2ನೇ ದಿನದ ಹೋರಾಟದಲ್ಲಿ ಸಾವಿರಾರು ಜನ ಭಾಗಿ; ಮೇಕೆದಾಟು ಯಾತ್ರೆಗೆ ಬ್ರೇಕ್‌ ಹಾಕಲು ಸರ್ಕಾರದ ಮೇಲೆ ಒತ್ತಡ

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ಸೋಮವಾರ ಬೆಂಗಳೂರಿಗೆ ಭರ್ಜರಿಯಾಗಿ ಪ್ರವೇಶಿಸಿದೆ. ಇನ್ನು ಮೂರು ದಿನ ನಗರದಲ್ಲಿ ಹೋರಾಟದ ಕಹಳೆ ಮೊಳಗಲಿದೆ. ಈ ನಡುವೆ ಕಾಂಗ್ರೆಸ್‌ ಪಾದಯಾತ್ರೆಗೆ ಬೆಂಗಳೂರಿನ ಬಿಜೆಪಿ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರ ಸ್ವಂತ ಜಿಲ್ಲೆ ರಾಮನಗರದಲ್ಲಿ ಪಾದಯಾತ್ರೆ ಗಮನ ಸೆಳೆಯಿತು. ಡಿಕೆಶಿ ಅವರು ನೇಗಿಲು ಹಿಡಿದು ಹೆಜ್ಜೆ ಹಾಕಿದರು. ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಾನಂದೂರಿನಿಂದಲ್ಲೇ 2ನೇ ದಿನದ ಯಾತ್ರೆ ಶುರುವಾಯಿತು. ಸೋಮವಾರದ ಪಾದಯಾತ್ರೆಯಲ್ಲಿ ತುಮಕೂರು, ಸೇರಿದಂತೆ ವಿವಿಧೆಡೆಯಿಂದ 10 ಸಾವಿರ ಮಂದಿ ಭಾಗಿಯಾಗಿದ್ದರು. ಸ್ವಾಮೀಜಿಗಳೂ ಸಾಥ್‌ ನೀಡುವ ಮೂಲಕ ಮೇಕೆದಾಟು ಪಾದಯಾತ್ರೆಗೆ ಎರಡನೇ ದಿನ ಮತ್ತಷ್ಟು ಮೆರುಗು ಸಿಕ್ಕಿದ್ದು, ಪಾದಯಾತ್ರೆ ಈಗ ಬೆಂಗಳೂರಿನ ಗಡಿಯೊಳಗೆ ಪ್ರವೇಶಿಸಿದೆ. Mekedatu Padayatra: ಮೇಕೆದಾಟು ಪಾದಯಾತ್ರೆ ಮಂಗಳವಾರ ಕೆಂಗೇರಿಯಿಂದ ಮುಂದುವರಿಯಲಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೂ ಪಾದಯಾತ್ರೆ ಸಂಚರಿಸಲಿದೆ. ಹೀಗಾಗಿ ರಾಜಧಾನಿಯಲ್ಲಿ ರಾಜಕೀಯವಾಗಿಯೂ ಇದು ಮಹತ್ವ ಪಡೆದುಕೊಂಡಿದೆ. ಯಶವಂತಪುರ, ರಾಜರಾಜೇಶ್ವರಿ ನಗರ, ಗೋವಿಂದರಾಜ ನಗರ, ಬಸವನಗುಡಿ, ಪದ್ಮನಾಭನಗರ, ಜಯನಗರ, ಬಿಟಿಎಂ ಲೇಔಟ್‌, ಬೊಮ್ಮನಹಳ್ಳಿ, ಶಾಂತಿನಗರ, ಶಿವಾಜಿನಗರ, ಹೆಬ್ಬಾಳ, ಮಲ್ಲೇಶ್ವರ, ಗಾಂಧಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಸಾಗಲಿದ್ದು, ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಲಿದೆ. ಪಾದಯಾತ್ರೆಯ ಮಾರ್ಗ
  • ಮಾ. 1. ನಾಯಂಡನಹಳ್ಳಿ, ವರ್ತುಲ ರಸ್ತೆ, ಕತ್ರಿಗುಪ್ಪೆ, ಕದಿರೇನಹಳ್ಳಿ ಜಂಕ್ಷನ್‌, ಬನಶಂಕರಿ ದೇವಸ್ಥಾನ, ಜಯದೇವ ಹೃದ್ರೋಗ ಸಂಸ್ಥೆ
  • ಮಾ. 2. ಹೊಸೂರು ಮುಖ್ಯರಸ್ತೆ, ಕೋರಮಂಗಲ ಪಾಸ್‌ಪೋರ್ಟ್‌ ಕಚೇರಿ ಜಂಕ್ಷನ್‌, ಕೋಲ್ಸ್‌ಪಾರ್ಕ್, ಮೇಖ್ರಿವೃತ್ತ ಮಾರ್ಗವಾಗಿ ಅರಮನೆ ಮೈದಾನ ಆವರಣ
  • ಮಾ. 3 ಕಾವೇರಿ ಚಿತ್ರಮಂದಿರ ಜಂಕ್ಷನ್‌, ಸ್ಯಾಂಕಿ ಕೆರೆ, ಮಾರ್ಗೋಸಾ ರಸ್ತೆ, ಲಿಂಕ್‌ ರಸ್ತೆ, ಕಾಟನ್‌ಪೇಟೆ ಮುಖ್ಯರಸ್ತೆ, ರಾಯನ್‌ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ
ವಾಹನ ಸವಾರರೇ ಎಚ್ಚರ… ಇಂದು ಮೈಸೂರು ರಸ್ತೆ ಜಾಮ್‌ ಮೇಕೆದಾಟು ಪಾದಯಾತ್ರೆಯಲ್ಲಿ ಮೈಸೂರು ರಸ್ತೆಯ ಮೂಲಕ ಸಾವಿರಾರು ಜನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವುದರಿಂದ ಕೆಂಗೇರಿಯಿಂದ ನಾಯಂಡಹಳ್ಳಿ ಜಂಕ್ಷನ್‌ ತನಕ ಸಂಚಾರ ದಟ್ಟಣೆ ಉಂಟಾಗಲಿದೆ. ಪ್ರಯಾಣಿಕರು ಬದಲಿ ಮಾರ್ಗ ಬಳಸುವುದು ಸೂಕ್ತ.


from India & World News in Kannada | VK Polls https://ift.tt/JlrTOXg

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ತೆರಳಲಿದೆ ನಾಲ್ವರು ಕೇಂದ್ರ ಸಚಿವರ ತಂಡ!

ಹೊಸದಿಲ್ಲಿ: ಸಮರ ಪೀಡಿತ ಉಕ್ರೇನ್‌ನಲ್ಲಿಸಿಕ್ಕಿಬಿದ್ದಿರುವ ಸುಮಾರು 15,000 ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಇನ್ನಷ್ಟು ಬಿರುಸಿನ ಕ್ರಮಗಳನ್ನು ಕೈಗೊಂಡಿದೆ. ಓದು ಮತ್ತು ಉದ್ಯೋಗಕ್ಕೆಂದು ಹೋಗಿರುವ ಭಾರತೀಯರು ಸದ್ಯದ ಬಿಕ್ಕಟ್ಟಿನಿಂದ ನಲುಗಿದ್ದು, ಶೀಘ್ರವಾಗಿ ಅವರನ್ನು ಕರೆತರಲು ಮೋದಿ ಸರಕಾರ ನಾಲ್ವರು ಕೇಂದ್ರ ಸಚಿವರನ್ನು ಉಕ್ರೇನ್‌ನ ನೆರೆ ರಾಷ್ಟ್ರಗಳಿಗೆ ಕಳಿಸಿಕೊಡಲು ನಿರ್ಧರಿಸಿದೆ. ದಿನದಿಂದ ದಿನಕ್ಕೆ ಉಕ್ರೇನ್‌ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಅಣು ಸಮರದ ಭೀತಿ ಸೃಷ್ಟಿಯಾಗಿದೆ. ಅಂತಹದ್ದೊಂದು ಅನಾಹುತಕಾರಿ ಬೆಳವಣಿಗೆ ಆಗುವ ಮೊದಲು ದೇಶವಾಸಿಗರನ್ನು ಹಿಂದಕ್ಕೆ ಕರೆತರುವುದು ಕ್ಷೇಮ ಎಂದು ಕೇಂದ್ರ ತೀರ್ಮಾನಿಸಿದೆ. ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ತುರ್ತು ಸಭೆ, ರಕ್ಷಣಾ ಕಾರ್ಯಾಚರಣೆಯ ರೂಪುರೇಷೆಗಳನ್ನು ಚರ್ಚಿಸಿತು. ಅಂತಿಮವಾಗಿ, ಉಕ್ರೇನ್‌ನ ನಾಲ್ಕು ನೆರೆ ರಾಷ್ಟ್ರಗಳಿಗೆ ಸಚಿವರನ್ನು ಕಳುಹಿಸಿ ಭಾರತೀಯರ ರಕ್ಷಣೆಗೆ ಸಂಯೋಜಿತ ಶ್ರಮ ವಹಿಸಲು ತೀರ್ಮಾನಿಸಿತು. ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಹರ್‌ದೀಪ್‌ ಸಿಂಗ್‌ ಪುರಿ, ಕಿರಣ್‌ ರಿಜಿಜು ಮತ್ತು ವಿ.ಕೆ.ಸಿಂಗ್‌ ಅವರು ಭಾರತ ಸರಕಾರದ ವಿಶೇಷ ರಾಯಭಾರಿಗಳಾಗಿ ಉಕ್ರೇನ್‌ ನೆರೆ ರಾಷ್ಟ್ರಗಳಿಗೆ ತೆರಳಲಿದ್ದಾರೆ. ಸಿಂಧಿಯಾ ಅವರು ರೊಮೇನಿಯಾ ಮತ್ತು ಮೊಲ್ಡೊವಾದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದ್ದಾರೆ. ರಿಜಿಜು ಅವರು ಸ್ವೋವಾಕಿಯಾ ತಲುಪಿರುವ ಭಾರತೀಯರನ್ನು ಸ್ವದೇಶಕ್ಕೆ ಕಳಿಸುವ ಕೆಲಸ ನಿರ್ವಹಿಸಲಿದ್ದಾರೆ. ಪುರಿ ಅವರು ಹಂಗೇರಿ ಹಾಗೂ ಸಿಂಗ್‌ ಅವರು ಪೋಲೆಂಡಿನಲ್ಲಿ ಉಳಿದುಕೊಂಡು ರಕ್ಷಣಾ ಕಾರ್ಯಾಚರಣೆ ಸಂಘಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಷ್ಯಾ-ಉಕ್ರೇನ್‌ ಕದನ ಘೋರ ಸ್ವರೂಪ ಪಡೆಯುತ್ತಿರುವ ನಡುವೆಯೇ ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ವಿಶೇಷ ಆದ್ಯತೆ ನೀಡಿತ್ತು. ಈ ಕುರಿತು ಖುದ್ದು ಪ್ರಧಾನಿ ಮೋದಿ ಅವರು ಭಾನುವಾರ ಹೇಳಿಕೆ ನೀಡಿದ್ದರು. ಮರು ದಿನವೇ ಸಚಿವರನ್ನು ಕಳಿಸಿಕೊಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ವಾಣಿಜ್ಯ ಸಚಿವ ಪಿಯೂಶ್‌ ಗೋಯಲ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ ಪಾಲ್ಗೊಂಡಿದ್ದರು. ಕೇರಳ ಹೈಕೋರ್ಟ್‌ಗೆ ಮಾಹಿತಿ: ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಸಚಿವರ ತಂಡಗಳನ್ನು ಕಳಿಸಿಕೊಡಲಾಗುತ್ತಿದೆ ಎಂದು ಕೇಂದ್ರ ಸರಕಾರ ಸೋಮವಾರ ಕೇರಳ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ. ''ಉಕ್ರೇನ್‌ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿರುವುದು ಕ್ಷೇಮ ಅಲ್ಲ. ಕಲಿಯಲು ಹೋಗಿ ಸಿಕ್ಕಿಬಿದ್ದಿರುವ ಭಾರತೀಯರನ್ನು ತ್ವರಿತವಾಗಿ ಕರೆತರಲಾಗುವುದು. ಅದಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಯಾರೂ ಆತಂಕಪಡುವ ಅಗತ್ಯ ಇಲ್ಲ,'' ಎಂದು ನ್ಯಾಯಮೂರ್ತಿ ಎನ್‌.ನಗರೇಶ್‌ ನೇತೃತ್ವದ ಪೀಠದ ಮುಂದೆ ಕೇಂದ್ರದ ಪರ ಸಹಾಯಕ ಸಾಲಿಸಿಟರ್‌ ಜನರಲ್‌ ಎಸ್‌.ಮನು ಭರವಸೆ ನೀಡಿದ್ದಾರೆ.


from India & World News in Kannada | VK Polls https://ift.tt/MPqfXuN

ಜಾಗತಿಕ ನಿರ್ಬಂಧಕ್ಕೆ ಕೆರಳಿದ ಪುಟಿನ್‌! ಉಕ್ರೇನ್‌ಗೆ ಹೆಚ್ಚಿದ ಅಣ್ವಸ್ತ್ರ ದಾಳಿ ಆತಂಕ!

ಮಾಸ್ಕೊ: ಒಂದೆಡೆ ಜಾಗತಿಕ ಸಮುದಾಯಗಳಿಂದ ಎಚ್ಚರಿಕೆ, ಮತ್ತೊಂದೆಡೆ ಉಕ್ರೇನ್‌ನಲ್ಲಿಯೇ ಸೈನಿಕರಿಗೆ ಪ್ರತಿರೋಧ. ಇದೆಲ್ಲಕಾರಣಗಳಿಂದಾಗಿ ಕುಪಿತಗೊಂಡಿರುವ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಪುಟ್ಟ ದೇಶ ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಆತಂಕ ಎದುರಾಗಿದೆ. ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ಮಾತ್ರವಲ್ಲದೆ ರಷ್ಯಾ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದವು. ಆ ಹಿನ್ನೆಲೆಯಲ್ಲಿ ಪುಟಿನ್‌ ಅವರು ಅಣ್ವಸ್ತ್ರ ದಾಳಿ ಕುರಿತು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ತಮ್ಮ ರಾಷ್ಟ್ರದ ರಕ್ಷಣಾ ಸಚಿವ ಹಾಗೂ ಅಣ್ವಸ್ತ್ರ ಪಡೆ ಮುಖ್ಯಸ್ಥರಿಗೆ ಭಾನುವಾರ ಸೂಚಿಸಿದ್ದರು. ಔಪಚಾರಿಕವಾಗಿ ಉಕ್ರೇನ್‌ ಜತೆ ಶಾಂತಿ ಮಾತುಕತೆಗೆ ಪುಟಿನ್‌ ಒಪ್ಪಿದ್ದರೂ, ಅವರ ಮನಸ್ಸಿನಲ್ಲಿ ಉಕ್ರೇನ್‌ ವಿರುದ್ಧ ಆಕ್ರೋಶದ ಕುದಿ ಇದ್ದೇ ಇದೆ. ಹೀಗಾಗಿ ಮಾತುಕತೆಯಲ್ಲಿ ಸ್ವಲ್ಪ ಹಿನ್ನಡೆಯಾದರೂ ಅವರು ಯಾವುದೇ ಕ್ಷಣದಲ್ಲಿಯೂ ಅಣ್ವಸ್ತ್ರ ದಾಳಿಯ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ''ರಷ್ಯಾಕ್ಕೆ ಮನ್ನಣೆ ಇಲ್ಲದ ಜಗತ್ತು ನಮಗೆ ಬೇಡ. ನಮ್ಮ ತಂಟೆಗೆ ಯಾರಾದರೂ ಬಂದರೆ ಅಣ್ವಸ್ತ್ರ ಪ್ರಯೋಗಿಸಲೂ ಹಿಂದೆಮುಂದೆ ನೋಡುವುದಿಲ್ಲ,'' ಎಂದು ಪುಟಿನ್‌ ನಾಲ್ಕು ವರ್ಷ ಹಿಂದೆಯೇ ಘೋಷಿಸಿದ್ದರು. ಇದು ಸಹ ಉಕ್ರೇನ್‌ ಮೇಲಿನ ಅಣ್ವಸ್ತ್ರ ಭೀತಿಯನ್ನು ಹೆಚ್ಚಿಸಿದೆ. ಆದರೆ ಬ್ರಿಟನ್‌ ಮಾತ್ರ, ''ಪುಟಿನ್‌ ಕೇವಲ ಹೆದರಿಸುತ್ತಿದ್ದಾರೆ. ಅವರು ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾಗುವುದಿಲ್ಲ,'' ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಕಳೆದ ಆರು ದಿನಗಳಿಂದ ಉಕ್ರೇನ್‌ ಮೇಲೆ ರಷ್ಯಾ ಪಾರುಪತ್ಯ ಸಾಧಿಸಿದೆ. ಕೀವ್‌ ಹಾಗೂ ಕಾರ್ಕಿವ್‌ ನಗರಗಳ ಮೇಲೆ ನಿಯಂತ್ರಣ ಸಾಧಿಸಿದೆ. ಪುಟಿನ್‌ ಸೈನಿಕರು ಕೀವ್‌ ನಗರದಿಂದ ಕೇವಲ 30 ಕಿ.ಮೀ ದೂರದಲ್ಲಿದ್ದಾರೆ. ದೇಶದ ಪ್ರಮುಖ ಆಯಕಟ್ಟಿನ ಬಂದರುಗಳನ್ನೂ ರಷ್ಯಾ ವಶಕ್ಕೆ ಪಡೆದಿದೆ. ಹೀಗಿದ್ದರೂ ಉಕ್ರೇನ್‌ ಸೈನಿಕರು ಹಾಗೂ ನಾಗರಿಕರು ರಷ್ಯಾಗೆ ಮಣಿದಿಲ್ಲ. ಬದಲಿಗೆ ಎರಡೂ ನಗರಗಳಲ್ಲಿ ತೀವ್ರ ಪ್ರತಿರೋಧ ತೋರಿಸಿ ಹಿಮ್ಮೆಟ್ಟಿಸುತ್ತಿದ್ದಾರೆ. ಅತ್ತ, ಐರೋಪ್ಯ ರಾಷ್ಟ್ರಗಳು ಉಕ್ರೇನ್‌ಗೆ ರಕ್ಷಣಾ ನೆರವು, ರಾಕೆಟ್‌ ಹಾಗೂ ಕ್ಷಿಪಣಿಗಳ ಪೂರೈಕೆಗೆ ಅಸ್ತು ಎಂದಿವೆ. ಈ ಸಂದರ್ಭದಲ್ಲಿ ಹಿಂದಡಿ ಇಟ್ಟರೆ ಅವಮಾನ ಎಂದು ಭಾವಿಸಿರುವ ಪುಟಿನ್‌, ಯಾವ ಕಠೋರ ನಿರ್ಧಾರ ಬೇಕಾದರೂ ತೆಗೆದುಕೊಳ್ಳುವ ಸಾಧ್ಯತೆ ಇದೆ. ಉಕ್ರೇನ್‌ ಮೇಲೆ ದಾಳಿ ಹಾಗೂ ಜಾಗತಿಕವಾಗಿ ಹೇರಿರುವ ನಿರ್ಬಂಧಗಳು ಸಹ ರಷ್ಯಾವನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಲಿವೆ. ಬೇರೆ ದೇಶಗಳ ಕಠಿಣ ನಿರ್ಬಂಧಗಳೇ ಪುಟಿನ್‌ ಸಿಟ್ಟು ಪುಟಿದೇಳಲು ಕಾರಣ ವಾಗಿದ್ದು, ಇದೇ ಕಾರಣಕ್ಕೆ ಅಣ್ವಸ್ತ್ರ ಪಡೆಗಳನ್ನು ಸಿದ್ಧವಿರುವಂತೆ ಸೂಚಿಸಿರುವುದೇ ಇದಕ್ಕೆ ನಿದರ್ಶನ ಎನ್ನಲಾಗುತ್ತಿದೆ. ಪುಟಿನ್‌ ಅಣ್ವಸ್ತ್ರ ದಾಳಿ ಮಾಡಿದರೆ ಏನಾಗುತ್ತದೆ? ರಷ್ಯಾ ಬಳಿ ಅಣ್ವಸ್ತ್ರ ರಹಿತ 'ಎಲ್ಲ ಬಾಂಬ್‌ಗಳ ತಾಯಿ' (ಫಾದರ್‌ ಆಫ್‌ ಆಲ್‌ ಬಾಂಬ್ಸ್‌-ಎಫ್‌ಒಎಬಿ) ಎಂದೇ ಖ್ಯಾತಿಯಾಗಿರುವ ಬಾಂಬ್‌ಗಳು ಇರುವುದು ಹಾಗೂ ಭಾರಿ ಪ್ರಮಾಣದಲ್ಲಿ ಅಣ್ವಸ್ತ್ರ ಇರುವುದರಿಂದ ಆತಂಕ ಉಂಟಾಗಿದೆ. ಹಾಗಾಗಿ ಪುಟಿನ್‌ ಮನಸ್ಸು ಮಾಡಿದರೆ ಉಕ್ರೇನ್‌ಅನ್ನು ಜಗತ್ತಿನ ಭೂಪಟದಿಂದಲೇ ಅಳಿಸಿಹಾಕುವ ಸಾಧ್ಯತೆ ಇದೆ. ಸಾವಿರಾರು ಕಿ.ಮೀ ವ್ಯಾಪ್ತಿಯನ್ನು ಕ್ಷಣಮಾತ್ರದಲ್ಲಿ ಸ್ಮಶಾನವನ್ನಾಗಿ ಮಾಡುವ ಟನ್‌ಗಟ್ಟಲೆ ಎಫ್‌ಒಎಬಿ, ಪರಮಾಣುಗಳು ಉಕ್ರೇನ್‌ ಮೇಲೆ ಬಿದ್ದರೆ ಆ ದೇಶ ಉಳಿಯಲು ಸಾಧ್ಯವೇ ಇಲ್ಲ ಎಂದು ಅಣ್ವಸ್ತ್ರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ-ಬೆಲಾರಸ್‌ ಭಾಯಿಭಾಯಿ? ಅಣ್ವಸ್ತ್ರ ದಾಳಿಗೆ ಸಜ್ಜಾಗಿ ನಿಂತಿರುವ ರಷ್ಯಾಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ಉಕ್ರೇನ್‌ ಗಡಿ ರಾಷ್ಟ್ರವಾದ ಬೆಲಾರಸ್‌ ರಷ್ಯಾ ಪರ ನಿಲುವು ತಾಳಿದೆ. ರಷ್ಯಾ ಅಣ್ವಸ್ತ್ರಗಳನ್ನು ತನ್ನ ದೇಶದಲ್ಲಿ ಇರಿಸಿಕೊಳ್ಳಲು ತನ್ನ ದೇಶದ ಮೇಲೆ ಇದ್ದ ಪರಮಾಣು ರಹಿತ ರಾಷ್ಟ್ರ ಎಂಬ ಮಾನ್ಯತೆಯನ್ನೇ ರದ್ದುಪಡಿಸುವ ದಿಸೆಯಲ್ಲಿ ಸಾಂವಿಧಾನಿಕವಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಅಲ್ಲದೆ, ಸಂವಿಧಾನಿಕ ತಿದ್ದುಪಡಿಗೆ ಬೆಲಾರಸ್‌ನ ಶೇ.65.16ರಷ್ಟು ಜನ ಬೆಂಬಲ ಸಹ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಷ್ಯಾ ಬಲಿಷ್ಠ ರಾಷ್ಟ್ರ ಎಂಬುದನ್ನು ಅರಿತ ಬೆಲಾರಸ್‌, ಈಗ ಪುಟಿನ್‌ ಅವರಿಗೇ ಬೆಂಬಲ ಸೂಚಿಸುವ ಮೂಲಕ ತಾನು ಅಪಾಯದಿಂದ ಪಾರಾಗಲು ಯತ್ನಿಸುತ್ತಿದೆ ಎನ್ನಲಾಗಿದೆ. ಬೆಲಾರಸ್‌ನಲ್ಲಿ ಪರಮಾಣುಗಳನ್ನು ಇರಿಸಿ, ಅಲ್ಲಿಂದಲೇ ಉಕ್ರೇನ್‌ ಮೇಲೆ ದಾಳಿ ಮಾಡುವುದು ರಷ್ಯಾ ಯೋಜನೆ ಎಂದು ತಿಳಿದುಬಂದಿದೆ. ರಷ್ಯಾದಂತಹ ರಾಷ್ಟ್ರಗಳು ಜಾಗತಿಕ ನಿಯಮಗಳು ತಮಗೆ ಅನ್ವಯವಾಗುವುದಿಲ್ಲಎಂಬಂತೆ ವರ್ತಿಸುತ್ತಿರುವುದು ಬೇಸರ ತಂದಿದೆ. ಸದ್ಯದ ಮಟ್ಟಿಗೆ ರಷ್ಯಾವು ಉಕ್ರೇನ್‌ ಮೇಲೆ ಅಣುದಾಳಿ ಮಾಡುವುದಿಲ್ಲ ಎಂಬ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ನಿಯಮಗಳಿಗೆ ತಕ್ಕಂತೆ ಪುಟಿನ್‌ ನಡೆದುಕೊಳ್ಳಲಿ. -ಬೆನ್‌ ವ್ಯಾಲೆಸ್‌, ಬ್ರಿಟನ್‌ ರಕ್ಷಣಾ ಸಚಿವ


from India & World News in Kannada | VK Polls https://ift.tt/TFMduLm

ಉಕ್ರೇನ್‌ ವಶಪಡಿಸಿಕೊಳ್ಳುವ ಯಾವ ಯೋಜನೆಯನ್ನೂ ಹೊಂದಿಲ್ಲ: ರಷ್ಯಾ ಸ್ಪಷ್ಟನೆ

ಮಾಸ್ಕೋ: ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ಮಾಸ್ಕೋ (ರಷ್ಯಾ) ಹೊಂದಿಲ್ಲ ಎಂದು ರಷ್ಯಾದ ವಿಶ್ವಸಂಸ್ಥೆ (ಯುಎನ್‌) ರಾಯಭಾರಿ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಬೆಲಾರಸ್‌ನಲ್ಲಿ ನಡೆಯುತ್ತಿರುವ ಮತ್ತು ಉಕ್ರೇನ್ ನಿಯೋಗಗಳ ನಡುವಿನ ಮಾತುಕತೆ ಅಂತ್ಯಗೊಳ್ಳುತ್ತಿದ್ದಂತೆಯೇ ರಷ್ಯಾ ಈ ಹೇಳಿಕೆ ನೀಡಿದೆ. ಆದರೆ, ರಷ್ಯಾ ತನ್ನ ಸೇನಾ ಪಡೆಗಳನ್ನು ಉಕ್ರೇನ್‌ನಿಂದ ಹಿಂದೆ ಕರೆಸಿಕೊಳ್ಳುವಂತೆ ಒತ್ತಡ ಹಾಕಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆಯನ್ನು ಬೆಲಾರಸ್‌ನಲ್ಲಿ ನಡೆಸಲಾಯಿತು. ಉಭಯ ದೇಶಗಳ ಉನ್ನತ ಮಟ್ಟದ ನಿಯೋಗಗಳು ಸಭೆಯಲ್ಲಿ ಪಾಲ್ಗೊಂಡಿದ್ದವು. ಬಹು ನಿರೀಕ್ಷಿತ ಮಾತುಕತೆಯು ಉಭಯ ದೇಶಗಳ ನಡುವಿನ ದ್ವೇಷವನ್ನು ಕೊನೆಗೊಳಿಸುವ ಗುರಿ ಹೊಂದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದೇ ಸಮಯದಲ್ಲಿ ಉಕ್ರೇನ್ ಬಿಕ್ಕಟ್ಟಿನ ಕುರಿತು ಯುಎನ್‌ಜಿಸಿಯ 11 ನೇ ತುರ್ತು ಅಧಿವೇಶನ ಸೋಮವಾರ ಜಿನೀವಾದಲ್ಲಿ ಪ್ರಾರಂಭವಾಯಿತು. ಈ ನಡುವೆಯೇ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ ಸದಸ್ಯತ್ವಕ್ಕಾಗಿ ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ಉಕ್ರೇನ್ ಸಂಸತ್ತು ಘೋಷಿಸಿದೆ. ಹೀಗೆ ಸೋಮವಾರ ಒಂದರ ಹಿಂದೊಂದು ಪ್ರಮುಖ ಬೆಳವಣಿಗೆಗಳಾಗಿವೆ. ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸಂಸದರ ತಂಡ ಇತ್ತ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯಕ್ಕೆ ವೇಗ ನೀಡಲು ಮತ್ತಷ್ಟು ವೇಗ ನೀಡಲು ನಾಲ್ವರು ಕೇಂದ್ರ ಸಚಿವರು ವಿದೇಶಗಳಿಗೆ ತೆರಳಲಿದ್ದಾರೆ. ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಸಂಘಟಿಸಲು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸಂಸದರ ತಂಡ ತೆರಳಲಿದೆ.


from India & World News in Kannada | VK Polls https://ift.tt/71EInTX

ಅಮೆರಿಕದ ಪ್ರಜೆಗಳು ಕೂಡಲೇ ರಷ್ಯಾ ತೊರೆಯುವಂತೆ ಆದೇಶಿಸಿದ ಯುಎಸ್‌!

