ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತ ಮೃತರ ಸಂಖ್ಯೆ ತುಸು ಇಳಿಕೆಯಾಗಿದೆ. ಗುರುವಾರ ಸೋಂಕಿಗೆ 39 ಜನರು ಬಲಿಯಾಗಿದ್ದು, 5,019 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 52,013ಕ್ಕೆ ಕುಸಿದಿದೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.4.25ರಷ್ಟಿದ್ದು, ಸಾವಿನ ಪ್ರಮಾಣ ಶೇ.0.77ರಷ್ಟಿದೆ. ಇದುವರೆಗೆ 39.17 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 39,534 ಜನರು ಮೃತರಾಗಿದ್ದಾರೆ. ಜ.10ರಂದು 13,923 ಜನರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 38.25 ಲಕ್ಷಕ್ಕೆ ಏರಿಕೆಯಾಗಿದೆ. ಗುರುವಾರ 1.17 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 29,626 ರಾರಯಪಿಡ್ ಆ್ಯಂಟಿಜನ್ ಹಾಗೂ 88,330 ಆರ್‌ಟಿ ಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲಾವಾರು ಸೋಂಕಿತರ ಸಂಖ್ಯೆ: ಬೆಂಗಳೂರು ನಗರ 2,315, ಬಳ್ಳಾರಿ 220, ಧಾರವಾಡ 124, ಕೊಡಗು 171, ಮಂಡ್ಯ 117, ಮೈಸೂರು 261, ಶಿವಮೊಗ್ಗ 141, ತುಮಕೂರು 234 ಜಿಲ್ಲಾವಾರು ಮೃತರ ಸಂಖ್ಯೆ: ಬೆಂಗಳೂರು ನಗರ 17, ತುಮಕೂರು 5, ದಕ್ಷಿಣ ಕನ್ನಡ 3 ಮಂದಿ ಮೃತಪಟ್ಟಿದ್ದಾರೆ. ಧಾರವಾಡ, ಮೈಸೂರು ತಲಾ 2, ರಾಯಚೂರು, ಮಂಡ್ಯ, ಕಲಬುರಗಿ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ.
from India & World News in Kannada | VK Polls https://ift.tt/iSZVyd5