ಬೆಳಗಾವಿ ಮಟ್ಕಾ ಅಡ್ಡೆ ಮೇಲೆ ದಾಳಿ: ಬುಕ್ಕಿ ಸೇರಿ 23 ಮಂದಿ ಅರೆಸ್ಟ್‌ , 2 ಲಕ್ಷ ಪೊಲೀಸರ ವಶಕ್ಕೆ!

ಬೆಳಗಾವಿ: ಮಟ್ಕಾ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 23 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಇವರಿಂದ 2,11,910 ನಗದು ಮಟ್ಕಾ ಆಟಕ್ಕೆ ಉಪಯೋಗಿಸುವ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ. ಖಾಂಜಾರ್‌ ಗಲ್ಲಿಯಲ್ಲಿ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಪಿ ವಿಕ್ರಂ ಮರಾಠೆ ನೇತೃತ್ವದ ತಂಡ, ಮಟ್ಕಾ ಅಂಕೆ ಬರೆಯುತ್ತಿದ್ದ ವೇಳೆ ಮಟ್ಕಾ ಬುಕ್ಕಿ ಹಾಗೂ ಕಿಂಗ್‌ಪಿನ್‌ ಮೊಹಮ್ಮದ್‌ ಶಾಫಿ ತಾಹಶಿಲ್ದಾರ್‌ ಸೇರಿ 23 ಮಂದಿಯನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು ಬೆಳಗಾವಿ ಮಾರ್ಕೆಟ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ನೂರಾರು ಮಾಂಜಾ ದಾರದ ಉಂಡೆ ಜಪ್ತು‌ಮಾಂಜಾ ದಾರ ಬಳಕೆ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬೆಳಗಾವಿ ನಗರ ಪೊಲೀಸರು ಮಂಗಳವಾರ ನಗರದ 10 ಅಂಗಡಿಗಳಲ್ಲಿದ್ದ ನೂರಾರು ಮಾಂಜಾ ದಾರದ ಉಂಡೆಗಳನ್ನು ಜಪ್ತು ಮಾಡಿದ್ದಾರೆ. ನಗರದ ಎಪಿಎಂಸಿ, ಕಾಕತಿ, ಮಾಳಮಾರುತಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ದಾರಗಳನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಬೈಕ್‌ ಸವಾರರೊಬ್ಬರಿಗೆ ಮಾಂಜಾ ದಾರ ಸಿಲುಕಿ ಗಾಯಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಮಾಂಜಾ ದಾರ ಬಳಸಿ ಗಾಳಿ ಪಟ ಹಾರಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಭಾಗವಾಗಿ ಮಾಂಜಾ ದಾರ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಪ್ರಕರಣ ಆಧರಿಸಿಯೇ ತನಿಖೆ ನಡೆಯುತ್ತಿದೆ. ಹಾಗಾಗಿ ಮಾರಾಟಗಾರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಸಿಲ್ಲ. ನಗರದಲ್ಲಿಯಾರೇ ಮಾಂಜಾ ದಾರ ಮಾರಾಟ ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬೆಳಗಾವಿ ನಗರ ಡಿಸಿಪಿ ವಿಕ್ರಮ್‌ ಆಮಟೆ ತಿಳಿಸಿದ್ದಾರೆ.


from India & World News in Kannada | VK Polls https://ift.tt/32UdWTR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...