ವಾಷಿಂಗ್ಟನ್‌: ಅಮೆರಿಕದ ಪ್ರಜೆಗಳು ತಕ್ಷಣವೇ ರಷ್ಯಾವನ್ನು ತೊರೆದು ವಾಣಿಜ್ಯ ವಿಮಾನಗಳಲ್ಲಿ ಅಮೆರಿಕಕ್ಕೆ ಹಿಂದಿರುಗಬೇಕು ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ಭಾನುವಾರ ಹೇಳಿದೆ. ಉಕ್ರೇನ್ ಮೇಲೆ ಆಕ್ರಮಣ ಮುಂದುವರಿಸಿರುವ ರಷ್ಯಾಕ್ಕೆ ತಮ್ಮ ವಾಯುಪ್ರದೇಶ ನಿರ್ಬಂಧ ಹೇರುವ ರಾಷ್ಟ್ರಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಅಲ್ಲದೆ, ಕೂಡ ಬ್ರಿಟನ್‌, ಯುರೋಪ್‌ ಒಕ್ಕೂಡ, ಕೆಡನಾ, ಜರ್ಮನಿ ಸೇರಿದಂತೆ 36 ರಾಷ್ಟ್ರಗಳ ವಿಮಾನಗಳಿಗೆ ತನ್ನ ವಾಯುಪ್ರದೇಶದಿಂದ ನಿರ್ಬಂಧ ಹೇರಿದೆ. ಹೀಗಾಗಿ, ಎಚ್ಚೆತ್ತುಕೊಂಡಿರುವ ಅಮೆರಿಕ ತನ್ನ ಪ್ರಜೆಗಳು ಕೂಡಲೇ ರಷ್ಯಾ ತೊರೆಯುವಂತೆ ಮನವಿ ಮಾಡಿದೆ. "ಅಮೆರಿಕ ಪ್ರಜೆಗಳು ಇನ್ನೂ ರಷ್ಯಾದಲ್ಲಿ ಉಳಿದಿದದ್ದರೆ, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ತಕ್ಷಣವೇ ರಷ್ಯಾವನ್ನು ತೊರೆಯಬೇಕು" ಎಂದು ರಷ್ಯಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಫೆಬ್ರುವರಿ 27ರಂದು ತಿಳಿಸಿದೆ. ಎರಡನೆಯ ಮಹಾಯುದ್ಧದ ನಂತರ ಯುರೋಪ್‌ ರಾಷ್ಟ್ರವೊಂದರ ಮೇಲೆ ಅತಿ ದೊಡ್ಡ ಆಕ್ರಮಣಣ ಇದಾಗಿದೆ. ಮೇಲೆ ರಷ್ಯಾ ಆಕ್ರಮಣ ಮುಂದುವರಿಸಿರುವ ಕುರಿತು ಪಾಶ್ಚಾತ್ಯ ರಾಷ್ಟ್ರಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ. ಅಮೆರಿಕ ಮತ್ತು ಯುರೋಪಿಯನ್ ಸರ್ಕಾರಗಳು ರಷ್ಯಾದ ಕೇಂದ್ರ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ನಿರ್ಬಂಧ ಹೇರುತ್ತಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ದಾಳಿಯನ್ನು "ವಿಶೇಷ ಕಾರ್ಯಾಚರಣೆ" ಎಂದು ಕರೆದಿದ್ದಾರೆ, ಅದರ ಮೂಲಕ ಅವರು ಮಾಸ್ಕೋದ ದಕ್ಷಿಣ ನೆರೆಯ ದೇಶವನ್ನು ಸಶಸ್ತ್ರೀಕರಣಗೊಳಿಸುವ ಗುರಿ ಹೊಂದಿದ್ದಾರೆ. 36 ರಾಷ್ಟ್ರಗಳ ವಿಮಾನಗಳಿಗೆ ನಿರ್ಬಂಧ ಹೇರಿದ ರಷ್ಯಾ ಉಕ್ರೇನ್ ಮೇಲಿನ ಆಕ್ರಮಣ ಮುಂದುವರಿಸಿದ್ದು, ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಹಲವು ನಿರ್ಬಂಧ ವಿಧಿಸಿವೆ. ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಕ್ರಮ ಕೈಗೊಂಡಿದ್ದು,36 ರಾಷ್ಟ್ರಗಳ ವಿಮಾನ ಸಂಚಾರಕ್ಕೆ ತನ್ನ ವಾಯುಪ್ರದೇಶದಿಂದ ನಿಷೇಧಿಸಲು ನಿರ್ಧರಿಸಿದೆ. ಯುರೋಪ್‌ ಒಕ್ಕೂಟ, ಬ್ರಿಟನ್ (ಯುಕೆ), ಕೆನಡಾ ಮತ್ತು ಜರ್ಮನಿಯಂತಹ ಪ್ರಮುಖ ರಾಷ್ಟ್ರಗಳ ವಿಮಾನ ಸಂಚಾರಕ್ಕೂ ನಿಷೇಧ ಅನ್ವಯಿಸುತ್ತದೆ. ರಷ್ಯಾ ಸರ್ಕಾರ ಸೋಮವಾರ ಮಾಸ್ಕೋದಲ್ಲಿ ಈ ಘೋಷಣೆ ಹೊರಡಿಸಿದೆ. ರಷ್ಯಾ ತನ್ನ ವಾಯುಪ್ರದೇಶಕ್ಕೆ ನಿರ್ಬಂಧ ಹಾಕಿರುವುದು ಯುರೋಪ್‌ ಒಕ್ಕೂಟ ಸೇರಿದಂತೆ ಏಷ್ಯಾ ರಾಷ್ಟ್ರಗಳ ವಾಯು ಸಂಚಾರದ ಮೇಲೆ ಭಾರೀ ಪರಿಣಾಮ ಬೀರಲಿದೆ ಎನ್ನಲಾಗಿದೆ. ಯುರೋಪ್ ಮತ್ತು ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಏಷ್ಯಾದ ದೇಶಗಳ ನಡುವಿನ ಪ್ರಯಾಣಕ್ಕೆ ರಷ್ಯಾ ಮಾರ್ಗವಾಗಿಯೇ ಬರಬೇಕಿದೆ. ಏರ್ ಫ್ರಾನ್ಸ್-ಕೆಎಲ್ಎಂ (Air France-KLM) ಮತ್ತು ಡಾಯ್ಚ್ ಲುಫ್ಥಾನ್ಸ ಎಜಿ ( Deutsche Lufthansa AG)ಯಂತಹ ಪ್ರಮುಖ ಕ್ಯಾರಿಯರ್‌ ವಿಮಾನಗಳಿಗೂ ನಿರ್ಬಂಧ ಹೇರಲಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವಣ ಸಮರ ಅಂತ್ಯಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ. ಉಕ್ರೇನ್ ದೇಶದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಷ್ಯಾ ಗಡಿಯಲ್ಲಿ ಇರುವ ಬೆಲಾರಸ್ ಪ್ರಾಂತ್ಯ ತಲುಪಿದ್ದು, ಗಡಿ ಭಾಗದಲ್ಲೇ ರಷ್ಯಾ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ಆರಂಭಿಸಿದೆ. ಕದನ ವಿರಾಮ ಘೋಷಣೆ ಆಗುವಂತೆ ನೋಡಿಕೊಳ್ಳುವುದು, ರಷ್ಯಾ ಸೇನಾ ಪಡೆ ಉಕ್ರೇನ್‌ ನೆಲದಿಂದ ವಾಪಸ್ ತೆರಳುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಉಕ್ರೇನ್‌ನ ಅಧ್ಯಕ್ಷೀಯ ಕಚೇರಿ ಮಾಹಿತಿ ನೀಡಿದೆ.


from India & World News in Kannada | VK Polls https://ift.tt/U3zHmQS

ಐಪಿಎಲ್‌ ಮತ್ತು ಪಿಎಸ್‌ಎಲ್‌ ಟೂರ್ನಿಗಳ ಬಹುಮಾನ ಮೊತ್ತದ ಅಂತರ ಅಜಗಜಾಂತರ!

ಬೆಂಗಳೂರು: ಪಾಕಿಸ್ತಾನ್‌ ಸೂಪರ್‌ ಲೀಗ್‌ ಟೂರ್ನಿಯ 2022ರ ಆವೃತ್ತಿ ಅದ್ಧೂರಿ ಅಂತ್ಯಕಂಡಿದೆ. 2021ರ ಆವೃತ್ತಿಯ ಚಾಂಪಿಯನ್ಸ್‌ ಮುಲ್ತಾನ್‌ ಸುಲ್ತಾನ್ಸ್‌ ಎದುರು ಅಮೋಘ ಆಟವಾಡಿದ ಶಾಹೀನ್‌ ಶಾ ಆಫ್ರಿದಿ ಸಾರಥ್ಯದ ಲಾಹೋರ್‌ ಕಲಂದರ್ಸ್‌ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಮೂಡಿಬಂದಿತು. ಫಖರ್‌ ಝಮಾನ್‌ ಮತ್ತು ಮೊಹಮ್ಮದ್‌ ರಿಝ್ವಾನ್‌ ನಡುವಣ ಪೈಪೋಟಿ ಹಾಗೂ ಶಾಹೀನ್‌ ಶಾ ಅಫ್ರಿದಿ ಮತ್ತು ಶದಾಬ್‌ ಖಾನ್‌ ಅವರ ಅದ್ಭುತ ಬೌಲಿಂಗ್‌ ದಾಳಿ ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ಒದಗಿಸಿದೆ. ಇದೇ ಮೊದಲ ಬಾರಿ ನಾಯಕತ್ವ ಪಡೆದಿದ್ದ ಶಾಹೀನ್‌ ಶಾ ಅಫ್ರಿದಿ, ಮಿಂಚಿನ ಪ್ರದರ್ಶನ ನೀಡಿದ್ದಾರೆ. ಆಡಿದ 13 ಪಂದ್ಯಗಳಿಂದ 20 ವಿಕೆಟ್‌ಗಳನ್ನು ಪಡೆದಿದ್ದು, ತಂಡಕ್ಕೆ ಅಗತ್ಯದ ಸಂದರ್ಭದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನೂ ನೀಡಿದೆ. ಅಫ್ರಿದಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದಾರೆ. ಅವರೊಟ್ಟಿಗೆ ಶದಾಬ್‌ ಖಾನ್‌, ಮೊಹಮ್ಮದ್‌ ಹಫೀಝ್‌, ಫಖರ್‌ ಝಮಾನ್‌ ಮತ್ತು ಶೊಯೇಬ್‌ ಮಲಿಕ್‌ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ಬಹುಮಾನ ಮೊತ್ತದಲ್ಲಿ ಅಜಗಜಾಂತರ ಅಂತರ ಕ್ರಿಕೆಟ್‌ ಜಗತ್ತಿನಲ್ಲಿ ಅತ್ಯುತ್ತಮ ಟಿ20 ಲೀಗ್‌ ಯಾವುದು ಎಂಬ ಚರ್ಚೆ ಆಗುತ್ತಲೇ ಇದೆ. ಪಾಕಿಸ್ತಾನ್‌ ಸೂಪರ್‌ ಲೀಗ್‌ ಅತ್ಯುತ್ತಮ ಬೌಲರ್ಸ್‌ ಹೊಂದಿದೆ ಎಂದು ಲೀಗ್ ಲೀಗ್‌ನಲ್ಲಿ ಆಡಿದ ಹಲವರು ಅಭಿಪ್ರಾಯ ಪಟ್ಟಿದ್ದಾರೆ ಕೂಡ. ಎರಡೂ ಲೀಗ್‌ಗಳಲ್ಲಿ ಆಡುವ ಆಟಗಾರರಿಗೆ ಸಿಗುವ ವೇತನದಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಭಾನುವಾರವಷ್ಟೇ ಟ್ರೋಫಿ ಗೆದ್ದ ಲಾಹೋರ್‌ ಕಲಂದರ್ಸ್‌ಗೆ ಸಿಕ್ಕಿರುವ ಬಹುಮಾನ ಮೊತ್ತ 3.4 ಕೋಟಿ ರೂ. ಆಗಿದೆ. ಅದೇ, ಮುಂಬರುವ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ಸಿಕ್ಕಿದೆ. 15ನೇ ಆವೃತ್ತಿಯ ಟೂರ್ನಿ ಮಾರ್ಚ್‌ 26ರಂದು ಮುಂಬೈನಲ್ಲಿ ಶುರುವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮಾಜಿ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿ ಆಗಲಿವೆ. ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಒಟ್ಟಾರೆ 10 ತಂಡಗಳು ಕಣಕ್ಕಿಳಿಯಲಿದೆ. ಈ ಸಲುವಾಗಿ ಫೆ.12-13ರಂದು ನಡೆಸಲಾದ ಆಟಗಾರರ ಬೃಹತ್‌ ಮಟ್ಟದ ಹರಾಜಿನಲ್ಲಿ ಎಲ್ಲ ತಂಡಗಳು 550 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಖರ್ಚುಮಾಡಿ 204 ಆಟಗಾರರನ್ನು ಖರೀದಿ ಮಾಡಿವೆ. ಈ ಬಾರಿ ಲೀಗ್‌ ಹಂತದ ಪಂದ್ಯಗಳ ಆಯೋಜನೆಯಲ್ಲಿ ಬಿಸಿಸಿಐ ಕೊಂಚ ಬದಲಾವಣೆ ತಂದಿದೆ. 10 ತಂಡಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಒಟ್ಟಾರೆ 70 ಲೀಗ್‌ ಪಂದ್ಯಗಳ ಆಯೋಜನೆ ಆಗಲಿವೆ. ಲೀಗ್‌ ಹಂತದ ಎಲ್ಲಾ ಪಂದ್ಯಗಳಿಗೆ ಮಹಾರಾಷ್ಟ್ರ ಆತಿಥ್ಯ ವಹಿಸಿದ್ದು, 55 ಪಂದ್ಯಗಳು ಮುಂಬೈನಲ್ಲಿ, 15 ಪಂದ್ಯಗಳು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಜರುಗಲಿವೆ. ನಾಕ್‌ಔಟ್‌ ಪಂದ್ಯಗಳು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆ ಆಗುವ ಸಾಧ್ಯತೆ ಇದೆ. ಮೇ 29ಕ್ಕೆ ಟೂರ್ನಿ ಅಂತ್ಯಗೊಳ್ಳಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4NrVtEg

ಎರಡನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ 2.0: ಉರಿ ಬಿಸಿಲಿನಲ್ಲಿ ಕೈ ನಾಯಕರ ಹೆಜ್ಜೆ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ 2.0 ಎರಡನೇ ದಿನಕ್ಕೆ ಕಾಲಿಟ್ಟಿದೆ. ಉರಿ ಬಿಸಿಲಲ್ಲೇ ಕಾಂಗ್ರೆಸ್ ಮುಖಂಡರು ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಪಾದಯಾತ್ರೆ ವೇದಿಕೆಯಾಗುತ್ತಿದೆ. ಭಾನುವಾರ ಆರಂಭಗೊಂಡ ಪಾದಯಾತ್ರೆ 2.0 ಭರ್ಜರಿಯಾಗಿಯೇ ಚಾಲನೆ ಪಡೆದುಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಾದಯಾತ್ರೆಯಲ್ಲಿ ಬಿರುಸಾಗಿಯೇ ಹೆಜ್ಜೆ ಹಾಕಿದ್ದಾರೆ. ಸೋಮವಾರ ಬಿಡದಿಯಿಂದ ಕೆಂಗೇರಿ (ಪೂರ್ಣಿಮ ಕನ್ವೆಂಷನ್ ಹಾಲ್) ವರೆಗೆ ಪಾದಯಾತ್ರೆ ನಡೆಯಲಿದೆ. ಮಂಗಳವಾರ ಕೆಂಗೇರಿಯಿಂದ ಅದ್ವೈತ್ ಪೆಟ್ರೋಲ್ ಬಂಕ್ ವರಗೂ ಕೈ ಮುಖಂಡರು ಹೆಜ್ಜೆ ಹಾಕಲಿದ್ದಾರೆ. ಬುಧವಾರ ಅದ್ವೈತ್ ಪೆಟ್ರೋಲ್ ಬಂಕ್ ನಿಂದ ಅರಮನೆ ಮೈದಾನದವರೆಗೆ ಪಾದಯಾತ್ರೆ ನಡೆಯಲಿದೆ. ಅಂತಿಮವಾಗಿ ಗುರುವಾರ ಅರಮನೆ ಮೈದಾನ ಗಾಯತ್ರಿ ಗ್ರ್ಯಾಂಡ್ ನಿಂದ ನ್ಯಾಶನಲ್ ಕಾಲೇಜು ಆಟದ ಮೈದಾನದಲ್ಲಿ ಸಮಾರೋಪ ಸಭೆ ನಡೆಯಲಿದೆ. ಪಾದಯಾತ್ರೆ 2.0 ಉತ್ಸಾಹದಲ್ಲಿ ಡಿಕೆಶಿ 2.0 ದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಉತ್ಸಾಹದಲ್ಲಿ ಭಾಗಿಯಾಗಿದ್ದಾರೆ. ಈ ಬಾರಿಯೂ ಡಿಕೆಶಿ ನೇತೃತ್ವ ಎದ್ದು ಕಾಣುತ್ತಿದೆ. ಭಾನುವಾರ ರಾತ್ರಿ ಪಾದಯಾತ್ರೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಅವರು,ಉರಿ ಬಿಸಿಲು, ಟಾರು ರಸ್ತೆಯಲ್ಲಿ ಇಂದು ನಾವೆಲ್ಲರೂ ಹೆಜ್ಜೆ ಹಾಕಿದ್ದೇವೆ. ಅನೇಕ ಕಡೆಗಳಲ್ಲಿ ಮರಗಳಿಲ್ಲದೆ ಬಿಸಿಲಲ್ಲೇ ಗುಂಡಿ, ಬಂಡೆ ಎಲ್ಲವನ್ನು ನೋಡಿಕೊಂಡು ಬಂದಿದ್ದೇವೆ. ನಮ್ಮ ಸ್ನೇಹಿತರೊಬ್ಬರು ನನ್ನನ್ನು ಮಣ್ಣಿನ ಮಗ ಎಂದು ಹೇಳಿದರು. ಆದರೆ ನಾನು ಮಣ್ಣಿನ ಮಗ ಅಲ್ಲ, ಕಲ್ಲಿನ ಮಗ ಎಂದು ನಮ್ಮಣ್ಣ ಕುಮಾರಣ್ಣಾ ಹೇಳಿದ್ದಾರೆ.ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲು ಬಂಡೆ ಚಚ್ಚಿದಾಗಲೇ ಚಪ್ಪಡಿಯಾಗೋದು, ಕೆತ್ತಿದಾಗ ಶಿಲೆ ಆಗೋದು, ನಂತರ ಅದು ಮರಳಾಗಿ ಮಣ್ಣಾಗುತ್ತದೆ.ಅಂದರೆ ಮಣ್ಣಿನ ಮೂಲ ಸ್ವರೂಪ ಕಲ್ಲು ಅಂತಾನೆ ಅಲ್ಲವೇ? ಎಂದು ಟಾಂಗ್ ನೀಡಿದರು. ನಾವು ಸಾಕಷ್ಟು ಕಾರ್ಯಕ್ರಮ ಮಾಡಿದ್ದೇವೆ. ಇಂದಿನ ಹೋರಾಟಕ್ಕೆ ಜನತಾದಳದವರೂ ಬಂದಿದ್ದರು. ಈ ಕ್ಷೇತ್ರದಲ್ಲಿರುವ, ಇಲ್ಲಿರುವ ಜನರಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರ ಇಲ್ಲ, ಎಲ್ಲ ಪಕ್ಷದವರೂ ಇದ್ದಾರೆ. ಇದು ಪಕ್ಷಾತೀತ ಹೋರಾಟ. ಎಲ್ಲ ವರ್ಗದ ಜನರ ಹೋರಾಟ. ಕಾಂಗ್ರೆಸ್ ಕೇವಲ ಮುಂದಾಳತ್ವ ವಹಿಸಿಕೊಂಡಿದೆ. ಇಂದಿನ ಹೋರಾಟ ನೀರಿಗಾಗಿ. ಈ ನೀರಿಗೆ ಬಣ್ಣ, ಆಕಾರ, ರುಚಿ ಇದೆಯಾ? ಇಲ್ಲ. ಇದನ್ನು ಎಲ್ಲಿ ಬೇಕಾದರೂ ಹರಿಸಬಹುದು. ಈ ನೀರು ಬಿಟ್ಟು ಬದುಕಲು ಸಾಧ್ಯವೇ? ಇಲ್ಲ. ಇದೇ ಕಾರಣಕ್ಕೆ ನಾವಿಂದು ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.


from India & World News in Kannada | VK Polls https://ift.tt/wTonWU0

ರಂಗಾಸಕ್ತರಿಗೆ ಗುಡ್‌ನ್ಯೂಸ್‌; ಸಿಲಿಕಾನ್‌ ಸಿಟಿಯಲ್ಲಿ ಪ್ರದರ್ಶನಗೊಳ್ಳಲಿವೆ ಮೂರು ಅತ್ಯುತ್ತಮ ನಾಟಕಗಳು

ಬೆಂಗಳೂರು: ರಂಗಪ್ರಿಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ರಾಜ್ಯದ ಮೂರು ಅತ್ಯುತ್ತಮ ನಾಟಕಗಳು ಸಿಲಿಕಾನ್ ಸಿಟಿಯಲ್ಲಿ ಮಾರ್ಚ್‌ ನಾಲ್ಕರಿಂದ ಪ್ರದರ್ಶನಗೊಳ್ಳಲಿವೆ. ಸಮಷ್ಟಿ ರಂಗ ತಂಡವು ನಗರದ ಎ.ಡಿ.ಎ ರಂಗ ಮಂದಿರದಲ್ಲಿ ಮಾರ್ಚ್ 4 ರಿಂದ ರಾಜ್ಯ ಮಟ್ಟದ ಮೂರು ದಿನಗಳ ನಾಟಕೋತ್ಸವ ನಡೆಸಲಿದೆ. ಮಾರ್ಚ್ 4 ರಂದು, ಅಸ್ತಿತ್ವ ತಂಡ ಅಭಿನಯಿಸುವ ‘ಕೆಂಡೋನಿಯನ್ಸ್’ ಪ್ರದರ್ಶನಗೊಳ್ಳಲಿವೆ. ಮಾರ್ಚ್ 5 ರಂದು ಸಂಗಮ ಕಲಾವಿದೆರ್ ತಂಡ ಅಭಿನಯಿಸಿವ ‘ವಿ ಟೀಚ್ ಲೈಫ್ ಸರ್’ ನಾಟಕ ಹಾಗೂ ಮಾರ್ಚ್ 6 ರಂದು, ಶೇಷಗಿರಿ ಕಲಾತಂಡ ಅಭಿನಯಿಸುವ ‘ವಾಲಿವಧೆ’ ನಾಟಕ ಪ್ರದರ್ಶನಗೊಳ್ಳಲಿವೆ. ಈ ರಾಜ್ಯ ಮಟ್ಟದ ನಾಟಕೋತ್ಸವದಲ್ಲಿ ಮಂಗಳೂರು, ಮಣಿಪಾಲ, ಹಾವೇರಿ ರಂಗ ತಂಡಗಳು ನಾಟಕಗಳನ್ನು ಪ್ರದರ್ಶಿಸುತ್ತಿವೆ. ಬೆಂಗಳೂರಿನ ಪ್ರೇಕ್ಷಕರಿಗೆ ಬೆಂಗಳೂರೇತರ ತಂಡಗಳ ನಾಟಕಗಳನ್ನು ಪ್ರದರ್ಶಿಸಿ, ಬೆಂಗಳೂರಿಗರು ಹೊಸ ನಾಟಕವನ್ನು ನೋಡಲು ಈ ಮೂಲಕ ಅವಕಾಶ ಕಲ್ಪಿಸುವ ಗುರಿ ಸಮಷ್ಠಿ ರಂಗ ತಂಡದ್ದಾಗಿದೆ. ಮೂರು ನಾಟಕಗಳ ಪೈಕಿ 2 ನಾಟಕಗಳು ಎನ್ ಎಸ್ ಡಿ ಆಯೋಜಿಸಿದ್ದ ಅಂತರಾಷ್ಟ್ರೀಯ ನಾಟಕೋತ್ಸವವಾದ ಭಾರತ ರಂಗ ಮಹೋತ್ಸವಕ್ಕೆ ಆಯ್ಕೆಯಾಗಿದ್ದವು. ಅಲ್ಲದೆ ವಾಲಿವಧೆ ನಾಟಕವು ತುಂಬಾ ಜನ ಮೆಚ್ಚಿರುವ ನಾಟಕವಾಗಿದೆ.


from India & World News in Kannada | VK Polls https://ift.tt/zAxVChb

ಥೇಮ್ಸ್‌ ತೀರದಿಂದ 7: ಯುಕೆಯಲ್ಲಿ ಎಂಥ ಮನೆಗಳಿವೆ ಗೊತ್ತಾ? ಅವುಗಳ ವಿಶಿಷ್ಟವೂ ರೋಚಕ ಕಹಾನಿ!

- , ಯುನೈಟೆಡ್ ಕಿಂಗ್ಡಮ್ ನಲ್ಲಿ ಶಾಶ್ವತ ನಿವಾಸ ಪಡೆದುಕೊಳ್ಳಲು ಐದು ವರ್ಷಗಳ ಅವಧಿ ಬೇಕಾಗುತ್ತದೆ. ಸಾಮಾನ್ಯವಾಗಿ ತಾತ್ಕಾಲಿಕ ವೀಸಾದಲ್ಲಿ ಇರುವವರು ಯುಕೆಯಲ್ಲಿ ಮನೆ ಕೊಂಡುಕೊಳ್ಳುವುದು ತುಂಬಾ ಕಡಿಮೆ. ನಿಯಮಗಳ ಪ್ರಕಾರ, ವಿಶ್ವದ ಯಾವುದೇ ದೇಶದಲ್ಲಿರುವ ನಿವಾಸಿಗಳು ಇಂಗ್ಲೆಂಡ್ ನಲ್ಲಿ ಮನೆ ಕೊಂಡುಕೊಳ್ಳಬಹುದು. ಇತ್ತೀಚಿಗೆ ನನ್ನ ಪರಿಚಯದವರು ಭಾರತದೆಲ್ಲೆ ಇದ್ದು ಲಂಡನ್ ನಲ್ಲಿ ಮನೆ ಕೊಂಡುಕೊಂಡಿದ್ದಾರೆ. ವಿದೇಶದಿಂದ ಅನೇಕರು ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ಬಂಡವಾಳದ ಉದ್ದೇಶದಿಂದ ಮನೆಗಳನ್ನು ಕೊಂಡುಕೊಳ್ಳುವುದನ್ನು ನೋಡಬಹುದು. ಹಾಗಾದರೆ ಇಂಗ್ಲೆಂಡ್ ನಲ್ಲಿ ಮನೆ ಕೊಂಡುಕೊಳ್ಳುವುದು ಸುಲಭವಾ? ಇಲ್ಲಿಯ ರಿಯಲ್ ಎಸ್ಟೇಟ್ ವಾತಾವರಣ ಹೇಗಿದೆ? ಎನ್ನುವ ಪ್ರಶ್ನೆ ಉದ್ಭವಿಸಬಹುದು. ಜೊತೆಗೆ ಇಲ್ಲಿಯೇ ವಾಸ ಮಾಡಿ ಬದುಕು ಕಟ್ಟಿಕೊಂಡವರಿಗಂತೂ ಒಂದು ಮನೆಯನ್ನು ಖರೀದಿಸುವುದು ಅವರ ಜೀವಿತಾವಧಿಯಲ್ಲಿ ಮಾಡುವ ದೊಡ್ಡ ಖರೀದಿಯಾಗಿದೆ. ಹೀಗಾಗಿ ಇಂಗ್ಲೆಂಡ್ ನಲ್ಲಿ ಮನೆಯನ್ನು ಕೊಂಡುಕೊಳ್ಳುವ ಮೊದಲು ಒಂದು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾದ ಹಾಗೂ ನಿಖರವಾದ ಮಾಹಿತಿಯನ್ನು ಹೊಂದಿರುವುದು ನಿಜವಾಗಿಯೂ ಮುಖ್ಯವಾಗಿದೆ. ಮೊಟ್ಟ ಮೊದಲು ನಾವು ತಿಳಿದುಕೊಳ್ಳಬೇಕಾ ವಿಚಾರವೇನೆಂದರೆ, ಯುನೈಟೆಡ್ ಕಿಂಗ್ಡಮ್ ನಲ್ಲಿ ಸುಮಾರು 11 ರೀತಿಯ ಮನೆಗಳಿವೆ. ಇಂಗ್ಲೆಂಡ್ ನಲ್ಲಿ ಹಲವಾರು ರೀತಿಯ ಗುಣಲಕ್ಷಣಗಳಿರುವ ಮನೆಗಳಿಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ನೀವು ಯಾವ ರೀತಿಯ ಮನೆಗಳನ್ನು ಖರೀದಿಸಲು ಬಯಸುತ್ತೀರಿ ಎಂಬುದರ ಕುರಿತು ನಿರ್ಧಾರಕ್ಕೆ ಬರುವ ಮೊದಲು ನೀವು ಪ್ರತಿಯೊಂದು ಮನೆಯ ಗುಣಲಕ್ಷಣಗಳನ್ನು ಪರಿಗಣಿಸಬೇಕು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವುದು ಸೂಕ್ತವೆಂದು ನೋಡಬೇಕು. ಸಾಮಾನ್ಯವಾಗಿ ಫ್ಲ್ಯಾಟ್ಸ್ (FLATS ) ಗಳು ಲಂಡನ್ ಮತ್ತು ಬರ್ಮಿಂಗ್ಹ್ಯಾಮ್‌ನಂತಹ ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಒಂದು ಬ್ಲಾಕ್ ನಲ್ಲಿ ಹಲವಾರು ಫ್ಲ್ಯಾಟ್ಸ್ ಗಳಿರುತ್ತವೆ. ಈ ಫ್ಲ್ಯಾಟ್ಸ್ ಗಲ್ಲಲ್ಲಿ ಇನ್ನೊಂದು ಮಾದರಿ ಎಂದರೆ ಎರಡು ಮಹಡಿಯ ಫ್ಲ್ಯಾಟ್ಸ್. ಇದನ್ನು ಮೈಸೊನೆಟ್ಟ್ ಅಥವಾ ಡುಪ್ಲೆಕ್ಸ್ ಫ್ಲ್ಯಾಟ್ಸ್ ಎಂದು ಕರೆಯುತ್ತಾರೆ. ಇದಲ್ಲದೆ ಸ್ಟುಡಿಯೋ ಫ್ಲ್ಯಾಟ್ಸ್ ಕೂಡ ಲಂಡನ್‌ನಲ್ಲಿ ತುಂಬಾ ಜನಪ್ರಿಯವಾಗಿದೆ. ಸ್ಟುಡಿಯೋ ಫ್ಲ್ಯಾಟ್ಸ್ ನಲ್ಲಿ ಅಡುಗೆ ಜಾಗ, ಮಲಗುವ ಜಾಗ ಜೊತೆಗೆ ಲಿವಿಂಗ್ ರೂಮ್ ಎಲ್ಲಾ ಒಂದೇ ಕಡೆ ಇರುವದರಿಂದ ಒಂಟಿಯಾಗಿ ಇರುವರಿಗೆ ಹೇಳಿ ಮಾಡಿಸಿದ ಜಾಗ. ಇನ್ನು ಮನೆಗಳ ವಿಷಯ ಬಂದಾಗ ಇಂಗ್ಲೆಂಡ್‌ನಲ್ಲಿ ಹಲವಾರು ತರಹದ ಮನೆಗಳಿವೆ. ಬೇರ್ಪಟ್ಟ ಮನೆಗಳನ್ನು ಇಲ್ಲಿ ಡಿಟ್ಯಾಚೇಡ್ ಹೌಸಸ್ ಎಂದು ಕರೆಯುತ್ತಾರೆ. ಈ ಮನೆಗಳ ವಿಶೇಷತೆಯೆಂದರೆ, ಇವುಗಳು ಮತ್ತೊಂದು ಮನೆ ಅಥವಾ ಕಟ್ಟಡಕ್ಕೆ ಸಂಪರ್ಕ ಹೊಂದಿಲ್ಲದ ಏಕೈಕ ಮನೆಗಳಾಗಿರುತ್ತವೆ. ಹಾಗಾಗಿ ಅಕ್ಕ ಪಕ್ಕ ಸಾಕಷ್ಟು ಜಾಗಗಳು ಸಿಗುತ್ತವೆ ಮತ್ತು ಖಾಸಗಿತನ ಕಾಪಾಡಲು ಸೂಕ್ತವಾದ ಮನೆಗಳು ಎನ್ನಬಹುದು. ಈ ರೀತಿಯ ಮನೆಗಳಲ್ಲಿ ದೊಡ್ಡ ಮುಂಭಾಗದ ಜೊತೆಗೆ ಹಿಂಭಾಗದ ಉದ್ಯಾನ ಹಾಗೆಯೆ ಮುಂದೆ ಕಾರುಗಳನ್ನು ನಿಲ್ಲಿಸಲು ಸಾಕಷ್ಟು ಜಾಗಗಳಿರುತ್ತವೆ. ಮಧ್ಯಮ ವರ್ಗದವರಿಗೆ ಜನಪ್ರಿಯವಾದ ಇನ್ನೊಂದು ಬಗೆಯ ಮನೆಗಳು ಅರೆ-ಬೇರ್ಪಟ್ಟ ಅಂದರೆ ಸೆಮಿ ಡಿಟ್ಯಾಚ್ಡ್‌ ಹೌಸ್‌ಗಳು. ಈ ರೀತಿಯ ಮನೆಗಳು ಒಂದು ಬದಿಯಲ್ಲಿ ಗೋಡೆಯ ಮೂಲಕ ಒಟ್ಟಿಗೆ ಜೋಡಿಸಲ್ಪಟ್ಟಿರುತ್ತವೆ. ಇವುಗಳು ಪ್ರತ್ಯೇಕ ಮನೆಗಳಿಗಿಂತ ಅಗ್ಗವಾಗಿರುತ್ತವೆ ಏಕೆಂದರೆ ಈ ಮನೆಗಳು ಪಕ್ಕದ ಮನೆಗೆ ಒಂದು ಗೋಡೆಯ ಕಡೆ ಅಂಟಿಕೊಂಡಿರುವದರಿಂದ, ಖಾಸಗಿತನ ಇರುವದಿಲ್ಲ. ಇನ್ನೊಂದು ರೀತಿಯ ಮನೆಗಳೆಂದರೆ ಟೇರೆಸ್ಡ್ ಮನೆಗಳು. ಈ ಮನೆಗಳ ಎರಡೂ ಕಡೆಯ ಗೋಡೆಗಳು ಪಕ್ಕದ ಮನೆಗಳಿಗೆ ಅಂಟಿಕೊಂಡಿರುತ್ತವೆ. ಒಂದು ರಸ್ತೆಯ ಉದ್ದಕ್ಕೂ ಒಂದು ಮನೆಯಿಂದ ಇನ್ನೊಂದು ಮನೆಗೆ ಗೋಡೆಯ ಮೂಲಕ ಸಾಲಾಗಿ ಅಂಟುಕೊಂಡಿರುವ ಈ ರೀತಿಯ ಮನೆಗಳನ್ನು ಸಾಮಾನ್ಯವಾಗಿ ಯುಕೆಯಲ್ಲಿ ಎಲ್ಲಾ ಕಡೆ ಕಾಣ ಸಿಗುತ್ತದೆ. ಇವುಗಳು ಯುಕೆಯಲ್ಲಿ ಅತ್ಯಂತ ಜನಪ್ರಿಯ ರೀತಿಯ ಮನೆಗಳಾಗಿವೆ ಮತ್ತು ದಟ್ಟವಾದ ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ನಗರಗಳಲ್ಲಿ ಶತಮಾನಗಳಿಂದ ಕಾರ್ಮಿಕ-ವರ್ಗದ ವಸತಿಗಳ ಸಾಮಾನ್ಯ ಮೂಲಗಳಾಗಿವೆ. ನೀವು ಮನೆಯನ್ನು ಖರೀದಿಸಲು ಬಯಸಿದರೆ, ಟೆರೇಸ್ಡ್ ಮನೆಯು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ರಸ್ತೆಯ ತುದಿಯಲ್ಲಿರುವ ಟೆರೇಸ್ ಮನೆಗೆ ಇಲ್ಲಿ ಎಂಡ್ ಆಫ್ ಟೆರೇಸ್ ಹೌಸ್ ಎಂದು ಕರೆಯುತ್ತಾರೆ. ಈ ರೀತಿಯ ಮನೆಯು ಒಂದು ಬದಿಯಲ್ಲಿ ಮಾತ್ರ ಗೋಡೆಯನ್ನು ಹಂಚಿಕೊಳ್ಳುತ್ತದೆ ಅದರಿಂದ ಟೆರೇಸ್ ಹೌಸ್ ಬೆಲೆಗೆ ಹೋಲಿಸಿದರೆ ಇವು ಸ್ವಲ್ಪ ದುಬಾರಿಯ ಮನೆಗಳಾಗಿರುತ್ತವೆ. ಇನ್ನು ಹಳ್ಳಿಯ ಕಡೆ ಹೋದರೆ ನಮಗೆ ಇನ್ನೊಂದು ಮಾದರಿಯ ಮನೆಗಳು ಸಿಗುತ್ತವೆ ಅವುಗಳಿಗೆ ಕೋಟೇಜಸ್ ಎಂದು ಕರೆಯುತ್ತೇವೆ. ಕಾಟೇಜ್ ಅಂದರೆ ಸಾಕಷ್ಟು ಹಳೆಯ-ಶೈಲಿಯ ಒಂದು ಚಿಕ್ಕ ಮನೆ. ಈ ರೀತಿಯ ಮನೆಗಳಿಗೆ ಚಳಿಗಾಲದ ತಿಂಗಳುಗಳಲ್ಲಿ ಶೀತವನ್ನು ಸಹಿಸಿಕೊಳ್ಳುವ ಸಲುವಾಗಿ ತುಂಬಾ ದಪ್ಪವಾದ, ಬಲವಾದ ಗೋಡೆಗಳಿಂದ ಕಟ್ಟಿರುತ್ತಾರೆ. ಇಂಗ್ಲೆಂಡ್ ನಲ್ಲಿ ಸಿಗುವ ಇನ್ನೊಂದು ಮಾದರಿಯ ಮನೆಗಳಿಗೆ ಬಂಗಲೌಸ್ ಎಂದು ಕರೆಯುತ್ತಾರೆ. ಬಂಗಲೌಸ್ ಗಳು ಒಂದೇ ಅಂತಸ್ತಿನ ಮನೆಯಾಗಿದ್ದು, ಇತರ ಮನೆಗಳಿಂದ ಬೇರ್ಪಟ್ಟಿರುತ್ತವೆ ಹಾಗೆಯೆ ಈ ರೀತಿಯ ಮನೆಗಳು ತುಂಬಾ ವಿಶಿಷ್ಟವಾಗಿರುತ್ತವೆ. 'ಬಂಗಲೆ' ಎಂಬ ಪದದ ಮೂಲವು 'ಬಂಗಾಳ' ಎಂಬ ಪದದಿಂದ ಬಂದಿದೆ. ಇದರ ಇತಿಹಾಸ ಭಾರತದ ಬಂಗಾಳ ರಾಜ್ಯಕ್ಕೆ ಸಂಬಂಧ ಪಟ್ಟದ್ದು. 17 ನೇ ಶತಮಾನದಲ್ಲಿ ಬಂಗಾಳದಲ್ಲಿ ನೆಲೆಸಿದ ಯುರೋಪಿಯನ್ನರಿಗೆ ಮೊದಲು ಬಂಗಲೆಗಳನ್ನು ನಿರ್ಮಿಸಲಾಯಿತು ಎಂದು ತಿಳಿದು ಬರುತ್ತದೆ. ಯುಕೆಯಲ್ಲಿರುವ ಅತ್ಯಂತ ದುಬಾರಿಯ ಮನೆಗಳೆಂದರೆ ಮ್ಯಾನ್ಷನ್ಸ್ (Mansions ). ಇದು ಸಾಮಾನ್ಯವಾಗಿ ಇಲ್ಲಿಯ ಶ್ರೀಮಂತರು ಖರೀದಿಸುವ ಮನೆಗಳಾಗಿವೆ. ಇಂತಹ ಮಹಲುಗಳಲ್ಲಿ ಅನೇಕ ದೊಡ್ಡ ಕೋಣೆಗಳು, ಅನೇಕ ಮಹಡಿಗಳು ಮತ್ತು ಬೃಹತ್ ಉದ್ಯಾನವನ್ನು ನೋಡುತ್ತೇವೆ ಹಾಗೆ ಈ ಮಹಲುಗಳು ಒಂದು ಎಕರೆ ಗಿಂತ ಹೆಚ್ಚು ಪ್ರದೇಶಗಳಲ್ಲಿ ವಿಸ್ತಾರಿತವಾಗಿರುವುದನ್ನು ಕಾಣಬಹುದಾಗಿದೆ. ಯುಕೆಯಲ್ಲಿರುವ ಎಲ್ಲಾ ವಸತಿ ಪ್ರಕಾರಗಳಲ್ಲಿ, ಮಹಲುಗಳು ಮತ್ತು ಸಂರಕ್ಷಣಾ ಪ್ರದೇಶಗಳಲ್ಲಿರುವ ಮನೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಂರಕ್ಷಣಾ ಪ್ರದೇಶಗಲ್ಲಿರುವ ಮನೆಗಳು ಅವುಗಳ ವಿಶಾಲವಾದ ಸ್ವಭಾವ ಮತ್ತು ಶ್ರೀಮಂತ ಇತಿಹಾಸಗಳಿಗೆ ಸಾಮಾನ್ಯವಾಗಿ ಹೆಸರುವಾಸಿಯಾಗಿದೆ, ಇಂತಹ ಮನೆಗಳ ರಚನೆಗಳು ಶತಮಾನಗಳಷ್ಟು ಹಳೆಯವು. ಕೆಲವು ಬೆರಳೆಣಿಕೆಯ ಮನೆಗಳು ಆಸಕ್ತಿಯ ಐತಿಹಾಸಿಕ ಸ್ಥಳಗಳೆಂದು ಪಟ್ಟಿ ಮಾಡಲಾಗಿವೆ. ಸಂರಕ್ಷಣಾ ಪ್ರದೇಶಗಲ್ಲಿರುವ ಮನೆಗಳನ್ನು ಬದಲಾಯಿಸಲು ಯೋಜನಾ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತವೆ. ಹೀಗಾಗಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಮನೆಯನ್ನು ಖರೀದಿ ಮಾಡುವ ಮೊದಲು ಹಲವಾರು ರೀತಿಯ ಮನೆಗಳ ಬಗ್ಗೆ ಅವುಗಳ ಸಾಧಕ-ಬಾಧಕಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಇಲ್ಲಿಯ ಮನೆಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಂಡರೆ ಕರೀದುಗಾರರಿಗೆ ತುಂಬಾ ಉಪಯುಕ್ತವಾಗುತ್ತದೆ. ಮುಂದಿನ ದಿನಗಳ ಅಂಕಣದಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಮನೆ ಕೊಂಡುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.


