ತುಮಕೂರು ಜಿಲ್ಲಾದ್ಯಂತ ಈ ವರ್ಷ ಹುಣಸೆ ಇಳುವರಿ ಅಧಿಕ: ಉತ್ತಮ ಬೆಲೆ ದೊರಕುವ ವಿಶ್ವಾಸ!

ಚಂದನ್‌ ಡಿ.ಎನ್‌. ಗುಬ್ಬಿ ತುಮಕೂರು: ಜಿಲ್ಲೆಯಾದ್ಯಾಂತ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿದ್ದರಿಂದ, ಮಳೆಯಾಶ್ರಿತ ಮತ್ತು ರೈತರ ಪರ್ಯಾಯ ಬೆಳೆ, ಒಣ ಬೇಸಾಯ ತೋಟಗಾರಿಕೆ ಬೆಳೆ ಹುಣಸೆ ಹಣ್ಣಿನ ಇಳುವರಿ ಉತ್ತಮವಾಗಿದ್ದು, ಬೆಳೆಗಾರರು ಅತ್ಯುತ್ತಮ ಏರಿಕೆ ನಿರೀಕ್ಷೆಯಲಿದ್ದಾರೆ. ಜಿಲ್ಲೆಯ ಹತ್ತು ತಾಲೂಕಿನ ವ್ಯಾಪ್ತಿಯಲ್ಲಿ 6902 ಹೆಕ್ಟರ್‌ ಪ್ರದೇಶದಲ್ಲಿ ಹುಣಸೆ ಬೆಳೆ ಬೆಳೆಯಲಾಗುತ್ತಿದೆ. ಶಿರಾ, ಮಧುಗಿರಿ, ಪಾವಗಡದಲ್ಲಿ ಹುಣಸೆ ಮರಗಳ ಸಂಖ್ಯೆ ಹೇರಳವಾಗಿದೆ. ಕಳೆದ ಬಾರಿ ಹೇರಳವಾಗಿ ಇಳುವರಿ ಬರುವುದರ ಜತೆಗೆ ಉತ್ತಮ ಬೆಲೆಯೂ ಇತ್ತು. ಆದರೆ, ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಂಡಿದ್ದರಿಂದ ಉತ್ತಮ ಮಾರುಕಟ್ಟೆ ಸಿಗದೆ ಹಲವು ಬೆಳೆಗಾರರು ಹುಣಸೆ ಹಣ್ಣನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಯಿತು. ಆದರೆ, ಪ್ರಸ್ತುತ ವರ್ಷ ಹುಣಸೆ ಬೆಳೆಗಾರರು ಮತ್ತು ವ್ಯಪಾರಸ್ಥರು ಹಿಂದಿನ ವರ್ಷದ ನಷ್ಟವನ್ನು ತುಂಬಿಸಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ಒಣಬೇಸಾಯ ತೋಟಗಾರಿಕೆ ಬೆಳೆಯಾಗಿರುವ ಹುಣಸೆ ಕಡಿಮೆ ಖರ್ಚಿನ ನಿರ್ವಹಣೆ. ಮಳೆ ನೀರಿನ ಆಶ್ರಯದಲ್ಲೇ ಬೆಳೆಯುವುದರಿಂದ ಹುಣಸೆ ಬೆಳೆ ರೈತರಿಗೆ ಲಾಭದಾಯಕವಾಗಿದೆ. ಚಿಕ್ಕ ಸಸಿಗಳಿರುವ ಸಂದರ್ಭದಲ್ಲಿ ಬಿಟ್ಟರೆ ಉಳಿದಂತೆ ಹೆಚ್ಚಾಗಿ ನಿರ್ವಹಣೆಯ ಅಗತ್ಯವಿರುವುದಿಲ್ಲ. ಹೆಚ್ಚು ರೋಗ ತಗುಲದಿರುವ ಬೆಳೆಯೂ ಆಗಿರುವುದರಿಂದ ಬಯಲು ಸೀಮೆ ಮಳೆಯಾಶ್ರಿತ ಜಿಲ್ಲೆಗಳಲ್ಲಿ ರೈತರು ಪ್ರತ್ಯೇಕ ಬೆಳೆಯಾಗಿ ಇದನ್ನು ಬೆಳೆಯಬಹುದಾಗಿದೆ. ನೈಸರ್ಗಿಕ ಕೃಷಿಯಾಗಿರುವ ಹುಣಸೆಯನ್ನು ಜಿಲ್ಲೆಯಲ್ಲಿ ಬೆರಳೆಣಿಕೆ ರೈತರನ್ನು ಬಿಟ್ಟರೆ ಉಳಿದಂತೆ ಎಲ್ಲೂ ಪ್ಲಾಂಟೇಷನ್‌ ರೂಪದಲ್ಲಿ ಹುಣಸೆ ಬೆಳೆದಿಲ್ಲ. ಸಾಮಾನ್ಯವಾಗಿ ಎರಡು ವರ್ಷಕ್ಕೆ ಒಂದು ಬಾರಿ ಹುಣಸೆ ಹೆಚ್ಚಿನ ಇಳುವರಿ ನೀಡುತ್ತದೆ. ಅಲ್ಲಲ್ಲಿ ತೋಟಗಳಲ್ಲಿ, ಕಣದ ಜಾಗದಲ್ಲಿ, ರಸ್ತೆ ಬದಿ ಹಾಗೂ ಖಾಲಿ ನಿವೇಶನ, ಹಿತ್ತಲುಗಳು, ತಗ್ಗು ದಿಣ್ಣೆ ಪ್ರದೇಶದಲ್ಲಿ ಹುಣಸೆ ಬೆಳೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಹುಣಸೆ ಹಣ್ಣಿಗೆ 140 ರೂ.