ಗಗನಕ್ಕೇರಿದ ತರಕಾರಿ ಬೆಲೆಗೆ ಗ್ರಾಹಕರು ಕಂಗಾಲು: ಇಲ್ಲಿದೆ ದರಪಟ್ಟಿ

ಮನುಕುಮಾರ್‌ ಎಚ್‌.ಕೆ. ದೊಡ್ಡಬಳ್ಳಾಪುರ ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ: ಅಗತ್ಯ ವಸ್ತುಗಳ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಒಂದೆಡೆ ಕೆಲಸ ಇಲ್ಲದೆ ಹಣಕ್ಕಾಗಿ ಪರದಾಡುವ ಪರಿಸ್ಥಿತಿ, ಇದರ ಜತೆ ಮತ್ತೆ ಬೆಲೆ ಏರಿಕೆಯ ಬಿಸಿ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಬೆಳೆ ನಾಶವಾಗಿರುವ ಕಾರಣ ಬೆಲೆ ದಿನೇದಿನೆ ಏರಿಕೆಯಾಗುತ್ತಿದೆ. ಈರುಳ್ಳಿ, ಟೊಮೇಟೊ ಬೆಲೆ ಏರಿಕೆಯ ಬೆನ್ನಲ್ಲೇ ಉಳಿದ ತರಕಾರಿಗಳ ಬೆಲೆಯೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಮದು, ರಫ್ತು ಸ್ಥಗಿತಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕೊರತೆ ಮತ್ತು ನಮ್ಮ ದೇಶದಿಂದ ರಫ್ತು ಮಾಡುತ್ತಿದ್ದ ವಸ್ತುಗಳ ವಹಿವಾಟು ಸ್ಥಗಿತವು ಬೆಲೆ ಏರಿಕೆಗೆ ಒಂದು ಕಾರಣವಾಗಿದೆ. ಜನರ ಅವಶ್ಯಕತೆಗಿಂತ ಕಡಿಮೆ ಬೆಳೆ ಬೆಳೆಯುತ್ತಿರುವುದರಿಂದ ತರಕಾರಿಗಳ ಕೊರತೆ ಉಂಟಾಗುತ್ತಿದೆ. ಕೆಲ ಬೆಳೆ ನಾಶ ಆಗಿರುವುದರಿಂದ ಬೆಲೆ ಏರಿಕೆ ಆಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೊರೊನಾದಿಂದ ಕೆಲ ಕಂಪನಿಗಳು ಆರ್ಥಿಕ ನಷ್ಟಕ್ಕೀಡಾಗಿ, ಮುಚ್ಚಿದ್ದು ಇವುಗಳನ್ನೇ ನಂಬಿ ಜೀವನ ಮಾಡುತ್ತಿದ್ದ ಕೆಲವರಿಗೆ ನಿರುದ್ಯೋಗದಿಂದ ಹಣ ಹೊಂದಿಸಲು ತೊಂದರೆಯಾಗಿದೆ. ಏರಿಕೆಯಾಗಿರುವ ವಸ್ತುಗಳ ಪಟ್ಟಿ ವಸ್ತುಗಳು ಹಿಂದಿನ ಬೆಲೆ ಈಗಿನ ಬೆಲೆ (ರೂ.ಗಳಲ್ಲಿ 1ಕೆಜಿಗೆ)
  • ಅಡುಗೆ ಎಣ್ಣೆ- 115
  • ಮೊಟ್ಟೆ 5- 6
  • ಟೊಮೇಟೊ-20- 40
  • ಈರುಳ್ಳಿ 50- 80
  • ಆಲೂಗಡ್ಡೆ 25- 45
  • ಬೀನ್ಸ್‌ 70 -120
  • ಕೋಳಿ 120- 180
  • ಮಾಂಸ 500- 700
ಎಲ್ಲ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ನಾವೇ ಸ್ವತಃ ತರಕಾರಿ ಬೆಳೆದು ತಿನ್ನಬೇಕಿದೆ. ಕೆಲಸ ಇಲ್ಲದೆ ಹಣ ಹೊಂದಿಸಲು ಸಾಧ್ಯ ಆಗದಿರುವಾಗ, ಇರುವ ಸ್ವಲ್ಪ ಹಣದಲ್ಲಿ ಕೊಳ್ಳಲು ಹೋದರೆ ಬೆಲೆ ಏರಿಕೆಯಿಂದ ಹಿಂದೇಟು ಹಾಕುವಂತಾಗಿದೆ. ಕಮಲ, ಗೃಹಿಣಿ, ದೊಡ್ಡಬೆಳವಂಗಲ ಜನರು ಮದ್ಯ ಅಥವಾ ಪೆಟ್ರೋಲ್‌ ಬೆಲೆ ಏರಿಕೆ ಆದರೆ ಏನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ರೈತರು ಬೆಳೆದ ಬೆಳೆ ಬೆಲೆ ಹೆಚ್ಚಾದರೆ ಮಾತ್ರ ಬೊಬ್ಬೆ ಹೊಡೆಯುತ್ತಾರೆ. ಎಲ್ಲಾ ಸಮಯದಲ್ಲೂ ಬೆಲೆ ಏರಿಕೆ ಆಗುವುದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದ ಬೆಳೆ ನಾಶವಾಗಿದ್ದು, ಇದರಿಂದ ಕೆಲ ತರಕಾರಿ ಬೆಲೆ ಏರಿಕೆಯಾಗಿದೆ. ರಘು ರಾಮ್‌, ಕಾರ್ಯದರ್ಶಿ, ವರ್ತಕರ ಸಂಘ


from India & World News in Kannada | VK Polls https://ift.tt/3cp8mvY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...