from India & World News in Kannada | VK Polls https://ift.tt/4nZ0Ewi

ಮಾ.2ಕ್ಕೆ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ; ಮೇಯರ್‌, ಉಪ ಮೇಯರ್‌ ಹುದ್ದೆಗೆ ಕಸರತ್ತು

ಆರ್‌.ಸಿ.ಭಟ್‌ ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆ ಮಾ.2ಕ್ಕೆ ಫಿಕ್ಸ್‌ ಆಗಿದೆ. ಬಿಜೆಪಿ ಬಹುಮತ ಇರುವ ಪಾಲಿಕೆ ಆಡಳಿತದಲ್ಲಿ ಮುಂದಿನ ಮೇಯರ್‌ ಗಾದಿ ಮತ್ತೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿರುವ ಕಾರಣ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದ್ದು, ಆಕಾಂಕ್ಷಿಗಳ ತೆರೆಮರೆ ಕಸರತ್ತು ಜೋರಾಗಿದೆ. ಪಾಲಿಕೆಯ ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮೊದಲ ಅವಧಿಯಲ್ಲಿ ಬಿಜೆಪಿಯ ದಿವಾಕರ್‌ ಪಾಂಡೇಶ್ವರ ಮೇಯರ್‌ ಗದ್ದುಗೆಗೇರಿದರೆ, ಎರಡನೇ ಅವಧಿಗೆ ಸಾಮಾನ್ಯ ಮೀಸಲು ನಿಗದಿಯಾದ ಕಾರಣ ಯಾವುದೇ ಜಿದ್ದಾಜಿದ್ದಿ ಇಲ್ಲದೆ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿಗೆ ಮೇಯರ್‌ ಹುದ್ದೆ ಒಲಿದು ಬಂದಿತ್ತು. ಇದೀಗ ಮೂರನೇ ಅವಧಿಯ ಮೀಸಲಾತಿಯೂ ಸಾಮಾನ್ಯ ಅಭ್ಯರ್ಥಿಗೆ ನಿಗದಿಯಾದ ಕಾರಣ ಬಿಜೆಪಿಯ ಕೆಲವರು ಗದ್ದುಗೆ ಏರಲು ಪ್ರಭಾವ ಬೀರುತ್ತಿದ್ದಾರೆ. ಉತ್ತರಕ್ಕೆ ಬೇಡಿಕೆ: ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸತತ ಎರಡು ಬಾರಿ ಮೇಯರ್‌ ಹುದ್ದೆ ಒಲಿದಿರುವುದರಿಂದ ಈ ಬಾರಿ ಮಂಗಳೂರು ಉತ್ತರ ಕ್ಷೇತ್ರಕ್ಕೆ ಮೇಯರ್‌ ಹುದ್ದೆ ಕೊಡಿಸಬೇಕು ಎಂದು ಪ್ರಬಲ ಲಾಬಿ ಶುರುವಾಗಿದೆ. ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ 22 ವಾರ್ಡ್‌ಗಳ ಪೈಕಿ ಬಿಜೆಪಿ 20 ವಾರ್ಡ್‌ಗಳಲ್ಲಿ ಜಯಭೇರಿ ಭಾರಿಸುವುದರ ಜತೆಯಲ್ಲಿ ಕ್ರಿಯಾಶೀಲ ಯುವ ಹಾಗೂ ಹಿರಿ ಸದಸ್ಯರಲ್ಲಿ ಕೆಲವರು ಪ್ರಭಾವಿ ಕಾರ್ಪೊರೇಟರ್‌ ಆಗಿರುವ ಕಾರಣ ಈ ಬಾರಿ ಉತ್ತರ ಕ್ಷೇತ್ರಕ್ಕೆ ಮೇಯರ್‌ ಹುದ್ದೆ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಉತ್ತರದ ಮಟ್ಟಿಗೆ 16ನೇ ಬಂಗ್ರಕೂಳೂರು ವಾರ್ಡ್‌ನ ಕಿರಣ್‌ ಕೋಡಿಕಲ್‌ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆ 2023ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಪಾಲಿಕೆಯ ಮೇಯರ್‌ ಹುದ್ದೆ ಅತ್ಯಂತ ಮಹತ್ವ ಪಡೆಯುತ್ತದೆ. ಇದಕ್ಕಾಗಿ ಈ ಬಾರಿ ಪ್ರಬಲ ವ್ಯಕ್ತಿಗೆ ಮೇಯರ್‌ ಹುದ್ದೆ ನೀಡಬೇಕು ಎಂಬ ವಾದವೂ ಪಕ್ಷದೊಳಗೆ ನಡೆಯುತ್ತಿದೆ. ಮೂರನೇ ಅವಧಿಗೆ ಕಾರ್ಪೊರೇಟರ್‌ ಆಗಿ ಆಯ್ಕೆಯಾಗಿರುವ ಬಿಜೆಪಿಯ ಹಿರಿಯ ಸದಸ್ಯ, ಪಕ್ಷದ ಜಿಲ್ಲಾಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಅವರನ್ನು ಮೇಯರ್‌ ಮಾಡಬೇಕು. ಇದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸಿಗೆ ನೆರವಾಗಲಿದೆ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಮೇಯರ್‌ ಹುದ್ದೆ ಯಾರಿಗೆ ನೀಡಬೇಕು ಎಂಬ ಬಗ್ಗೆ ಈಗಾಗಲೇ ಒಂದೆರಡು ಬಾರಿ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ಇನ್ನೊಂದು ಬಾರಿ ಶಾಸಕರ ಉಪಸ್ಥಿತಿಯಲ್ಲಿ ಅಂತಿಮ ಸಭೆ ನಡೆಸಿ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆ ನಿರ್ಧಾರವಾಗಲಿದೆ. ಬಹುತೇಕ ಮಾ.1ರಂದು ರಾತ್ರಿ ಅಥವಾ ಮಾ.2ರಂದು ಚುನಾವಣೆ ನಡೆಯುವ ದಿನ ಬೆಳಗ್ಗೆ ಅಭ್ಯರ್ಥಿಗಳ ಹೆಸರನ್ನು ಪಕ್ಷ ಘೋಷಣೆ ಮಾಡಲಿದೆ. ಹಿಂದುಳಿದ ವರ್ಗ ಎ ಮಹಿಳೆಗೆ ಉಪ ಮೇಯರ್‌ಪಾಲಿಕೆಯ ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ. ಹಿಂದಿನ ಎರಡು ಅವಧಿಯಲ್ಲಿ ಉಪ ಮೇಯರ್‌ ಸ್ಥಾನ ಮಂಗಳೂರು ಉತ್ತರ ಕ್ಷೇತ್ರದ ಪಾಲಾಗಿತ್ತು. ಇದೀಗ ಮೇಯರ್‌ ಹುದ್ದೆ ಮಂಗಳೂರು ಉತ್ತರಕ್ಕೆ ಹೋದರೆ ಉಪ ಮೇಯರ್‌ ಹುದ್ದೆ ಮಂಗಳೂರು ದಕ್ಷಿಣದ ಪಾಲಾಗಿದೆ. ಹಿಂದುಳಿದ ವರ್ಗ ಎ ಪೈಕಿ ಪೂರ್ಣಿಮಾ ಹಿರಿಯ ಸದಸ್ಯೆಯಾಗಿದ್ದಾರೆ. ಅವರನ್ನು ಉಪ ಮೇಯರ್‌ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ. ಆದರೆ ಮುಂದೆ ಮೇಯರ್‌ ಹುದ್ದೆಗೆ ಮಹಿಳಾ ಮೀಸಲು ಬಂದರೆ ಪೂರ್ಣಿಮಾ ಮೇಯರ್‌ ಆಗುವ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಅವರು ಈ ಬಾರಿ ಉಪ ಮೇಯರ್‌ ಹುದ್ದೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


from India & World News in Kannada | VK Polls https://ift.tt/Ww3SMKL

ಏಕಾಏಕಿ ಮನೆಯೊಳಗೆ ನುಗ್ಗಿದ ಚಿರತೆ; ಟಿ.ವಿ ಸೌಂಡ್‌ ಇದ್ದಿದ್ದಕ್ಕೆ ಬಚಾವ್ ಆದ್ರು ಮನೆಮಂದಿ

ಮೈಸೂರು: ತಾಲೂಕಿನ ಹುರ ಸಮೀಪದ ಯಡಹಳ್ಳಿ ಗ್ರಾಮದಲ್ಲಿ ಮನೆ ಮಂದಿ ಒಟ್ಟಾಗಿ ಟಿವಿ ನೋಡುತ್ತಾ ಕುಳಿತಿದ್ದ ವೇಳೆ ಏಕಾಏಕಿ ಚಿರತೆಯೊಂದು ಒಳ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ಕುಟುಂಬ ಸದಸ್ಯರು ಚಿರತೆ ದಾಳಿಯಿಂದ ಪಾರಾಗಿದ್ದಾರೆ. ಅಲ್ಲದೇ, ಅದನ್ನು ಚಾಣಾಕ್ಷತೆಯಿಂದ ಮನೆಯೊಳಗೇ ಕೂಡಿ ಹಾಕಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ್ದಾರೆ. ಗ್ರಾಮದ ನಿವಾಸಿ ಚೆನ್ನಪ್ಪ ಎಂಬುವರು ಶನಿವಾರ ರಾತ್ರಿ 8.30ರ ಸಮಯದಲ್ಲಿ ಪತ್ನಿ ಹಾಗೂ ಮಗನ ಜೊತೆ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದರು. ಈ ವೇಳೆ ಮನೆಯ ಹೊರಗೆ ನಾಯಿಯೊಂದನ್ನು ಅಟ್ಟಿಸಿಕೊಂಡು ಬಂದ ಚಿರತೆ ತೆರೆದಿದ್ದ ಮುಂಬಾಗಿಲಿನಿಂದ ವೇಗವಾಗಿ ಒಳ ನುಗ್ಗಿದೆ. ಅಚಾನಕ್ಕಾಗಿ ಚಿರತೆ ಒಳ ನುಗ್ಗಿದ್ದರಿಂದ ಚೆನ್ನಪ್ಪ ಭಯಭೀತರಾದರೂ ತಕ್ಷಣ ಸಾವರಿಸಿಕೊಂಡು ಪತ್ನಿ ಹಾಗೂ ಮಗನ ಜೊತೆಗೆ ಮನೆಯಿಂದ ಹೊರ ಬಂದು, ಬಾಗಿಲನ್ನು ಭದ್ರ ಮಾಡಿ ಚಿರತೆಯನ್ನು ಮನೆಯೊಳಗೆ ಕೂಡಿ ಹಾಕಿದ್ದಾರೆ. ಈ ವೇಳೆ ಮನೆಯೊಳಗಿದ್ದ ಚಿರತೆಯೂ ಗಾಬರಿಗೊಂಡು ಟಿವಿ ಶಬ್ದಕ್ಕೆ ಮನೆಯೆಲ್ಲಾ ಅಡ್ಡಾಡಿ ರಂಪಾಟ ಮಾಡಿದೆ. ವಿಷಯ ತಿಳಿದು ನೂರಾರು ಮಂದಿ ಗ್ರಾಮಸ್ಥರು ಮನೆಯ ಮುಂದೆ ಜಮಾಯಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ 1ರ ಸಮಯದಲ್ಲಿ ಅರವಳಿಕೆ ಔಷಧ ನೀಡಿ ಚಿರತೆಯನ್ನು ಸೆರೆ ಹಿಡಿದು ಕೊಂಡೊಯ್ದರು. ವಲಯ ಅರಣ್ಯಾಧಿಕಾರಿ ರಕ್ಷಿತ್‌ ಮಾತನಾಡಿ, ‘ಸೆರೆ ಸಿಕ್ಕಿರುವ ಎರಡು ವರ್ಷದ ಹೆಣ್ಣು ಚಿರತೆ ಗ್ರಾಮದ ಹೊರ ವಲಯದಲ್ಲಿರುವ ಪೊದೆಯಲ್ಲಿ ಅವಿತಿತ್ತು. ನಾಯಿಯನ್ನು ಬೇಟೆಯಾಡಲೆಂದು ಅಟ್ಟಿಸಿಕೊಂಡು ಬಂದು ಆಕಸ್ಮಿಕವಾಗಿ ಮನೆಯೊಳಗೆ ನುಗ್ಗಿದೆ. ಸೆರೆ ಹಿಡಿದಿರುವ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲಾಗಿದೆ’ ಎಂದರು.


from India & World News in Kannada | VK Polls https://ift.tt/WkHJsS7

ಮೇಕೆದಾಟು ಪಾದಯಾತ್ರೆಯ 2ನೇ ಇನಿಂಗ್ಸ್‌ಗೆ ರಾಮನಗರದಲ್ಲಿ ಹರಿದುಬಂದ ಜನಸಾಗರ

ಆರ್‌.ಶ್ರೀಧರ್‌ ರಾಮನಗರ: ಕೋವಿಡ್‌ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೇಕೆದಾಟು ಪಾದಯಾತ್ರೆಯ 2ನೇ ಇನಿಂಗ್ಸ್‌ಗೆ ರಾಮನಗರದಲ್ಲಿ ಕಾಂಗ್ರೆಸ್‌ ನಾಯಕರು ಭಾನುವಾರ ಮರು ಚಾಲನೆ ನೀಡಿದ್ದಾರೆ. ಮೇಕೆದಾಟು 2.0ಗೆ ಸಾವಿರಾರು ಮಂದಿ ಹೆಜ್ಜೆ ಹಾಕಿದ್ದು, ‘ನಮ್ಮ ನೀರು-ನಮ್ಮ ಹಕ್ಕು’ ಎಂಬ ಘೋಷವಾಕ್ಯಕ್ಕೆ ಧ್ವನಿಯಾದರು. ಜೆಡಿಎಸ್‌ನ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಮಂಡ್ಯ ಜಿಲ್ಲೆಯ ಜನರನ್ನು ಒಗ್ಗೂಡಿಸಿದ ಕೈ ನಾಯಕರು ತಮ್ಮ ಶಕ್ತಿ ಪ್ರದರ್ಶಿಸಿದರು. ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿಯುತ್ತಿರುವ ನೀರನ್ನು ಶೇಖರಿಸಿ, ರಾಜ್ಯದ ಜನರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯ ನಿರ್ಮಿಸುವ ಮೇಕೆದಾಟು ಯೋಜನೆಗೆ ಜಾರಿಗೆ ಆಗ್ರಹಿಸಿ, ಜ.9ರಿಂದ 12ರವರೆಗೆ (4 ದಿನ 60.5 ಕಿಲೋ ಮೀಟರ್‌ ) ಮೊದಲ ಹಂತದ ಪಾದಯಾತ್ರೆಯನ್ನು ಕಾಂಗ್ರೆಸ್‌ ಯಶಸ್ವಿಯಾಗಿ ನಡೆಸಿತ್ತು. ಕೋವಿಡ್‌ ನಿಯಮ ಮತ್ತು ಕೋರ್ಟ್‌ ಎಚ್ಚರಿಕೆ ಕಾರಣಕ್ಕೆ ಹೋರಾಟ ಸ್ಥಗಿತಗೊಳಿಸಲಾಗಿತ್ತು. ಈ ಹಂತದಲ್ಲಿ 7 ದಿನದ 109 ಕಿ.ಮೀ ಬದಲಾಗಿ 5 ದಿನಗಳ ಕಾಲ 80 ಕಿಲೋ ಮೀಟರ್‌ ಪಾದಯಾತ್ರೆಗೆ ರಾಮನಗರದ ಟಿ.ಆರ್‌.ಮಿಲ್‌ನಲ್ಲಿ ಆದಿಚುಂಚನಗಿರಿ ಶಾಖಾ ಮಠದ ಕಾರ‍್ಯದರ್ಶಿ ಅನ್ನದಾನೇಶ್ವರ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ, ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಚಾಲನೆ ನೀಡಿದರು. ಎಲ್ಲೆಡೆ ಸಂಚಾರ ದಟ್ಟಣೆ: ವೇದಿಕೆ ಕಾರ್ಯಕ್ರಮ 9 ಗಂಟೆಗೆ ಆರಂಭಗೊಂಡು ಒಂದು ಗಂಟೆ ಅವಧಿಯಲ್ಲಿ ಮುಗಿಸುವ ಯೋಜನೆ ಇತ್ತು. ಆದರೆ ಕಾರ್ಯಕ್ರಮ ಮುಗಿದ ಮಧ್ಯಾಹ್ನ ಸುಮಾರು 12 ಗಂಟೆ ಆಗಿತ್ತು. ಬಿಸಿಲು ಕಮ್ಮಿ ಇದ್ದಾಗಲೇ ಆರಂಭಗೊಳ್ಳಬೇಕಿದ್ದ ಪಾದಯಾತ್ರೆ ಸೂರ್ಯ ನೆತ್ತಿಗೆ ಏರುವ ವೇಳೆಗೆ ಚಾಲನೆ ಕಂಡಿತು. ಆದರೆ ಸುಮಾರು 3 ಗಂಟೆಗಳ ಕಾಲ ಪಾದಯಾತ್ರಿಗಳು ನಗರದ ಟಿ.ಆರ್‌ಮಿಲ್‌ ಆವರಣದಲ್ಲಿಯೇ ಕಾದು ಕುಳಿತರು. ಒಮ್ಮೆಲೆ ಪಾದಯಾತ್ರಿಗಳು ರಸ್ತೆಗೆ ಇಳಿದ ಪರಿಣಾಮವಾಗಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಪ್ರಾರ್ಥನೆ: ಶನಿವಾರವೇ ನಗರಕ್ಕೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್‌ ಬಿಜಿಎಸ್‌ ಅಂಧರ ಶಾಲೆ (ಬಿಜೆಎಸ್‌ ಮಠ) ಆವರಣದಲ್ಲಿ ತಂಗಿದ್ದರು. ಬೆಳಗ್ಗೆ ಮಠದಲ್ಲಿನ ಗವಿಗಂಗಾಧರೇಶ್ವರ, ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ, ಪೀರನ್‌ ಷಾ ವಲಿ ಷಾ ದರ್ಗಾಕ್ಕೆ ತೆರಳಿ ಪಾರ್ಥನೆ ಸಲ್ಲಿಸಿದರು. ದಾರಿ ಉದ್ದಕ್ಕೂ ನೃತ್ಯ ಮಾಡಿದ ಕಲಾ ತಂಡಗಳನ್ನೂ ಉತ್ತೇಜಿಸುವ ಕೆಲಸವನ್ನು ಡಿಕೆಶಿ ಮಾಡಿದರು. ಪೂರ್ಣಕುಂಭ ಸ್ವಾಗತದೊಂದಿಗೆ ಡಿಕೆಶಿ ವೇದಿಕೆ ಏರಿದರು. ಸಿದ್ದು, ಸುರ್ಜೇವಾಲಗೆ ಕಾದರು: ವೇದಿಕೆ ಬಳಿಗೆ 10 ಗಂಟೆ ಸುಮಾರಿಗೆ ಬಂದ ಡಿ.ಕೆ.ಶಿವಕುಮಾರ್‌ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗಾಗಿ ಸುಮಾರು ಅರ್ಧಗಂಟೆ ಕಾಲ ಕಾಯ್ದರು. 10.30ರ ವೇಳೆಗೆ ಇಬ್ಬರೂ ವೇದಿಕೆಗೆ ಬರುತ್ತಿದ್ದಂತೆ ವೇದಿಕೆಯಿಂದ ಇಳಿದ ಡಿ.ಕೆ.ಶಿ ಕಾರ್ಯಕರ್ತರ ಮಧ್ಯ ಸೇರಿಕೊಂಡು ಸುಮಾರು ಹೊತ್ತು ವೇದಿಕೆ ಹತ್ತಿರ ಸುಳಿಯಲೇ ಇಲ್ಲ. ವೇದಿಕೆಯಲ್ಲಿದ್ದ ಸಂಸದ ಡಿ.ಕೆ.ಸುರೇಶ್‌, ಅಧ್ಯಕ್ಷರು ವೇದಿಕೆಗೆ ಬರಬೇಕು ಎಂದು ಪದೇ ಪದೆ ಮೈಕ್‌ ಮೂಲಕ ಹೇಳಬೇಕಾಯಿತು.


from India & World News in Kannada | VK Polls https://ift.tt/x5N86y7

ಕೊಹ್ಲಿ ದಾಖಲೆ ನುಚ್ಚು ನೂರು ಮಾಡಿದ ಶ್ರೇಯಸ್‌ ಅಯ್ಯರ್‌!

