ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪಿಆರ್‌ ಏಜೆನ್ಸಿ ಇದ್ದಂಗೆ: ನಾಚಿಕೆಯಾಗಬೇಕು ಎಂದ ಟ್ರಂಪ್!

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ(WHO)ಯ ಮೇಲಿನ ತಮ್ಮ ವಾಗ್ದಾಳಿಯನ್ನು ಮುಂದುವೆಸಿರುವ ಅಮೆರಿಕ ಅಧ್ಯಕ್ಷ , ಚೀನಾದ ಪಿಆರ್ ಏಜೆನ್ಸಿ(ಸಾರ್ವಜನಿಕ ಸಂಪರ್ಕ ಸಂಸ್ಥೆ)ಯಾಗಿ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. ಕೊರೊನಾ ವೈರಸ್‌ ಉಗಮಕ್ಕೆ ಕಾರಣ ಎಂದು ಗೊತ್ತಿದ್ದರೂ ಚೀನಾದ ಬೆಂಬಲಕ್ಕೆ ನಿಂತಿರುವ WHO, ಆ ರಾಷ್ಟ್ರದ ಪಿಆರ್ ಏಜೆನ್ಸಿಯಂತೆ ವರ್ತಿಸುತ್ತಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ. ಚೀನಾ ಪರ ಮಾತನಾಡುತ್ತಿರುವ WHOಗೆ ನಾಚಿಕೆಯಾಗಬೇಕು ಎಂದಿರುವ ಟ್ರಂಪ್, WHO ಸುಳ್ಳಿನ ಪರ ನಿಂತಿರುವುದರಿಂದಲೇ ಅದಕ್ಕೆ ನೀಡುತ್ತಿದ್ದ ಹಣಕಾಸಿನ ನೆರವನ್ನು ನಿಲ್ಲಿಸಿದ್ದಾಗಿ ಗುಡುಗಿದ್ದಾರೆ. ಇಡೀ ಜಗತ್ತಿಗೆ ಸಂಕಷ್ಟ ತಂದೊಡ್ಡಿರುವ ಕೊರೊನಾ ವೈರಸ್‌ ಹರಡುವಿಕೆಗೆ ಚೀನಾವೇ ಕಾರಣ ಎಂದು ಗೊತ್ತಿದ್ದರೂ, ಬಹಿರಂಗವಾಗಿ ಮತ್ತು ನಾಚಿಕೆಯಿಲ್ಲದೇ ಆ ರಾಷ್ಟ್ರವನ್ನು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಕಾರಣವಾದರೂ ಏನು ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಅಮೆರಿಕ ವಾರ್ಷಿಕವಾಗಿ WHOಗೆ 500 ಮಿಲಿಯನ್ ಡಾಲರ್ ಹಣಕಾಸಿನ ನೆರವು ನೀಡುತ್ತದೆ. ಚೀನಾ ವಾರ್ಷಿಕವಾಗಿ WHOಗೆ 36 ಮಿಲಿಯನ್ ಅಮೆರಿಕನ್ ಡಾಲರ್ ಹಣಕಾಸಿನ ನೆರವು ನೀಡುತ್ತದೆ. ಅದಾಗ್ಯೂ ಚೀನಾದ ತಪ್ಪನ್ನು ಈ ರೀತಿ ಬಹಿರಂಗವಾಗಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.


from India & World News in Kannada | VK Polls https://ift.tt/3bVyMnU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...