ಬುಲಂದ್‌ಶಹರ್: ಕೊರೊನಾ ವೈರಸ್ ಉಲ್ಲಂಘಿಸಿದ್ದಕ್ಕಾಗಿ ಗುಡ್ಡು ಪಂಡಿತ್ ಮತ್ತು ಅವರ ಬೆಂಬಲಿಗರ ವಿರುದ್ಧ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪೊಲೀಸ್ ಪ್ರಕರಣಗಳು ದಾಖಲಾಗಿವೆ. ವರದಿಗಳ ಪ್ರಕಾರ, ಗುಡ್ಡು ಪಂಡಿತ್ ಅವರು 20 ರಿಂದ 25 ಬೆಂಬಲಿಗರೊಂದಿಗೆ ಗುರುವಾರ ಅನೂಪ್‌ಶಹರ್‌ನ ಪಗೋನಾ ಗ್ರಾಮಕ್ಕೆ ತೆರಳಿ ಇತ್ತೀಚಿಗಷ್ಟೇ ಹತ್ಯಗೀಡಾಗಿದ್ದ ಇಬ್ಬರು ಸಾಧುಗಳ ಸಂಬಂಧಿಕರಿಗೆ ಸಾಂತ್ವಾನ ಹೇಳಿದ್ದರು. ಆ ಮೂಲಕ ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ ಇವರು ಮತ್ತು ಈತನ ಬೆಂಬಲಿಗರು ಹಿರಿಯ ಮಹಿಳೆ ಮೃತಪಟ್ಟಿದ್ದ ಕೇಸರ್ ಗ್ರಾಮಕ್ಕೂ ತೆರಳಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದರು. ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಅನೂಪ್‌ಶಹರ್ ಮತ್ತು ದಿಬೈ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಾಜಿ ಶಾಸಕರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಗುಡ್ಡು ಪಂಡಿತ್,"ನನ್ನ ಜನಗಳ ಕಷ್ಟ-ಸುಖಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧನಾಗಿದ್ದೇನೆ. ಜನರ ಕಷ್ಟದ ಸಮಯದಲ್ಲೂ ನಾನು ಅವರಿಗೆ ನೆರವಿಗೆ ಧಾವಿಸದೇ ಇದಲ್ಲಿ ಜನ ನಾಯಕನಾಗಿ ಏನೂ ಪ್ರಯೋಜನ," ಎಂದು ಹೇಳಿದ್ದಾರೆ. ಬಿಎಸ್‌ಪಿ ಪಕ್ಷದಲ್ಲಿ ಎರಡು ಬಾರಿ ಶಾಸಕನಾಗಿದ್ದ ಗುಡ್ಡು ಪಂಡಿತ್ ನಂತರ, ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದಕ್ಕಾಗಿ ಅವರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.
from India & World News in Kannada | VK Polls https://ift.tt/2VQHEWl