ಹೊಸ ದಿಲ್ಲಿ: ದೇಶದ ಮುನ್ನೂರಕ್ಕೂ ಹೆಚ್ಚಿನ ಗಣ್ಯರ ವಿರುದ್ಧ ನಡೆದಿದೆ ಎನ್ನಲಾದ ಪೆಗಾಸಸ್ ಬೇಹುಗಾರಿಕೆ ಕುರಿತು ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕು ಎಂದು ವಿವಿಧ ಕ್ಷೇತ್ರಗಳ ಪ್ರಮುಖರು ಮನವಿ ಮಾಡಿದ್ದಾರೆ.ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕು ಹೋರಾಟಗಾರರು, ಮಹಿಳಾ ಹಕ್ಕುಗಳ ಹೋರಾಟಗಾರರು ಸೇರಿದಂತೆ 500ಕ್ಕೂ ಹೆಚ್ಚಿನ ಗಣ್ಯರು ಹಾಗೂ ಸಂಸ್ಥೆಗಳು ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿಗೆ ಪತ್ರ ಬರೆದು, ಪ್ರಕರಣದ ತೀವ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.'ದೇಶದ ಆತ್ಮವನ್ನೇ ನಡುಗಿಸಿರುವ ಕದ್ದಾಲಿಕೆ ಪ್ರಕರಣ ಲಘುವಾಗಿ ಪರಿಗಣಿಸುವಂತದ್ದಲ್ಲ. ಇದರ ಆಳ-ಅಗಲ ಏನು ಎನ್ನುವುದು ಜನರಿಗೆ ತಿಳಿಯಬೇಕು. ಅದಕ್ಕೆ ಸೂಕ್ತ ತನಿಖೆ ಅನಿವಾರ್ಯ. ಸುಪ್ರೀಂ ಕೋರ್ಟ್ ಮಾತ್ರ ಈ ದಿಸೆಯಲ್ಲಿ ನ್ಯಾಯ ಒದಗಿಸಬಲ್ಲದು' ಎಂದು ಹೇಳಿದ್ದಾರೆ.ಭಾರತ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಹತ್ತಾರು ರಾಷ್ಟ್ರಗಳು ಪೆಗಾಸಸ್ ಸ್ಪೈವೇರ್ ಅನ್ನು ಖರೀದಿ ಮಾಡಿವೆ. ರಕ್ಷಣಾ ಉದ್ದೇಶಕ್ಕೆ ಮಾತ್ರ ಈ ಸಾಫ್ಟ್‌ವೇರ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಈ ನಿಯಮ ಮೀರಿ ಅನೇಕ ಸರಕಾರಗಳು ದುರ್ಬಳಕೆ ಮಾಡಿಕೊಂಡಿವೆ ಎಂದು ದೂರಲಾಗಿದೆ.

ದೇಶದ ಮುನ್ನೂರಕ್ಕೂ ಹೆಚ್ಚಿನ ಗಣ್ಯರ ವಿರುದ್ಧ ನಡೆದಿದೆ ಎನ್ನಲಾದ ಪೆಗಾಸಸ್ ಬೇಹುಗಾರಿಕೆ ಕುರಿತು ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕು ಎಂದು ವಿವಿಧ ಕ್ಷೇತ್ರಗಳ ಪ್ರಮುಖರು ಮನವಿ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕು ಹೋರಾಟಗಾರರು, ಮಹಿಳಾ ಹಕ್ಕುಗಳ ಹೋರಾಟಗಾರರು ಸೇರಿದಂತೆ 500ಕ್ಕೂ ಹೆಚ್ಚಿನ ಗಣ್ಯರು ಹಾಗೂ ಸಂಸ್ಥೆಗಳು ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿಗೆ ಪತ್ರ ಬರೆದು, ಪ್ರಕರಣದ ತೀವ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
'ದೇಶದ ಆತ್ಮವನ್ನೇ ನಡುಗಿಸಿರುವ ಕದ್ದಾಲಿಕೆ ಪ್ರಕರಣ ಲಘುವಾಗಿ ಪರಿಗಣಿಸುವಂತದ್ದಲ್ಲ. ಇದರ ಆಳ-ಅಗಲ ಏನು ಎನ್ನುವುದು ಜನರಿಗೆ ತಿಳಿಯಬೇಕು. ಅದಕ್ಕೆ ಸೂಕ್ತ ತನಿಖೆ ಅನಿವಾರ್ಯ. ಸುಪ್ರೀಂ ಕೋರ್ಟ್ ಮಾತ್ರ ಈ ದಿಸೆಯಲ್ಲಿ ನ್ಯಾಯ ಒದಗಿಸಬಲ್ಲದು' ಎಂದು ಹೇಳಿದ್ದಾರೆ.
ಇಸ್ರೇಲ್ ಕಂಪನಿ ವಿರುದ್ಧ ಗುಮ್ಮ..!

