ಸಾಮಾಜಿಕ ಜಾಲತಾಣಕ್ಕೆ ಅಂಕುಶ ಹಾಕಲು ಶೀಘ್ರವೇ ಹೊಸ ನಿಯಮ ಜಾರಿ

ಹೊಸದಿಲ್ಲಿ: ಅಂತರ್ಜಾಲ ಬಳಸುವ ಪ್ರಜೆಗಳ ಸುರಕ್ಷತೆಯ ಜವಾಬ್ದಾರಿಯನ್ನು ಸಾಮಾಜಿಕ ಜಾಲ-ತಾಣ ಕಂಪನಿಗಳಿಗೆ ಹೊರಿಸುವ ಮಹತ್ತರ ಸುಧಾರ-ಣೆಯ ಹೊಸ ನೀತಿಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಆನಂದ್‌ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ, '' ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ವಂಚನೆ ಹಾಗೂ ಇತರ ಅಪರಾಧಗಳ ವಿರುದ್ಧ ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ (ಸಿಇಆರ್‌ಟಿ-ಐಎನ್‌) ನೀಡುವ ವರದಿ ಅನ್ವಯ ತನಿಖಾ ಸಂಸ್ಥೆಗಳು ಕ್ರಮ ಜರುಗಿಸುತ್ತಿವೆ. ಕೇಂದ್ರೀಕೃತ ದೂರು ಸಲ್ಲಿಕೆ ವ್ಯವಸ್ಥೆ ಕೂಡ ಚಾಲ್ತಿಯಲ್ಲಿದೆ. ಆದರೆ, ಇದಷ್ಟೇ ಅಲ್ಲದೆ ಜಾಲತಾಣಗಳ ಕಂಪನಿಗಳು ಕೂಡ ತಮ್ಮ ಗ್ರಾಹಕರ ಅಪರಾಧಗಳ ಹೊಣೆಯನ್ನು ಹೊರಬೇಕು. ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ನಿಯಂತ್ರಣ ಕಾನೂನು ವ್ಯಾಪ್ತಿಗೆ ತರಬೇಕು ಎಂಬ ಚಿಂತನೆ ಇದೆ,'' ಎಂದು ತಿಳಿಸಿದ್ದಾರೆ. ''ವಿಶೇಷವಾಗಿ 18 ವರ್ಷದೊಳಗಿನ ಮಕ್ಕಳಿಗೆ ಅಪರಾಧ ಹಾಗೂ ಇತರ ಪ್ರಚೋದನಾತ್ಮಕ ವಿಚಾರ-ಗಳು ಸಿಗದಂತೆ ತಾಣಗಳಲ್ಲಿ ಎಚ್ಚರಿಕೆ ವಹಿಸುವುದು, ಮಹಿಳಾ ದೌರ್ಜನ್ಯ , ಕಿರುಕುಳಕ್ಕೆ ಕಡಿವಾಣ, ರಾಜ-ಕೀಯ ಪ್ರೇರಿತ ದಂಗೆಯನ್ನು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ನಿಯಂತ್ರಿಸಲು ಕಂಪನಿಗಳು ಸಿದ್ಧತೆ ನಡೆಸಿವೆ,'' ಎಂದು ಸಚಿವ ವೈಷ್ಣವ್‌ ಅವರು ಸುಳಿವು ನೀಡಿದ್ದಾರೆ.


from India & World News in Kannada | VK Polls https://ift.tt/sc5vVli

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...