ಬೆಂಗಳೂರು: ಅನುಪಸ್ಥಿತಿಯಲ್ಲಿ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪರ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಶ್ರೇಯಸ್‌ ಅಯ್ಯರ್‌, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ರನ್‌ ಹೊಳೆಯನ್ನೇ ಹರಿಸಿದ್ದಾರೆ. ಸರಣಿಯ ಮೂರೂ ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 57, ಅಜೇಯ 74 ಮತ್ತು ಅಜೇಯ 73 ರನ್‌ಗಳನ್ನು ಬಾರಿಸುವ ಮೂಲಕ ಒಟ್ಟು 204 ರನ್‌ಗಳನ್ನು ಕಲೆಹಾಕಿದ 27 ವರ್ಷದ ಬಲಗೈ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌, ಮೂರು ಪಂದ್ಯಗಳ ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಹೆಸರಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. 2015-16ರಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೂರು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ 199.00ರ ಬ್ಯಾಟಿಂಗ್‌ ಸರಾಸರಿಯಲ್ಲಿ ಮೂರು ಅರ್ಧಶತಕಗಳೊಂದಿಗೆ 199 ರನ್‌ಗಳನ್ನು ಬಾರಿಸಿದ್ದರು. ಅಜೇಯ 90 ರನ್‌ ಅವರ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನವಾಗಿತ್ತು. ಇದೀಗ ಶ್ರೇಯಸ್‌ ಅಯ್ಯರ್‌ ಈ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಟಿ20-ಐ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಸತತ ಮೂರು ಅರ್ಧಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ ಮತ್ತು ಕೆಎಲ್‌ ರಾಹುಲ್‌ ಈ ಸಾಧನೆ ಮೆರೆದಿದ್ದಾರೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು 1. ಶ್ರೇಯಸ್‌ ಅಯ್ಯರ್‌ (2022): ಶ್ರೀಲಂಕಾ ವಿರುದ್ಧ 204 ರನ್‌ 2. ವಿರಾಟ್‌ ಕೊಹ್ಲಿ (2015-16): ಆಸ್ಟ್ರೇಲಿಯಾ ವಿರುದ್ಧ 199 ರನ್‌ 3. ವಿರಾಟ್‌ ಕೊಹ್ಲಿ (2019-20): ವೆಸ್ಟ್‌ ಇಂಡೀಸ್‌ ವಿರುದ್ಧ 183 ರನ್‌ 4. ಕೆಎಲ್ ರಾಹುಲ್‌ (2019-20): ವೆಸ್ಟ್‌ ಇಂಡೀಸ್‌ ವಿರುದ್ಧ 164 ರನ್‌ 5. ರೋಹಿತ್‌ ಶರ್ಮಾ (2017-18): ಶ್ರೀಲಂಕಾ ವಿರುದ್ಧ 162 ರನ್‌ ಭಾರತಕ್ಕೆ 6 ವಿಕೆಟ್‌ಗಳ ಜಯ ಭಾನುವಾರ ನಡೆದ ಮೂರು ಪಂದ್ಯಗಳ ಸರಣಿಯ ಅಂತಿಮ ಹಣಾಹಣಿಯಲ್ಲಿ 147 ರನ್‌ಗಳ ಸವಾಲಿನ ಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ಕ್ಯಾಪ್ಟನ್‌ ರೋಹಿತ್‌ ಶರ್ಮಾ (5) ವಿಕೆಟ್‌ ಕಳೆದುಕೊಂಡಿತು. ಆದರೆ, ಅದ್ಭುತ ಲಯದಲ್ಲಿದ್ದ ಶ್ರೇಯಸ್‌ ಅಯ್ಯರ್‌ 45 ಎಸೆತಗಳಲ್ಲಿ 9 ಫೋರ್‌ ಮತ್ತು 1 ಸಿಕ್ಸರ್‌ ನೆರವಿನಿಂದ ಅಜೇಯ 73 ರನ್‌ ಚೆಚ್ಚಿದರು. ಪರಿಣಾಮ ಭಾರತ 16.5 ಓವರ್‌ಗಳಲ್ಲಿ 148/4 ರನ್‌ ಬಾರಿಸಿ ಭರ್ಜರಿ ಜಯ ದಕ್ಕಿಸಿಕೊಂಡಿತು. ಶನಕ ಏಕಾಂಗಿ ಹೋರಾಟಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕ್ಯಾಪ್ಟನ್‌ ದಸುನ್‌ ಶನಕ ಕೇವಲ 38 ಎಸೆತಗಳಲ್ಲಿ 9 ಫೋರ್ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 74 ರನ್‌ ಸಿಡಿಸಿದರು. ಇದು ಅವರ ಟಿ20 ಕ್ರಿಕೆಟ್‌ ಬದುಕಿನ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನವಾಗಿದೆ. ಪರಿಣಾಮ ಶ್ರೀಲಂಕಾ 146/5 ರನ್‌ಗಳ ಗೌರವದ ಮೊತ್ತ ದಾಖಲಿಸಿತು. ಸಂಕ್ಷಿಪ್ತ ಶ್ರೀಲಂಕಾ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 146 ರನ್ (ದಿನೇಶ್‌ ಚಾಂದಿಮಾಲ್‌ 22, ದಸುನ್‌ ಶನಕ 74*; ಅವೇಶ್‌ ಖಾನ್‌ 23ಕ್ಕೆ 2). ಭಾರತ: 16.5 ಓವರ್‌ಗಳಲ್ಲಿ 4 ವಿಕೆಟ್‌ಗೆ 148 ರನ್‌ (ಶ್ರೇಯಸ್‌ ಅಯ್ಯರ್‌ 73*, ದೀಪಕ್ ಹೂಡ 21, ರವೀಂದ್ರ ಜಡೇಜಾ 22*; ಲಾಹಿರು ಕುಮಾರ 39ಕ್ಕೆ 2). ಪಂದ್ಯ ಮತ್ತು ಸರಣಿ ಶ್ರೇಷ್ಠ: ಶ್ರೇಯಸ್‌ ಅಯ್ಯರ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/60XTQrh

ಮೊದಲ ದಿನದ ಮೇಕೆದಾಟು ಪಾದಯಾತ್ರೆ ಬಿಡದಿಯಲ್ಲಿ ಅಂತ್ಯ; ‘ಅಣ್ಣ.. ಅಣ್ಣ’ ಎನ್ನುತ್ತಲೇ HDKಗೆ ತಿವಿದ ಡಿಕೆಶಿ

ರಾಮನಗರ: ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ಕಾರ್ಯಕ್ರಮ ಮೊದಲನೇ ದಿನ ಬಿಡದಿಯಲ್ಲಿ ಅಂತ್ಯಗೊಂಡಿದೆ. ಮೊದಲ ದಿನದ ಪಾದಯಾತ್ರೆ ಬಿಡದಿಯಲ್ಲಿ ಕೊನೆಯಾಗುವ ಮೊದಲು ಸೇರಿದ್ದ ಬೃಹತ್ ಸಂಖ್ಯೆಯ ಜನರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಉರಿ ಬಿಸಿಲು, ಟಾರು ರಸ್ತೆಯಲ್ಲಿ ಇಂದು ನಾವೆಲ್ಲರೂ ಹೆಜ್ಜೆ ಹಾಕಿದ್ದೇವೆ. ಅನೇಕ ಕಡೆಗಳಲ್ಲಿ ಮರಗಳಿಲ್ಲದೆ ಬಿಸಿಲಲ್ಲೇ ಗುಂಡಿ, ಬಂಡೆ ಎಲ್ಲವನ್ನು ನೋಡಿಕೊಂಡು ಬಂದಿದ್ದೇವೆ ಎಂದರು. ಮಾತಿನುದ್ದಕ್ಕೂ ಅಣ್ಣಾ, ಅಣ್ಣಾ ಎನ್ನುತ್ತಲೇ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ತಿವಿದಿ ಡಿಕೆ ಶಿವಕುಮಾರ್, ‘ನಮ್ಮ ಸ್ನೇಹಿತರೊಬ್ಬರು ನನ್ನನ್ನು ಮಣ್ಣಿನ ಮಗ ಎಂದು ಹೇಳಿದರು. ಆದರೆ ನಾನು ಮಣ್ಣಿನ ಮಗ ಅಲ್ಲ, ಕಲ್ಲಿನ ಮಗ ಎಂದು ನಮ್ಮಣ್ಣ ಕುಮಾರಣ್ಣಾ ಹೇಳಿದ್ದಾರೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲು ಬಂಡೆಗೆ ಚಚ್ಚಿದಾಗಲೇ ಚಪ್ಪಡಿಯಾಗೋದು, ಕೆತ್ತಿದಾಗ ಶಿಲೆ ಆಗೋದು, ನಂತರ ಅದು ಮರಳಾಗಿ ಮಣ್ಣಾಗುತ್ತದೆ. ಅಂದರೆ ಮಣ್ಣಿನ ಮೂಲ ಸ್ವರೂಪ ಕಲ್ಲು ಅಂತಾನೆ ಅಲ್ಲವೇ? ಈ ಕಲ್ಲನ್ನು ನೀವು ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳಿ, ನಮ್ಮ ಅಣ್ಣನೂ ಅವರಿಗೆ ಬೇಕಾದ ಹಾಗೆ ಬಳಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು. ‘ನಮಗೆ ಯಾರಾದರೂ ಹೊಡೆಯಲು ಬಂದರೆ ನಾವು ಅದನ್ನು ತಪ್ಪಿಸಬಹುದು. ಆದರೆ ನಮ್ಮ ಬಗ್ಗೆ ಅನಗತ್ಯವಾಗಿ ಮಾತನಾಡುವವರನ್ನು ತಪ್ಪಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಡಿಕೆಶಿ, ‘ಅಣ್ಣಾ ನಿಮಗೆ ನಾಲಿಗೆ ಇದೆ ಅಂತಾ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ. ಜನ ಥೂ.. ಛೀ... ಎಂದು ಬಯ್ಯುತ್ತಿದ್ದಾರೆ. ನೀವು ನಿಮ್ಮ ನಾಲಿಗೆ ರಕ್ಷಣೆ ಮಾಡಿಕೊಳ್ಳಣ್ಣಾ.. ಕುಮಾರಣ್ಣಾ ಅವರು ಜಲಧಾರೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಸಂತೋಷ ಅವರು ಮಾಡಲಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚಾಮರಾಜನಗರದಿಂದ ಬೀದರ್‌ವರೆಗೂ ಹೋರಾಟ ಮಾಡಲಿ ನಮ್ಮ ಅಭ್ಯಂತರವಿಲ್ಲ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆಯೇ ಹೊರತು ಯಾವುದೇ ತಕರಾರಿಲ್ಲ ಎಂದು ಹೇಳಿದರು. ಇನ್ನು ‘ನಾವು ಸಾಕಷ್ಟು ಕಾರ್ಯಕ್ರಮ ಮಾಡಿದ್ದೇವೆ. ಇಂದಿನ ಹೋರಾಟಕ್ಕೆ ಜನತಾದಳದವರೂ ಬಂದಿದ್ದರು. ಈ ಕ್ಷೇತ್ರದಲ್ಲಿರುವ, ಇಲ್ಲಿರುವ ಜನರಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರ ಇಲ್ಲ, ಎಲ್ಲ ಪಕ್ಷದವರೂ ಇದ್ದಾರೆ ಎಂದ ಡಿಕೆ ಶಿವಕುಮಾರ್, ‘ಇದು ಪಕ್ಷಾತೀತ ಹೋರಾಟ. ಎಲ್ಲ ವರ್ಗದ ಜನರ ಹೋರಾಟ. ಕಾಂಗ್ರೆಸ್ ಕೇವಲ ಮುಂದಾಳತ್ವ ವಹಿಸಿಕೊಂಡಿದೆ. ಇಂದಿನ ಹೋರಾಟ ನೀರಿಗಾಗಿ. ಈ ನೀರಿಗೆ ಬಣ್ಣ, ಆಕಾರ, ರುಚಿ ಇದೆಯಾ? ಇಲ್ಲ. ಇದನ್ನು ಎಲ್ಲಿ ಬೇಕಾದರೂ ಹರಿಸಬಹುದು. ಈ ನೀರು ಬಿಟ್ಟು ಬದುಕಲು ಸಾಧ್ಯವೇ? ಇಲ್ಲ. ಇದೇ ಕಾರಣಕ್ಕೆ ನಾವಿಂದು ಹೋರಾಟ ಮಾಡುತ್ತಿದ್ದೇವೆ. ನಮ್ಮ ನೀರು, ನಮ್ಮ ಹಕ್ಕು. ಹೀಗಾಗಿ ನೀರಿಗಾಗಿ ನಡೆಯುತ್ತಿದ್ದೇವೆ. ಈ ಹೋರಾಟದಲ್ಲಿ ನಮಗೆ ಅನೇಕರು, ನೀರು, ಮಜ್ಜಿಗೆ, ಎಳನೀರು ಕೊಟ್ಟು ಉಪಚರಿಸಿದ್ದಾರೆ. ಅವರಿಗೆ ನನ್ನ ಸಾಷ್ಟಾಂಗ ನಮನಗಳು’ ಎಂದು ಕೃತಜ್ಞತೆ ಅರ್ಪಿಸಿದರು. ಮುಂದುವರಿದು ಮಾತನಾಡಿದ ಅವರು ‘ಹೆಜ್ಜೆ ಹಾಕುತ್ತೇವೆ, ನಾವು ಹೆಜ್ಜೆ ಹಾಕುತ್ತೇವೆ ಎಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಜನ ಐತಿಹಾಸಿಕ ಹೋರಾಟದಲ್ಲಿ ಹೆಜ್ಜೆ ಹಾಕಿದ್ದಾರೆ. ಎಸ್.ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ ಕೃಷ್ಣಾ ನದಿಗಾಗಿ ಹೆಜ್ಜೆ ಹಾಕಿದ್ದರು. ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದರು. ಚಂದ್ರಶೇಖರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದರು. ನಮ್ಮ ಆಂಧ್ರ ಪ್ರದೇಶ ಮಾಜಿ ಸಿಎಂ ರಾಜಶೇಖರ್ ರೆಡ್ಡಿ ಹೆಜ್ಜೆ ಹಾಕಿದ್ದರು. ಈಗಿನ ಆಂಧ್ರ ಸಿಎಂ ಜಗನ್ ಕೂಡ ಪಾದಯಾತ್ರೆ ಮಾಡಿದ್ದಾರೆ. ಇವರೆಲ್ಲರೂ ಛಲದಿಂದ, ಸಂಕಲ್ಪದಿಂದ ಹೋರಾಟ ಮಾಡಿದ್ದಾರೆ. ನಮಗೆ ಈ ಹೋರಾಟದ ಸ್ಪೂರ್ತಿ ತುಂಬಿದವರು ಮಹಾತ್ಮಾ ಗಾಂಧೀಜಿ ಅವರು. ಅವರ ಹಿಂಬಾಲಕರು ನಾವು. ಅವರು ಹಾಗೂ ಕಾಂಗ್ರೆಸ್ ಪಕ್ಷ ಈ ತ್ರಿವರ್ಣ ಧ್ವಜದ ರೂವಾರಿಗಳು. ಬಾಲಕೃಷ್ಣ ಅವರು ಹುಟ್ಟುಹಬ್ಬದ ಪ್ರಯುಕ್ತ ತಿರುಪತಿಯಲ್ಲಿ ಪೂಜೆ ಇಟ್ಟುಕೊಂಡಿದ್ದರು. ಆದರೆ ಪಾದಯಾತ್ರೆ ದಿನಾಂಕ ನಿಗದಿಯಾದ ಬಳಿಕ ನನ್ನ ದೇವರುಗಳು ಇಲ್ಲೇ ಮಾಗಡಿಯಲ್ಲಿ ಇದ್ದಾರೆ. ಜನರೇ ನನ್ನ ದೇವರು. ಅವರಿಗೆ ಪೂಜೆ ಮಾಡುತ್ತೇನೆ ಎಂದು ನಮ್ಮ ಜತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸಿ ಅವರಿಗೆ ಜನ್ಮದಿನದ ಉಡುಗೊರೆ ನೀಡಬೇಕು ಎಂದು ಹೇಳಿದರು. ಇನ್ನು ‘ನಾನು ಇಲ್ಲೇ ಇದ್ದು, ಇಲ್ಲಿ ಸ್ವಾಮೀಜಿ ಪುತ್ಥಳಿಗೆ ಪೂಜೆ ಮಾಡಿ, ಇಲ್ಲಿಂದ ಪಾದಯಾತ್ರೆ ಆರಂಭಿಸಿ ಬೆಂಗಳೂರು ತಲುಪಬೇಕು ಎಂದ ಡಿಕೆಶಿ, ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ರಾಜಕಾರಣ ಇಂದು ಇರುತ್ತದೆ, ನಾಳೆ ಹೋಗುತ್ತದೆ. ನಾವು ಬದುಕಿರುವಾಗ ಒಂದು ಹೋರಾಟದಲ್ಲಿ ಭಾಗವಹಿಸಿ. ನಮ್ಮ ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ನೀವೆಲ್ಲ ಹೋರಾಟದಲ್ಲಿ ಭಾಗವಹಿಸಿ ಇತಿಹಾಸ ಪುಟ ಸೇರಿದ್ದೀರಿ’ ಎಂದು ಹೇಳಿದರು.


from India & World News in Kannada | VK Polls https://ift.tt/9aCKTBf

ಈ ಖದೀಮರಿಗೆ ಶಿಕ್ಷಕರೇ ಟಾರ್ಗೆಟ್: ಸರ್ವೆ ಕಾರ್ಯದ ಹಣಕ್ಕೆ ಕನ್ನ ಹಾಕುತ್ತಿದ್ದ ಇಬ್ಬರ ಬಂಧನ

ಬೆಂಗಳೂರು: ಶಿಕ್ಷಕರನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿ ಒಟಿಪಿ ಪಡೆದು ಅವರ ಖಾತೆಯಿಂದ ತಮ್ಮ ನಕಲಿ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೀದರ್‌ ಮೂಲದ ಶಿವಪ್ರಸಾದ್‌ (33), ದೆಹಲಿ ಮೂಲದ ಪಂಕಜ್‌ ಚೌಧರಿ (24) ಬಂಧಿತರು. ಆರೋಪಿಗಳಿಂದ 22 ಸಾವಿರ ನಗದು, 9 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಶಿಕ್ಷಕರನ್ನೇ ಗುರಿಯಾಗಿಸಿ ವಂಚನೆ ಆರೋಪಿ ಶಿವಪ್ರಸಾದ್‌ ತಂದೆ ಶಿಕ್ಷಕರಾಗಿದ್ದರು. ಸರಕಾರದ ಸಂಸ್ಥೆಗಳು ನಿಯೋಜಿಸುವ ಹಲವು ಸರ್ವೆ ಕೆಲಸ ಮಾಡಿದ ಬಳಿಕ ಮೂರು ಅಥವಾ ನಾಲ್ಕು ತಿಂಗಳಿಗೆ ಆ ಸಂಸ್ಥೆಗಳ ಮೂಲಕ ತಂದೆಯ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತಿತ್ತು. ಕೆಲವು ಬಾರಿ ಕರೆ ಮಾಡಿ ಒಟಿಪಿ ಪಡೆದು ಹಣ ವರ್ಗಾವಣೆ ಮಾಡುವುದನ್ನು ಈತ ನೋಡಿದ್ದ. ಹೀಗಾಗಿ, ಸರ್ವೆಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಿಂದ ಸುಲಭವಾಗಿ ಒಟಿಪಿ ಪಡೆದು ವಂಚಿಸಬಹುದು ಎಂದು ತಿಳಿದಿದ್ದ. ಈ ಗುಂಪು ಬೂತ್‌ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷರ ಮೊಬೈಲ್‌ ಹಾಗೂ ಬ್ಯಾಂಕ್‌ ಖಾತೆ ಸಂಖ್ಯೆ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುತ್ತಿತ್ತು. ಶಿಕ್ಷಕರ ಮೊಬೈಲ್‌ಗೆ ಕರೆ ಮಾಡಿ 'ಸರ್ವೆ ಕೆಲಸ ಮಾಡಿರುವುದಕ್ಕೆ ನಿಮ್ಮ ಖಾತೆಗೆ ಹಣ ಜಮೆ ಮಾಡಲು ಯತ್ನಿಸಲಾಗುತ್ತಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಜಮೆಯಾಗುತ್ತಿಲ್ಲ. ಹಾಗಾಗಿ, ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರಲಿದೆ ಅದನ್ನು ಹೇಳಿದರೆ ಕೂಡಲೇ ಹಣ ಜಮೆಯಾಗುವುದು' ಎಂದು ಆರೋಪಿಗಳು ನಂಬಿಸುತ್ತಿದ್ದರು. ಒಟಿಪಿ ಪಡೆದು ಶಿಕ್ಷಕರ ಖಾತೆಯಿಂದ ತಮ್ಮ ನಕಲಿ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ನಗರದ ಶಿಕ್ಷಕಿಯೊಬ್ಬರಿಗೆ ಬಿಬಿಎಂಪಿ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿಗಳು ಅವರ ಖಾಧಿತೆಗೆ ಕನ್ನ ಹಾಕಿದ್ದರು. ಬೂತ್‌ ಹಂತದ ಕಚೇರಿಯ ಅಲೊಯೆನ್ಸ್‌ ಶುಲ್ಕ ಪಾವತಿಸಲಾಗುತ್ತಿದೆ. ಹೀಗಾಗಿ, ನಿಮ್ಮ ಡೆಬಿಟ್‌ ಕಾರ್ಡ್‌ ಸಂಖ್ಯೆ, ಸಿವಿವಿ ಎಕ್ಸ್‌ಪೈರಿ ಡೇಟ್‌ ಹಾಗೂ ಒಟಿಪಿ ಹೇಳಿದ್ದರು. ಮಾಹಿತಿ ಪಡೆದು ಖಾತೆಯಿಂದ 17,111 ರೂ. ಹಣವನ್ನು ತಮ್ಮ ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ವಂಚನೆಗೊಳಗಾದ ಶಿಕ್ಷಕಿ ಈಶಾನ್ಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಇಬ್ಬರು ಆರೋಪಿಯನ್ನು ಬಂಧಿಸಿದ್ದರು. ಆರೋಪಿಗಳ ಬಂಧನದಿಂದ ಈಶಾನ್ಯ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ 3, ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ, ಪಶ್ಚಿಮ ವಿಭಾಗ ಹಾಗೂ ದಕ್ಷಿಣ ವಿಭಾಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ತಲಾ ಒಂದು ಪ್ರಕರಣ ಮತ್ತು ರಾಯಚೂರು ಸೈಬರ್‌ ಠಾಣೆಯಲ್ಲಿ 2 ಪ್ರಕರಣ ಸೇರಿ 8 ಪ್ರಕರಣಗಳು ಪತ್ತೆಯಾಗಿವೆ. ಈಶಾನ್ಯ ವಿಭಾಗದ ಉಪ ಪೊಲೀಸ್‌ ಆಯುಕ್ತ ಡಾ. ಅನೂಪ್‌ ಎ.ಶೆಟ್ಟಿ, ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಸಂತೋಷ್‌ ರಾಮ್‌ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸಿಮ್‌ಕಾರ್ಡ್‌ಗಳನ್ನು ನೀಡಿದ್ದ ಪಂಕಜ್‌ ದೆಹಲಿ ಮೂಲದ ಪಂಕಜ್‌ ಚೌಧರಿ ವಂಚನೆ ಮಾಡಲೆಂದೇ ನಕಲಿ ದಾಖಲೆಗಳನ್ನು ನೀಡಿ ಸಿಮ್‌ಕಾರ್ಡ್‌ಗಳು ಹಾಗೂ ಮೊಬೈಲ್‌ಗಳನ್ನು ಖರೀದಿಸುತ್ತಿದ್ದ. ಇವುಗಳನ್ನು ಶಿವಪ್ರಸಾದ್‌ಗೆ ನೀಡಿದ್ದ. ಶಿಕ್ಷಕರಿಂದ ಒಟಿಪಿ ಪಡೆಯುತ್ತಿದ್ದ ಶಿವಪ್ರಸಾದ್‌, ಹಣವನ್ನು ಪಂಕಜ್‌ ಚೌಧರಿ ತೆರೆದಿರುವ ಬ್ಯಾಂಕ್‌ ನಕಲಿ ಖಾತೆಗೆ ವರ್ಗಾಯಿಸುತ್ತಿದ್ದ. ಆರೋಪಿಗಳಿಬ್ಬರು ವಂಚನೆ ಮಾಡಲೆಂದೇ ನಕಲಿ ದಾಖಲೆಗಳನ್ನು ನೀಡಿ ದೆಹಲಿಯಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದರು. ಕಡಿತವಾದ ಹಣ ದಿಲ್ಲಿಯ ಖಾತೆಗೆ ಜಮಾ ವಂಚನೆಗೊಳಗಾದ ಶಿಕ್ಷಕರ ಖಾತೆಯಿಂದ ದಿಲ್ಲಿಯಲ್ಲಿರುವ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. ಇದನ್ನು ಬೇಧಿಸಿದಾಗ ಹಲವಾರು ಇದೇ ಮಾದರಿಯ ಪ್ರಕರಣಗಳು ಹೊರಬಂದವು. ನಂತರ ಮೊಬೈಲ್‌ ನಂಬರ್‌ ಟ್ರೇಸ್‌ ಮಾಡಿದಾಗ ಶಿವಪ್ರಸಾದ್‌ ಪತ್ತೆಯಾದ. ಆತನನ್ನು ವಿಚಾರಣೆಗೊಳಪಡಿಸಿದಾಗ ಆತ ನೀಡಿದ ಸುಳಿವಿನ ಮೇರೆಗೆ ಪಂಕಜ್‌ ಚೌಧರಿಯನ್ನು ದೆಹಲಿಯಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದರು.


from India & World News in Kannada | VK Polls https://ift.tt/5LklPo1

ದೇಶಾದ್ಯಂತ ಆಯುಷ್ಮಾನ್‌ ಡಿಜಿಟಲ್‌ ಮಿಷನ್‌ ಜಾರಿ: ಪ್ರತಿಯೊಬ್ಬರಿಗೂ ಡಿಜಿಟಲ್ ಖಾತೆ ತೆರಯುವ ಅವಕಾಶ

ಹೊಸದಿಲ್ಲಿ: ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಯೋಜನೆಯನ್ನು ದೇಶಾದ್ಯಂತ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟದ ಸಮ್ಮತಿ ದೊರೆತಿದೆ. ಮುಂದಿನ ಐದು ವರ್ಷಗಳಿಗಾಗಿ 1600 ಕೋಟಿ ರೂ. ಬಜೆಟ್‌ ಅನುದಾನವನ್ನು ಈ ಯೋಜನೆಗೆ ಕಾಯ್ದಿರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಯೋಜನೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದೆ. ಈ ಯೋಜನೆಯಡಿ ನಾಗರಿಕರು ತಮ್ಮದೇ ಅದ ಪ್ರತ್ಯೇಕ ಡಿಜಿಟಲ್‌ ಆರೋಗ್ಯ ಖಾತೆ ತೆರೆಯಬಹುದಾಗಿದೆ. ಇರುವ ಡಿಜಿಟಲ್‌ ಆರೋಗ್ಯ ದಾಖಲೆಗಳನ್ನು ಈ ಖಾತೆಗೆ ಲಿಂಕ್‌ ಮಾಡಬಹುದಾಗಿದ್ದು, ಪ್ರತಿ ವ್ಯಕ್ತಿಯ ಸಂಪೂರ್ಣ ಆರೋಗ್ಯ ಕೈಪಿಡಿ ಸಿದ್ಧಗೊಳ್ಳಲಿದೆ. ಇದರಿಂದ ವೈದ್ಯಕೀಯ ಚಿಕಿತ್ಸೆಗೆ ದೊಡ್ಡ ಮಟ್ಟದಲ್ಲಿಅನುಕೂಲ ಸೃಷ್ಟಿಯಾಗಲಿದೆ ಎಂದು ಸರಕಾರ ತಿಳಿಸಿದೆ. ಚಿಕಿತ್ಸೆ ಮತ್ತು ಔಷಧೋಪಚಾರ ಎಲ್ಲದ್ದಕ್ಕೂ ವೈದ್ಯರನ್ನು ಖುದ್ದು ಕಾಣುವ ಅನಿವಾರ್ಯತೆ ಕಡಿಮೆ ಮಾಡುವ ಉದ್ದೇಶದಿಂದ ಈ ಡಿಜಿಟಲ್‌ ವ್ಯವಸ್ಥೆ ಸೃಷ್ಟಿಸಲಾಗಿದೆ. ಟೆಲಿಮೆಡಿಸಿನ್‌ ಮತ್ತು ಸಂಚಾರಿ ಆರೋಗ್ಯ ಸೇವೆಯಂತಹ ಸವಲತ್ತುಗಳು ಇದರಿಂದ ಬಲಿಷ್ಠಗೊಳ್ಳಲಿದ್ದು, ಸುಲಭ ರೀತಿಯಲ್ಲಿ ಗುಣಮಟ್ಟದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕೇಂದ್ರಾಡಳಿತ ಪ್ರದೇಶಗಳಾದ ಲಡಾಕ್‌, ಚಂಡೀಗಢ, ಪುದುಚೇರಿ, ಲಕ್ಷದ್ವೀಪ, ದಾದ್ರಾ ಮತ್ತು ನಗರ್‌ ಹವೇಲಿ, ದಿಯು ಮತ್ತು ದಮನ್‌, ಅಂಡಮಾನ್‌ ಮತ್ತು ನಿಕೋಬಾರ್‌ಗಳಲ್ಲಿಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅಲ್ಲಿ ಯಶಸ್ಸು ಸಿಕ್ಕ ಬಳಿಕ ದೇಶಾದ್ಯಂತ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿನ್‌, ಆರೋಗ್ಯ ಸೇತು ಮತ್ತು ಸಂಜೀವಿನಿ ಮೊದಲಾದ ಡಿಜಿಟಲ್‌ ಆಧಾರಿತ ಆರೋಗ್ಯ ಸೇವಾ ಮಾಹಿತಿ ಆ್ಯಪ್‌ಗಳು ಚಾಲ್ತಿಯಲ್ಲಿದ್ದು, ಅದ್ಭುತ ಯಶಸ್ಸು ಕಂಡಿವೆ. ಖಾಸಗಿ ಸಹಭಾಗಿತ್ವಕ್ಕೆ ಪ್ರಧಾನಿ ಕರೆ ದೇಶದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ವಿದೇಶಗಳಿಗೆ ಹೋಗುವುದನ್ನು ತಡೆಯಲು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಬಜೆಟ್‌ನಲ್ಲಿ ಆರೋಗ್ಯ ವಲಯ ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಪ್ರಧಾನಿ, ‘‘ಭಾರತೀಯ ವಿದ್ಯಾರ್ಥಿಗಳು ಭಾಷೆಯ ಸಮಸ್ಯೆಯನ್ನೂ ಲೆಕ್ಕಿಸದೇ ಸಣ್ಣ ದೇಶಗಳಿಗೆ ತೆರಳುತ್ತಿದ್ದಾರೆ. ಇದನ್ನು ತಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳು ವೈದ್ಯಕೀಯ ಶಿಕ್ಷಣ ಕ್ಷೇತ್ರದತ್ತ ಹೆಚ್ಚಿನ ಗಮನ ನೀಡಬೇಕು. ಆಗ ಭಾರತವು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ಸೃಷ್ಟಿಸಲು ಹಾಗೂ ಜಾಗತಿಕ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ರಾಜ್ಯಗಳು ಸಹ ಈ ಸಂಬಂಧ ಅಗತ್ಯ ನೀತಿ ರೂಪಿಸಬೇಕು,’’ ಎಂದು ಹೇಳಿದರು. ರಷ್ಯಾದ ದಾಳಿಗೆ ತುತ್ತಾಗಿರುವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಅವರಲ್ಲಿಯೂ ಬಹುತೇಕರು ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್‌ಗೆ ತೆರಳಿದವರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಹೇಳಿಕೆ ಮಹತ್ವ ಪಡೆದಿದೆ. ಆದರೆ ಮೋದಿಯವರು ಉಕ್ರೇನ್‌-ರಷ್ಯಾ ಸಂಘರ್ಷದ ಕುರಿತು ನೇರವಾಗಿ ಪ್ರಸ್ತಾಪ ಮಾಡಲಿಲ್ಲ.


from India & World News in Kannada | VK Polls https://ift.tt/eZSLVAI

ಕಾಂಗ್ರೆಸ್‌ನಿಂದ ಮೇಕೆದಾಟು ಪಾದಯಾತ್ರೆ 2.0 ಇಂದಿನಿಂದ: ಕೈ ಪಕ್ಷದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ

ಬೆಂಗಳೂರು: ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆ 2.0 ಅನ್ನು ಭಾನುವಾರದಿಂದ ಆರಂಭಿಸಲಿದೆ. ಇದೇ ವೇಳೆ, ಕಾಂಗ್ರೆಸ್‌ ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಆರೋಪಿಸಿ ಆಡಳಿತಾರೂಢ , ಭಾನುವಾರ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿದೆ. ಇದರೊಂದಿಗೆ ಎರಡೂ ಪ್ರಧಾನ ಪಕ್ಷಗಳು ಪರಸ್ಪರ ಕಾದಾಟಕ್ಕೆ ಇಳಿದಂತಾಗಿದೆ. ಬೆಂಗಳೂರಿನಲ್ಲಿ ಮಾ. 5ರಂದು ಪ್ರತಿಭಟನೆ ನಡೆಯಲಿದೆ. ಮೇಕೆದಾಟು ಪಾದಯಾತ್ರೆಯ ಮೊದಲ ಹಂತ ಸಂಗಮದಿಂದ ರಾಮನಗರದವರೆಗೆ ನಾಲ್ಕು ದಿನ ನಡೆದಿದ್ದು, ಬಳಿಕ ಕೋರ್ಟ್‌ ಸೂಚನೆ ಮೇರೆಗೆ ನಿಲ್ಲಿಸಲಾಗಿತ್ತು. ಬೆಂಗಳೂರು ನಗರಕ್ಕೆ ನೀರು ಒದಗಿಸಬಹುದಾದ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ವಿಳಂಬ ಮಾಡುತ್ತಿವೆ ಎನ್ನುವುದು ಕಾಂಗ್ರೆಸ್‌ನ ಪ್ರಧಾನ ಆರೋಪ. ಭಾನುವಾರ ರಾಮನಗರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರಿಂದ ಉದ್ಘಾಟನೆಗೊಳ್ಳುವ ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಪ್ರಮುಖ ಕಾಂಗ್ರೆಸ್‌ ನಾಯಕರು ಭಾಗವಹಿಸುವರು. ಮಾರ್ಚ್ 3ರಂದು ಪಾದಯಾತ್ರೆ ಸಮಾರೋಪಗೊಳ್ಳಲಿದೆ. ಪಾದಯಾತ್ರೆ ಹಾದಿ
  • ಫೆ. 27: ರಾಮನಗರದಿಂದ ಬಿಡದಿ- 15ಕಿ.ಮೀ.
  • ಫೆ. 28: ಬಿಡದಿಯಿಂದ ಕೆಂಗೇರಿ- 20.5 ಕಿ.ಮೀ
  • ಮಾ. 1: ಔಟರ್‌ ರಿಂಗ್‌ ರಸ್ತೆಯ ಅದ್ವೈತ್‌ ಪೆಟ್ರೋಲ್‌ ಬಂಕ್‌- 15.8 ಕಿ.ಮೀ
  • ಮಾ. 2: ಅದ್ವೈತ್‌ ಪೆಟ್ರೋಲ್‌ ಬಂಕ್‌ನಿಂದ ಮೇಕ್ರಿ ಸರ್ಕಲ್‌- 16.7 ಕಿ.ಮೀ
  • ಮಾ. 3 ಮೇಕ್ರಿ ಸರ್ಕಲ್‌ನಿಂದ ನ್ಯಾಷನಲ್‌ ಕಾಲೇಜು ಮೈದಾನ -11.8 ಕಿ.ಮೀ
ಹೆದ್ದಾರಿ ಮಾರ್ಗ ಬದಲಾವಣೆಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ ನಡೆಯುವುದರಿಂದ 2 ದಿನ ಸಂಚಾರಕ್ಕೆ ಬದಲಿ ಮಾರ್ಗ ಬಳಸಬೇಕಿದೆ. ಮಂಡ್ಯ ಕಡೆಯಿಂದ ಬರುವವರು ಮದ್ದೂರಿನಿಂದ ಕುಣಿಗಲ್‌ ಮಾರ್ಗ, ಮೈಸೂರು, ಕೊಡಗು ಕಡೆಯವರು ಹಾಸನ ಹೆದ್ದಾರಿ ಬಳಸಬೇಕಿದೆ. ಮದ್ದೂರಿನಿಂದ ಕನಕಪುರ ಮಾರ್ಗವಾಗಿ ಬೆಂಗಳೂರು ಸೇರಬೇಕು. ಮಂಡಲ ಮಟ್ಟದಲ್ಲಿ ಕಾಂಗ್ರೆಸ್‌ ಜನವಿರೋಧಿಯಾಗಿದೆ, ಪ್ರತಿಪಕ್ಷವಾಗಿಯೂ ತನ್ನ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಭಾನುವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಂಡಲ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ. ಸಚಿವ ಈಶ್ವರಪ್ಪ ಅವರ ಕೇಸರಿ ಧ್ವಜ ಹೇಳಿಕೆಯನ್ನು ಇಟ್ಟುಕೊಂಡು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಇರುವುದನ್ನು ಬಿಜೆಪಿ ಪ್ರಶ್ನಿಸಿದೆ. ವಿವಾದಗಳನ್ನು ಸದನದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವುದು ಕಾಂಗ್ರೆಸ್‌ಗೆ ಬೇಕಿಲ್ಲ ಎನ್ನುವುದು ಬಿಜೆಪಿ ಅಭಿಪ್ರಾಯ. ಶಾಲಾ- ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿರುವ ಹಿಜಾಬ್‌- ಕೇಸರಿ ಸಂಘರ್ಷ ವಿವಾದದ ಬಗ್ಗೆಯೂ ಸದನದಲ್ಲಿ ಚರ್ಚಿಸಲು ಅವಕಾಶವಿತ್ತು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆ ವಾತಾವರಣ ನಿರ್ಮಾಣಕ್ಕಾಗಿ ಆರೋಗ್ಯಕರ ಸಂವಾದ ನಡೆಯಬೇಕಿತ್ತು. ಅದಕ್ಕೂ ಕಾಂಗ್ರೆಸ್‌ ಅವಕಾಶ ನೀಡಲಿಲ್ಲ. ಹಿಜಾಬ್‌ ವಿವಾದ ವಿಚಾರದಲ್ಲಿ ಕಾಂಗ್ರೆಸ್‌ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಪ್ರತಿಭಟನೆ ವೇಳೆ ಒತ್ತಾಯಿಸಲು ನಿರ್ಧರಿಸಿದೆ. ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಅವರ ಕುಟುಂಬಕ್ಕೆ ಕಾಂಗ್ರೆಸ್‌ನ ಯಾವ ನಾಯಕರೂ ಸಾಂತ್ವನ ಹೇಳಿಲ್ಲ ಎನ್ನುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಿಲುವನ್ನು ಜನರಿಗೆ ತಿಳಿಸುವುದು ಪ್ರತಿಭಟನೆಯ ಉದ್ದೇಶವಾಗಿದೆ. ಜನವಿರೋಧಿ, ಹಿಂದೂ ವಿರೋಧಿ, ಶಿಕ್ಷಣ ದ್ರೋಹಿ, ಮಹಿಳಾ ವಿರೋಧಿ ಧೋರಣೆ ಜತೆಗೆ ಮತಾಂತರದ ಪರವಾಗಿರುವ ಕಾಂಗ್ರೆಸ್‌ನ ಇಬ್ಬಗೆಯ ನಿಲುವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಪ್ರತಿಭಟನೆಯ ಹಾದಿ ಹಿಡಿದಿದೆ.


from India & World News in Kannada | VK Polls https://ift.tt/EI9oUaz

Russia-Ukraine Crisis:ಜನರ ರಕ್ಷಣೆಗಾಗಿ ಗನ್‌ ಹಿಡಿದು ನಿಂತ ಉಕ್ರೇನ್‌ ಸಂಸದೆ ಕಿರಾ

ಕೀವ್‌: ವೈರಿ ರಾಷ್ಟ್ರದ ಸೈನಿಕರನ್ನು ಹಿಮ್ಮೆಟ್ಟಿಸಲು ಉಕ್ರೇನ್‌ನಲ್ಲಿ ಸೈನಿಕರು ಮಾತ್ರವಲ್ಲದೆ ನಾಗರಿಕರು ಸಹ ಹೋರಾಟಕ್ಕಿಳಿದಿರುವ ಬೆನ್ನಲ್ಲೇ ಸಂಸದೆ ಕಿರಾ ರುಡಿಕ್‌ ಅವರು ಸಹ 'ಕಲಾಶ್ನಿಕೋವ್‌' ಗನ್‌ ಹಿಡಿದು ನಿಂತಿದ್ದಾರೆ. ಈ ಕುರಿತ ಫೋಟೊ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಗನ್‌ ಹಿಡಿದು ನಿಂತಿರುವ ಫೋಟೊ ಟ್ವೀಟ್‌ ಮಾಡಿರುವ ಕಿರಾ, ''ನಾನು ಕಲಾಶ್ನಿಕೋವ್‌ ಗನ್‌ ಬಳಸುವುದು ಹೇಗೆ ಎಂಬುದನ್ನು ಇತ್ತೀಚೆಗಷ್ಟೇ ಕಲಿತೆ. ನಾವು ನಮ್ಮ ನೆಲದ ಹೆಣ್ಣುಮಕ್ಕಳು ಸೇರಿ ಎಲ್ಲರನ್ನೂ ರಕ್ಷಿಸಲು ಬದ್ಧರಾಗಿದ್ದೇವೆ. ನಾನು ನನ್ನ ಕುಟುಂಬವನ್ನು ರಕ್ಷಿಸುವ ಜತೆಗೆ ಎಲ್ಲರ ರಕ್ಷಣೆಗಾಗಿ ಪ್ರತಿರೋಧ ಪಡೆಯನ್ನು ರಚಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಷ್ಯಾ ಸೇನೆಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುವುದು ನಮ್ಮ ಗುರಿಯಾಗಿದೆ,'' ಎಂದು ಹೇಳಿದ್ದಾರೆ. ಬಂಧಿತ ಸೈನಿಕರ ಚಿತ್ರ ಬಿಡುಗಡೆ ಮಾಡಿದ ಸಚಿವ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ತಮ್ಮ ದೇಶದ ಯೋಧರು ಬಂಧಿಸಿರುವ ರಷ್ಯಾ ಸೈನಿಕರ ಚಿತ್ರವನ್ನು ಜಾಲತಾಣಗಳಿಗೆ ಬಿಡುಗಡೆ ಮಾಡಿದ್ದಾರೆ. ''ರಷ್ಯಾ ಸೈನಿಕರ ತಾಯಂದಿರೆ, ಪುತ್ರಿಯರೇ ಮತ್ತು ಮಡದಿಯರೇ, ನಿಮ್ಮ ಜನರನ್ನು ಮನೆಗೆ ಕರೆದೊಯ್ಯಿರಿ. ಇವರು ಮುಗ್ಧ ಜನರನ್ನು ಕೊಲ್ಲಲು ವಿದೇಶಿ ನೆಲ ಪ್ರವೇಶಿಸಿದ್ದಾರೆ. ಅವರು ನಮ್ಮ ಎಲ್ಲ ಕನಸುಗಳನ್ನು ನುಚ್ಚುನೂರು ಮಾಡಿದ್ದಾರೆ. ಯುದ್ಧ ನಿಲ್ಲಿಸುವಂತೆ ನಿಮ್ಮ ದೇಶದ ಆಡಳಿತದ ಮೇಲೆ ಒತ್ತಡ ಹೇರಿ, ಆ ಮೂಲಕ ನಿಮ್ಮವರ ಜೀವ ಉಳಿಸಿಕೊಳ್ಳಿ,'' ಎಂದು ಕುಲೆಬಾ ಬರೆದಿದ್ದಾರೆ. ಟೆನ್ನಿಸ್ ರಾಕೆಟ್ ಬಿಟ್ಟು ಗನ್ ಹಿಡಿದ ಕ್ರೀಡಾಪಟು ಉಕ್ರೇನ್ ಟೆನ್ನಿಸ್ ಆಟಗಾರ ಸರ್ಜಿವ್ ಸ್ಟಾಖೋವ್‌ಸ್ಕಿ ಅವರು ರಷ್ಯಾ ಅತಿಕ್ರಮಣದ ವಿರುದ್ಧ ಹೋರಾಡಲು ದೇಶದ ಸೇನಾ ಮೀಸಲು ಪಡೆಯನ್ನು ಸೇರಿಕೊಂಡಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಷ್ಯಾ ಯೋಜನೆ ವಿಫಲ ಎಂದ ಉಕ್ರೇನ್ ಅಧ್ಯಕ್ಷ ಉಕ್ರೇನ್‌ ರಾಜಧಾನಿ ಕೀವ್‌ಅನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು, ನಮ್ಮನ್ನೆಲ್ಲ ಬಂಧಿಸುವ ದಿಸೆಯಲ್ಲಿ ರಷ್ಯಾ ರೂಪಿಸಿದ್ದ ಯೋಜನೆಯನ್ನು ವಿಫಲಗೊಳಿಸಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ತಿಳಿಸಿದ್ದಾರೆ. ‘‘ನಮ್ಮ ರಾಜಧಾನಿಯನ್ನು ವಶಪಡಿಸಿಕೊಂಡು ಅಟ್ಟಹಾಸ ಮೆರೆಯುವ ರಷ್ಯಾ ಯೋಜನೆಯನ್ನು ವಿಫಲಗೊಳಿಸಿದ್ದೇವೆ. ಒಡೆಸ್ಸಾ ಸೇರಿ ಹಲವು ನಗರಗಳಲ್ಲಿ ರಷ್ಯನ್ನರ ವಿರುದ್ಧ ನಮ್ಮ ಯೋಧರು ದಿಟ್ಟವಾಗಿ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ರಷ್ಯಾ ಸಂಪೂರ್ಣವಾಗಿ ಮೇಲುಗೈ ಸಾಧಿಸಲು ಸಾಧ್ಯವಾಗಿಲ್ಲ,’’ ಎಂದು ಹೇಳಿದ್ದಾರೆ. ಐರೋಪ್ಯ ಒಕ್ಕೂಟ ಸೇರುವ ಕುರಿತು ಮಾತನಾಡಿದ ಅವರು, ‘‘ಉಕ್ರೇನ್‌ ಈಗಾಗಲೇ ಯುರೋಪಿಯನ್‌ ಒಕ್ಕೂಟ ಸೇರುವ ಹಕ್ಕು ಪಡೆದಿದೆ. ನಮ್ಮ ದೇಶದ ಸೇರ್ಪಡೆ ಕುರಿತು ಒಕ್ಕೂಟದ ನಾಯಕರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು. ಇದರಿಂದ ಉಕ್ರೇನ್‌ಗೆ ಎಷ್ಟು ಬೆಂಬಲ ಇದೆ ಎಂಬುದು ತೀರ್ಮಾನವಾಗಲಿದೆ,’’ ಎಂದು ತಿಳಿಸಿದ್ದಾರೆ. ರಷ್ಯಾ ದಾಳಿ ವಿವರಿಸಿದ ಜೆಲೆನ್‌ಸ್ಕಿ, ‘‘ರಷ್ಯಾ ನಮ್ಮ ದೇಶದ ಮೇಲೆ ಕ್ಷಿಪಣಿ ದಾಳಿ ಮಾಡುತ್ತಿದೆ. ಸೈನಿಕರು, ಡ್ರೋನ್‌, ಮದ್ದುಗುಂಡುಗಳು, ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿ ದಾಳಿಗೈಯುತ್ತಿದೆ. ನೂರಾರು ಜನರನ್ನು ಯುದ್ಧಕೈದಿಗಳನ್ನಾಗಿಸುತ್ತಿದೆ. ಹಾಗಾಗಿ ರಷ್ಯಾದ ನಾಗರಿಕರೇ ಯುದ್ಧ ತಡೆಯುವ ದಿಸೆಯಲ್ಲಿ ವ್ಲಾಡಿಮಿರ್‌ ಪುಟಿನ್‌ ಮೇಲೆ ಒತ್ತಡ ಹೇರಬೇಕು,’’ ಎಂದು ಮನವಿ ಮಾಡಿದ್ದಾರೆ. ಆಕ್ರಮಣ ಮಾಡಿದಾಗಿನಿಂದ ಇದುವರೆಗೆ ರಷ್ಯಾದ 3,500ಕ್ಕೂ ಅಧಿಕ ಯೋಧರು, 14 ಯುದ್ಧವಿಮಾನ, 8 ಹೆಲಿಕಾಪ್ಟರ್‌, 102 ಟ್ಯಾಂಕ್‌ ಹಾಗೂ 536 ಶಸ್ತ್ರಸಜ್ಜಿತ ವಾಹನಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ಶನಿವಾರ ತಿಳಿಸಿದೆ.


from India & World News in Kannada | VK Polls https://ift.tt/Gp0MeOo

Russia-Ukraine Crisis: ರಣಾಂಗಣವಾದ ಕೀವ್‌, ಬೀದಿಗಳಲ್ಲೇ ಹೊಡೆದಾಟ: ದೇಶ ರಕ್ಷಣೆಗೆ ನಾಗರಿಕರ ಹೋರಾಟ

ಕೀವ್‌: ಸೇನಾ ದಾಳಿಯ ಮೊದಲ ಮೂರು ದಿನ ಉಕ್ರೇನ್‌ನ ಗಡಿ ಮುಂಚೂಣಿ ಪ್ರದೇಶಗಳ ಸೇನಾ ನೆಲೆಗಳನ್ನು ಛಿದ್ರಗೊಳಿಸಿದ ದೈತ್ಯ ರಷ್ಯನ್‌ ಪಡೆಗಳು ಶನಿವಾರದ ಹೊತ್ತಿಗೆ ರಾಜಧಾನಿ ಕೀವ್‌ ನಗರದ ಸನಿಹಕ್ಕೆ ಸಾಗಿ ಬಂದಿವೆ. ಸೂರ್ಯೋದಯದ ಹೊತ್ತಿಗೆ ನಗರದ ಹೊರ ವಲಯದಲ್ಲಿ ರಷ್ಯಾದ ಯೋಧರು ಭದ್ರತಾ ಬ್ಯಾರಿಕೇಡ್‌ಗಳನ್ನು ಕಿತ್ತು ಪ್ರಧಾನ ಪಡೆಗಳು ನುಗ್ಗಲು ಅನುವು ಮಾಡಿಕೊಟ್ಟರು. ಈ ವೇಳೆ ಸ್ಥಳೀಯರಿಂದ ಪ್ರತಿರೋಧ ಬಂದಾಗ ಹೊಡೆದಾಟ ನಡೆದು ಅನೇಕರು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ. ರಷ್ಯಾದ ವಾಯು ಮತ್ತು ಭೂ ಸೇನೆ ನಡೆಸಿದ ಭೀಕರ ದಾಳಿಗೆ ಉಕ್ರೇನ್‌ ತತ್ತರಿಸಿದೆ. ಮೂರೇ ದಿನಗಳಲ್ಲಿ ಮುಂಚೂಣಿ ಭಾಗವು ರಷ್ಯಾ ಪಡೆಗಳ ಕೈ ವಶವಾಯಿತು. ನಂತರ ರಾಜಧಾನಿ ಕೀವ್‌ನತ್ತ ಸಾಗಿ ಬಂದ ಪಡೆಗಳು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವನ್ನೇ ಬುಡಮೇಲು ಮಾಡಲು ಅಣಿಯಾಗಿ ನಿಂತಿದೆ. ನಾಗರಿಕರ ಮೇಲೂ ದಾಳಿ ಸಣ್ಣ ಪ್ರತಿರೋಧವನ್ನೂ ಸಹಿಸದ ರಷ್ಯನ್‌ ಸೇನೆ, ಕಣ್ಣಿಗೆ ಕಾಣಿಸುವ ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಕೀವ್‌ ಪ್ರವೇಶಿಸುವ ದಾರಿಯಲ್ಲಿ ನಾಗರಿಕರೇ ಪ್ರತಿರೋಧ ಒಡ್ಡಿದ್ದರಿಂದ ಸಂಘರ್ಷ ತಾರಕಕ್ಕೇರಿದೆ. ಮೊದಲ ಹಂತದಲ್ಲಿ ದಾಷ್ಟ್ರ್ಯ ಮೆರೆದ ರಷ್ಯಾ ಪಡೆಗಳನ್ನು ಕೀವ್‌ ನಗರ ನಿವಾಸಿಗರು ಕೈಗೆ ಸಿಕ್ಕ ವಸ್ತುಗಳಿಂದಲೇ ಹೊಡೆದು ಹಿಮ್ಮೆಟ್ಟಲು ನೋಡಿದರು. ಆದರೆ, ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಕಟ್ಟಿಗೆ, ಕಲ್ಲಿನ ಏಟುಗಳಿಂದ ಕೆರಳಿದ ರಷ್ಯನ್‌ ಯೋಧರು, ಕಂಡ ಕಡೆ ಗುಂಡು ಮತ್ತು ಕ್ಷಿಪಣಿ ಉಡಾಯಿಸಿದರು. ಇದರಿಂದ ಸೇತುವೆಗಳು, ಶಾಲಾ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ ಕುಸಿದು ಬಿದ್ದವು. ''ಈ ದಾಳಿಯಲ್ಲಿ ಅಪಾರ ಪ್ರಮಾಣದ ಜೀವ ಹಾನಿ ಉಂಟಾಗಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಅಸಹಾಯಕ ರೀತಿಯಲ್ಲಿ ಪ್ರಾಣಬಿಟ್ಟಿದ್ದಾರೆ,'' ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಕ್ರೇನ್‌ನ ವಿವಾದಗ್ರಸ್ತ ಎರಡು ಪ್ರಾಂತಗಳು ಮಾತ್ರ ರಷ್ಯಾ ದಾಳಿಯ ಟಾರ್ಗೆಟ್‌ ಆಗಿದ್ದವು. ಆದರೆ ಈಗ ಆ ಎರಡು ಪ್ರದೇಶಗಳನ್ನು ದಾಟಿ ಸೇನೆ ಕೀವ್‌ ನಗರವನ್ನು ಆಕ್ರಮಿಸಿದೆ. ಇದರ ಉದ್ದೇಶ ಸರಕಾರವನ್ನು ಕಿತ್ತೊಗೆಯುವುದಾಗಿದೆ. ಮೊದಲಿನಿಂದಲೂ ತಮ್ಮ ಮಾತಿಗೆ ಮನ್ನಣೆ ನೀಡದ ವೊಲೊಡಿಮಿರ್‌ ಜೆಲೆನ್‌ಸ್ಕಿ ಎಂದರೆ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಆಗುತ್ತಿರಲಿಲ್ಲ. ಹೇಗಾದರೂ ಮಾಡಿ ಜೆಲೆನ್‌ಸ್ಕಿ ಸರಕಾರವನ್ನು ಪತನಗೊಳಿಸಬೇಕು ಎಂದು ಪುಟಿನ್‌ ಕಾಯ್ದಿದ್ದರು. ಈಗ ಅದಕ್ಕೆ ಅವರಿಗೆ ಸಮಯ ಒದಗಿ ಬಂದಿದ್ದು, ಸೇನೆಯನ್ನು ರಾಜಧಾನಿ ಒಳಕ್ಕೆ ನುಗ್ಗಿಸಿದ್ದಾರೆ. ''ಉಕ್ರೇನ್‌ನ ಚುನಾಯಿತ ಸರಕಾರವನ್ನು ಕಿತ್ತು ಹಾಕಿ, ತಮ್ಮ ಮಾತು ಕೇಳುವ ಗುಮಾಸ್ತ ಆಡಳಿತಗಾರನನ್ನು ನೇಮಕ ಮಾಡುವುದು ಪುಟಿನ್‌ ಉದ್ದೇಶವಾಗಿದೆ. ಆ ದಿಸೆಯಲ್ಲಿಅವರು ಅನೇಕ ಅಮಾಯಕರ ಪ್ರಾಣ ಬಲಿ ಪಡೆಯಲಿದ್ದಾರೆ,'' ಎಂದು ಅಮೆರಿಕ ಎಚ್ಚರಿಸಿದೆ. ಈ ನಡುವೆ, ಕೈಯಲ್ಲಿ ಶಸ್ತ್ರಾಸ್ತ್ರಗಳಿಲ್ಲದೆ ಬಸವಳಿದಿರುವ ಉಕ್ರೇನ್‌ ಸೇನೆ ಸದ್ದಿಲ್ಲದೇ ಮೂಲೆಗುಂಪಾಗಿದೆ. ನಾಗರಿಕರು ತೋರುವಷ್ಟು ಪ್ರತಿರೋಧವನ್ನು ಕೂಡ ಉಕ್ರೇನ್‌ ಸೇನೆ ತೋರುತ್ತಿಲ್ಲ. ಸೋತು ಸುಣ್ಣವಾಗಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ, ಯುದ್ಧ ನಿಲ್ಲಿಸುವಂತೆ ರಷ್ಯಾ ಪಡೆಗಳಿಗೆ ವಿನಂತಿ ಮಾಡಿದ್ದಾರೆ. ''ನಮ್ಮ ಅನೇಕ ನಗರಗಳು ದಾಳಿಗೆ ಒಳಗಾಗಿವೆ. ದೇಶದ ಭವಿಷ್ಯತ್ತು ಆಪತ್ತಿನ ದವಡೆಗೆ ಸಿಲುಕಿದೆ,'' ಎಂದು ಗೋಗರೆದಿದ್ದಾರೆ. ಅಸಹಾಯಕತೆ ತೋರಿಸಿಕೊಳ್ಳದೇ ಎದೆಗಾರಿಕೆ ಪ್ರದರ್ಶಿಸುತ್ತಿರುವ ಜೆಲೆನ್‌ಸ್ಕಿ ಅವರನ್ನು ಸಂಪೂರ್ಣ ವಾಗಿ ಬಗ್ಗುಬಡಿಯಲು ಪುಟಿನ್‌ ನಿರ್ಧರಿಸಿದ್ದಾರೆ. ಶಾಂತಿ ಮಾತುಕತೆಗೆ ಉಕ್ರೇನ್‌ ಅಧಿಕಾರಿಗಳು ಮಂಡಿಸಿದ ಪ್ರಸ್ತಾಪವನ್ನು ಸಮ್ಮಿತಿಸಿರುವ ನಡುವೆಯೂ ದಾಳಿ ಮುಂದುವರಿಸಿದೆ. ಉಕ್ರೇನ್‌ ದಕ್ಷಿಣ ಭಾಗದ ನಗರ ಮೆಲಿಟೊಪೋಲ್‌ ಕೂಡ ಈಗ ರಷ್ಯಾ ಪಡೆಗಳ ಹಿಡಿತಕ್ಕೆ ಬಂದಿದೆ. ಇದರೊಂದಿಗೆ ರಷ್ಯಾ ಪಡೆಗಳ ನಿಯಂತ್ರಣದಿಂದ ಹೊರ ಉಳಿದಿರುವ ಉಕ್ರೇನ್‌ ಪ್ರದೇಶ ಎಷ್ಟು ಎನ್ನುವುದೇ ಈಗ ಪ್ರಶ್ನಾರ್ಥಕ ಎನ್ನಿಸಿದೆ. ಹೀಗೆ ಮುಂದುವರಿದರೆ, ಇನ್ನು ಕೆಲವೇ ದಿನಗಳಲ್ಲಿ ಇಡೀ ಉಕ್ರೇನ್‌, ರಷ್ಯಾದ ಸುಪರ್ದಿಗೆ ಒಳಪಡುತ್ತದೆ ಎಂದು ಸಮರ ತಜ್ಞರು ಅಂದಾಜಿಸಿದ್ದಾರೆ.


from India & World News in Kannada | VK Polls https://ift.tt/pqYuBPT

ಇನ್ಮುಂದೆ ಖಾಸಗಿ ವಾಹನದಲ್ಲಿ ಸಂಚರಿಸುವವರು ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ; ದಿಲ್ಲಿ ಸರ್ಕಾರ

ಹೊಸದಿಲ್ಲಿ: ಖಾಸಗಿ ವಾಹ­ನದಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್‌ ಧರಿಸುವುದು ಕಡ್ಡಾಯ ಎಂಬ ನಿಯ­ಮವನ್ನು ದಿಲ್ಲಿ ಸರಕಾರ ರದ್ದುಪಡಿಸಿದೆ. ಸೋಮವಾರದಿಂದ ಈ ನಿಯಮ ಜಾರಿಗೆ ಬರಲಿದ್ದು, ಅದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧಾರಣೆ ಹೊರತು­ಪಡಿಸಿ ಉಳಿದೆಲ್ಲಾ ನಿರ್ಬಂಧಗಳನ್ನೂ ಸರಕಾರ ತೆಗೆದು ಹಾಕಲಿದೆ. ಕೊರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿ­ರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರ­ವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ, ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಕ್‌ ಧರಿಸುವುದು ಕಡ್ಡಾಯವಾ­ಗಿತ್ತು. ರಸ್ತೆ ಸಹ ಸಾರ್ವಜನಿಕ ಪ್ರದೇಶ ಎಂದು ವ್ಯಾಖ್ಯಾನಿಸಿ ಈ ನಿಯಮ ಜಾರಿಗೆ ತರಲಾ­ಗಿತ್ತು. ಈಗ ಈ ನಿಯಮ ಕೈ ಬಿಟ್ಟರೂ, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಬೇಕೆಂಬ ನಿಯಮ ಮುಂದುವರಿಯಲಿದೆ. ಸಾರ್ವ­ಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ. ಮತ್ತಷ್ಟು ಇಳಿಕೆ: ಶನಿವಾರ ದೇಶದಲ್ಲಿ ಕೊರೊನಾ ಸೋಂಕಿನ 11,499 ಹೊಸ ಪ್ರಕರಣಗಳು ವರದಿಯಾಗಿದ್ದು, 255 ಸೋಂಕಿತರು ಮೃತಪಟ್ಟಿದ್ದಾರೆ. ಕ್ಯಾಮೆರಾ ಕಣ್ತಪ್ಪಿಸಲು ನಂಬರ್‌ಪ್ಲೇಟ್‌ಗೆ ಮಾಸ್ಕ್‌ಕುಂದಾಣ: ಪೊಲೀಸರು ವಾಹನಗಳನ್ನು ತಪಾಸಣೆ ಮಾಡುವ ಬದಲಿಗೆ ಮೊಬೈಲ್‌ ಕ್ಯಾಮೆರಾದಲ್ಲಿ ವಾಹನದ ನಂಬರ್‌ ಸೆರೆ ಹಿಡಿದು, ದಂಡ ಶುಲ್ಕ ವಿಧಿಸುತ್ತಿದ್ದು, ಕೆಲ ವಾಹನ ಸವಾರರು ಮುಖಕ್ಕೆ ಹಾಕುವ ಮಾಸ್ಕ್‌ನ್ನು ನಂಬರ್‌ ಪ್ಲೇಟ್‌ಗೆ ಹಾಕಿಕೊಂಡು ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ. ನಂಬರ್‌ ಪ್ಲೇಟ್‌ಗೆ ಮಾಸ್ಕ್‌: ವಾಹನದ ಹಿಂಬದಿ ನಂಬರ್‌ ಪ್ಲೇಟ್‌ಗೆ ಮಾಸ್ಕ್‌, ಮುಂದೇಕಿಲ್ಲ ಎಂದು ಪ್ರಶ್ನಿಸಿದರೆ, ‘ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವ ವೇಳೆ ನಮಗೆ ತಿಳಿಯದೆಯೇ ಹಿಂಬದಿಯಿಂದ ಪೊಲೀಸರು ತಮ್ಮ ವಾಹನದ ನಂಬರ್‌ ಪ್ಲೇಟ್‌ನ್ನು ಮೊಬೈಲ್‌ ಮೂಲಕ ಸೆರೆ ಹಿಡಿದು ಯದ್ವತದ್ವ ದಂಡ ಹಾಕುತ್ತಿದ್ದಾರೆ. ವಾಹನದ ಡೀಟೈಲ್ಸ್‌ ಚೆಕ್‌ ಮಾಡಿದರೆ ಹೆಲ್ಮೆಟ್‌ ಧರಿಸಿಲ್ಲ, ನಂಬರ್‌ ಸರಿಯಾಗಿ ಗೋಚರಿಸಿಲ್ಲ, ಸಿಗ್ನಲ್‌ ಜಂಪ್‌, ತ್ರಿಬಲ್‌ ರೈಡ್‌ ಹೀಗೆ ಹಲವಾರು ರೀತಿಯಲ್ಲಿ ದಂಡ ಕಟ್ಟಿದ್ದೇವೆ. ಒಂದೇ ಬಾರಿಗೆ ಮೂರ್ನಾಲ್ಕು ಸಾವಿರ ದಂಡ ಕಟ್ಟುವುದಾದರೂ ಹೇಗೆ? ಅದಕ್ಕಾಗಿಯೇ ಈ ಮಾರ್ಗ ಅನುಸರಿಸುತ್ತಿದ್ದೇವೆ’ ಎಂಬುದು ವಾಹನ ಸವಾರರ ಮಾತು. ‘ವಾಹನಗಳಿಗೆ ಶುಲ್ಕ ವಿಧಿಸುವ ಮುನ್ನ ಗಮನಕ್ಕೆ ತರುವ ಕೆಲಸ ಇಲಾಖೆಯಿಂದ ಆಗಬೇಕಿದ್ದು, ವಾಹನ ಮಾಲೀಕರ ಗಮನಕ್ಕೆ ತಂದು, ಎಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಮನವರಿಕೆ ಮಾಡಿದ ನಂತರ ದಂಡ ಹಾಕಲಿ’ ಎಂಬುದು ಕೆಲ ವಾಹನ ಸವಾರರ ಮನವಿಯಾಗಿದೆ.


from India & World News in Kannada | VK Polls https://ift.tt/ezAF0Bp

ಮಗಳು ಕಳೆದುಕೊಂಡ ನೋವಿನಲ್ಲೇ ಶತಕ ಸಿಡಿಸಿದ ವಿಷ್ಣು ಸೋಲಂಕಿ!