'ಇಸ್ರೇಲ್ ಕಂಪನಿ ಎನ್‌ಎಸ್‌ಒ ತಯಾರಿಸಿರುವ 'ಪೆಗಾಸಸ್ ಸ್ಪೈವೇರ್' ಈಗ ಸಂಶಯಕ್ಕೆ ಗುರಿಯಾಗಿದೆ. ವ್ಯಾಪಕ ದುರ್ಬಳಕೆಗೆ ಒಳಗಾದ ಆರೋಪ ಅದರ ವಿರುದ್ಧ ಕೇಳಿ ಬಂದಿದೆ. ದೇಶದಲ್ಲಿ ಈ ಸಂಶಯಾತ್ಪಕ ಸ್ಪೈವೇರ್ ಮಾರಾಟ, ವರ್ಗಾವಣೆ ಮತ್ತು ಬಳಕೆ ಮಾಡಬಾರದು. ತಕ್ಷಣ ಅದರ ತಡೆಗೆ ಆದೇಶ ನೀಡಬೇಕು' ಎಂದು ಈ ಗಣ್ಯರು ಮನವಿ ಮಾಡಿದ್ದಾರೆ.
ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಕೋರ್ಟ್ ಸಿಬ್ಬಂದಿ ವಿರುದ್ಧವೂ ಪೆಗಾಸಸ್ ಕದ್ದಾಲಿಕೆ ನಡೆಸಲಾಗಿದೆ ಎನ್ನುವ ಆರೋಪ ಕುರಿತೂ ಗಣ್ಯರು ತಮ್ಮ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದು, ಮಹಿಳೆಯರು ಇದರ ಬಲಿಪಶುಗಳಾಗಿರುವುದು ಕಳವಳಕಾರಿ ಸಂಗತಿ ಎಂದಿದ್ದಾರೆ.
ಸಾಮಾಜಿಕ ಹೋರಾಟಗಾರರಾದ ಅರುಣಾ ರಾಯ್, ಅಂಜಲಿ ಭಾರದ್ವಾಜ್, ಹರ್ಷ ಮಂಡೇರ್, ಖ್ಯಾತ ವಕೀಲೆ ವೃಂದಾ ಗ್ರೋವರ್, ಝುಮಾ ಸೇನ್ ಪತ್ರಕ್ಕೆ ಸಹಿ ಹಾಕಿದ ಗಣ್ಯರಲ್ಲಿ ಸೇರಿದ್ದಾರೆ.
ಪಿಂಗ್ ಪಾಂಗ್ ಪಂದ್ಯ: ತರೂರ್ ಅಣಕ

ಪೆಗಾಸಸ್ ಪಿತೂರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದ್ದ ಸಂಸದೀಯ ಸ್ಥಾಯಿ ಸಮಿತಿ ವಿರುದ್ಧ ಬಿಜೆಪಿ ಸದಸ್ಯರು ತಿರುಗಿ ಬಿದ್ದಿರುವುದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ. 'ಪಿತೂರಿ ಬಯಲಿಗೆಳೆಯುವ ದಿಸೆಯಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ದಿಟ್ಟ ಹೆಜ್ಜೆ ಇರಿಸಿತ್ತು. ಇದರ ಉದ್ದೇಶವನ್ನು ಅರ್ಥ ಮಾಡಿಕೊಳ್ಳದ ಕೆಲವು ದುಷ್ಟಶಕ್ತಿಗಳು ತಿರುಗಿಬಿದ್ದವು. ವಿಚಾರಣೆ ವಿಷಯದಲ್ಲಿ ಅವರು ಸಂಸದೀಯ ಸ್ಫೂರ್ತಿ ಮರೆತು, 'ಪಿಂಗ್ ಪಾಂಗ್ ಪಂದ್ಯ' (ಟೇಬಲ್ ಟೆನಿಸ್ ಮಾದರಿಯ ಪಂದ್ಯ)ಕ್ಕೆ ಇಳಿದಿದ್ದಾರೆ' ಎಂದು ಟೀಕಿಸಿದ್ದಾರೆ. ತರೂರ್ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲು ಬಿಜೆಪಿ ಮುಂದಾಗಿದ್ದು, ಅವರ ವಿರುದ್ಧ ಬುಧವಾರ ನಿಲುವಳಿ ಸೂಚನೆ ಮಂಡಿಸಲಾಗಿದೆ.
ಪೆಗಾಸಸ್ ದುರ್ಬಳಕೆ, ಎನ್‌ಎಸ್‌ಒ ಕಚೇರಿ ತಪಾಸಣೆ

ದುರ್ಬಳಕೆ ಆರೋಪಕ್ಕೆ ಒಳಗಾಗಿರುವ ಬೇಹುಗಾರಿಕೆ ಸಾಫ್ಟ್‌ವೇರ್ ತಯಾರಿಕಾ ಕಂಪನಿ 'ಎನ್‌ಎಸ್‌ಒ ಗ್ರೂಪ್'ನ ಜರುಸಲೆಮ್ ಕಚೇರಿಗೆ ಇಸ್ರೇಲಿ ರಕ್ಷಣಾ ಸಚಿವಾಲಯದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಭದ್ರತಾ ಉದ್ದೇಶಕ್ಕೆ ಖರೀದಿ ಮಾಡಿರುವ ಪೆಗಾಸಸ್ ಸ್ಪೈವೇರ್ ಅನ್ನು ವಿವಿಧ ದೇಶಗಳು ರಾಜಕೀಯ ಪಿತೂರಿಗೆ ದುರ್ಬಳಕೆ ಮಾಡಿವೆ ಎಂದು ಆರೋಪಿಸಲಾಗಿದೆ. 'ಒಪ್ಪಂದದ ನಿಯಮಗಳು ಬಿಗಿಯಾಗಿದ್ದು, ಅಂತಹ ದುರ್ಬಳಕೆ ಅಸಾಧ್ಯ' ಎಂದು ಎನ್‌ಎಸ್‌ಒ ಸ್ಪಷ್ಟಪಡಿಸಿದೆ. ಏತನ್ಮಧ್ಯೆ, ಇಸ್ರೇಲಿ ಸರಕಾರ ಕೂಡ ಈ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿತ್ತು. ಕೊನೆಗೆ ಆ ಕಳಂಕದಿಂದ ಪಾರಾಗಲು ಸರಕಾರ ಸ್ವಯಂ ಪ್ರೇರಿತ ಪರಿಶೀಲನೆ ನಡೆಸಿದ್ದು, ಸ್ಪೈವೇರ್ ನಿರ್ಮಾತೃ ಸಂಸ್ಥೆ ಅದನ್ನು ಸ್ವಾಗತಿಸಿದೆ.
'ನಾವು ತೆರೆದ ಪುಸ್ತಕ' ಎಂದು ಸ್ಪಷ್ಟನೆ ನೀಡಿದ ಸಂಸ್ಥೆ..!

'ನಾವು ಯಾವುದನ್ನೂ ರಹಸ್ಯವಾಗಿ ಇರಿಸಿಲ್ಲ. ಎಲ್ಲವೂ ತೆರೆದ ಪುಸ್ತಕ. ಯಾರು ಏನು ಬೇಕಾದರೂ ವಿಚಾರಣೆ ಮಾಡಲಿ, ಮಾಹಿತಿ ನೀಡುತ್ತೇವೆ. ಗುರುವಾರ ಇಸ್ರೇಲಿ ರಕ್ಷಣಾ ಸಚಿವಾಲಯದ ತಜ್ಞರ ತಂಡ ನಮ್ಮ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಂಪೂರ್ಣ ಪಾರದರ್ಶಕವಾಗಿ ಅವರಿಗೆ ಮಾಹಿತಿ ನೀಡಿದ್ದಾಗಿದೆ. ನಮ್ಮದು ವಂಚಕ ಕಂಪನಿ ಅಲ್ಲ. ಯಾರೋ ಮಾಡುವ ಆಧಾರ ರಹಿತ ಹುಸಿ ಆರೋಪಗಳಿಂದ ನಮಗೆ ಧಕ್ಕೆಯೂ ಇಲ್ಲ' ಎಂದು ಎನ್‌ಎಸ್‌ಒ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಭಾರತ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಹತ್ತಾರು ರಾಷ್ಟ್ರಗಳು ಪೆಗಾಸಸ್ ಸ್ಪೈವೇರ್ ಅನ್ನು ಖರೀದಿ ಮಾಡಿವೆ. ರಕ್ಷಣಾ ಉದ್ದೇಶಕ್ಕೆ ಮಾತ್ರ ಈ ಸಾಫ್ಟ್‌ವೇರ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಈ ನಿಯಮ ಮೀರಿ ಅನೇಕ ಸರಕಾರಗಳು ದುರ್ಬಳಕೆ ಮಾಡಿಕೊಂಡಿವೆ ಎಂದು ದೂರಲಾಗಿದೆ. 50 ಸಾವಿರಕ್ಕೂ ಹೆಚ್ಚಿನ ಗಣ್ಯರ ಫೋನ್‌ಗಳನ್ನು ಪೆಗಾಸಸ್ ಬಳಸಿ ಕದ್ದಾಲಿಕೆ ಮಾಡಲಾಗಿದೆ ಎಂದು ಮಾಧ್ಯಮ ಒಕ್ಕೂಟ ವರದಿ ಮಾಡಿದೆ.
from India & World News in Kannada | VK Polls https://ift.tt/3loasD1