ಗಳಿಂದ 150 ರೂ.ಗಳವರೆಗೆ ಇದೆ. ಹುಣಸೆ ಹಣ್ಣಿನ ಗುಣಮಟ್ಟದ ಮೇಲೆ ಬೆಲೆ ಏರಿಕೆಯಾಗುತ್ತದೆ. ಈ ಬಾರಿ ಕೆಲವು ಕಡೆ ಮಾತ್ರ ಹುಣಸೆ ಹಣ್ಣಿನ ಇಳುವರಿ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆಯೂ ದಟ್ಟವಾಗಿದೆ. ಒಂದು ಮರಕ್ಕೆ 5 ಸಾವಿರದಿಂದ ಹಿಡಿದು ಹತ್ತು ಸಾವಿರದವರೆಗೂ ವ್ಯಾಪಾರವಾಗುತ್ತದೆ. ಮರದಿಂದ ಹಣ್ಣನ್ನು ಇಳಿಸಿ ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ತರುವಷ್ಟರಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ಒಂದು ಮರಕ್ಕೆ ಒಂದು ಸಾವಿರದಿಂದ ಮೂರು ಸಾವಿರದವರೆಗೂ ಲಾಭ ಸಿಗಲಿದೆ. ಕೆಲವು ಭಾಗಗಳಲ್ಲಿ ಹುಣಸೆ ಬೆಳೆಗಾರರೇ ಸಂಸ್ಕರಣೆ ಮಾಡುವುದರಿಂದ ಹೆಚ್ಚಿನ ಲಾಭ ಕೈಸೇರುತ್ತಿದೆ ಎನ್ನುತ್ತಾರೆ ಹುಣಸೆ ಬೆಳೆಗಾರ ಹೂವಿನಕಟ್ಟೆ ವಸಂತಯ್ಯ. ಜಿಲ್ಲೆಯಲ್ಲಿ ಹುಣಸೆಬೆಳೆ ಇಳುವರಿ ಉತ್ತಮವಾಗಿದೆ. ಮಳೆ ನೀರು ಆಶ್ರಿತ ಬೆಳೆಯಾಗಿದ್ದು ಕೀಟ ಮತ್ತು ರೋಗಬಾಧೆ ಕಡಿಮೆ. ನಿರ್ವಹಣೆ ಮಾಡುವುದೂ ಸುಲಭ. ತುಮಕೂರು ಜಿಲ್ಲೆಯಲ್ಲಿ ಒಣಬೇಸಾಯದಲ್ಲಿ ಹುಣಸೆ ಬೆಳೆಯುವುದು ಆದಾಯದಾಯಕವಾಗಿದೆ. ಬೇರೆ ಬೆಳೆಗಳಿಗೆ ಹೋಲಿಸಿದರೆ ಕಡಿಮೆ ನೀರು, ಕಡಿಮೆ ನಿರ್ವಹಣೆ ಇರುವುದರಿಂದ ರೈತರು ಹುಣಸೆಯನ್ನು ಪರ್ಯಾಯ ಬೆಳೆಯಾಗಿ ಬೆಳೆಯುತ್ತಾರೆ. ಇದರಿಂದ ಹೆಚ್ಚು ಲಾಭ ಗಳಿಸಬಹುದು. ನಮ್ಮ ನರ್ಸರಿಯಲ್ಲಿ ಹುಣಸೆ ಸಸಿ ಸಿಗುತ್ತದೆ. ಉದ್ಯೋಗ ಖಾತ್ರಿಯಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಬಿ.ರಘು, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ತುಮಕೂರು


from India & World News in Kannada | VK Polls https://ift.tt/3tgKR0b

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...