ಹೊಸದಿಲ್ಲಿ: ತನ್ನ ಹೆಣ್ಣು ಮಗುವನ್ನು ಕಳೆದುಕೊಂಡ ನೋವಿನಲ್ಲಿಯೇ ಬರೋಡ ಕ್ರಿಕೆಟಿಗ ಅವರು 2021/22ರ ಋತುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಚಂಡೀಗಢ ವಿರುದ್ದದ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭುವನೇಶ್ವರದ ವಿಕಾಸ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಚಂಡೀಗಢ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 168 ರನ್‌ಗಳಿಗೆ ಆಲ್‌ಔಟ್‌ ಆಯಿತು. ನಂತರ ಪ್ರಥಮ ಇನಿಂಗ್ಸ್ ಆರಂಭಿಸಿದ ಬರೋಡ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 107 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 398 ರನ್‌ ಗಳಿಸಿದೆ. ಕಳೆದ ಕೆಲವೇ ದಿನಗಳ ಹಿಂದಷ್ಟೇ ವಿಷ್ಣು ಸೋಲಂಕಿ ಅವರು ತಮ್ಮ ಹೆಣ್ಣು ಮಗುವನ್ನು ಕಳೆದುಕೊಂಡಿದ್ದರು. ಈ ನೋವಿನಲ್ಲಿಯೇ ಅವರು ಅಂಗಣಕ್ಕೆ ಬಂದಿದ್ದರು. ತನ್ನೆಲ್ಲಾ ನೋವನ್ನು ಮರೆತು ಬ್ಯಾಟ್‌ ಮಾಡಿದ ವಿಷ್ಣೋ ಸೋಲಂಕಿ ಎರಡನೇ ದಿನ ಎಲ್ಲರ ಗಮನ ಸೆಳೆದರು. ಎದುರಿಸಿದ 161 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಚಂಡೀಗಢ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು 12 ಮನಮೋಹಕ ಬೌಂಡರಿಗಳನ್ನು ಸಿಡಿಸಿದರು. ಮಗಳ ಕಳೆದುಕೊಂಡ ನೋವಿನಲ್ಲಿಯೇ ಶತಕ ಸಿಡಿಸಿದ ವಿಷ್ಣು ಸೋಲಂಕಿ ಅವರಿಗೆ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕ್ರಿಕೆಟ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಂತೆ ಸೌರಾಷ್ಟ್ರ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಶೆಲ್ಡನ್‌ ಜಾಕ್ಸನ್‌ ಅವರು ತಮ್ಮ ಟ್ವಿಟರ್‌ನಲ್ಲಿ ವಿಷ್ಣು ಸೋಲಂಕಿ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. "ಎಂಥಾ ಆಟಗಾರ. ನಾನು ಇಲ್ಲಿಯವರೆಗೂ ನೋಡಿದ ಅತ್ಯಂತ ಕಠಿಣ ಆಟಗಾರ. ನನ್ನ ಕಡೆಯಿಂದ ವಿಷ್ಣು ಸೋಲಂಕಿಗೆ ಹಾಗೂ ಅವರ ಕುಟುಂಬಕ್ಕೆ ದೊಡ್ಡ ನಮಸ್ಕಾರ. ಈ ನೋವನ್ನು ಮರೆಯವುದು ಅಷ್ಟೊಂದು ಸುಲಭವಲ್ಲ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಶತಕಗಳನ್ನು ಸಿಡಿಸಲಿ ಎಂದು ಹಾರೈಸುತ್ತೇನೆ," ಎಂದು ಶೆಲ್ಡನ್‌ ಜಾಕ್ಸನ್‌ ಟ್ವೀಟ್‌ ಮಾಡಿದ್ದಾರೆ. "ಕಳೆದ ಕೆಲ ದಿನಗಳ ಹಿಂದೆ ಜನಿಸಿದ್ದ ಹೆಣ್ಣು ಮಗುವನ್ನು ವಿಷ್ಣು ಸೋಲಂಕಿ ಕಳೆದುಕೊಂಡಿದ್ದಾರೆ. ಮಗಳ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಬಳಿಕ ರಾಜ್ಯ ತಂಡದ ರಣಜಿ ಪಂದ್ಯಕ್ಕೆ ಆಗಮಿಸಿದ್ದಾರೆ ಹಾಗೂ ಶತಕ ಸಿಡಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಲೈಕ್‌ಗಳನ್ನು ಪಡದುಕೊಂಡಿಲ್ಲವಾದರೂ ಅವರು ಜೀವನದ ನಿಜವಾದ ಹೀರೋ ಆಗಿದ್ದಾರೆ. ಇವರು ಎಲ್ಲರಿಗೂ ಸ್ಪೂರ್ತಿ," ಎಂದು ಬರೋಡ ಕ್ರಿಕೆಟ್‌ ಅಸೋಸಿಯೇಷನ್‌ನ ಸಿಇಓ ಶಿಶಿರ್‌ ಹಟ್ಟಂಗಡಿ ಹೇಳಿದ್ದಾರೆ. ಫೆಬ್ರವರಿ 11 ರಂದು ಮಧ್ಯರಾತ್ರಿಯಲ್ಲಿಯೇ ವಿಷ್ಣು ಸೋಲಂಕಿಗೆ ಹೆಚ್ಚು ಮಗು ಜನಿಸಿತ್ತು. ಆದರೆ ಜನಿಸಿದ ಕೇವಲ 24 ಗಂಟೆಗಳ ಒಳಗೆ ಮಗು ಮೃತಪಟ್ಟ ಸುದ್ದಿ ಬಂಹಿರಂಗವಾಯಿತು. ಭುವನೇಶ್ವರ್‌ದಲ್ಲಿ ಬರೋಡ ತಂಡದಲ್ಲಿದ್ದ ವಿಷ್ಣು ಸೋಲಂಕಿ, ನಂತರ ಬರೋಡಗೆ ತೆರಳಿ ಮಗುವಿನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/HqgOLnY

ಮೇಕೆದಾಟು ಬಳಿಕ ಮಹದಾಯಿ! ಮತ್ತೊಂದು ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ

ಬೆಂಗಳೂರು: ಮೇಕೆದಾಟು ಯೋಜನೆಗೆ ಜಾರಿಗೆ ಆಗ್ರಹಿಸಿ ಎರಡನೇ ಹಂತದ ಪಾದಯಾತ್ರೆ ಭಾನುವಾರದಿಂದ ಆರಂಭಗೊಳ್ಳಲಿದೆ. ಈ ಹೋರಾಟದ ಬೆನ್ನಲ್ಲೇ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲು ಕಾಂಗ್ರೆಸ್ ಪ್ರಾಥಮಿಕ ಸಿದ್ಧತೆ ನಡೆಸುತ್ತಿದೆ. ಮೇಕೆದಾಟು ಮೊದಲನೇ ಹಂತದ ಪಾದಯಾತ್ರೆ ಪಕ್ಷದ ವರ್ಚಸ್ಸು ಹೆಚ್ಚಳಕ್ಕೆ ಕಾರಣವಾಗಿತ್ತು. ಸರ್ಕಾರಕ್ಕೂ ಯೋಜನೆ ಜಾರಿಗೊಳಿಸುವ ಒತ್ತಡವನ್ನು ಹೇರುವಷ್ಟರ ಮಟ್ಟಿಗೆ ಪಾದಯಾತ್ರೆ ಪ್ರಭಾವ ಬೀರಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಈ ಪಾದಯಾತ್ರೆ ಮುಗಿದ ಬಳಿಕ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಆ ಭಾಗದ ಮುಖಂಡರಿಗೆ ಈಗಾಗಲೇ ಸೂಚನೆಯನ್ನು ನೀಡಲಾಗಿದ್ದು, ರೂಪುರೇಷೆ ತಯಾರುಗೊಳಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ ತಿಂಗಳಲ್ಲಿ ಮಹದಾಯಿಗಾಗಿ ಕಾಂಗ್ರೆಸ್ ಹೋರಾಟ ನಡೆಸಲಿದೆ. ಏನಿದು ಮಹದಾಯಿ ಯೋಜನೆ? ಹುಬ್ಬಳ್ಳಿ-ಧಾರವಾಡ ಮತ್ತು ಮುಂಬಯಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ "ಕಳಸಾ ಬಂಡೂರಿ ಯೋಜನೆ" ಈ ನದಿಗೆ ಸಂಬಂಧಿಸಿದೆ. ಈ ಯೋಜನೆಗೆ ಸಂಬಂದಿಸಿದಂತೆ ಕರ್ನಾಟಕ-ಗೋವಾ ರಾಜ್ಯಗಳ ನಡುವೆ ವಿವಾದ ಏರ್ಪಟ್ಟಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಮಹದಾಯಿ, ಕಳಸಾ, ನಾಲಾ, ಚೋರ್ಲಾ, ಗುರ್ಕಿ, ಹಳತಾರ, ಪೋರ್ಟಾ, ಬಂಡೂರಿ ಜನ್ಮತಾಳಿ ಬಳಿಕ 35ಕಿಮೀ ರಾಜ್ಯದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹರಿಯುತ್ತದೆ. ಈ ಹಳ್ಳಗಳಿಂದ ಪ್ರತಿ ವರ್ಷ 56 ಟಿಎಂಸಿ ನೀರು ಶೇಖರಣೆಯಾಗಿ ಮಹದಾಯಿ ರೂಪುಗೊಳ್ಳುತ್ತದೆ. ಈ ನದಿ ಮುಂದೆ ಮಾಂಡೋವಿ ಹರಿದು ಗೋವಾ ರಾಜ್ಯದ ಅರಣ್ಯ ಪ್ರದೇಶದ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಸಮುದ್ರಕ್ಕೆ ಸೇರುವ ಈ ನೀರಿನ ಪೈಕಿ ಕರ್ನಾಟಕ ರಾಜ್ಯ ಕೇವಲ 25ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಮುಂದಾದರೆ ಗೋವಾ ಸರ್ಕಾರ ಇದಕ್ಕೆ ಅಡ್ಡಗಾಲು ಹಾಕುತ್ತಿದೆ.


from India & World News in Kannada | VK Polls https://ift.tt/1ljYHNR

Russia-Ukraine Crisis: ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಚಲಾವಣೆಯಿಂದ ದೂರ ಉಳಿದ ಭಾರತ ಕೊಟ್ಟ ಕಾರಣವೇನು?

ವಿಶ್ವಸಂಸ್ಥೆ: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ವಿರುದ್ಧ ನಿರ್ಣಯ ಕೈಗೊಳ್ಳುವ ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತ ಮತ ಚಲಾಯಿಸುವುದರಿಂದ ದೂರವೇ ಉಳಿಯುವ ಮೂಲಕ ನಿರೀಕ್ಷೆಯಂತೆಯೇ ತಟಸ್ಥ ನೀತಿ ಪ್ರದರ್ಶಿಸಿದೆ. ಈ ಮೂಲಕ ರಷ್ಯಾ ಹಾಗೂ ಅಮೆರಿಕ ಎರಡೂ ಬಲಿಷ್ಠ ದೇಶಗಳ ಒತ್ತಡದಿಂದ ಅಂತರ ಕಾಯ್ದುಕೊಂಡಿದೆ. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬಗೆಹರಿಸುವ ಸಲುವಾಗಿ ಎಲ್ಲ ಸದಸ್ಯ ದೇಶಗಳು ಮಾತುಕತೆಯ ಮಾರ್ಗ ಅನುಸರಿಸಬೇಕು. ಆದರೆ ಇದನ್ನು ವಿಚಾರದಲ್ಲಿ ಪಾಲಿಸುತ್ತಿಲ್ಲ ಎಂದು ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಹೇಳಿದೆ. ವಿಶ್ವಸಂಸ್ಥೆಯಲ್ಲಿ ಅನೇಕ ದೇಶಗಳು ರಷ್ಯಾ ವಿರುದ್ಧ ನಿರ್ಣಯ ಕೈಗೊಂಡರೂ, ಅದನ್ನು ಅಂಗೀಕರಿಸಲು ಸಾಧ್ಯವಾಗಿಲ್ಲ. ಏಕೆಂದರೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ದೇಶವಾಗಿರುವ ರಷ್ಯಾ, ತನ್ನ ವೀಟೋ ಪರಮಾಧಿಕಾರವನ್ನು ಚಲಾಯಿಸಿದೆ. ಫೆಬ್ರವರಿ ತಿಂಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷಗಿರಿಯೂ ರಷ್ಯಾದ್ದೇ ಆಗಿದೆ. ರಷ್ಯಾ ವಿರುದ್ಧದ ನಿರ್ಣಯದ ಪರ 11 ಮತಗಳು ಚಲಾವಣೆಯಾಗಿವೆ. ವಿಶೇಷವೆಂದರೆ, ಅಮೆರಿಕದ ಪ್ರಬಲ ವಿರೋಧಿ ಹಾಗೂ ರಷ್ಯಾಕ್ಕೆ ಆತ್ಮೀಯವಾಗಿರುವ ಚೀನಾ ಕೂಡ ಮತ ಚಲಾವಣೆಯಿಂದ ದೂರ ಉಳಿದಿದೆ. ಭಾರತ, ಚೀನಾ ಮತ್ತು ಯುಎಇ ಮತ ಚಲಾಯಿಸುವುದರಿಂದ ಅಂತರ ಕಾಯ್ದುಕೊಂಡಿವೆ. "ಉಕ್ರೇನ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳಿಂದ ಭಾರತ ತೀವ್ರ ಬೇಸರಗೊಂಡಿದೆ. ಹಿಂಸಾಚಾರ ಮತ್ತು ಹಗೆತನಗಳನ್ನು ಕೂಡಲೇ ಅಂತ್ಯಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಬೇಕು ಎಂಬುದಾಗಿ ನಾವು ಮನವಿ ಮಾಡುತ್ತೇವೆ" ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರಾಯಭಾರಿ , ಮಂಡಳಿಯಲ್ಲಿ ಮತದ ಮೇಲಿನ ವಿವರಣೆ ವೇಳೆ ಹೇಳಿದರು. "ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬಗೆಹರಿಸಲು ಮಾತುಕತೆ ಮಾತ್ರವೇ ಉತ್ತರ. ಆದರೆ, ಈ ಗಳಿಗೆಯಲ್ಲಿ ಅದು ಕಷ್ಟಸಾಧ್ಯವಾಗಿ ಕಾಣಿಸುತ್ತಿದೆ. ರಾಜತಾಂತ್ರಿಕತೆಯ ಮಾರ್ಗಗಳನ್ನು ಕೈಚೆಲ್ಲಲಾಗಿದೆ ಎನ್ನುವುದು ಬೇಸರದ ಸಂಗತಿ. ನಾವು ಅದಕ್ಕೆ ಮರಳಲೇಬೇಕು. ಈ ಎಲ್ಲ ಕಾರಣಗಳಿಂದಾಗಿ ಭಾರತವು ಈ ನಿರ್ಣಯದಿಂದ ದೂರ ಉಳಿಯುವ ನಿರ್ಧಾರ ಮಾಡಿದೆ" ಎಂದು ತಿಳಿಸಿದರು. ಅಮೆರಿಕ ಹಾಗೂ ಅಲ್ಬೇನಿಯಾ ಸಹ ಭಾಗಿತ್ವದಲ್ಲಿ ಬರೆದ ಕರಡು ನಿರ್ಣಯಕ್ಕೆ ಆಸ್ಟ್ರೇಲಿಯಾ, ಎಸ್ಟೋನಿಯಾ, ಫಿನ್ಲೆಂಡ್, ಜಾರ್ಜಿಯಾ, ಜರ್ಮನಿ, ಇಟಲಿ, ಲೀಚೆನ್‌ಸ್ಟೀನ್, ಲಿಥುವೇನಿಯಾ, ಲುಕ್ಸೆಂಬರ್ಗ್, ನ್ಯೂಜಿಲ್ಯಾಂಡ್, ನಾರ್ವೆ, ಪೊಲ್ಯಾಂಡ್, ರೊಮೇನಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಇತರೆ ಕೆಲವು ದೇಶಗಳು ಸಹ ಪ್ರಾಯೋಜಕತ್ವ ನೀಡಿವೆ. 15 ಸದಸ್ಯ ದೇಶಗಳ ಶಕ್ತಿಶಾಲಿ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ದೇಶವಾದ ರಷ್ಯಾ, ನಿರೀಕ್ಷೆಯಂತೆಯೇ ತನ್ನ ವಿಟೋ ಅಧಿಕಾರ ಚಲಾಯಿಸಿದೆ. ಇದರಿಂದ ನಿರ್ಣಯ ವಿಫಲವಾಗಿದೆ. ಆದರೂ, ಉಕ್ರೇನ್ ಮೇಲೆ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸುವ ಅವರ ನಿರ್ಧಾರವನ್ನು ಖಂಡಿಸಿ ಹೇಳಿಕೆ ನೀಡಲು ಈ ಚರ್ಚೆ ಅವಕಾಶ ನೀಡಿದೆ. "ರಷ್ಯಾ, ನೀವು ಈ ನಿರ್ಣಯದ ವಿರುದ್ಧ ಪರಮಾಧಿಕಾರ ಚಲಾಯಿಸಬಹುದು, ಆದರೆ ನೀವು ನಮ್ಮ ಧ್ವನಿಗಳ ಮೇಲೆ ವೀಟೋ ಚಲಾಯಿಸಲು ಸಾಧ್ಯವಿಲ್ಲ. ಸತ್ಯದ ಮೇಲೆ ವೀಟೋ ಚಲಾಯಿಸಲು ಆಗದು. ನಮ್ಮ ತತ್ವಗಳ ಮೇಲೆ ವೀಟೋ ಚಲಾಯಿಸಲು ಸಾಧ್ಯವಿಲ್ಲ, ಉಕ್ರೇನ್ ಜನರ ಮೇಲೆ ವೀಟೋ ಚಲಾಯಿಸಲು ಆಗುವುದಿಲ್ಲ" ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್ ಹೇಳಿದರು. ರಷ್ಯಾವನ್ನು ಪ್ರತ್ಯೇಕಗೊಳಿಸಲಾಗಿದೆ. ಉಕ್ರೇನ್ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ರಷ್ಯಾಗೆ ಯಾವುದೇ ಬೆಂಬಲ ಇಲ್ಲ ಎಂದು ಬ್ರಿಟನ್ ರಾಯಭಾರಿ ಬಾರ್ಬರಾ ವುಡ್‌ವಾರ್ಡ್ ಹೇಳಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದೇ ರೀತಿಯ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆ ಇದೆ. ಆದರೆ, ಈ ನಿರ್ಣಯ ಪಾಲನೆಯ ನಿಬಂಧನೆಗೆ ರಷ್ಯಾ ಒಳಪಡುವುದಿಲ್ಲ.


from India & World News in Kannada | VK Polls https://ift.tt/AM0HSeN

ಮೇಕೆದಾಟು ಪಾದಯಾತ್ರೆ 2.0: ಯಶಸ್ವಿಗೊಳಿಸಲು ಕೈ ಪಾಳಯದಿಂದ ಭರ್ಜರಿ ಸಿದ್ಧತೆ

ಬೆಂಗಳೂರು: ಭಾನುವಾರದಿಂದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಇದನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಮೊದಲ ಹಂತದ ಪಾದಯಾತ್ರೆ ಸಕ್ಸಸ್‌ ಹಿನ್ನೆಲೆಯಲ್ಲಿ ಎರಡನೇ ಹಂತದ ಪಾದಯಾತ್ರೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ತಯಾರಿ ನಡೆಸಲಾಗುತ್ತಿದೆ. ಭಾನುವಾರ ರಾಮನಗರದಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲ ಕಾಂಗ್ರೆಸ್ ಶಾಸಕರು ಸಕ್ರಿಯವಾಗಿ ಭಾಗಿಯಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಪಾದಯಾತ್ರೆಯ ರೂಟ್‌ ಮ್ಯಾಪ್‌ ಹೀಗಿದೆ 2.0 ಪ್ರಾರಂಭ: 27.02.2022 *ಮೊದಲ ದಿನದ ಪಾದಯಾತ್ರೆ ರಾಮನಗರದಿಂದ ಬಿಡದಿವರೆಗೆ *ಎರಡನೇ ದಿನ: 28.02.2022 ಸೋಮವಾರ ಸ್ಥಳ : ಬಿಡದಿಯಿಂದ ಕೆಂಗೇರಿ (ಪೂರ್ಣಿಮ ಕನ್ವೆಂಷನ್ ಹಾಲ್) *ಮೂರನೇ ದಿನ: 01.03.2022 ಮಂಗಳವಾರ ಸ್ಥಳ:ಕೆಂಗೇರಿ( ಪೂರ್ಣಿಮ ಕನ್ವೆಂಷನ್ ಹಾಲ್ ನಿಂದ ಅದ್ವೈತ್ ಪೆಟ್ರೋಲ್ ಬಂಕ್ ವರಗೂ *ನಾಲ್ಕನೇ ದಿನ: 02.03.2022 ಬುಧವಾರ ಸ್ಥಳ :ಅದ್ವೈತ್ ಪೆಟ್ರೋಲ್ ಬಂಕ್ ನಿಂದ ಅರಮನೆ ಮೈದಾನದವರಗೂ *ಐದನೇ ದಿನ: 03.03.2022 ಗುರುವಾರ ಅರಮನೆ ಮೈದಾನ (ಗಾಯತ್ರಿ ಗ್ರ್ಯಾಂಡ್ ನಿಂದ) ನ್ಯಾಶನಲ್ ಕಾಲೇಜು ಆಟದ ಮೈದಾನ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಲಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಪಾದಯಾತ್ರೆಯ ಮೊದಲ ದಿನ ಅವರು ಭಾಗವಹಿಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಸಭೆ ನಡೆಸಿದ್ದ ಕಾಂಗ್ರೆಸ್ ನಾಯಕರು ರಣದೀಪ್ ಸುರ್ಜೆವಾಲಗೆ ಪಾದಯಾತ್ರೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಿದ್ದಾರೆ.


from India & World News in Kannada | VK Polls https://ift.tt/03BurpC

ಶ್ರೀಲಂಕಾ ವಿರುದ್ಧ 2ನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI ಇಂತಿದೆ..

ಧರ್ಮಶಾಲಾ: ಮೊದಲನೇ ಟಿ20 ಪಂದ್ಯದಲ್ಲಿ 62 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಬಗ್ಗು ಬಡಿದಿದ್ದ ನಾಯಕತ್ವದ ಭಾರತ ತಂಡ ಇಂದು(ಶನಿವಾರ) ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೆಷನ್‌ ಮೈದಾನದಲ್ಲಿ ಎರಡನೇ ಹಣಾಹಣಿಯಲ್ಲಿ ಕಾದಾಟ ನಡೆಸಲಿದೆ. ಲಖನೌದಲ್ಲಿ ಗುರುವಾರ ನಡೆದಿದ್ದ ಆರಂಭಿಕ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತ್ತು. ಬಳಿಕ 200 ರನ್‌ಗಳ ಬೃಹತ್‌ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ತಂಡ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 137 ರನ್‌ಗಳಿಗೆ ಸೀಮಿತವಾಗಿತ್ತು. ಇಂದಿನ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದರೆ, ಟಿ20 ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಭಾರತ ತಂಡ ತನ್ನ ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌ನೊಂದಿಗೆ ಕಣಕ್ಕೆ ಇಳಿಯಲಿದೆ. ಈ ಹಿನ್ನೆಲೆಯಲ್ಲಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಆರಂಭಿಕರು: ಮೊದಲನೇ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿಯೇ ಎರಡನೇ ಹಣಾಹಣಿಯಲ್ಲಿಯೂ ಓಪನಿಂಗ್‌ ಮಾಡಲಿದೆ. ಈ ಜೋಡಿ ಆರಂಭಿಕ ಹಣಾಹಣಿಯಲ್ಲಿ 111 ರನ್‌ ಜೊತೆಯಾಟವಾಡಿತ್ತು. ರೋಹಿತ್‌ ಶರ್ಮಾ 44 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರೆ, ಇಶಾನ್‌ ಕಿಶನ್‌ 56 ಎಸೆತಗಳಲ್ಲಿ 89 ರನ್‌ ಚೆಚ್ಚಿದ್ದರು. ಈ ಹಿನ್ನೆಲೆಯಲ್ಲಿ ಈ ಜೋಡಿ ಇನಿಂಗ್ಸ್ ಆರಂಭಿಸುವುದು ಪಕ್ಕಾ. ಮಧ್ಯಮ ಕ್ರಮಾಂಕ: ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೇಯಸ್‌ ಅಯ್ಯರ್‌ ಮತ್ತೊಮ್ಮೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ. ಮೊದಲನೇ ಹಣಾಹಣಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರು ಕೇವಲ 28 ಎಸೆತಗಳಲ್ಲಿ 200 ಸ್ಟ್ರೈಕ್‌ ರೇಟ್‌ನೊಂದಿಗೆ 57 ರನ್‌ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿಯೂ ಅವರು ಮೂರನೇ ಕ್ರಮಾಂಕದಲ್ಲಿ ಮುಂದುರಿಯಲಿದ್ದಾರೆ. ಇವರ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಐದನೇ ಕ್ರಮಾಂಕದಲ್ಲಿ ದೀಪಕ್ ಹೂಡ ಆಡಲಿದ್ದಾರೆ. ಆಲ್‌ರೌಂಡರ್‌ಗಳು: ಗುರುವಾರ ನಡೆದಿದ್ದ ಮೊದಲನೇ ಹಣಾಹಣಿಯಲ್ಲಿ ರವಿಂದ್ರ ಜಡೇಜಾ ಟೀಮ್‌ ಇಂಡಿಯಾಗೆ ಮರಳಿದ್ದಾರೆ. ಅದರಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಅವಕಾಶ ಪಡೆದಿದ್ದರು. ನಾಯಕ ರೋಹಿತ್‌ ಶರ್ಮಾ ಕೂಡ ಜಡೇಜಾ ಅವರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ ಹೇಳಿದ್ದರು. ಬೌಲಿಂಗ್‌ನಲ್ಲಿಯೂ 4 ಓವರ್‌ಗಳಿಗೆ 28 ರನ್‌ ನೀಡುವ ಮೂಲಕ ಒಂದು ವಿಕೆಟ್‌ ಕಬಳಿಸಿದ್ದರು. ಇನ್ನು ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವೆಂಕಟೇಶ್‌ ಅಯ್ಯರ್‌ಗೆ ಅವಕಾಶ ಸಿಕ್ಕಿರಲಿಲ್ಲ. ಅದರೆ ಮಧ್ಯಮ ವೇಗಿ ಮೂರು ಓವರ್‌ ಬೌಲ್‌ ಮಾಡಿದ್ದರು. 3 ಓವರ್‌ಗಳಿಗೆ 36 ರನ್‌ ನೀಡುವ ಮೂಲಕ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಇನ್ನು ಡೆತ್‌ ಬೌಲಿಂಗ್‌ ಸ್ಪೆಷಲಿಸ್ಟ್‌ ಆಗಿ ಹರ್ಷಲ್‌ ಪಟೇಲ್‌ ಕಾಣಿಸಿಕೊಳ್ಳಲಿದ್ದಾರೆ. ಬೌಲರ್‌ಗಳು: ಕಳೆದ ಎರಡು ಪಂದ್ಯಗಳಲ್ಲಿ ಭುವನೇಶ್ವರ್‌ ಕುಮಾರ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಗುರುವಾರ ನಡೆದಿದ್ದ ಪಂದ್ಯದಲ್ಲಿಯೂ ಭುವಿ ಉತ್ತಮವಾಗಿ ಬೌಲ್‌ ಮಾಡಿ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದರು. ಎರಡು ಓವರ್‌ ಬೌಲ್‌ ಮಾಡಿದ್ದ ಅವರು ಕೇವಲ 9 ರನ್ ನೀಡಿದ್ದರು. ಮತ್ತೊಂದೆಡೆ ಯುಜ್ವೇಂದ್ರ ಚಹಲ್‌ ಕೂಡ ಪರಿಣಾಮಕಾರಿಯಾಗಿದ್ದರು. 3 ಓವರ್‌ ಬೌಲ್‌ ಮಾಡಿದ್ದ ಚಹಲ್‌ 11 ರನ್‌ ನೀಡಿ ಒಂದು ವಿಕೆಟ್‌ ಕಿತ್ತಿದ್ದರು. ಇನ್ನು ಜಸ್‌ಪ್ರಿತ್‌ ಬುಮ್ರಾ 11ನೇ ಆಟಗಾರನಾಗಿ ಕಣಕ್ಕೆ ಇಳಿಯಲಿದ್ದಾರೆ. 2ನೇ ಟಿ20 ಪಂದ್ಯಕ್ಕೆ : ಇಶಾನ್ ಕಿಶನ್‌(ವಿ.ಕೀ), ರೋಹಿತ್‌ ಶರ್ಮಾ(ನಾಯಕ), ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ, ವೆಂಕಟೇಶ್‌ ಅಯ್ಯರ್‌, ರವೀಂದ್ರ ಜಡೇಜಾ, ಹರ್ಷಲ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಯುಜ್ವೇಂದ್ರ ಚಹಲ್‌, ಜಸ್‌ಪ್ರಿತ್‌ ಬುಮ್ರಾ ಪಂದ್ಯದ ವಿವರ ಎರಡನೇ ಟಿ20 ಪಂದ್ಯ ದಿನಾಂಕ: ಫೆ. 26, ಶನಿವಾರ, 2022 ಸಮಯ: ಸಂಜೆ 07:00 ಸ್ಥಳ: ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣ, ಧರ್ಮಶಾಲಾ ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/6ShwCo3

ಪ್ರೊ ಕಬಡ್ಡಿ: 1 ಅಂಕದಿಂದ ಪೈರೇಟ್ಸ್‌ ಸದ್ದಡಗಿಸಿದ ಡೆಲ್ಲಿ ಚಾಂಪಿಯನ್ಸ್‌!

