Hijab row: ಹಿಜಾಬ್‌ V/S ಕೇಸರಿ ಶಾಲು ವಿವಾದಕ್ಕೆ ರಾಜಕೀಯ ಬಣ್ಣ: ಕಾಂಗ್ರೆಸ್, ಬಿಜೆಪಿ ಕೆಸರೆರೆಚಾಟ..!

: ಉಡುಪಿ ಸರಕಾರಿ ಕಾಲೇಜಿನಲ್ಲಿ ಆರಂಭಗೊಂಡ ಹಿಜಾಬ್‌ ವಿವಾದ ಇದೀಗ ಬೇರೆ ಜಿಲ್ಲೆಗಳಿಗೆ ಹರಡುತ್ತಿರುವ ನಡುವೆಯೇ ರಾಜಕೀಯ ಬಣ್ಣವನ್ನೂ ಪಡೆದುಕೊಳ್ಳುತ್ತಿದೆ. ಹಿಜಾಬ್‌ ವಿವಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿತ್ತಿದ ವಿಷ ಬೀಜದ ಪ್ರಭಾವ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದರೆ ಏನು ತೊಂದರೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ಜಟಾಪಟಿ ಜೋರಾಗಿದೆ. ಇದರ ನಡುವೆಯೇ ಉಡುಪಿ ಮತ್ತು ಕುಂದಾಪುರ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರ ಪ್ರತಿಭಟನೆ ಮುಂದುವರೆದಿದೆ. ಬೈಂದೂರು ಸರಕಾರಿ ಪಿಯು ಕಾಲೇಜಿನಲ್ಲಿ ಹೊಸದಾಗಿ ವಿವಾದ ತಲೆ ಎತ್ತಿದೆ. ರಾಜ್ಯವನ್ನು ತಾಲಿಬಾನ್‌ ಮಾಡಲು ಬಿಡಲ್ಲ ಎಂದರು ಸುನಿಲ್‌ ಕುಮಾರ್‌ 'ಸಿದ್ದರಾಮಯ್ಯ ಬಿತ್ತಿದ ಜಾತಿ ವಿಷ ಬೀಜದ ಮುಂದುವರಿದ ಭಾಗವೇ ಹಿಜಬ್‌ ಘರ್ಷಣೆ. ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸ ಈ ರಾಜ್ಯದಲ್ಲಿ ಮಾಡಿದ್ದೇ ಸಿದ್ದರಾಮಯ್ಯ' ಎಂದು ಸಚಿವ ಸುನಿಲ್‌ ಕುಮಾರ್‌ ಆರೋಪಿಸಿದ್ದಾರೆ. 'ಪ್ರವಾಸ ಭಾಗ್ಯ, ಶಾದಿ ಭಾಗ್ಯ ಇಟ್ಟುಕೊಂಡು ಜಾತಿ ವಿಷ ಬೀಜ ಬಿತ್ತಿದವರು ಸಿದ್ದರಾಮಯ್ಯ. ಅ ವಿಷ ಬೀಜದ ಮುಂದುವರಿದ ಭಾಗವೇ ಇದು. ಮೊದಲು ಇಸ್ಲಾಂ ಸಂಘಟನೆಗಳು ಇದರ ಹಿಂದೆ ಅಂತ ಅನ್ನಿಸುತ್ತಿತ್ತು. ಈಗ ಸಿದ್ದರಾಮಯ್ಯ, ಖಾದರ್‌ ಹೇಳಿಕೆ ನೋಡಿದ್ರೆ ಇದರ ಹಿಂದೆ ಇವರಿದ್ದಂತೆ ಕಾಣುತ್ತಿದೆ' ಎಂದು ಆರೋಪಿಸಿದರು. 'ಏನೇ ಆದರೂ ಕರ್ನಾಟಕವನ್ನು ತಾಲಿಬಾನ್‌ ಮಾಡಲು ಬಿಡುವುದಿಲ್ಲ' ಎಂದು ಹೇಳಿದರು. 'ಧರ್ಮ, ಮತೀಯವಾದದ ಕಾರಣಕ್ಕೆ ಹೀಗೆ ವಸ್ತ್ರ ಹಾಕಿಕೊಂಡು ಬರುವುದನ್ನು ಸಹಿಸಲಾಗದು. ಸಮವಸ್ತ್ರ ನಿಯಮಕ್ಕೆ ಸಮಿತಿ ರಚಿಸುವುದಾಗಿ ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳು ಕೋರ್ಟ್‌ಗೆ ಹೋಗುತ್ತಾರೆಂದರೆ ಇದರ ಹಿಂದೆ ಯಾವ ಸಂಘಟನೆಯಿದೆ? ಸರಕಾರಿ ಶಾಲೆಯ ಶುಲ್ಕ ಪಾವತಿಸುವುದು ಕಷ್ಟವೆನ್ನುವ ಒಂದು ವಲಯದವರು ಕೋರ್ಟ್‌ಗೆ ಮೆಟ್ಟಿಲೇರುತ್ತಾರೆಂದರೆ ಇದರಲ್ಲಿ ಯಾರ ಕೈವಾಡವಿದೆ? ಇಲ್ಲಿ ಆದ ಘಟನೆಗೆ ಕಾಶ್ಮೀರದಲ್ಲಿ ಇರೋರು ಮಾತಾಡ್ತಾರೆ ಅಂದರೆ ಇದರ ಜಾಲ ದೊಡ್ಡದಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ' ಎಂದು ಆರೋಪಿಸಿದರು. ಪ್ರಿನ್ಸಿಪಾಲ್‌ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ 'ಪಿಯುಸಿ ಹಂತದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬೇಕೆಂದು ಸರಕಾರ ಎಲ್ಲೂ ಹೇಳಿಲ್ಲ. ಕುಂದಾಪುರದ ಸರಕಾರಿ ಕಾಲೇಜೊಂದರ ಪ್ರಾಂಶುಪಾಲರು ಹಿಜಾಬ್‌ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿನ ಗೇಟ್‌ ಬಂದ್‌ ಮಾಡಿ ಪ್ರವೇಶ ನಿರಾಕರಿಸಿರುವುದು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕಿನ ಉಲ್ಲಂಘನೆ. ಅವರನ್ನು ವಜಾಗೊಳಿಸಬೇಕು' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 'ಹಿಜಾಬ್‌ ಧರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ಇತರರಿಗೆ ಏನು ತೊಂದರೆ? ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ಕುಟಿಲ ಪ್ರಯತ್ನವಿದು. ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್‌ ಯಾರು? ಸರಕಾರ ಇದಕ್ಕೆಲ್ಲಾ ಕುಮ್ಮಕ್ಕು ನೀಡಬಾರದು' ಎಂದರು. ಕೋರ್ಟ್‌ನಲ್ಲಿದೆ ಎಂದ ಡಿಕೆಶಿ: 'ಇದು ಬಹಿರಂಗ ಚರ್ಚಿಸುವ ವಿಚಾರವಲ್ಲ. ಧಾರ್ಮಿಕ ಆಚರಣೆಯಂತಹ ಸೂಕ್ಷ್ಮ ವಿಚಾರವಿರುವುದರಿಂದ ಈ ಬಗ್ಗೆ ಒಂದು ಚೌಕಟ್ಟಿನಲ್ಲಿ ಮಾತುಕತೆಯಾಗಬೇಕಾಗುತ್ತದೆ. ಧರ್ಮದ ಹೆಸರಿನಲ್ಲಿ ಮನಸ್ಸಿಗೆ ನೋವುಂಟು ಮಾಡಿಕೊಳ್ಳುವುದಕ್ಕಿಂತ ಊಟ, ಉದ್ಯೋಗ, ಆದಾಯ ತರುವ ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಹೇಳಿದರು. ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಕೆ. ಎಸ್‌. ಈಶ್ವರಪ್ಪ, 'ಶಾಲೆ, ಕಾಲೇಜ್‌ಗಳಲ್ಲಿ ಹಿಜಾಬ್‌ ಧರಿಸುವುದನ್ನು ನಾನು ಖಂಡಿಸುತ್ತೇನೆ. ಕೆಲವರು ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಹಿಂದೂ, ಮುಸ್ಲಿಂ ಎಲ್ಲ ಮಕ್ಕಳು ಸಮವಸ್ತ್ರ ಧರಿಸಿ ಸಹೋದರ, ಸಹೋದರಿಯರಂತೆ ಇರಬೇಕು' ಎಂದು ಹೇಳಿದರು. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್‌. ರವಿಕುಮಾರ್‌ 'ಇದರಲ್ಲಿ ವಿದ್ಯಾರ್ಥಿಗಳ ತಪ್ಪಿಲ್ಲ. ವಿದ್ಯಾರ್ಥಿನಿಯರ ಹಿಂದೆ ಪ್ರಚೋದಕ ಶಕ್ತಿಗಳಿವೆ. ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯಬಾರದು. ಕೇಸರಿ ಶಾಲು ಧರಿಸಿ ಬಂದದ್ದನ್ನೂ ಒಪ್ಪುವಂತಹದ್ದಲ್ಲ. ಸಿದ್ದರಾಮಯ್ಯ, ಬಿ. ಎಸ್‌. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಸಮವಸ್ತ್ರ ಪಾಲನೆ ಇತ್ತು. ಈಗಲೂ ಇದೆ, ಪಾಲಿಸಬೇಕು' ಎಂದು ಆಗ್ರಹಿಸಿದ್ದಾರೆ. ಕ್ಷೇತ್ರದ ಸಮಸ್ಯೆಗೆ ಸ್ಪಂದನೆ ನನ್ನ ಹಕ್ಕು ಇನ್ನು ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್‌ ಯಾರು ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಕೆ. ರಘುಪತಿ ಭಟ್‌, 'ನಾನು ಜನರಿಂದ ಆಯ್ಕೆಯಾದವನು, ನಿಮ್ಮಂತೆ ಸ್ವಕ್ಷೇತ್ರದಲ್ಲಿ ತಿರಸ್ಕೃತಗೊಂಡು ಬೇರೆಯವರ ಕ್ಷೇತ್ರದಲ್ಲಿ ಅವಲಂಬಿತನಾದವನಲ್ಲ. ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು' ಎಂದು ತಿರುಗೇಟು ನೀಡಿದ್ದಾರೆ.


from India & World News in Kannada | VK Polls https://ift.tt/XOCtzJv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...