ಬೆಂಗಳೂರು: ಜನರ ಅಗತ್ಯ ವಸ್ತುಗಳಾಗಿರುವ ಪೆಟ್ರೋಲ್, ಡೀಸೆಲ್ ದರ ದೇಶದ ಮಹಾನಗರಗಳಲ್ಲಿ ಮತ್ತೆ ಇಳಿಕೆ ಕಂಡಿದೆ. ಹೀಗಾಗಿ ಜನ ಸಾಮಾನ್ಯರ ಮುಖದಲ್ಲಿ ಬುಧವಾರ ನಗು ಕಾಣುವ ಸಾಧ್ಯತೆ ಇದೆ. ಗುಡ್‌ನ್ಯೂಸ್ ಅಂದರೆ ಕಳೆದ ಎರಡು ವಾರಗಳಲ್ಲಿ ಕೊಂಚ ಕೊಂಚವಾಗೇ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಾಣುತ್ತಿದೆ. ಒಂದು ದಿನ ಪೆಟ್ರೋಲ್ ಇಳಿಕೆ ಕಂಡರೆ ಇನ್ನೊಂದು ದಿನ ಡೀಸೆಲ್ ಬೆಲೆ ಇಳಿಕೆ ಕಾಣುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ದರ ಬದಲಾವಣೆಯಿಂದ ದೇಸಿ ಮಾರುಕಟ್ಟೆಯ ಮೇಲೆಯೂ ಇದರ ಪರಿಣಾಮ ಬೀರುತ್ತದೆ. ಹಾಗಾದರೆ ಸೆಪ್ಟೆಂಬರ್ 23ರ ಬುಧವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ. ಸಿಲಿಕಾನ್ ಸಿಟಿ ಪೆಟ್ರೋಲ್: 83.69 ರೂ. ( ₹0.09 ಪೈಸೆ ಇಳಿಕೆ) ಡೀಸೆಲ್: 75.50 ರೂ. (₹0.14 ಪೈಸೆ ಇಳಿಕೆ ) ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್: 81.06 ರೂ. ( ₹0.08 ಪೈಸೆ ಇಳಿಕೆ) ಡೀಸೆಲ್: 71.28 ರೂ. (₹0.15 ಪೈಸೆ ಇಳಿಕೆ ) ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್: 87.74 ರೂ. ( ₹0.08 ಪೈಸೆ ಇಳಿಕೆ) ಡೀಸೆಲ್: 77.73 ರೂ. (₹0.14 ಪೈಸೆ ಇಳಿಕೆ ) ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್:84.21 ರೂ. (₹0.08 ಪೈಸೆ ಇಳಿಕೆ) ಡೀಸೆಲ್: 76.78 ರೂ. (₹0.16 ಪೈಸೆ ಇಳಿಕೆ )
from India & World News in Kannada | VK Polls https://ift.tt/2FXIj2W