ಉತ್ತರ ಪ್ರದೇಶದಲ್ಲಿ ಸ್ವರ್ಗವನ್ನೇ ಧರೆಗಿಳಿಸುವ ಭರವಸೆ..! ಪ್ರಣಾಳಿಕೆಯಲ್ಲಿ ಬಿಜೆಪಿ, ಎಎಪಿ, ಕಾಂಗ್ರೆಸ್ ಪೈಪೋಟಿ..!

: ಪಂಚ ರಾಜ್ಯಗಳ ಚುನಾವಣೆ ಪ್ರಚಾರ ಕಾವು ತಾರಕಕ್ಕೇರಿದೆ. ಮತದಾರರ ಮನ ಒಲಿಸಲು ಪ್ರಮುಖ ಪಕ್ಷಗಳು ಎಲ್ಲಿಲ್ಲದ ಕಸರತ್ತು ನಡೆಸಿವೆ. ಪೈಪೋಟಿಯ ಮೇಲೆ ಆಮಿಷಗಳ ಸುರಿಮಳೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಉಚಿತ ವಿದ್ಯುತ್‌ನಿಂದ ಹಿಡಿದು ರೈತರ ಸಾಲ ಮನ್ನಾವರೆಗೆ ಸಾಲು ಸಾಲು ಭರವಸೆಯನ್ನು ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಪ್ರಕಟಿಸಿದ್ದು, ಕುತೂಹಲ ಮೂಡಿಸಿದೆ. ಯುವ ಜನರೇ ಟಾರ್ಗೆಟ್‌: ಉತ್ತರಪ್ರದೇಶದಲ್ಲಿ ದಶಕಗಳಿಂದ ನೆಲ ಕಚ್ಚಿರುವ ಕಾಂಗ್ರೆಸ್‌ ಪಾಲಿಗೆ ಈ ಬಾರಿಯೂ ಅಂತಹ ಭರವಸೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಆದರೂ ನಿರಾಶೆಗೊಳ್ಳದ ಪಕ್ಷ, ಆಕರ್ಷಕ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ವಿಶೇಷವಾಗಿ ಯುವ ಜನರು ಮತ್ತು ಮಹಿಳೆಯರನ್ನು ಟಾರ್ಗೆಟ್‌ ಮಾಡಿಕೊಂಡು ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ವಾದ್ರಾ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕ ಸಂಸ್ಥೆಗಳಲ್ಲಿ ಬಾಕಿ ಉಳಿದಿರುವ 20 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿದೆ. ಇದರ ಲಾಭ ನೇರವಾಗಿ ಯುವ ಜನರಿಗೆ ದಕ್ಕಲಿದೆ. ಇಪ್ಪತ್ತು ಲಕ್ಷದಲ್ಲಿ ಎಂಟು ಲಕ್ಷದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಪ್ರಣಾಳಿಕ ತಿಳಿಸಿದೆ. ವಿದ್ಯಾರ್ಥಿಗಳ ಎಲ್ಲಾ ರೀತಿಯ ಪರೀಕ್ಷಾ ಅರ್ಜಿ ಶುಲ್ಕ ಮನ್ನಾ, ಉಚಿತ ಬಸ್‌ ಮತ್ತು ರೈಲು ಪಾಸ್‌ ವಿತರಣೆ ಭರವಸೆ ನೀಡಿದೆ. ಯುವ ಜನರನ್ನು ವ್ಯಸನ ಮುಕ್ತಗೊಳಿಸಲು ರಾಜ್ಯಾದ್ಯಂತ ಹಲವು ಕಡೆ ಡ್ರಗ್ಸ್‌ ವ್ಯಸನ ವಿಮೋಚನಾ ಕೇಂದ್ರಗಳನ್ನು ಆರಂಭಿಸುವ ಸಂಕಲ್ಪ ಮಾಡಿದೆ. ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಬಿದ್ದಿರುವ 1.5 ಲಕ್ಷ ಶಿಕ್ಷಕರ ಹುದ್ದೆಗಳ ಭರ್ತಿಗೂ ಭರವಸೆ ನೀಡಿದೆ. ಆಪ್‌ಗೆ ರೈತರ ಮೇಲೆ ಮೋಹ: ಉತ್ತರಪ್ರದೇಶದಲ್ಲಿ ತನಗೆ ಅಧಿಕಾರ ಲಭಿಸಿದರೆ ದಿಲ್ಲಿ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನೀಡುವುದಾಗಿ ಆಶ್ವಾಸನೆ ನೀಡಿದೆ. 