ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಸೋತರೂ ದಿಲ್ಲಿ ಅಗ್ರ ಸ್ಥಾನ ಅಬಾಧಿತ!

ಬೆಂಗಳೂರು: ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಪರಾಭವಗೊಂಡ ಹೊರತಾಗಿಯೂ ತಂಡ ಟೂರ್ನಿಯ 8ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಗುರುವಾರದ ಅಂತ್ಯಕ್ಕೆ ಅಗ್ರಸ್ಥಾನ ಕಾಯ್ದುಕೊಂಡಿದೆ. ವೈಟ್‌ಫೀಲ್ಡ್‌ನ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ನಡೆದ ಮೊದಲ ಹಣಾಹಣಿಯಲ್ಲಿ ದಬಾಂಗ್‌ ತಂಡ 30-36 ಅಂಕಗಳ ಅಂತರದಿಂದ ಜೈಪುರ ತಂಡಕ್ಕೆ ಶರಣಾಗಿ ಟೂರ್ನಿಯಲ್ಲಿ ತನ್ನ 5ನೇ ಸೋಲಿನ ಆಘಾತಕ್ಕೊಳಗಾಯಿತು. ಆದಾಗ್ಯೂ ಒಟ್ಟಾರೆ 54 ಅಂಕ ಹೊಂದಿರುವ ದಿಲ್ಲಿ ತಂಡ, ಅಂಕಪಟ್ಟಿಯಲ್ಲಿ ಲೀಗ್‌ ಲೀಡರ್‌ ಆಗಿ ಮುಂದುವರಿದಿದೆ. ಅತ್ತ 7ನೇ ಜಯ ದಾಖಲಿಸಿದ ಪಿಂಕ್‌ ಪ್ಯಾಂಥರ್ಸ್‌, ಒಟ್ಟಾರೆ 45 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಬಡ್ತಿ ಹೊಂದಿದೆ. ಪ್ರಥಮಾರ್ಧದ ಅಂತ್ಯಕ್ಕೆ 21-15ರಲ್ಲಿಮೇಲುಗೈ ಸಾಧಿಸಿದ ಜೈಪುರ ತಂಡ, ದ್ವಿತೀಯಾರ್ಧದಲ್ಲಿ ಎದುರಾಳಿ ತಂಡದಿಂದ 15-15ರಲ್ಲಿ ಸಮಬಲದ ಹೋರಾಟ ಎದುರಿಸಿತ್ತಾದರೂ ಅಂತಿಮವಾಗಿ 6 ಅಂಕಗಳಿಂದ ಗೆಲುವಿನ ಕೇಕೆ ಹಾಕಿತು. ಜೈಪುರ ಪರ ಆಲ್‌ರೌಂಡರ್‌ ದೀಪಕ್‌ ಹೂಡ 12 ಅಂಕ ಕಲೆಹಾಕಿದರೆ, ದಬಾಂಗ್‌ ಪರ ಏಕಾಂಗಿ ಹೋರಾಟ ನಡೆಸಿದ ವಿಜಯ್‌ 16 ಅಂಕ ಗಳಿಸಿ ಗಮನ ಸೆಳೆದರು. ತಲೈವಾಸ್‌ಗೆ ಭರ್ಜರಿ ಜಯ: ಅಜಿಂಕ್ಯ ಪವಾರ್‌, ಮಂಜೀತ್‌ ಮತ್ತು ಸಾಗರ್‌ ಅವರ ಅಮೋಘ ಆಟದ ಬಲದಿಂದ ತಮಿಳ್‌ ತಲೈವಾಸ್‌ ತಂಡ ದಿನದ 2ನೇ ಪಂದ್ಯದಲ್ಲಿ43-25 ಅಂಕಗಳ ಅಂತರಿಂದ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿ ಟೂರ್ನಿಯಲ್ಲಿಐದನೇ ಜಯ ದಾಖಲಿಸಿತು. ಮೊದಲ ವಿರಾಮಕ್ಕೆ ರೇಡಿಂಗ್‌ ವಿಭಾಗದಲ್ಲಿ12, ಟ್ಯಾಕಲ್‌ನಲ್ಲಿ 8 ಅಂಕ ಸೇರಿದಂತೆ 22-10ರಲ್ಲಿ ಮುನ್ನಡೆ ಕಾಯ್ದುಕೊಂಡ ತಲೈವಾಸ್‌ ತಂಡ ದ್ವಿತೀಯಾರ್ಧದಲ್ಲೂ ಅದೇ ಲಯ ಕಾಯ್ದುಕೊಂಡಿತು. ಹೀಗಾಗಿ 21-15ರಲ್ಲಿ ಮೇಲು ಸಾಧಿಸುವ ಮೂಲಕ ಗೆಲುವಿನ ಅಂತರವನ್ನು 20 ಅಂಕಗಳ ಸನಿಹ ವಿಸ್ತರಿಸಿಕೊಂಡಿತು. ಈ ಜಯದೊಂದಿಗೆ ಒಟ್ಟಾರೆ 44 ಅಂಕ ಕಲೆಹಾಕಿರುವ ತಲೈವಾಸ್‌ 12 ತಂಡಗಳ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಬಡ್ತಿ ಹೊಂದಿದೆ. ಶುಕ್ರವಾರದ ಪಂದ್ಯಗಳು ಹರಿಯಾಣ ಸ್ಟೀಲರ್ಸ್‌ - ಬೆಂಗಾಲ್‌ ವಾರಿಯರ್ಸ್‌ ಪಂದ್ಯ ಆರಂಭ: ರಾತ್ರಿ 7.30 ದಬಾಂಗ್‌ ದಿಲ್ಲಿ- ಪಂದ್ಯ ಆರಂಭ: ರಾತ್ರಿ 8.30 ಗುಜರಾತ್‌ ಜಯಂಟ್ಸ್‌ - ಪಟನಾ ಪೈರೇಟ್ಸ್‌ ಪಂದ್ಯ ಆರಂಭ: ರಾತ್ರಿ 9.30


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/8LfN0VtaF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...