ಬೆಂಗಳೂರು: ಗೆಲುವು ಯಾರ ಪಾಲಿಗಾದರೂ ಒಲಿಯಬಹುದಿದ್ದ ರೋಚಕ ಹಣಾಹಣಿಯಲ್ಲಿ ಅಂತಿಮ ಕ್ಷಣಗಳ ಒತ್ತಡ ಮೆಟ್ಟಿನಿಂತ ತಂಡ ಎಂಟನೇ ಆವೃತ್ತಿಯ ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ. ಇಲ್ಲಿನ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ ಆವರಣದಲ್ಲಿ ಟೂರ್ನಿ ಸಲುವಾಗಿ ನಿರ್ಮಿಸಲಾಗಿದ್ದ ಬಯೋ ಬಬಲ್‌ ಒಳಗೆ ಶುಕ್ರವಾರ ರಾತ್ರಿ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡ 37-36 ಅಂಕಗಳಿಂದ ತಂಡಕ್ಕೆ ಸೋಲುಣಿಸಿತು. ಈ ಅಮೋಘ ಜಯದೊಂದಿಗೆ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಚಾಂಪಿಯನ್ಸ್‌ ಪಟ್ಟ ಗೆದ್ದಿದೆ. 2019ರ ಆವೃತ್ತಿಯಲ್ಲೂ ಫೈನಲ್‌ ತಲುಪಿತ್ತಾದರೂ, ಬೆಂಗಾಲ್‌ ವಾರಿಯರ್ಸ್‌ ಎದುರು ಸೋತು ರನ್ನರ್ಸ್‌ಅಪ್‌ ಸ್ಥಾನ ಪಡೆದಿತ್ತು. ಈ ಬಾರಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ 2016-17ರವರೆಗೆ ಮೂರು ಬಾರಿ ಟ್ರೋಫಿ ಗೆದ್ದಿರುವ ಪಟನಾ ಪೈರೇಟ್ಸ್‌ ಇದೇ ಮೊದಲ ಬಾರಿ ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ದಿಲ್ಲಿ ಪರ ನಿರೀಕ್ಷೆಯಂತೆ ಭರ್ಜರಿ ದಾಳಿ ಸಂಘಟಿಸಿದ ಯುವ ರೇಡರ್‌ ನವೀನ್‌ ಕುಮಾರ್‌, ಒಟ್ಟಾರೆ 13 ಅಂಕಗಳನ್ನು ಹೆಕ್ಕಿಕೊಟ್ಟರು. ಅವರಿಗೆ ಉತ್ತಮ ಸಾಥ್‌ ಕೊಟ್ಟ ಆಲ್‌ರೌಂಡರ್‌ ವಿಜಯ್ 14 ಅಂಕಗಳನ್ನು ದೋಚಿಕೊಟ್ಟಿದ್ದು ದಿಲ್ಲಿ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿತು. ಉಳಿದಂತೆ ಸ್ಟಾರ್‌ ಡಿಫೆಂಡರ್‌ಗಳಾದ ಸಂದೀಪ್‌ ನರ್ವಾಲ್‌ ಮತ್ತು ಮಂಜೀತ್‌ ಚಿಲ್ಲರ್‌ ತಲಾ ಎರಡು ಅಂಕಗಳನ್ನು ಹೆಕ್ಕಿಕೊಟ್ಟರು. ಪಟನಾ ಪೈರೇಟ್ಸ್‌ ಪರ ರೇಡರ್‌ ಸಚಿನ್‌ 10 ಅಂಕಗಳನ್ನು ಕಲೆಹಾಕಿದರೂ ಸೋಲು ತಪ್ಪಲಿಲ್ಲ. ಅವರಿಗೆ ಆಲ್‌ರೌಂಡರ್‌ ಚಿಯನೇಹ್ (5 ಅಂಕ) ಉತ್ತಮ ಸಾಥ್ ಕೊಟ್ಟರು. ಡಿಫೆಂಡರ್‌ ಮೋನು 5 ಅಂಕಗಳನ್ನು ಕಲೆ ಹಾಕಿದರೂ ಪ್ರಯೋಜನವಾಗಲಿಲ್ಲ. ಪಂದ್ಯದ ಆರಂಭದಲ್ಲಿ 12 ನಿಮಿಷಗಳ ಒಳಗೆ ದಿಲ್ಲಿ ತಂಡವನ್ನು ಆಲ್‌ಔಟ್‌ ಮಾಡಿ ಅಲ್ಪ ಮುನ್ನಡೆ ಗಳಿಸಿದ್ದರೂ ಕೂಡ ಗೆಲುವು ತನ್ನದಾಗಿಸಿಕೊಳ್ಳುವಲ್ಲಿ ಪೈರೇಟ್ಸ್‌ ಪಡೆ ವಿಫಲವಾಯಿತು. ಪವನ್ ಕುಮಾರ್‌ ಸೆಹ್ರಾವತ್‌ ಶ್ರೇಷ್ಠ ರೇಡರ್‌ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿ ಆತಿಥೇಯ ಬೆಂಗಳೂರು ಬುಲ್ಸ್‌ ತಂಡವನ್ನು ಸೆಮಿಫೈನಲ್ಸ್‌ ವರೆಗೂ ಮುನ್ನಡೆಸಿದ್ದ ಕ್ಯಾಪ್ಟನ್‌ ಪವನ್‌ ಕುಮಾರ್‌ ಸೆಹ್ರಾವತ್‌, 8ನೇ ಆವೃತ್ತಿಯ ಪಿಕೆಲ್‌ ಟೂರ್ನಿಯ ಶ್ರೇಷ್ಠ ರೇಡರ್‌ ಆಗಿ ಹೊರಹೊಮ್ಮಿದ್ದಾರೆ. ಲೀಗ್ ಮತ್ತು ನಾಕ್‌ಔಟ್‌ ಪಂದ್ಯಗಳಿಂದ ಪವನ್‌ ಒಟ್ಟು 304 ಅಂಕಗಳನ್ನು ಸಂಪಾದಿಸಿದ್ದಾರೆ. ಪವನ್‌ ಬರೋಬ್ಬರಿ 18 ಬಾರಿ ಸೂಪರ್‌ 10 ದಾಳಿ ಸಂಘಟಿಸಿರುವುದು ವಿಶೇಷ. ಬೆಂಗಳೂರು ತಂಡ ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಎದುರು 35-40 ಅಂಕಗಳ ಅಂತರದಲ್ಲಿ ಸೋತು ನಿರಾಶೆ ಅನುಭವಿಸಿತ್ತು. ಡಿಫೆನ್ಸ್‌ನಲ್ಲಿ ಪಟನಾ ಪೈರೇಟ್ಸ್‌ ಪರ ಮೊಹಮ್ಮದ್ರೇಝಾ ಚಿಯನೇಹ್ ಒಟ್ಟು 86 ಟ್ಯಾಕಲ್‌ ಅಂಕಗಳನ್ನು ಗಳಿಸುವ ಮೂಲಕ ಶ್ರೇಷ್ಠ ಡಿಫೆಂಡರ್‌ ಎನಿಸಿಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2lOW1uM

ಕರ್ನಾಟಕಕ್ಕಿಂತ ಮೂರು ಪಟ್ಟು ಕಡಿಮೆ ಕರಾವಳಿ ತೀರ ಹೊಂದಿದ್ದರೂ ಗೋವಾಗೆ ಅಧಿಕ ಲಾಭ!

ಪ್ರಮೋದ ಹರಿಕಾಂತ ಕಾರವಾರ: ರಾಜ್ಯಕ್ಕಿಂತ ಮೂರು ಪಟ್ಟು ದೊಡ್ಡ ಕರಾವಳಿ ತೀರ ಹೊಂದಿರುವ ಕರ್ನಾಟಕ ರಾಜ್ಯ ಕಡಲ ಉತ್ಪನ್ನ ಆದಾಯದಲ್ಲಿ ಗೋವಾಕ್ಕಿಂತ ಹಿಂದೆ ಉಳಿದಿದ್ದು, ಪ್ರತಿ ವರ್ಷ ನೂರಾರು ಕೋಟಿ ರೂ. ಆದಾಯ ನಷ್ಟ ಅನುಭವಿಸುತ್ತಿದೆ. ಕರ್ನಾಟಕ ರಾಜ್ಯವು 320 ಕಿ.ಮೀ. ಕರಾವಳಿ ತೀರ ಹೊಂದಿದೆ. ಅದರಲ್ಲಿ162 ಕಿ.ಮೀ. ಕರಾವಳಿ ತೀರ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಇದೆ. ನೆರೆಯ ಗೋವಾ ರಾಜ್ಯ ಕೇವಲ 104 ಕಿ.ಮೀ. ಕರಾವಳಿ ತೀರ ಹೊಂದಿದೆ. ಮೀನು ಉತ್ಪಾದನೆಯಲ್ಲಿ ಗೋವಾಕ್ಕಿಂತ ಕರ್ನಾಟಕವೇ ದೊಡ್ಡ ಪಾಲು ಹೊಂದಿದೆ. ಆದರೆ, ಗೋವಾ ರಾಜ್ಯ ಕಡಿಮೆ ಮೀನು ಉತ್ಪಾದನೆ ಮಾಡಿದರೂ ಕರ್ನಾಟಕಕ್ಕಿಂತ ಎರಡು ಪಟ್ಟು ಹೆಚ್ಚು ಲಾಭ ಗಳಿಸುತ್ತಿದೆ. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ತಕ್ಕ ಮಟ್ಟಿನ ಆದಾಯ ಹೊಂದಿದೆ. ಆದರೆ, ಉತ್ತರ ಕನ್ನಡ ಜಿಲ್ಲೆ ಮಾತ್ರ ದೊಡ್ಡ ಕರಾವಳಿ ತೀರ ಇದ್ದರೂ ಸೌಕರ್ಯ ಕೊರತೆಯಿಂದ ವರ್ಷಕ್ಕೆ ಸುಮಾರು 500 ಕೋಟಿ ರೂ. ಅಷ್ಟು ಆದಾಯ ನಷ್ಟ ಎದುರಿಸುತ್ತಿದೆ. ಇತ್ತೀಚೆಗೆ ಬಂದರುಗಳನ್ನು ವಾಣಿಜ್ಯೀಕರಣ ಮಾಡುವ ಯೋಜನೆಗಳು ನಡೆಯುತ್ತಿದ್ದು, ಮೀನುಗಾರಿಕೆ ಮೇಲೆ ಮತ್ತಷ್ಟು ಆತಂಕದ ಛಾಯೆ ಆವರಿಸಿದೆ. ವಾರ್ಷಿಕ 1,700 ಕೋಟಿ ರೂಗೋವಾ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವಾರ್ಷಿಕ ಮೀನು ಉತ್ಪಾದನೆ ಮೌಲ್ಯ ಒಂದು ಸಾವಿರ ಕೋಟಿಯಿಂದ ಒಂದೂವರೆ ಸಾವಿರ ಕೋಟಿ ರೂ. ಇದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಮೀನು ಮೌಲ್ಯ ಕೇವಲ 900 ಕೋಟಿ ರೂ! ಉತ್ತರ ಕನ್ನಡ ಜಿಲ್ಲೆಗಿಂತ ಕಡಿಮೆ ಮೀನು ಉತ್ಪಾದನೆ ಮಾಡುವ ಗೋವಾ ರಾಜ್ಯದ ಮೀನು ಮೌಲ್ಯ ವರ್ಷಕ್ಕೆ 1,700 ಕೋಟಿ ರೂ.ಗೂ ಅಧಿಕ. ರಾಜ್ಯ ಸರಕಾರ ರಾಜ್ಯದ ಕರಾವಳಿ ತೀರದ ಕಡಲ ಮೀನುಗಾರಿಕೆ ಸಂಸ್ಕೃತಿಯನ್ನು ಸಮಗ್ರವಾಗಿ ಬಳಸಿಕೊಳ್ಳದೆ ಇರುವುದೇ ಮೀನು ಮೌಲ್ಯ ಕಳೆದುಕೊಳ್ಳಲು ಕಾರಣ ಎನ್ನುವ ಅಪವಾದ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಕಡಲ ಮೀನುಗಾರಿಕೆಗೆ ಸಮಾನ ಉತ್ತೇಜನ ಕೊಟ್ಟರೆ ಮತ್ಸ್ಯೋದ್ಯಮದಿಂದಲೇ ಸಾವಿರಾರು ಕೋಟಿ ರೂ. ಗಳಿಕೆ ಮಾಡುವ ಅವಕಾಶ ಇದೆ. ಗೋವಾಗೇಕೆ ಹೆಚ್ಚು ಲಾಭ?ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಮತ್ತು ಗೋವಾ ರಾಜ್ಯದಲ್ಲಿ ಮೀನು ಉತ್ಪನ್ನ ರಫ್ತು ವ್ಯವಸ್ಥೆ ಇದೆ. ಜತೆಗೆ ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ಕೂಡ ಇರುವುದರಿಂದ ಮೀನುಗಳಿಗೆ ಹೆಚ್ಚಿನ ಬೆಲೆ ದೊರೆಯುತ್ತದೆ. ಗೋವಾ ರಾಜ್ಯ ಪ್ರತಿ ವರ್ಷ 60-80 ಕೋಟಿ ರೂ. ಮೌಲ್ಯದ ಮತ್ಸ್ಯೋತ್ಪನ್ನವನ್ನು ರಫ್ತು ಮಾಡುತ್ತದೆ. ಯಾಂತ್ರಿಕ ಮೀನುಗಾರಿಕೆಯನ್ನು ಕಂಪನಿ ರೀತಿಯಲ್ಲಿ ನಡೆಸುವ ವ್ಯವಸ್ಥೆ ಇದೆ. ಉತ್ತರಕನ್ನಡ ಜಿಲ್ಲೆಯವರೂ ಮೀನುಗಾರಿಕೆ ಕಾರ್ಮಿಕರಾಗಿ ದುಡಿಯಲು ಗೋವಾಕ್ಕೆ ಹೋಗುತ್ತಾರೆ. ಇದೆಲ್ಲದರ ಬಗ್ಗೆ ವಿಶೇಷ ಅಧ್ಯಯನ ನಡೆಸಿ ರಾಜ್ಯದ ಮೀನುಗಾರಿಕೆ ಸೌಲಭ್ಯದಲ್ಲಿಯೂ ಸುಧಾರಣೆ ಮಾಡಿದರೆ ಹೆಚ್ಚು ಲಾಭ ಗಳಿಸುವ ಅವಕಾಶ ಇದೆ ಎನ್ನುತ್ತಾರೆ ಅಧಿಕಾರಿಗಳು. ಕಡಲ ಮೀನುಗಾರಿಕೆ ಬೆಲೆ ವ್ಯತ್ಯಾಸ (ವಾರ್ಷಿಕ)
ಜಿಲ್ಲೆ/ರಾಜ್ಯ ಮೀನು ಉತ್ಪಾದನೆ ಮೌಲ್ಯ (₹)
ಉತ್ತರ ಕನ್ನಡ 1.20 ಲಕ್ಷ ಟನ್‌ 900 ಕೋಟಿ
ಉಡುಪಿ 1.44 ಲಕ್ಷ ಟನ್‌ 1,498 ಕೋಟಿ
ದಕ್ಷಿಣ ಕನ್ನಡ 1.48 ಲಕ್ಷ ಟನ್‌ 1,595 ಕೋಟಿ
ಗೋವಾ 1 ಲಕ್ಷ ಟನ್‌ 1,700 ಕೋಟಿ
(ಗೋವಾ 40 ಸಾವಿರ ಟನ್‌ ಮತ್ಸ್ಯೋತ್ಪನ್ನ ರಫ್ತು ಮಾಡುತ್ತದೆ) ಕರಾವಳಿ ತೀರ
  • ಗೋವಾ ರಾಜ್ಯ- 104 ಕಿ.ಮೀ.
  • ಉತ್ತರ ಕನ್ನಡ ಜಿಲ್ಲೆ- 162 ಕಿ.ಮೀ.
  • ಉಡುಪಿ- 98 ಕಿ.ಮೀ.
  • ದಕ್ಷಿಣಕನ್ನಡ- 62 ಕಿ.ಮೀ.


from India & World News in Kannada | VK Polls https://ift.tt/drv3kMS

ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ; ಬೆಂಗಳೂರಿನಲ್ಲಿ ನಾಲ್ವರು ದರೋಡೆಕೋರರ ಬಂಧನ

ಬೆಂಗಳೂರು: ಒಬ್ಬಂಟಿಗರನ್ನೇ ಗುರಿಯಾಗಿಸಿಕೊಂಡು ಮಾರಕಾಸ್ತ್ರ ತೋರಿಸಿ ದರೋಡೆ ಮಾಡಲು ಸಜ್ಜಾಗಿದ್ದ ಇಬ್ಬರು ರೌಡಿಶೀಟರ್‌ಗಳು ಹಾಗೂ ಆತನ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಪೊಲೀಸ್‌ ಠಾಣೆಯ ರೌಡಿಶೀಟರ್‌ ವಾಸಿಂ, ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯ ರೌಡಿಶೀಟರ್‌ ನಜೀಮ್‌ ಹಾಗೂ ಆತನ ಸಹಚರ ಮೊಹಿಸಿನ್‌ ಬಂಧಿತರು. ಆರೋಪಿಗಳಿಂದ ಡ್ಯಾಗರ್‌, ಚಾಕು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬುಧವಾರ ಸಂಜೆ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾಂಪುರ ಮುಖ್ಯ ರಸ್ತೆಯ ಕನಕನಗರದ ಕಡೆ ಹೋಗುವ ರಸ್ತೆಯ ರೈಲ್ವೆ ಟ್ರ್ಯಾಕ್‌ ಹತ್ತಿರ ಮಾರಕಾಸ್ತ್ರಗಳನ್ನು ಹಿಡಿದು ಕುಳಿತಿದ್ದರು. ಈ ರಸ್ತೆಯಲ್ಲಿಒಬ್ಬಂಟಿಗರಾಗಿ ಬರುವವರನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿ, ಹಣ, ಚಿನ್ನಾಭರಣ ದರೋಡೆ ಮಾಡಲು ಸಜ್ಜಾಗಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಸಂಘಟಿತ ಅಪರಾಧ ದಳ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ರಮಣ ಗುಪ್ತ ತಿಳಿಸಿದ್ದಾರೆ. ರೌಡಿಶೀಟರ್‌ ವಾಸಿಂ ವಿರುದ್ಧ 2014ರಲ್ಲಿ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮತ್ತೊಬ್ಬ ರೌಡಿಶೀಟರ್‌ ನಜೀಮ್‌ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಮೊಹಿಸಿನ್‌ ಈ ಇಬ್ಬರು ರೌಡಿಶೀಟರ್‌ಗಳ ಸಹಚರನಾಗಿದ್ದಾನೆ ಎಂದು ತಿಳಿದುಬಂದಿದೆ. ಕಾರಿನ ಗಾಜು ಒಡೆದು ಕಳವು ಮಾಡುತ್ತಿದ್ದವನ ಬಂಧನಬೆಂಗಳೂರು: ಮನೆ ಮುಂದೆ ಹಾಗೂ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಮತ್ತು ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಜಿಲ್ಲೆಯ ಶಾಂತಿಪುರದ ಸತೀಶ್‌ ಅಲಿಯಾಸ್‌ ಸತ್ಯ(24) ಬಂಧಿತ. ಆರೋಪಿಯಿಂದ 8.24 ಲಕ್ಷ ರೂ. ಮೌಲ್ಯದ 206 ಗ್ರಾಂ ಚಿನ್ನಾಭರಣ, 47,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 50 ಸಾವಿರ ರೂ. ನಗದು ಹಾಗೂ ವಾಚ್‌ ಕಳ್ಳತನ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ ಅನ್ನಪೂರ್ಣೇಶ್ವರಿನಗರ, ಜ್ಞಾನಭಾರತಿ ನಗರ ಮತ್ತು ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳವು ಸೇರಿದಂತೆ ಒಟ್ಟು 4 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/8tmRwnX

ಕಾಂಗ್ರೆಸ್‌ ಕುಡಿಗಳು ಅಧಿಕಾರದಲ್ಲಿದ್ದಿದ್ದರೆ ಲಸಿಕೆಯನ್ನು ಮಾರಿ ಲಾಭ ಮಾಡುತ್ತಿದ್ದರು; ಮೋದಿ ವ್ಯಂಗ್ಯ

ಅಮೇಥಿ: ಪ್ರಧಾನಿ ಅವರು ತಮ್ಮ ಶತಾಯಷಿ ತಾಯಿಯ ಆದರ್ಶದ ನಡೆಯ ಬಗ್ಗೆ ಬಹಿರಂಗ ಬಣ್ಣನೆ ಮಾಡುವ ಮೂಲಕ ಕಾಂಗ್ರೆಸ್‌ ಮತ್ತು ಎಸ್‌ಪಿಯ ವಂಶ ಪಾರಂಪರ್ಯದ ವಿರುದ್ಧ ಚಾಟಿ ಬೀಸಿದ್ದಾರೆ. ಅಮೇಥಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ‘ನಾನು ಮತ್ತು ನನ್ನ ತಾಯಿ ಇಬ್ಬರೂ ಲಸಿಕೆ ಪಡೆದಿದ್ದೇವೆ. ನನ್ನ ತಾಯಿಗೆ 100 ವರ್ಷ ವಯಸ್ಸು. ಆದರೂ ಅವರು ತಮ್ಮ ವಯಸ್ಸಿನ ದುರ್ಲಾಭ ಪಡೆದು ಸರತಿ ಸಾಲನ್ನು ಉಲ್ಲಂಘಿಸಲಿಲ್ಲ. ಎಲ್ಲರ ಜತೆಗೆ ಸಾಲಿನಲ್ಲಿ ಕಾಯ್ದು ನಿಂತೇ ಲಸಿಕೆ ಪಡೆದರು. ಅದು ಅವರು ನೆಚ್ಚಿ ನಡೆದು ಬಂದ ಆದರ್ಶ’ ಎಂದು ಬಣ್ಣಿಸಿದರು. ‘ಅಮ್ಮನಿಗೆ 100 ವರ್ಷ ತುಂಬಿದ್ದರೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲ. ಬಿಪಿ ಇಲ್ಲ, ಮಧುಮೇಹ ಇಲ್ಲ. ಆದ್ದರಿಂದ ಅವರು ಬೂಸ್ಟರ್‌ ಡೋಸ್‌ ಪಡೆಯಲೇ ಇಲ್ಲ. ಆದರೆ ‘ಪರಿವಾರ್‌ ವಾದಿ’ಗಳ (ಕಾಂಗ್ರೆಸ್‌ ಮತ್ತು ಎಸ್ಪಿಯ ಕುಟುಂಬ ರಾಜಕಾರಣ) ದುರಾಸೆ ನೋಡಿ ಹೇಗಿದೆ? ಅವರು ಸರತಿ ಸಾಲನ್ನು ಕಣ್ಣೆತ್ತಿಯೂ ನೋಡಲಿಲ್ಲ. ಎಲ್ಲರಿಗಿಂತ ಮೊದಲು ತಮಗೆ ಲಸಿಕೆ ಬೇಕೆಂದು ಹಠ ಹಿಡಿದು ಪಡೆದರು’ ಎಂದರು. ಎಸ್ಪಿಯ ಅಖಿಲೇಶ್‌ ಯಾದವ್‌ ಮತ್ತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಚಾರ ಮುನ್ನಡೆಸುತ್ತಿರುವ ಪ್ರಿಯಾಂಕಾ ವಾದ್ರಾ ಅವರನ್ನು ‘ಘೋರ ಪರಿವಾರ ವಾದಿಗಳು’ ಎಂದು ಖಂಡಿಸಿದರು. ‘ದೇಶದ ಸರ್ವರಿಗೂ ಉಚಿತ ಲಸಿಕೆ ನೀಡುವ ಮೂಲಕ ನಮ್ಮ ಸರಕಾರ ಕರ್ತವ್ಯ ನಿಷ್ಠೆ ಮೆರೆದಿದೆ. ಒಂದು ವೇಳೆ, ಈ ಬಿಕ್ಕಟ್ಟಿನ ಸಮಯ ವಂಶ ಪಾರಂಪರ್ಯದ ಕುಡಿಗಳು ಅಧಿಕಾರದಲ್ಲಿ ಇದ್ದಿದ್ದರೆ ಲಸಿಕೆಗಳನ್ನು ಮಾರಾಟ ಮಾಡಿ ಲಾಭ ಮಾಡುತ್ತಿದ್ದರು’ ಎಂದೂ ಮೋದಿ ಹೀಯಾಳಿಸಿದರು. ಫೆಬ್ರವರಿ 27ರಂದು 60 ಸ್ಥಾನಗಳಿಗೆ 5ನೇ ಹಂತದ ಮತದಾನ ನಡೆಯಲಿದ್ದು, ಫಲಿತಾಂಶ ಮಾರ್ಚ್ 10ರಂದು ಪ್ರಕಟಗೊಳ್ಳಲಿದೆ.


from India & World News in Kannada | VK Polls https://ift.tt/dkBo7w0

ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಿ ರಷ್ಯಾಗೆ ಕೆಣಕಿದ್ದೇ ಅಮೆರಿಕ..? ಈಗ ಆರ್ಥಿಕ ದಿಗ್ಬಂಧನದ ಪೆಟ್ಟು..?

ರಷ್ಯಾ: ಬಹಳ ಸಂಕೀರ್ಣ ಇತಿಹಾಸ ಹೊಂದಿರುವ - ಉಕ್ರೇನ್‌ ಬಿಕ್ಕಟ್ಟು ನಡುವೆ ಸರಕಾರವು ಅನಗತ್ಯವಾಗಿ ಮೂಗು ತೂರಿಸಿತು..! ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಮೂಲಕ ರಷ್ಯಾವನ್ನು ಕೆಣಕಿತು. ಪರಿಣಾಮವಾಗಿ ಪುಟಿನ್‌ ನೇತೃತ್ವದಲ್ಲಿ ರಷ್ಯಾ ಸೇನೆಯು ಉಕ್ರೇನ್‌ ಮೇಲೆ ದಾಳಿ ನಡೆಸಬೇಕಾಯಿತು ಎಂದು ಚೀನಾ ಸಮರ್ಥನೆ ನೀಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಛುನ್‌ಯಿಂಗ್‌ ಅವರು, 'ಡೊನ್ಬಾಸ್‌ ಪ್ರಾಂತ್ಯ ಸ್ವಾಯತ್ತ ಎಂದು ಘೋಷಿಸಿ ಪುಟಿನ್‌ ಅವರು ಮಾನ್ಯತೆ ನೀಡಿದ್ದು ಮತ್ತು ಗುರುವಾರದಂದು ಉಕ್ರೇನ್‌ ಮೇಲೆ ಶೆಲ್‌ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದ್ದು ಮಿಲಿಟರಿ ಕಾರ್ಯಾಚರಣೆ. ಇದನ್ನು 'ಆಕ್ರಮಣ ಅಥವಾ ಅತಿಕ್ರಮಣ' ಎಂದು ಸಂಬೋಧಿಸಬೇಡಿ. ಇದು ಆಕ್ರಮಣ ಆಗಿದ್ದಲ್ಲಿ ಅಫಘಾನಿಸ್ತಾನ ಹಾಗೂ ಇರಾಕ್‌ನಲ್ಲಿ ಅಮೆರಿಕದ ಸಶಸ್ತ್ರ ಪಡೆಗಳು ನಡೆಸಿದ್ದು ಕೂಡ ಆಕ್ರಮಣ ಎಂದೇ ಕರೆಯಬೇಕಾಗುತ್ತದೆ. ಒಬಾಮಾ, ಟ್ರಂಪ್‌ ಹಾಗೂ ಬೈಡನ್‌ ಅವರ ನೇತೃತ್ವದಲ್ಲಿ ಅಮೆರಿಕದ ಸೇನಾ ಪಡೆಗಳು ಆಫ್ಘನ್‌ನಲ್ಲಿ ನಡೆಸಿದ್ದು ಕಾರ್ಯಾಚರಣೆ ಎಂದು ಕರೆಯಲಾಗಿತ್ತು. ಪುಟಿನ್‌ ಅವರ ನಡೆಗೆ ಮಾತ್ರ ಮಸಿ ಬಳಿಯಲಾಗುತ್ತಿದೆ' ಎಂದು ರಷ್ಯಾ ಪರವಾಗಿ ಚೀನಾ ಸಮರ್ಥನೆ ನೀಡಿದರು. ರಷ್ಯಾಗೆ ಆರ್ಥಿಕ ..? ರಷ್ಯಾದಿಂದ ಅಪ್ರಚೋದಿತ ಆಕ್ರಮಣದ ಪರಿಣಾಮ ಬೃಹತ್‌ ಹಾನಿಗೆ ಒಳಗಾಗಿರುವ ಉಕ್ರೇನ್‌ ಮರು ನಿರ್ಮಾಣಕ್ಕೆ ಬೃಹತ್‌ ಪರಿಹಾರ ಪ್ಯಾಕೇಜ್‌ ಘೋಷಣೆ ಜತೆಗೆ ಪುಟಿನ್‌ ದುರ್ನಡತೆಗೆ ‘ನಿರ್ಬಂಧಗಳ’ ಬಾರುಕೋಲಿನಿಂದ ಪೆಟ್ಟು ಕೊಡಲು ಐರೋಪ್ಯ ಒಕ್ಕೂಟ (ಇಯು) ನಿರ್ಣಯಿಸಿದೆ. ಅಮೆರಿಕ, ನ್ಯಾಟೊ, ಇಯು ಸೇರಿಕೊಂಡು ಯುರೋಪ್‌ನಿಂದ ರಷ್ಯಾದ ಎಲ್ಲ ವ್ಯವಹಾರಗಳನ್ನು ಹೊರಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಯು ಅಧ್ಯಕ್ಷೆ ಉರ್ಸುಲಾ ಲಿಯಿನ್‌, ‘ಪ್ರಾಥಮಿಕವಾಗಿ ಪುಟಿನ್‌ ಸರಕಾರದ ರಾಜಕೀಯ ಮುಖಂಡರು, ಸಚಿವರುಗಳು ಅಮೆರಿಕ ಮತ್ತು ಯುರೋಪ್‌ ಭೇಟಿ ಮೇಲೆ ನಿರ್ಬಂಧ ಹೇರುತ್ತಿದ್ದೇವೆ. ಜತೆಗೆ ಕೈಗಾರಿಕೆ, ಆಮದು - ರಫ್ತು ಉತ್ಪನ್ನಗಳ ಜಾಲದಿಂದ ರಷ್ಯಾವನ್ನು ಹೊರಗಿಡುವುದು. ಬ್ಯಾಂಕ್‌ ಸೇರಿದಂತೆ ಬಹುತೇಕ ಎಲ್ಲ ರೀತಿಯ ಹಣದ ವಹಿವಾಟುಗಳನ್ನು ರಷ್ಯಾ ಜತೆಗೆ ಕಡಿದುಕೊಳ್ಳಲು ಹಂತ ಹಂತವಾಗಿ ಮುಂದಾಗುತ್ತೇವೆ. ಜಾಗತಿಕ ಇಂಟರ್‌ ಬ್ಯಾಂಕ್‌ ಪಾವತಿ ವ್ಯವಸ್ಥೆಯಿಂದ (ಸ್ವಿಫ್ಟ್‌) ರಷ್ಯಾವನ್ನು ಹೊರಗಿಡುವ ಮೂಲಕ ರಷ್ಯಾದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಡಲಿದ್ದೇವೆ’ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಬ್ರಿಟನ್‌ ಸರಕಾರವು ರಷ್ಯಾದ ಐದು ಬ್ಯಾಂಕ್‌ಗಳಲ್ಲಿ ತನ್ನ ಪ್ರಜೆಗಳು ವ್ಯವಹಾರ ನಡೆಸದಂತೆ ಆದೇಶಿಸಿದೆ. ರಣರಂಗದಲ್ಲಿಎದುರಾಗಿರುವ ನಾಯಕರು..! ನಟ, ಟಿವಿ ನಿರೂಪಕ, ಹಾಸ್ಯ ಕಲಾವಿದರಾಗಿದ್ದ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರು ಉಕ್ರೇನ್‌ ಅಧ್ಯಕ್ಷರಾಗಿದ್ದು ಅಮೋಘ ಇತಿಹಾಸ. ಕ್ರಿವಿ ರಿಹ್‌ನಲ್ಲಿ 1978ರ ಜನವರಿ 25ರಂದು ಜನಿಸಿದ ಜೆಲೆನ್‌ಸ್ಕಿ, ಕಾನೂನು ಪದವಿ ಪಡೆದರೂ ಅವರ ಗಮನ ನಟನೆ, ಟಿವಿ ನಿರೂಪಣೆಯತ್ತ ಸಾಗಿತು. ಇದೇ ಅವರನ್ನು ಮುಂದೊಂದು ದಿನ ಉಕ್ರೇನ್‌ ಅಧ್ಯಕ್ಷ ಗಾದಿಗೆ ಏರಿಸಿತು. ಕ್ವಾರ್ಟಲ್‌ 95 ಮನರಂಜನಾ ಸಂಸ್ಥೆಯಲ್ಲಿ 1997 - 2003ರವರೆಗೆ ಕಾರ್ಯನಿರ್ವಹಿಸಿದ ಅವರು ಇದೇ ಸಂಸ್ಥೆಯ ಎಕ್ಸಿಕ್ಯೂಟಿವ್‌ ಪ್ರೊಡ್ಯುಸರ್‌ ಆಗಿ 2003ರಲ್ಲಿನೇಮಕವಾದರು. 2011ರಲ್ಲಿ ‘ಇಂಟರ್‌ ಟಿವಿ ಸ್ಟೇಷನ್‌’ ಸೇರಿದರು. ಮತ್ತೆ 2013ರಲ್ಲಿ ಕ್ವಾರ್ಟಲ್‌ 95 ಸೇರಿದ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವವರೆಗೆ ಇದೇ ಸಂಸ್ಥೆಯಲ್ಲಿ ಇದ್ದರು. ನಟನೆ, ನಿರೂಪಣೆ ಹಾಗೂ ನವಿರಾದ ಹಾಸ್ಯದಿಂದ ಮನೆ ಮಾತಾಗಿದ್ದ ಜೆಲೆನ್‌ಸ್ಕಿ, ಭ್ರಷ್ಟಾಚಾರದ ವಿರುದ್ಧ ಅವರು ನಡೆಸಿಕೊಟ್ಟ ಶೋಗಳು ಜನರ ಮನಸ್ಸು ಸೆಳೆಯುವಲ್ಲಿ ನಿರ್ಣಾಯಕ ಎನಿಸಿದವು. ಅದರಲ್ಲೂ, ‘ಸರ್ವೆಂಟ್‌ ಆಫ್‌ ದಿ ಪೀಪಲ್‌’ ಎಂಬ ಶೋ ನಡೆಸುತ್ತಿದ್ದ ಅವರು ತಾವೇ ಶಾಲಾ ಶಿಕ್ಷಕನಾಗಿ ಭ್ರಷ್ಟಾಚಾರದ ವಿರುದ್ಧ ಮನೋಜ್ಞ ನಟನೆ ಮೂಲಕ ಜನರ ಮನ ಸೆಳೆದಿದ್ದರು. ಕೊನೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಉಕ್ರೇನ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ, ಅಧ್ಯಕ್ಷರಾಗಿ ಮೂರೇ ವರ್ಷದಲ್ಲಿ ರಷ್ಯಾ ದಾಳಿ ಮಾಡಿದ್ದು, ಇದನ್ನು ಜೆಲೆನ್‌ಸ್ಕಿ ಹೇಗೆ ನಿಭಾಯಿಸುತ್ತಾರೆ ಎಂಬುದೇ ಮುಂದಿರುವ ಪ್ರಶ್ನೆ.


from India & World News in Kannada | VK Polls https://ift.tt/szgKUDh

ಉಕ್ರೇನ್‌ನಲ್ಲಿ ಹಿಂಸಾಚಾರ ನಿಲ್ಲಿಸಿ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಆಗ್ರಹ..!

