ಇಂದಿನ ಚುಟುಕು ಸುದ್ದಿಗಳು: ಮೇ 4ರಿಂದ ಮಾಲ್‌, ಬಾರ್ ಓಪನ್‌ಗೆ ಸರಕಾರ ಚಿಂತನೆ!

ಮಸೀದಿಯೊಳಗೆ ಕಾಲಿಟ್ಟ ಮಹಿಳಾ ತಹಶೀಲ್ದಾರ್‌: ನಮಾಜ್‌ ಮಾಡುತ್ತಿದ್ದ 11 ಮಂದಿ ವಶ ಕೋಲಾರ: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿ ನಮಾಜ್‌ ಮಾಡುತ್ತಿದ್ದವರನ್ನು ಮಹಿಳಾ ತಹಶೀಲ್ದಾರ್‌ ಶೋಭಿತಾ ಪೊಲೀಸರಿಗೆ ಒಪ್ಪಿಸಿ ದಿಟ್ಟತನ ತೋರಿದ್ದಾರೆ. ರೈಲಿನಲ್ಲಿ 350 ಟ್ರ್ಯಾಕ್ಟರ್‌ ಸಾಗಣೆ: ಗುಜರಾತ್‌, ರಾಜಸ್ಥಾನಕ್ಕೆ ದೊಡ್ಡಬಳ್ಳಾಪುರದ ಟ್ರ್ಯಾಕ್ಟರ್‌ ! ಹುಬ್ಬಳ್ಳಿ: ಕೃಷಿ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ಗುಜರಾತ್‌ ಮತ್ತು ರಾಜಸ್ಥಾನ ರಾಜ್ಯಗಳಿಗೆ 350ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ರೈಲು ಮೂಲಕ ಸಾಗಿಸಿದೆ. ಮಾಸ್ಕ್‌ ಧರಿಸದೆ ರಸ್ತೆಗಿಳಿದ 142 ಮಂದಿಗೆ ದಂಡ ವಿಧಿಸಿದ ಮೈಸೂರು ಪಾಲಿಕೆ ಮೈಸೂರು: ಮೈಸೂರು ನಗರದಲ್ಲಿ ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಮೈಸೂರು ನಗರ ಪಾಲಿಕೆ ಮುಂದಾಗಿದೆ. ಮೊದಲನೇ ದಿನವೇ ಮಾಸ್ಕ್‌ ಧರಿಸದೇ ರಸ್ತೆಗಿಳಿದ 142 ಮಂದಿಗೆ ದಂಡ ವಿಧಿಸಿ, 14,200 ರೂ. ವಸೂಲಿ ಮಾಡಿದೆ. ನೇಕಾರರ ಮೇಲೂ ಕೊರೊನಾ ಎಫೆಕ್ಟ್: ಸಂಕಷ್ಟದಲ್ಲಿ ಬಡ ಕುಟುಂಬಗಳು! ಹುಬ್ಬಳ್ಳಿ: ಇತ್ತೀಚೆಗೆ ಅತಿವೃಷ್ಟಿ ಮತ್ತು ಪ್ರವಾಹದಿಂದ ಕಂಗೆಟ್ಟಿದ್ದ ನೇಕಾರ ಸಮುದಾಯ ಅಬ್ಬಾ ಅಂತೂ ಬಚಾವ್‌ ಆದೆವು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಕೊರೊನಾ ಲಾಕ್‌ಡೌನ್‌ ಅಪ್ಪಳಿಸಿದೆ. ಹುಬ್ಬಳ್ಳಿ, ಬೆಳಗಾವಿ, ದೊಡ್ಡಬಳ್ಳಾಪುರ ಸೇರಿದಂತೆ ಲಕ್ಷಾಂತರ ನೇಕಾರರು ನಿತ್ಯದ ಜೀವನ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಮಾಲೀಕರು, ಕೂಲಿ ನೇಯುವವರು, ವಾರದ ಬಟವಾಡೆ ಆಧಾರದ ಮೇಲೆ ಮಗ್ಗ ಬಿಡುವ ಕೂಲಿ ಕಾರ್ಮಿಕರೆನ್ನದೆ ಎಲ್ಲರೂ ಈಗ ಯಾತನೆ ಅನುಭವಿಸುತ್ತಿದ್ದಾರೆ. ಮಂಡ್ಯಕ್ಕೆ ತಬ್ಲಿಘಿ 'ಮಹಾ'ಕಂಟಕ: ಜಿಲ್ಲೆಯಲ್ಲಿ ಒಂದೇ ದಿನ 8 ಸೋಂಕು! ಮಂಡ್ಯ: ಮಂಡ್ಯದಲ್ಲಿ ಇನ್ನೇನು