‘ಹಣಕ್ಕಾಗಿ ಪೀಡಿಸುತ್ತಿದ್ದ ನನ್ನ ಗಂಡನಿಗೆ ಶಿಕ್ಷೆ ನೀಡಿ’; ವಿಡಿಯೋ ಮಾಡಿ ವಿವಾಹಿತೆ ಆತ್ಮಹತ್ಯೆ

ಬೆಂಗಳೂರು: ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿಡಿಯೊ ಮಾಡಿರುವ ಮಹಿಳೆಯೊಬ್ಬರು ಬನಶಂಕರಿಯ ಕದಿರೇನಹಳ್ಳಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೀಪಿಕಾ (26) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು, ಪತಿ ಜಯಕುಮಾರ್‌ ವಿರುದ್ಧ ಆರೋಪ ಮಾಡಿರುವ ದೀಪಿಕಾ, ಚಿತ್ರಹಿಂಸೆ ನೀಡಿರುವ ಪತಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ತಂದೆ-ತಾಯಿ ಇಲ್ಲದೇ ಮಾವ ಮತ್ತು ಸಹೋದರನ ಆಶ್ರಯದಲ್ಲಿ ಬೆಳೆದಿದ್ದ ದೀಪಿಕಾ, ಪತಿ ಕಿರುಕುಳದಿಂದ ನೊಂದು ತವರು ಮನೆಗೆ ಹೋಗಿದ್ದರು. ಅದಾದ ಬಳಿಕ ಏಕಾಏಕಿ ಯಾರಿಗೂ ಹೇಳದೆ ಬೆಂಗಳೂರಿನಲ್ಲಿರುವ ಪತಿ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬನಶಂಕರಿ ಠಾಣೆಯಲ್ಲಿ ಪತಿ ಜಯಕುಮಾರ್‌ ವಿರುದ್ಧ ಕೇಸ್‌ ದಾಖಲಾಗಿದೆ. ಸಾವಿಗೂ ಮುನ್ನ ತಾನು ಮಾಡಿರುವ ವಿಡಿಯೋದಲ್ಲಿ ದೀಪಿಕಾ, ‘ಹಣಕ್ಕಾಗಿ ನನಗೆ ಮತ್ತು ನನ್ನ ಮಗನ ಮೇಲೆ ಹಲ್ಲೆಮಾಡಿ ದೈಹಿಕ ಹಿಂಸೆ ನೀಡಿದ್ದಾರೆ. ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಪತಿ, ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದ. ಡೈವೋರ್ಸ್‌ ನೀಡುವಂತೆ ಬಲವಂತ ಮಾಡುತ್ತಿದ್ದ. ಇಲ್ಲದಿದ್ದರೆ ಹಣ ನೀಡುವಂತೆ ಬಲವಂತ ಮಾಡುತ್ತಿದ್ದ. ಹಿಂಸೆ ಸಹಿಸಿಕೊಂಡಿದ್ದೆ. ಆದರೆ, ಹಿಂಸೆ ಮುಂದುವರಿದಿತ್ತು. ಬೇಸತ್ತು ತವರೂರಾದ ಅಜ್ಜಂಪುರಕ್ಕೆ ಹೋಗಿದ್ದೆ. ಅನಾರೋಗ್ಯದಿಂದ ಮಗನನ್ನು ಕಳೆದುಕೊಂಡೆ. ನನ್ನ ಮಗನನ್ನು ಕಳೆದುಕೊಂಡು ಈಗ ನನಗೆ ಬದುಕಲು ಆಗುತ್ತಿಲ್ಲ.’ ಎಂದು ಆತ್ಮಹತ್ಯೆಗೆ ಮುನ್ನ ಮಾಡಿರುವ ವಿಡಿಯೋದಲ್ಲಿ ದೀಪಿಕಾ ನೋವು ತೋಡಿಕೊಂಡಿದ್ದಾರೆ.


from India & World News in Kannada | VK Polls https://ift.tt/2P8llLp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...