ಚೀನಾ ಲ್ಯಾಬ್‌ನಿಂದಲೇ ಕೊರೊನಾ: ಸಾಕ್ಷಿ ಇಲ್ಲವಲ್ಲ ಎಂದ ಆಸ್ಟ್ರೆಲೀಯಾ ಪ್ರಧಾನಿ!

ಸಿಡ್ನಿ: ಚೀನಾದ ವುಹಾನ್ ಲ್ಯಾಬ್‌ನಲ್ಲೇ ಮಾರಕ ಕೊರೊನಾ ವೈರಸ್ ಜನ್ಮ ಪಡೆದಿದೆ ಎಂಬುದಕ್ಕೆ ತಮ್ಮ ಬಳಿ ಸಾಕ್ಷಿಯಿದೆ ಎಂದು ಅಮೆರಿಕ ಅಧ್ಯಕ್ಷ ಘೋಷಿಸಿದ್ದಾರೆ. ವುಹಾನ್ ಲ್ಯಾಬ್‌ನಲ್ಲಿ ಉದ್ದೇಶಪೂರ್ವಕವಾಗಿ ಕೊರೊನಾ ವೈರಸ್‌ಗೆ ಜನ್ಮ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಡೊನಾಲ್ಡ್ ಟ್ರಂಪ್, ಈ ಕುರಿತು ತಮ್ಮ ಬಳಿ ಸಾಕ್ಷಿ ಇದೆ ಎಂದು ಹೇಳಿರುವುದು ಇಡೀ ವಿಶ್ವವನ್ನು ದಂಗು ಬಡಿಸಿದೆ. ಈ ಮಧ್ಯೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್, ಕೊರೊನಾ ವೈರಸ್ ವುಹಾನ್ ಲ್ಯಾಬ್‌ನಲ್ಲಿ ಜನ್ಮ ತಳೆದಿದೆ ಎಂಬುದಕ್ಕೆ ಇದುವರೆಗೂ ಸಾಕ್ಷಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ವುಹಾನ್ ಲ್ಯಾಬ್‌ನಲ್ಲೇ ಕೊರೊನಾ ವೈರಸ್‌ಗೆ ಜನ್ಮ ನೀಡಲಾಗಿದೆ ಎಂಬುದಕ್ಕೆ ಸಾಕ್ಷಿ ಇಲ್ಲದಿರುವುದರಿಂದ ಈ ವಾದವನ್ನು ಆಸ್ಟ್ರೆಲೀಯಾ ಸದ್ಯದ ಮಟ್ಟಿಗೆ ಒಪ್ಪುವುದಿಲ್ಲ ಎಂದು ಸ್ಕಾಟ್ ಮಾರಿಸನ್ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಚೀನಾದಲ್ಲಿ ಜನ್ಮ ಪಡೆದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅದನ್ನು ಉದ್ದೇಶಪೂರ್ವಕವಾಗಿ ಲ್ಯಾಬ್‌ನಲ್ಲಿ ಪ್ರಯೋಗ ಮಾಡುವ ಮೂಲಕ ಜನ್ಮ ನೀಡಲಾಗಿದೆ ಎಂಬ ವಾದವನ್ನು ಒಪ್ಪಲು ದೃಢವಾದ ಸಾಕ್ಷಿಯಿಲ್ಲ ಎಂದು ಸ್ಕಾಟ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್ ಜಗತ್ತಿನಾದ್ಯಂತ ಮರಣ ಮೃದಂಗ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಸ್ಕಾಟ್ ಮಾರಿಸನ್ ಚೀನಾ ವಿರುದ್ಧ ಹರಿಹಾಯ್ದಿದ್ದರು. ಕೊರೊನಾ ವೈರಸ್ ಉಗಮಕ್ಕೆ ಕಾರಣವಾಗಿರುವ ಚೀನಾದ ಹಸಿ ಮಾರುಕಟ್ಟೆಗಳ ವಿರುದ್ಧ ಕ್ರಮ ಯಾವಾಗ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO)ಯನ್ನು ಸ್ಕಾಟ್ ಪ್ರಶ್ನಿಸಿದ್ದರು.


from India & World News in Kannada | VK Polls https://ift.tt/2L2nliJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...