ಮುಂಬೈ ವಿರುದ್ಧ ಸೋಲಿನ ಬೆನ್ನಲ್ಲೆ ಅಭಿಮಾನಿಗಳಿಂದ ಟೀಕೆಗೆ ಗುರಿಯಾದ ಅನಿಲ್‌ ಕುಂಬ್ಳೆ!

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ತಂಡದಲ್ಲಿ ಹೆಚ್ಚು ಆಟಗಾರರು ಕರ್ನಾಟಕದವರಾಗಿದ್ದರಿಂದ ಈ ಫ್ರಾಂಚೈಸಿಯನ್ನು ಮಿನಿ ಕರ್ನಾಟಕ ಎಂದೇ ಕರೆಯಲಾಗಿತ್ತು. ಆದರೆ, ಇದೇ ವಿಷಯದಲ್ಲಿ ಇದೀಗ ಮುಖ್ಯ ಕೋಚ್‌ ಹಾಗೂ ನಾಯಕ ಕೆ.ಎಲ್‌ ರಾಹುಲ್‌ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಎಲ್‌ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಠಿಣ ಹೋರಾಟ ನಡೆಸಿತಾದರೂ ಪಂಜಾಬ್‌, ಅಂತಿಮವಾಗಿ ಸೂಪರ್‌ ಓವರ್‌ನಲ್ಲಿ ಸೋಲು ಅನುಭವಿಸಿತ್ತು. ನಂತರ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು. ಒಟ್ಟು ನಾಲ್ಕು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಕೇವಲ ಒಂದೇ ಪಂದ್ಯದಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿದ ಬೆನ್ನಲ್ಲೆ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಅಬು ಧಾಬಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 191 ರನ್‌ಗಳನ್ನು ಗಳಿಸಿತ್ತು. ಮುಂಬೈ ಪರ ಅದ್ಭುತ ಪ್ರದರ್ಶನ ತೋರಿದ ರೋಹಿತ್‌ ಶರ್ಮಾ 45 ಎಸೆತಗಳಲ್ಲಿ 70 ರನ್‌ಗಳನ್ನು ಸಿಡಿಸಿದರು. ಕೀರನ್‌ ಪೊಲಾರ್ಡ್ ಹಾಗೂ ಹಾರ್ದಿಕ್‌ ಪಾಂಡ್ಯ ಜೋಡಿ ಕೊನೆಯ 23 ಎಸೆತಗಳಲ್ಲಿ 67 ರನ್‌ಗಳನ್ನು ಚಿಚ್ಚಿದ್ದರು. ಬಳಿಕ ಗುರಿ ಹಿಂಬಾಲಿಸಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ನಿಗದಿತ 20 ಓವರ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 143 ರನ್‌ಗಳಿಗೆ ಸೀಮಿತವಾಯಿತು. ಪವರ್‌ ಪ್ಲೇನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡ ಬಳಿಕ ಪಂಜಾಬ್‌ ತಂಡ ಮತ್ತೆ ಚೇತರಿಸಿಕೊಳ್ಳಲಿಲ್ಲ. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಕೆ.ಎಲ್‌ ರಾಹುಲ್‌(17) ಹಾಗೂ ಮಯಾಂಕ್‌ ಅಗರ್ವಾಲ್‌(25) ಕಡಿಮೆ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌(11) ಹಾಗೂ ಸರ್ಫರಾಜ್‌ ಖಾನ್‌(7) ನಿರಾಸೆ ಹುಸಿಗೊಳಿಸಿದರು. ಆದರೆ, ನಿಕೋಲಸ್‌ ಪೂರನ್‌(44) ಹಾಗೂ ಕೆ ಗೌತಮ್‌ (22*) ಕಠಿಣ ಹೋರಾಟ ನಡೆಸಿತಾದರೂ ಅಮತಿಮವಾಗಿ ಪಂಜಾಬ್‌ 48 ರನ್‌ಗಳಿಂದ ಸೋಲು ಅನುಭವಿಸಿತು. ಪಂದ್ಯದ ಸೋಲಿನ ಬಳಿಕ ಅವರ ಬದಲು ಕರುಣ್‌ ನಾಯರ್‌ ಅವರಿಗೆ ಆಯ್ಕೆ ಮಾಡುತ್ತಿರುವ ಕ್ರಮವನ್ನು ಅಭಿಮಾನಿಗಳು ಪ್ರೆಶ್ನಿಸಿದ್ದಾರೆ. ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ಅವರು, ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದಲ್ಲಿ ಕರ್ನಾಟಕ ಆಟಗಾರರ ಪರವಾಗಿದ್ದಾರೆ ಎಂದು ಹಲವು ಅಭಿಮಾನಿಗಳು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ. ಮಂದೀಪ್‌ ಸಿಂಗ್‌ ಅವರ ಬದಲು ಕರುಣ್‌ ನಾಯರ್‌ ಅವರಿಗೆ ಪದೇ-ಪದೆ ಸ್ಥಾನ ನೀಡುತ್ತಿರುವ ಅನಿಲ್‌ ಕುಂಬ್ಳೆ ನಿರ್ಧಾರದಿಂದ ಪಂಜಾಬ್‌ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಮಂದೀಪ್‌ ಸಿಂಗ್‌ ಇನ್ನೂ ಪ್ರಸಕ್ತ ಆವೃತ್ತಿಯಲ್ಲಿ ಒಂದೂ ಪಂದ್ಯದಲ್ಲಿ ಆಡಿಲ್ಲ. ಇವರ ಸ್ಥಾನದಲ್ಲಿ ಆಡುತ್ತಿರುವ ಕರುಣ್‌ ನಾಯರ್‌ ಮೂರು ಇನಿಂಗ್ಸ್‌ನಲ್ಲಿ ಕ್ರಮವಾಗಿ 1, 15* ಮತ್ತು 0 ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕರುಣ್‌ ನಾಯರ್‌ ಶೂನ್ಯಕ್ಕೆ ಔಟ್‌ ಆಗುತ್ತಿದ್ದಂತೆ, ಅಭಿಮಾನಿಗಳು ಟ್ವಿಟರ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GuB56w

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...