ಸೋಂಕು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಬಹುದೊಡ್ಡ ಆಘಾತ ಎದುರಾಗಿದೆ. ರಾಜ್ಯದಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆ ವೇಳೆಗೆ 11 ಜನರಿಗೆ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಎಂಟು ಪ್ರಕರಣಗಳು ಮಂಡ್ಯ ಜಿಲ್ಲೆ ಒಂದರಲ್ಲೇ ಪತ್ತೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಹುಣಸೂರು: ಸಾರಾಯಿ ಮಾರುತ್ತಿದ್ದ ಇಬ್ಬರ ಬಂಧನ ಹುಣಸೂರು: ನಾಗರಹೊಳೆ ಉದ್ಯಾನದ ಆನೆಚೌಕೂರು ವಲಯದ ಜಂಗಲ್‌ ಹಾಡಿಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, 4 ಲೀ. ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಾಕ್‌ಡೌನ್‌ ಆದ್ರೂ ಮಂಗಳೂರಿನ 57 ಬಾರ್‌ಗಳಲ್ಲಿ ಎಣ್ಣೆ ಸೋಲ್ಡ್‌ ಔಟ್! ಮಂಗಳೂರು: ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಅಬಕಾರಿ ಇಲಾಖೆ ಸಿಬ್ಬಂದಿ ಬಾರ್‌ಗಳಿಗೆ ಬೀಗ ಮುದ್ರೆ ಹಾಕಿದೆ. ಆದರೆ ನಗರದ ಸುಮಾರು 57 ಬಾರ್‌ಗಳಲ್ಲಿ ಬಹುತೇಕ ಮದ್ಯ ಖಾಲಿಯಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಬಾವಿ ತೋಡಿ ನೀರು ಪಡೆದ ಕಾಸರಗೋಡು ಕಾಲೊನಿ ನಿವಾಸಿಗಳು ಕಾಸರಗೋಡು: ಪ್ರತಿ ಬಾರಿಯೂ ಕುಡಿಯುವ ನೀರು ಯೋಜನೆಯ ನೀರನ್ನೇ ಆಶ್ರಯಿಸುತ್ತಿದ್ದ ಕಾಲೊನಿ ನಿವಾಸಿಗಳಿಗೆ ಲಾಕ್‌ಡೌನ್‌ ಮಧ್ಯೆ ವಾರದೊಳಗೆ ಸ್ವಂತವಾಗಿ ಬಾವಿ ತೋಡಿ ಇದರಲ್ಲಿ ನೀರು ಪಡೆದುಕೊಂಡಿದ್ದಾರೆ. ರಾಮನಗರ: 70 ವರ್ಷದ ಸಂಜೀವಜ್ಜಿಗೆ ಪಡಿತರ ಚೀಟಿಯಿಲ್ಲವೆಂದು ರೇಷನ್‌ ನಿರಾಕರಣೆ! ಕುದೂರು: ಎಪ್ಪತ್ತರ ಇಳಿ ವಯಸ್ಸು, ಬಾಡಿಗೆ ಮನೆಯಲ್ಲಿ ವಾಸ, ವೃದ್ದಾಪ್ಯ ವೇತನವೊಂದೇ ಶಾಶ್ವತ ಆದಾಯ ಮೂಲ. ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುತ್ತಿದ್ದ ಕುದೂರಿನ ಬೀಚನಹಳ್ಳಿಯ ಸಂಜೀವಜ್ಜಿಗೆ ಕೊರೊನಾ ಲಾಕ್‌ಡೌನ್‌ ಶಾಪವಾಗಿ ಪರಿಣಮಿಸಿದೆ. ಮಂಗಳೂರಿನ ಹೃದಯಭಾಗದಲ್ಲೇ ಸೋಂಕು: ಬೋಳೂರು ಸೀಲ್‌ಡೌನ್‌ ಮಂಗಳೂರು: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಮಾಹಾಮಾರಿ ಮಂಗಳೂರು