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಭರವಸೆ ಇತ್ತಿರುವ ಆಪ್‌, ದಿನದ 24 ತಾಸು ಅಡಚಣೆ ಇರದ ವಿದ್ಯುತ್‌ ಒದಗಿಸುವುದಾಗಿ ಹೇಳಿದೆ. ಪ್ರಣಾಳಿಕೆಗೆ 'ಕೇಜ್ರಿವಾಲ್‌ ಗ್ಯಾರಂಟಿ ಕಾರ್ಡ್‌' ಎನ್ನುವ ಆಕರ್ಷಕ ಶೀರ್ಷಿಕೆ ನೀಡಲಾಗಿದೆ. ಕಬ್ಬು ಬೆಳೆಗಾರರ ಬಾಕಿ ಪಾವತಿ ಮತ್ತು ಬೆಂಬಲ ಬೆಲೆ ವಿಷಯದಲ್ಲಿಯೂ ತ್ವರಿತ ಕ್ರಮದ ಆಶ್ವಾಸನೆ ನೀಡಿದೆ. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ಬೆಳೆ ನಷ್ಟಕ್ಕೀಡಾದ ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿ ಸಿದೆ. 10 ಲಕ್ಷ ಸರಕಾರಿ ಹುದ್ದೆ ಭರ್ತಿ, 97 ಸಾವಿರ ಶಿಕ್ಷಕರ ನೇಮಕ, ಸರಕಾರಿ ಹುದ್ದೆಗಳಲ್ಲಿ 80% ಸ್ಥಳೀಯರಿಗೆ ಮೀಸಲು ಸೇರಿ ಹಲವು ಭರವಸೆಗಳನ್ನು ಆಪ್‌ ನೀಡಿದೆ. ಅಪರಾಧ ಮುಕ್ತ ರಾಜ್ಯ: ಕಳೆದ ಐದು ವರ್ಷ ಅತ್ಯುತ್ತಮ ಆಡಳಿತ ನೀಡಿದ , ಮರಳಿ ಅಧಿಕಾರಕ್ಕೆ ಬಂದರೆ ಬಾಕಿ ಉಳಿದಿರುವ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸುವುದಾಗಿ ಭರವಸೆ ನೀಡಿದೆ. ಯುವ ಜನ ಮತ್ತು ಮಹಿಳೆಯರ ಅಭಿವೃದ್ಧಿ ದಿಸೆಯಲ್ಲಿಯೂ ಸಮೃದ್ಧ ಯೋಜನೆಗಳನ್ನು ರೂಪಿಸಿದ್ದು, ಯಾವುದೇ ವಿಳಂಬಕ್ಕೆ ಅವಕಾಶ ನೀಡದೇ ಅವುಗಳನ್ನು ಪೂರ್ಣಗೊಳಿಸುವುದಾಗಿ ಆಶ್ವಾಸನೆ ಇತ್ತಿದೆ. ರಾಜ್ಯವನ್ನು ಸಂಪೂರ್ಣ ಅಪರಾಧ ಮುಕ್ತಗೊಳಿಸುವ ಅಭಿಯಾನ ಮುಂದುವರಿಸುವುದಾಗಿ ಪಕ್ಷ ಭರವಸೆ ನೀಡಿದೆ. ಬಹುತೇಕ ಇನ್ನೊಂದು ಅವಧಿಗೆ ಅಧಿಕಾರ ಉಳಿಸಿಕೊಳ್ಳುವುದು ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಜಾರಿ ಸಾಧ್ಯ ಆಶ್ವಾಸನೆಗಳಿಗೆ ಮಾತ್ರ ಒತ್ತು ನೀಡಿದೆ. ಅಜಾಮ್‌ ಸಮಾಜ್‌ ಪಾರ್ಟಿ: ವಿಧಾನಸಭೆ ಚುನಾವಣೆ ವೇಳೆ ಜನ್ಮ ತಳೆದಿರುವ ಅಜಾಮ್‌ ಸಮಾಜ್‌ ಪಾರ್ಟಿ (ಕಾನ್ಶಿರಾಮ್‌) ಅಧಿಕಾರಕ್ಕೆ ಬಂದರೆ, ಸ್ವರ್ಗವನ್ನೇ ಧರೆಗಿಳಿಸುವ ಭರವಸೆ ನೀಡಿದೆ. ಎಲ್ಲಾ ಜನ ವರ್ಗಕ್ಕೂ ಉಚಿತ ಆರೋಗ್ಯ ಸೇವೆ ಒದಗಿಸುವುದಾಗಿ ತಿಳಿಸಿದೆ. ಉಚಿತ ಶಿಕ್ಷಣ, ಬೀಜ ಮತ್ತು ರಸಗೊಬ್ಬರ ಪೂರೈಕೆ ಮತ್ತು ರೈತರ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದೆ. ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ನೀಡುವುದಾಗಿ ಭರವಸೆ ಇತ್ತಿದೆ.


from India & World News in Kannada | VK Polls https://ift.tt/6orAmEQGz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...