ ಏನು..? ಇಲ್ಲಿದೆ ಓದಿ. ಅದು 1989ರ ಏಪ್ರಿಲ್‌ ತಿಂಗಳು. ಆಗಷ್ಟೇ ಜನತಾ ಪಕ್ಷದಿಂದ ಎಸ್‌.ಆರ್‌ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಒಂಬತ್ತು ತಿಂಗಳಾಗಿತ್ತು. ಈ ವೇಳೆ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಬೊಮ್ಮಾಯಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವುದಾಗಿ ಹೇಳಿದ್ದರು. ಅಲ್ಲಗೆ ಬೊಮ್ಮಾಯಿ ಸರ್ಕಾರದ ಬುಡ ಅಲ್ಲಾಡತೊಡಗಿತು. ಬೆಳವಣಿಗೆ ನಡೆದ ಬೆನ್ನಲ್ಲೇ ರಾಜ್ಯಾಪಾಲರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು ಬಹುಮತ ಸಾಬೀತು ಸಮಯಾವಕಾಶ ಕೋರಿದ್ದರು. ಆದರೆ ಮರುದಿನವೇ ರಾಜ್ಯ ಸರ್ಕಾರವನ್ನುವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲ ವೆಂಕಟಸುಬ್ಬಯ್ಯನವರು ಶಿಫಾರಸ್ಸು ಮಾಡಿದರು. ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ತಮ್ಮ ಆಳ್ವಿಕೆ ಹೇರುವ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಅಲ್ಲಿಗೆ ಎಸ್.ಆರ್‌ ಬೊಮ್ಮಾಯಿಯವರ ಸರ್ಕಾರ ಒಂಬತ್ತೇ ತಿಂಗಳಲ್ಲಿ ಪತನವಾಯ್ತು. ಈ ವೇಳೆ ಪ್ರಧಾನಿಯಾಗಿದ್ದವರು ರಾಜೀವ್‌ ಗಾಂಧಿ. ರಾಜ್ಯಪಾಲರ ಈ ನಿರ್ಧಾರವನ್ನು ಪ್ರಶ್ನಿಸಿ ಬೊಮ್ಮಾಯಿ ಹೈ ಕೋರ್ಟ್‌ ಮೆಟ್ಟಿಲೇರಿದರು. ಅರ್ಜಿಯ ತ್ವರಿತ ವಿಚಾರಣೆ ನಡೆಸಿದ ಹೈ ಕೋರ್ಟ್‌ ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನ ಪ್ರಕಾರವೇ ಜಾರಿಗೊಳಿಸಲಾಗಿದೆ ಎಂದು ತೀರ್ಪಿತ್ತಿತ್ತು. ಅಲ್ಲಿಯೂ ಬೊಮ್ಮಾಯಿಯವರಿಗೆ ಹಿನ್ನಡೆಯಾಯ್ತು. ಇದಾದ ಬಳಿಕ ಬೊಮ್ಮಾಯಿ ಸುಪ್ರೀಂ ಕೋರ್ಟ್‌ ಕದ ತಟ್ಟಿದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸುಪ್ರೀಂಕೋರ್ಟ್, ಸರ್ಕಾರವೊಂದು ಬಹುಮತ ಹೊಂದಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸಂವಿಧಾನದ ವೇದಿಕೆ ವಿಧಾನಸಭೆಯ ಅಧಿವೇಶನವೇ ಹೊರತು ರಾಜಭವನ ಅಲ್ಲ. ಸಂವಿಧಾನದ 356ನೇ ವಿಧಿ ರಾಷ್ಟ್ರಪತಿಗೆ ನೀಡಿರುವುದು ಷರತ್ತುಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ ಎಂಬ ಐತಿಹಾಸಿಕ ತೀರ್ಪನ್ನು ನೀಡಿತ್ತು. ಈ ಐತಿಹಾಸಿಕ ತೀರ್ಪು 'ಬೊಮ್ಮಾಯಿ ಪ್ರಕರಣವೆಂದೇ ಹೆಸರು ಗಳಿಸಿದೆ. ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ರಾಜ್ಯ ಸರ್ಕಾರಗಳನ್ನು ಮಣಿಸುವ ಹುನ್ನಾರವನ್ನು ತಡೆಗಟ್ಟುವ ಸಂವಿಧಾನದ ಪರಿಚ್ಛೇದ 356 ರ ದುರ್ಬಳಕೆ ವಿರುದ್ಧ ಸುಪ್ರೀಂ ಕೋರ್ಟ್‌‌‌‌‌ ಪ್ರಕಟಿಸಿದ ಐತಿಹಾಸಿಕ ತೀರ್ಪು ಬೊಮ್ಮಾಯಿ ಅವರ ಹೆಸರನ್ನು ಶಾಶ್ವತವಾಗಿರಿಸುತ್ತದೆ.


from India & World News in Kannada | VK Polls https://ift.tt/3i7eXzs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...