: ವಿರುದ್ಧ ಸಮರ ನಡೆಸುತ್ತಿರುವ ಅಧ್ಯಕ್ಷ ಅವರ ಜೊತೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಸಂಧಾನ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಅವರು ಪುಟಿನ್‌ಗೆ ಸಲಹೆ ನೀಡಿದ್ದಾರೆ. ರಷ್ಯಾ ದೇಶವು ಉಕ್ರೇನ್ ಜೊತೆಗೆ ಮಾತ್ರವಲ್ಲ ನ್ಯಾಟೋ ಒಕ್ಕೂಟದ ಜೊತೆಗೂ ಮಾತುಕತೆ ನಡೆಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ಧಾರೆ. ಪ್ರಾಮಾಣಿಕವಾಗಿ ಹಾಗೂ ಸ್ಪಷ್ಟವಾಗಿ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಕೂಡಲೇ ಉಕ್ರೇನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವಂತೆಯೂ ಪ್ರಧಾನಿ ಮೋದಿ ಪುಟಿನ್ ಅವರಿಗೆ ಮನವಿ ಮಾಡಿದ್ಧಾರೆ. ರಾಜತಾಂತ್ರಿಕ ಮಾತುಕತೆ ಹಾಗೂ ಸಂಧಾನದ ಮಹತ್ವವನ್ನು ಪ್ರಧಾನಿ ಮೋದಿ ಅವರು ದೂರವಾಣಿ ಸಂಭಾಷಣೆ ವೇಳೆ ಪುಟಿನ್ ಅವರಿಗೆ ಪ್ರತಿಪಾದಿಸಿದರು ಎಂದು ತಿಳಿದುಬಂದಿದೆ. ಜೊತೆಯಲ್ಲೇ ಉಕ್ರೇನ್‌ನಲ್ಲಿ ಇರುವ ಭಾರತೀಯರ ಸುರಕ್ಷತೆ ಬಗ್ಗೆಯೂ ದೂರವಾಣಿ ಮಾತುಕತೆ ವೇಳೆ ಪ್ರಧಾನಿ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗಡಿಯಲ್ಲಿನ ಸ್ಥಿತಿಗತಿ ಬಗ್ಗೆ ಹಾಗೂ ಯುದ್ಧದ ಸನ್ನಿವೇಶ ಸೃಷ್ಟಿಯಾದ ಕುರಿತು ಪ್ರಧಾನಿ ಮೋದಿ ಅವರಿಗೆ ವಿವರಿಸಿದರು ಎಂದು ತಿಳಿದುಬಂದಿದೆ. ಆಗ ಪ್ರಧಾನಿ ಮೋದಿ ಅವರು ಉಕ್ರೇನ್ ಹಾಗೂ ನ್ಯಾಟೋ ಜೊತೆಗಿನ ಸಂಘರ್ಷವು ಕೇವಲ ರಾಜತಾಂತ್ರಿಕ ಮಾತುಕತೆ ಮೂಲಕವೇ ಬಗೆಹರಿಯಬೇಕು, ಅದೇ ಸೂಕ್ತ ಮಾರ್ಗ ಎಂದು ಪ್ರತಿಪಾದಿಸಿದರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ ಈ ಕೂಡಲೇ ಹಿಂಸಾಚಾರ ನಿಲ್ಲಿಸಿ ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ. ಈ ವಿವಾದವು ಇದೀಗ ದೊಡ್ಡ ಮಟ್ಟಕ್ಕೆ ತಿರುಗಿದ್ದು, ರಾಜತಾಂತ್ರಿಕ ಮಾತುಕತೆಯೊಂದೇ ಎಲ್ಲ ಸಮಸ್ಯೆಗೂ ಪರಿಹಾರ ಎಂದು ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಲಹೆ ನೀಡಿದ್ಧಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಉಕ್ರೇನ್‌ನಲ್ಲಿ ನೆಲೆಸಿರುವ ಉದ್ಯೋಗಿಗಳು, ಅಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯೇ ತಮ್ಮ ಪ್ರಥಮ ಆದ್ಯತೆ ಎಂದು ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ನೆಲೆಸಿರುವ ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ತವರಿಗೆ ಮರಳುವಂತೆ ನೋಡಿಕೊಳ್ಳಿ ಎಂದೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ಧಾರೆ. ಈ ಸಂಬಂಧ ಇನ್ನಷ್ಟು ಮಾತುಕತೆ ಹಾಗೂ ಚರ್ಚೆಗೆ ರಾಜತಾಂತ್ರಿಕವಾಗಿ ಉಭಯ ದೇಶಗಳೂ ಸಮ್ಮತಿ ಸೂಚಿಸಿವೆ. ಹಾಗೆ ನೋಡಿದರೆ, ಭಾರತವು ಪ್ರಥಮ ಪ್ರಧಾನಿ ಜವಹರ್‌ ಲಾಲ್ ನೆಹರೂ ಅವರ ಕಾಲದಿಂದಲೂ ಅಲಿಪ್ತ ನೀತಿ ಅನುಸರಿಸಿಕೊಂಡು ಬರುತ್ತಿದೆ. ಅಂದಿನ ಸೋವಿಯತ್ ರಷ್ಯಾ ಒಕ್ಕೂಟ ಹಾಗೂ ಅಮೆರಿಕ ಒಕ್ಕೂಟ ಎರಡರ ಜೊತೆಗೂ ಭಾರತ ಸ್ನೇಹದಿಂದ ಇದೆ. ಯಾವುದೇ ಒಂದು ಪಕ್ಷದ ಪರ ವಹಿಸದ ಭಾರತದ ಅಲಿಪ್ತ ನೀತಿ ತುಂಬಾನೇ ಜನಪ್ರಿಯವಾಗಿತ್ತು. ಈಗಲೂ ಅಲಿಪ್ತ ನೀತಿ ಎಂಬ ತಟಸ್ಥ ಮನೋಭಾವಕ್ಕೆ ಭಾರತ ಶರಣಾಗಿದ್ದು, ಅಮೆರಿಕ ಅಥವಾ ರಷ್ಯಾ ಯಾವುದಕ್ಕೂ ತನ್ನ ಸಂಪೂರ್ಣ ಬೆಂಬಲ ನೀಡುತ್ತಿಲ್ಲ. ಆದರೆ, ಜಾಗತಿಕವಾಗಿ ಶಾಂತಿ ಕಾಪಾಡಲು ಹಾಗೂ ಉಕ್ರೇನ್‌ನಲ್ಲಿ ಇರುವ ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕರೆತರಲು ಭಾರತ ಬದ್ಧವಾಗಿದೆ.


from India & World News in Kannada | VK Polls https://ift.tt/5QHhVu2

ಒಗ್ಗಟ್ಟಾಗಿ ಹೋರಾಡಿ, ತಳಮಟ್ಟದಲ್ಲಿ ಕಾರ್ಯತಂತ್ರ ರೂಪಿಸಿ: ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ರಾಹುಲ್ ಗಾಂಧಿ ಸಲಹೆ!

ಬೆಂಗಳೂರು: ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿ ಹೋರಾಟ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ತಂತ್ರ ರೂಪಿಸಿ ಎಂದು ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಮುಖಂಡರಿಗೆ ಈ ಸೂಚನೆ ನೀಡಿದ್ದಾರೆ. ಹೈಕಮಾಂಡ್‌ ಬುಲಾವ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ದಂಡು ಗುರುವಾರ ಹೊಸದಿಲ್ಲಿಗೆ ತೆರಳಿತ್ತು. ಹೊಸದಿಲ್ಲಿಯಲ್ಲಿ ಸಂಜೆ ನಾಲ್ಕು ಗಂಟೆಗೆ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸದ್ಯದ ರಾಜ್ಯದ ಬೆಳವಣಿಗೆಗಳ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮುಂದಿನ ಒಂದು ವರ್ಷದಲ್ಲಿ ಚುನಾವಣೆ ಎದುರಾಗುತ್ತಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮುಖಂಡರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ. ಏನೇ ಭಿನ್ನಾಭಿಪ್ರಾಯ ಇದ್ದರೂ ಬದಿಗಿಟ್ಟು ಹೋರಾಟವನ್ನು ರೂಪಿಸಿ. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ, ಬಿಜೆಪಿಯ ಕಾರ್ಯತಂತ್ರಕ್ಕೆ ಪ್ರತಿಯಾಗಿ ಜನರ ಪರವಾಗಿರುವ ಕಾರ್ಯತಂತ್ರಗಳನ್ನು ರೂಪಿಸಿ ಎಂಬ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಹೋರಾಟಗಳ ಬಗ್ಗೆಯೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಹುಲ್‌ ಗಾಂಧಿಗೆ ಮಾಹಿತಿ ನೀಡಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಹೋರಾಟ ಯಾವ ರೀತಿಯ ಪರಿಣಾಮ ಬೀರಿದೆ ಹಾಗೂ ಇದೀಗ ಎರಡನೇ ಹಂತದ ಹೋರಾಟವನ್ನು ಪರಿಣಾಮಕಾರಿಯಾಗಿ ರೂಪಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಸಚಿವ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಸದನದಲ್ಲಿ ನಡೆಸಿದ ಅಹೋರಾತ್ರಿ ಹೋರಾಟದ ಬಗ್ಗೆಯೂ ರಾಹುಲ್ ಗಾಂಧಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ಕಾಂಗ್ರೆಸ್ ಮುಖಂಡರ ಕಾರ್ಯಕ್ರಮಗಳ ಬಗ್ಗೆ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದರೂ, ಮತ್ತಷ್ಟು ರಚನಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬ ಸೂಚನೆಯನ್ನು ರಾಹುಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್‌, ಎಚ್‌ಕೆ ಪಾಟೀಲ್, ಯು.ಟಿ ಖಾದರ್, ಡಾ. ಜಿ ಪರಮೇಶ್ವರ್‌, ಎಂಬಿ ಪಾಟೀಲ್, ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ವೀರಪ್ಪ ಮೊಯ್ಲಿ, ಕಾರ್ಯಾಧ್ಯಕ್ಷರುಗಳಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ ಹಾಗೂ ಕೆ.ಜೆ ಜಾರ್ಜ್‌, ಬಿವಿ ಶ್ರೀನಿವಾಸ್‌ ಭಾಗವಹಿಸಿದ್ದರು.


from India & World News in Kannada | VK Polls https://ift.tt/XVw8SBq

ಪಶ್ಚಿಮ ಬಂಗಾಳದಲ್ಲಿ ಸೋಜಿಗದ ಬೆಳವಣಿಗೆ..! ಅಪರಾತ್ರಿ ಅಧಿವೇಶನಕ್ಕೆ ಮುಹೂರ್ತ..!

ಕೋಲ್ಕೊತಾ: ಪಶ್ಚಿಮ ಬಂಗಾಳ ಜಗದೀಪ್‌ ಧನಕರ್‌ ಅವರು ಮಾರ್ಚ್ 7ರ ಮಧ್ಯೆ ರಾತ್ರಿ 2 ಗಂಟೆಗೆ ಸೇರುವಂತೆ ರಾಜ್ಯ ಅಧಿವೇಶನ ಕರೆದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ತುರ್ತು ಸಂದರ್ಭ ಹೊರತು ಪಡಿಸಿದರೆ ಇಂತಹ ಅಪರಾತ್ರಿಯ ಸೇರುತ್ತಿರುವುದು ಇದೇ ಪ್ರಥಮ. ಬಂಗಾಳದಲ್ಲಿ ರಾಜ್ಯಪಾಲ ಧನಕರ್‌ ಮತ್ತು ಮುಖ್ಯಮಂತ್ರಿ ನಡುವೆ ಸಂಘರ್ಷ ನಡೆಯುತ್ತಿರುವುದು ಹಳೆಯ ಸಂಗತಿ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಪರಸ್ಪರ ಕಾಲೆಳೆಯುವ ಕೆಲಸವನ್ನು ಈ ನಾಯಕರು ಮಾಡಿದ್ದರು. ಈಗ ಅವರ ನಡುವಿನ ವೈಷಮ್ಯ ತಾರಕಕ್ಕೇರಿದೆ. ವಿಧಾನಸಭೆ ಅಧಿವೇಶನದ ಇತಿಹಾಸದಲ್ಲಿ ಹಿಂದೆಂದೂ ಕಂಡ ಕೇಳರಿಯದ ಸಮಯ ನಿಗದಿ ಮಾಡಲಾಗಿದೆ. 'ಅಪರಾತ್ರಿ ಅಧಿವೇಶ ಎಂದು ಅಪಹಾಸ್ಯ ಮಾಡುವಂತದ್ದು ಏನೂ ಇಲ್ಲ. ಈ ನಿರ್ಧಾರ ನನ್ನದು ಅಲ್ಲ. ರಾಜ್ಯ ಸಚಿವ ಸಂಪುಟ ಏನನ್ನು ಶಿಫಾರಸು ಮಾಡಿದೆಯೋ ಅದನ್ನು ಘೋಷಿಸಿದ್ದೇನೆ' ಎಂದು ಧನಕರ್‌ ಹೇಳಿದ್ದಾರೆ. ಮಾರ್ಚ್ 7ರ ರಾತ್ರಿ 2 ಗಂಟೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದೆ ಎಂದು ರಾಜ್ಯ ಭವನ ಪ್ರಕಟಣೆ ತಿಳಿಸಿದೆ. ಸಂಘರ್ಷ ಮುಂದುವರಿಕೆ: ಈ ವಿಚಿತ್ರ ಸಮಯ ನಿಗದಿ ಬಗ್ಗೆ ತಿಳಿದು ಅನೇಕರು ಬೆಕ್ಕಸ ಬೆರಗಾಗಿದ್ದಾರೆ. ಏನಿದು ಸೋಜಿಗ, ಯಾಕೆ ಅಪರಾತ್ರಿ ಅಧಿವೇಶ ಎಂದು ಕೇಳಿದ ಪ್ರಶ್ನೆಗೆ ಬಂಗಾಳದ ಸ್ಪೀಕರ್‌ ಹಾರಿಕೆಯ ಉತ್ತರ ನೀಡಿದ್ದಾರೆ. 'ಹೌದೇ? ಅಂಥದ್ದೊಂದು ಸಮಯ ನಿಗದಿಯಾಗಿದೆಯೆ? ಹಾಗೇನು ಅಪರಾತ್ರಿ ಅಧಿವೇಶನ ಸೇರುವ ತುರ್ತು ಇಲ್ಲ ಬಿಡಿ. ಪ್ರಾಯಶಃ ಅದು ಟೈಪಿಂಗ್‌ ತಪ್ಪಿನಿಂದ ಆಗಿರುವ ಎಡವಟ್ಟು ಇರಬೇಕು' ಎಂದು ಸ್ಪೀಕರ್‌ ಜಾರಿಕೊಂಡಿದ್ದಾರೆ. ಸಂಪರ್ಕ ಯತ್ನ ವಿಫಲ: ಅಷ್ಟಕ್ಕೂ ರಾಜ್ಯಪಾಲರು ಏಕಾಏಕಿ ಅಧಿವೇಶನದ ಈ ಅಪಸಮಯ ಪ್ರಕಟಣೆ ಹೊರಡಿಸಿಲ್ಲ. ಸರಕಾರದಿಂದ ಬಂದ ಶಿಫಾರಸು ಕಂಡು ಧನಕರ್‌ ಮೊದಲು ಅಚ್ಚರಿ ಪಟ್ಟರು. ಟೈಪಿಂಗ್‌ ಪ್ರಮಾದವೇ ಇರಬೇಕು ಎಂದು ಭಾವಿಸಿ, ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದರು. 'ಎಂದಿನಂತೆ ಮುಖ್ಯ ಕಾರ್ಯದರ್ಶಿ ನನ್ನ ಸಂಪರ್ಕಕ್ಕೆ ಸಿಗಲೇ ಇಲ್ಲ. ನಾನು ಕರೆ ಮಾಡಿದರೆ ಅವರಿಗೆ ಉದಾಸೀನ. ಹಾಗಾಗಿ ಇರುವ ಸಮಯವನ್ನೇ ಅಂತಿಮಗೊಳಿಸಿ ಪ್ರಕಟಿಸಿದ್ದೇನೆ' ಎಂದು ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದ್ದಾರೆ. 'ಮಧ್ಯೆ ರಾತ್ರಿ ಅಧಿವೇಶನ ಸೇರುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿದೆ. ಅದರ ನಿರ್ಧಾರವನ್ನು ನಾನು ಮಾನ್ಯ ಮಾಡಿದ್ದೇನೆ' ಎಂದು ಧನಕರ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಈ ಮೊದಲು, ಬಜೆಟ್‌ ಅಧಿವೇಶನ ಸೇರುವ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳಿಸಿದ್ದ ಶಿಫಾರಸನ್ನು ರಾಜ್ಯಪಾಲ ಧನಕರ್‌ ವಾಪಸ್‌ ಕಳಿಸಿದ್ದರು. 'ಸಚಿವ ಸಂಪುಟದಿಂದಲೇ ಅಂತಹ ಶಿಫಾರಸು ಬರಬೇಕು' ಎಂದು ತಿಳಿಸಿದ್ದರು. ಅದಕ್ಕೆ ಈಗ ಮಮತಾ ಬ್ಯಾನರ್ಜಿ, ಅಪರಾತ್ರಿ ಅಧಿವೇಶನ ನಿಗದಿ ಮಾಡುವ ಮೂಲಕ ಸೇಡು ತೀರಿಸಿಕೊಂಡಿರಬೇಕು ಎಂದು ಹೇಳಲಾಗುತ್ತಿದೆ.


from India & World News in Kannada | VK Polls https://ift.tt/RdrxH68

ಉಕ್ರೇನ್‌ಗೆ ಮಗ್ಗುಲ ಮುಳ್ಳಾದ ಕ್ರಿಮಿಯಾ ಎಂಬ ಕ್ರಿಮಿ..! ಈ ಹುಳ ಬಿಟ್ಟಿದ್ದೇ ರಷ್ಯಾ..!

ಉಕ್ರೇನ್: ಹಾಗೂ ಉಕ್ರೇನ್‌ ನಡುವಣ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಎರಡೂ ರಾಷ್ಟ್ರಗಳ ನಡುವೆ ಇರುವ ಎಂಬ ಭೂ ಪ್ರದೇಶ ಭಾರೀ ಸದ್ದು ಮಾಡ್ತಿದೆ..! ಪಾಕ್ ಆಕ್ರಮಿತ ಕಾಶ್ಮೀರದ ಮಾದರಿಯಲ್ಲಿ ರಷ್ಯಾ ಹಾಗೂ ಎರಡೂ ರಾಷ್ಟ್ರಗಳ ಗಡಿಗಳ ನಡುವೆ ಇರುವ ಈ ಕ್ರಿಮಿಯಾ, ರಷ್ಯಾದ ಬೆಂಬಲದೊಂದಿಗೆ ಉಕ್ರೇನ್‌ಗೆ ಸದಾ ಕಿರಿಕ್ ಮಾಡುತ್ತಲೇ ಇತ್ತು..! ಇದೀಗ ರಷ್ಯಾ ದೇಶವು ಉಕ್ರೇನ್‌ ಮೇಲೆ ದಂಡೆತ್ತಿ ಹೋಗುತ್ತಿದ್ದಂತೆಯೇ ಕ್ರಿಮಿಯಾ ಕೂಡಾ ಉಕ್ರೇನ್‌ ವಿರುದ್ಧ ಸಮರ ಸಾರಿದೆ..! ಇಲ್ಲಿಯವರೆಗೂ ಬಂಡುಕೋರರ ರೂಪದಲ್ಲಿ ಹಾವಳಿ ಇಡುತ್ತಿದ್ದ ಕ್ರಿಮಿಯಾ ಜನರು, ಇದೀಗ ಬಹಿರಂಗವಾಗಿ ಉಕ್ರೇನ್ ಸೇನೆ ವಿರುದ್ಧ ಕಾದಾಟಕ್ಕೆ ಇಳಿದಿದ್ದಾರೆ..! ಏನಿದು ಕ್ರಿಮಿಯಾ..? ಏನಿದರ ಕಥೆ..? ಕ್ರಿಮಿಯಾ ಎಂಬುದು 27,000 ಚದರ ಕಿಲೋ ಮೀಟರ್‌ ವಿಸ್ತಾರದ, ಉಕ್ರೇನ್‌ ಹಾಗೂ ರಷ್ಯಾದ ನಡುವಿರುವ ಒಂದು ಭೂ ಭಾಗ. ಇಲ್ಲಿ 65% ರಷ್ಯನ್ನರು ಹಾಗೂ 35% ಉಕ್ರೇನಿಯನ್ನರು ಇದ್ದಾರೆ. ಜಾಗತಿಕ ಸಮುದಾಯವು ಇದನ್ನು ಉಕ್ರೇನ್‌ ದೇಶದ ಒಂದು ಭಾಗವಾಗಿಯೇ ಪರಿಗಣಿಸಿದೆ. ಆದರೆ, 2014ರಲ್ಲಿ ರಷ್ಯಾ ಪರ ಅಧ್ಯಕ್ಷರನ್ನು ಉಕ್ರೇನಿಯನ್ನರು ಕೆಳಗಿಳಿಸಿದ ಕೂಡಲೇ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಸೈನ್ಯವನ್ನು ಕಳಿಸಿ, ಉಕ್ರೇನ್‌ನ ವಶದಲ್ಲಿದ್ದ ಕ್ರಿಮಿಯಾವನ್ನು ಬಲವಂತವಾಗಿ ಸ್ವತಂತ್ರಗೊಳಿಸಿ, ಸ್ವಾಯತ್ತ ಪ್ರದೇಶ ಎಂದು ಘೋಷಿಸಿ, ತಮ್ಮ ಸೈನ್ಯವನ್ನು ಅದರ ಕಾವಲಿಗೆ ಇಟ್ಟರು. ಕ್ರಿಮಿಯಾದಲ್ಲಿ ಹಲವು ಬಂಡುಕೋರ ಸಂಘಟನೆಗಳು ಈ ಸಂದರ್ಭದಲ್ಲಿ ಹುಟ್ಟಿಕೊಂಡವು. ಅವುಗಳ ಬೆನ್ನಿಗೆ ರಷ್ಯಾ ನಿಂತಿತ್ತು. ಅದು ಶಸ್ತ್ರಾಸ್ತ್ರ, ಮದ್ದು, ಗುಂಡು ಒದಗಿಸಿತು. ಈ ಬಂಡುಕೋರರು ಉಕ್ರೇನ್‌ಗೆ ನುಗ್ಗಿ ಹಾವಳಿ ಎಬ್ಬಿಸತೊಡಗಿದರು. ಉಕ್ರೇನ್‌ನಿಂದ ಸ್ವಾತಂತ್ರ್ಯ ಕೇಳತೊಡಗಿದರು. ಇದುವರೆಗೂ ಉಕ್ರೇನ್ ಹಾಗೂ ಕ್ರಿಮಿಯಾ ನಡುವಣ ಸಂಘರ್ಷ, ಗಲಭೆ, ದೊಂಬಿ ಹಾಗೂ ಗಲಾಟೆಗಳಲ್ಲಿ ಸುಮಾರು 14,000ಕ್ಕೂ ಅಧಿಕ ಮಂದಿ ಸತ್ತಿದ್ದಾರೆ. ಮೃತರಲ್ಲಿ ಉಕ್ರೇನ್ ಹಾಗೂ ಕ್ರಿಮಿಯಾ ಎರಡೂ ಪ್ರದೇಶಗಳ ಜನಸಾಮಾನ್ಯರೂ ಸೇರಿದ್ದಾರೆ. ಉಕ್ರೇನ್‌ನ ದೊನ್ಬಾಸ್‌, ಲುಹಾನ್ಸ್ಕ್‌ ಮುಂತಾದ ಪ್ರದೇಶಗಳು ಈಗ ಬಂಡುಕೋರರ ವಶದಲ್ಲಿವೆ. ಈಗ ನಡೆಯುತ್ತಿರುವ ಯುದ್ಧದಲ್ಲೂ ಕ್ರಿಮಿಯಾ ಸಕ್ರಿಯವಾಗಿ ಭಾಗಿಯಾಗಿದ್ದು, ರಷ್ಯಾ ಸೇನೆಗೆ ಪರೋಕ್ಷವಾಗಿ ಸಾಥ್ ನೀಡಿದೆ ಎನ್ನಲಾಗುತ್ತಿದೆ.


from India & World News in Kannada | VK Polls https://ift.tt/Vxw35lL

ಕೊಹ್ಲಿ-ಗಪ್ಟಿಲ್‌ಗೆ ಸಡ್ಡು ಹೊಡೆದ ರೋಹಿತ್‌ ಶರ್ಮಾ, ಟಿ20-ಐನಲ್ಲಿ 'ಹಿಟ್‌ಮ್ಯಾನ್‌' ಅಧಿಪತಿ!

ಲಖನೌ: ಪ್ರವಾಸಿ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲೇ ನಾಯಕ ವಿಶೇಷ ದಾಖಲೆ ಒಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡಕ್ಕೆ 32 ಎಸೆತಗಳಲ್ಲಿ 44 ರನ್‌ ಸಿಡಿಸಿ ಸ್ಫೋಟಕ ಆರಂಭ ಕೊಟ್ಟ 'ಹಿಟ್‌ಮ್ಯಾನ್‌' ಖ್ಯಾತಿಯ ಅನುಭವಿ ಓಪನರ್‌, ಇದೇ ವೇಳೆ ವಿಶೇಷ ಬ್ಯಾಟಿಂಗ್‌ ದಾಖಲೆ ಒಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ರೋಹಿತ್‌, ಲಾಹಿರು ಕುಮಾರ ಎಸೆದ ಮಂದಗತಿಯ ಎಸೆತದಲ್ಲಿ ಮೈರೆತು ಕ್ಲೀನ್‌ ಬೌಲ್ಡ್‌ ಆದರು. ಆದರೆ, ಇದಕ್ಕೂ ಮೊದಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದರು. ಈ ಸಲುವಾಗಿ ಭಾರತದ ಮಾಜಿ ನಾಯಕ ಮತ್ತು ನ್ಯೂಜಿಲೆಂಡ್‌ನ ಓಪನರ್‌ ಮಾರ್ಟಿನ್‌ ಗಪ್ಟಿಲ್‌ ಅವರಿಗೆ ಸಡ್ಡು ಹೊಡೆದಿದ್ದಾರೆ. ಶ್ರೀಲಂಕಾ ಬೌಲರ್‌ಗಳನ್ನು ಬೆಂಡೆತ್ತಿದ ರೋಹಿತ್‌ 2 ಫೋರ್‌ ಮತ್ತೊಂದು ಸಿಕ್ಸರ್‌ ಸಿಡಿಸಿ ಔಟಾದರು. ಬಿರುಸಿನ 44 ರನ್‌ಗಳ ಬಲದಿಂದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್‌ ಅಗ್ರಸ್ಥಾನಕ್ಕೇರಿದ್ದಾರೆ. ರೋಹಿತ್‌, 123 ಪಂದ್ಯಗಳಲ್ಲಿ ಆಡಿದ 115 ಇನಿಂಗ್ಸ್‌ಗಳಿಂದ ಒಟ್ಟು 3307 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 4 ಶತಕ, 26 ಅರ್ಧಶತಕಗಳು ಸೇರಿವೆ. 118 ರನ್‌ ಅವರ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಾರ್ಟಿನ್‌ ಗಪ್ಟಿಲ್‌ 112 ಪಂದ್ಯಗಳಿಂದ 3299 ರನ್‌ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ 97 ಪಂದ್ಯಗಳಿಂದ 3296 ರನ್‌ ಬಾರಿಸಿದ್ದಾರೆ. ಆಟದ ಹೊರೆ ನಿರ್ವಹಣೆ ಉದ್ದೇಶದಿಂದ ವಿರಾಟ್‌ ಕೊಹ್ಲಿ, ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಿಂದ ಹೊರಗುಳಿದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು ರೋಹಿತ್‌ ಶರ್ಮಾ (ಭಾರತ): 123 ಪಂದ್ಯ, 3307 ರನ್‌ ಮಾರ್ಟಿನ್‌ ಗಪ್ಟಿಲ್‌ (ನ್ಯೂಜಿಲೆಂಡ್): 112 ಪಂದ್ಯ, 3299 ರನ್‌ ವಿರಾಟ್‌ ಕೊಹ್ಲಿ (ಭಾರತ): 97 ಪಂದ್ಯ, 3296 ರನ್‌ ಪಾಲ್‌ ಸ್ಟಿರ್ಲಿಂಗ್‌ (ಐರ್ಲೆಂಡ್‌): 102 ಪಂದ್ಯ, 2776 ರನ್‌ ಆರೊನ್ ಫಿಂಚ್ (ಆಸ್ಟ್ರೇಲಿಯಾ): 88 ಪಂದ್ಯ, 2686 ರನ್‌ ಭಾರತಕ್ಕೆ ಭರ್ಜರಿ ಗೆಲುವುಇನ್ನು ಗುರುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಲ್‌ರೌಂಡ್‌ ಆಟವಾಡಿ ಎಲ್ಲ ವಿಭಾಗಗಳಲ್ಲಿಯೂ ಪ್ರಾಬಲ್ಯ ಮೆರೆದ ಟೀಮ್ ಇಂಡಿಯಾ, ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 62 ರನ್‌ಗಳ ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ. ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ, ಇಶಾನ್‌ ಕಿಶನ್‌ (89) ಮತ್ತು ಶ್ರೇಯಸ್‌ ಅಯ್ಯರ್‌ (ಅಜೇಯ 57) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 199/2 ರನ್‌ಗಳ ಶಿಖರ ನಿರ್ಮಿಸಿತು. ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಿಂದಲೇ ಪೆವಿಲಿಯನ್‌ ಪರೇಡ್‌ ಆರಂಭಿಸಿತ್ತು. ಆದರೂ, ಎಡಗೈ ಬ್ಯಾಟ್ಸ್‌ಮನ್‌ ಚರಿತ್‌ ಅಸಲಂಕ ಅವರ ಹೋರಾಟದ 53* ರನ್‌ಗಳ ಬಲದಿಂದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್‌ಗಳಿಸಿ ಕೊಂಚ ