ಬೆಂಗಳೂರು: ಬಿಎಸ್ ಯಡಿಯೂರಪ್ಪ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಈಗ ನೂತನ ಮುಖ್ಯಮಂತ್ರಿ ಪರ ಫುಲ್ ಬ್ಯಾಟಿಂಗ್ ಮಾಡಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಬಸನಗೌಡ ಪಾಟೀಲ್ ಯತ್ನಾಳ್ ಆತ್ಮೀಯ ಮಾತುಗಳನ್ನಾಡಿದ್ದಾರೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಇನ್ನು ಮೇಲಾದರೂ ಆಡಳಿತದಲ್ಲಿ ಕುಟುಂಬ ಹಸ್ತಕ್ಷೇಪ ಇರುವುದಿಲ್ಲ ಮತ್ತು ಭ್ರಷ್ಟಾಚಾರ ಇರುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. ನಾನು ಗಡ್ಡ ಬಿಟ್ಟಾಗ ನಾನು ಶಿವಾಜಿಯಾಗಿದ್ದೆ. ಆದರೆ ಗಡ್ಡ ತೆಗೆದ ನಂತರ ನಾನೀಗ ಬಸವಣ್ಣ ರೀತಿ ಇದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ ನಗೆ ಚಟಾಕಿ ಹಾರಿಸಿದರು.
from India & World News in Kannada | VK Polls https://ift.tt/3zLX13k