ಬೆಂಗಳೂರು: ಡೀಸೆಲ್ ದರದಲ್ಲಿ ಮತ್ತೆ ಇಳಿಕೆ ಕಂಡಿದೆ. ಇಂದು ದೇಶವ್ಯಾಪಿ ಕೃಷಿ ಮಸೂದೆ ಸಂಬಂಧ ಪ್ರತಿಭಟನೆ ನಡೆಯುತ್ತಿದ್ದು ಈ ದಿನವೇ ದೇಶದ ಪ್ರಮುಖ ನಗರಗಳಲ್ಲಿ ಡೀಸೆಲ್ ದರದಲ್ಲಿ ಇಳಿಕೆ ಕಂಡಿದೆ. ಕಳೆದ ಎರಡು ವಾರಗಳಿಂದ ಕೊಂಚ ಕೊಂಚವಾಗೇ ಡೀಸೆಲ್ ದರದಲ್ಲಿ ಇಳಿಕೆ ಕಾಣುತ್ತಿದೆ. ಇನ್ನು ಪೆಟ್ರೋಲ್ ದರದಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ. ಇನ್ನು ಡೀಸೆಲ್ ಬೆಲೆ ಇಳಿಕೆಯಿಂದಾಗಿ ಮುಂದಿನ ದಿನಗಳಲ್ಲಿ ವಸ್ತುಗಳ ಮೇಲಿನ ದರ ಇಳಕೆಯಾಗುವ ಸಾಧ್ಯತೆ ಇದೆ. ಹಾಗಾದರೆ ಸೆಪ್ಟೆಂಬರ್ 25ರ ಶುಕ್ರವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ. ಸಿಲಿಕಾನ್ ಸಿಟಿ ಪೆಟ್ರೋಲ್: 83.69 ರೂ. ಡೀಸೆಲ್: 75.30 ರೂ. (₹0.20 ಪೈಸೆ ಇಳಿಕೆ ) ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್: 81.06 ರೂ. ಡೀಸೆಲ್: 71.10 ರೂ. (₹0.18 ಪೈಸೆ ಇಳಿಕೆ ) ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್: 87.74 ರೂ. ಡೀಸೆಲ್: 77.533 ರೂ. (₹0.20 ಪೈಸೆ ಇಳಿಕೆ ) ತಮಿಳುನಾಡು ರಾಜಧಾನಿ ಚೆನ್ನೈಪೆಟ್ರೋಲ್:84.21 ರೂ. ಡೀಸೆಲ್: 76.55 ರೂ. (₹0.23 ಪೈಸೆ ಇಳಿಕೆ )
from India & World News in Kannada | VK Polls https://ift.tt/3iWOwut