(ಉತ್ತರ ಪ್ರದೇಶ): ಲಾಕ್‌ಡೌನ್ ವೇಳೆ ಒಂಟಿಯಾಗಿ ದೇಗುಲಕ್ಕೆ ಹೋಗುತ್ತಿದ್ದ ಭಕ್ತರೊಬ್ಬರನ್ನು ಪೊಲೀಸರು ಹಿಂಸಿಸಿದ ಹಾಗೂ ಅವಮಾನಗೊಳಿಸಿದ ದೃಶ್ಯ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಉತ್ತರ ಪ್ರದೇಶ ರಾಜ್ಯದ ಕಾನ್ಪುರ ಜಿಲ್ಲೆಯ ಪಂಕಿ ಎಂಬ ಪ್ರದೇಶದಲ್ಲಿ ವೃದ್ಧರೊಬ್ಬರಿಗೆ ನೆಲದಲ್ಲಿ ಕೂರುವಂತೆ ಒತ್ತಾಯಿಸಿ ತೆವಳಿಕೊಂಡು ದೇಗುಲಕ್ಕೆ ಹೋಗುವಂತೆ ಮಾಡಲಾಗಿದೆ. ಜೊತೆಯಲ್ಲೇ ದೇವರು ನಿನ್ನನ್ನು ಪರೀಕ್ಷಿಸುತ್ತಿದ್ಧಾನೆ ಎಂದು ಲೇವಡಿಯನ್ನೂ ಮಾಡಲಾಗಿದೆ. ಅರಳಿ ಮರಕ್ಕೆ ನೀರೆರೆದು ಜಲಾಭಿಷೇಕ ಮಾಡಬೇಕೆಂದು ಇಟ್ಟುಕೊಂಡಿದ್ದ ನೀರನ್ನು ತಟ್ಟೆಗೆ ಸುರಿದು ಅವಮಾನ ಮಾಡಲಾಗಿದೆ. ಹನುಮಂತನ ಭಕ್ತರಾದ ವೃದ್ಧರು, ಅಶ್ವತ್ಥ ವೃಕ್ಷಕ್ಕೆ ನೀರೆರೆಯುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು. ಲಾಕ್‌ಡೌನ್ ಇದ್ದರೂ ಅವರ ಜಲಾಭಿಷೇಕ ಮುಂದುವರೆದಿತ್ತು. ಈ ವೇಳೆ ಅವರನ್ನು ಹಿಡಿದ ಪೊಲೀಸ್ ಅಧಿಕಾರಿ, ವೃದ್ಧರ ಮೊರೆಯನ್ನು ಕೇಳದೆ ಅವರಿಗೆ ಹಿಂಸಿಸಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಕಾನ್ಪುರ ನಗರ ಪೊಲೀಸರು, ದೃಶ್ಯದಲ್ಲಿ ಕಾಣುವ ಪೊಲೀಸ್ ಅಧಿಕಾರಿ ಪಂಕಿ ಪೊಲೀಸ್ ಠಾಣೆಯ ಮುಖ್ಯಸ್ಥರು. ಅವರ ಬಳಿ ವೃದ್ಧ ವ್ಯಕ್ತಿ ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ವೃದ್ಧರನ್ನು ಅವರ ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಆದ್ರೆ, ಈ ವಿಡಿಯೋ ನೋಡಿದ ಜನರು, ಪೊಲೀಸರ ದರ್ಪ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದಾರೆ. ಹೀಗಾಗಿ, ಘಟನೆ ಸಂಬಂಧ ತನಿಖೆ ನಡೆಸ್ತೇವೆ ಎಂದು ಉತ್ತರ ಪ್ರದೇಶ ಡಿಐಜಿ ಅನಂತ್ ದಿಯೋ ಭರವಸೆ ನೀಡಿದ್ದಾರೆ.
from India & World News in Kannada | VK Polls https://ift.tt/2YjRIcd