ಹೃದಯಭಾಗಕ್ಕೂ ತಟ್ಟಿದ್ದು, ಬೋಳೂರಿನ 58ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೋಳೂರು ವ್ಯಾಪ್ತಿಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಬಿಗು ಬಂದೋಬಸ್ತ್‌ ಮಾಡಲಾಗಿದೆ. ಮೇ 4ರಿಂದ ಮಾಲ್‌, ಬಾರ್ ಒಪನ್‌ಗೆ ಸರಕಾರ ಚಿಂತನೆ, ಕಂಟೈನ್ಮೆಂಟ್‌ ಜೋನ್‌ಗಳಲ್ಲಿ ನಿರ್ಬಂಧ ಕಂಟಿನ್ಯೂ ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ವಿಸ್ತರಣೆಯಾಗಿರುವ ಲಾಕ್‌ಡೌನ್‌ ಅಂತ್ಯಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಸೋಮವಾರದಿಂದ ಕಂಟೈನ್ಮೆಂಟ್‌ ಜೋನ್‌ ಹೊರತುಪಡಿಸಿ ಬೇರೆ ಕಡೆ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳು ಆರಂಭವಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಗುರುವಾರ ನಡೆದ ವಾಣಿಜ್ಯೋದ್ಯಮಿಗಳ ಸಭೆಯಲ್ಲಿ ಸುಳಿವನ್ನು ನೀಡಿದ್ದು, ಚಟುವಟಿಕೆಗಳ ಪುನರಾರಂಭಕ್ಕೆ ಸಿದ್ಧರಾಗಿ ಎಂದು ಸೂಚಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ: ಕೃಷಿ ಸಚಿವ ಬಿಸಿ ಪಾಟೀಲ್‌ ಹಾವೇರಿ: ರಾಜ್ಯದಲ್ಲಿ ಬೀಜ ಮತ್ತು ರಸಗೊಬ್ಬರದ ಕೊರತೆಯಾಗಿಲ್ಲ. ಬೀಜದ ಕೊರತೆಯಿತ್ತು. ಸಂಪುಟ ಸಭೆಯಲ್ಲಿ ರೈತರಿಗೆ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಕಳಪೆ ಮತ್ತು ಅವಧಿ ಮೀರಿದ ಕ್ರಿಮಿನಾಶಕ ಮಾರಾಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವ ಜತೆಗೆ ಅಂಥ ಅಂಗಡಿಗಳ ಲೈಸನ್ಸ್ ರದ್ದು ಪಡಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಲಾಕ್‌ಡೌನ್‌ ಮಧ್ಯೆ ಬಾಲ್ಯವಿವಾಹ, ಅಧಿಕಾರಿಗಳಿಂದ ಡಜನ್‌ ವಿವಾಹಕ್ಕೆ ಬ್ರೇಕ್! ಮೊಳಕಾಲ್ಮುರು: ಕೊರೊನಾ ಲಾಕ್‌ಡೌನ್‌ ಎಫೆಕ್ಟ್ ನಿಂದ ತಾಲೂಕಿನ ನಾನಾ ಗ್ರಾಮಗಳಲ್ಲಿ ಬಾಲ್ಯ ವಿವಾಹಗಳನ್ನು ನಡೆಸಲು ಪೋಷಕರು ಮುಂದಾಗುತ್ತಿದ್ದಾರೆ.


from India & World News in Kannada | VK Polls https://ift.tt/2KTlyMs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...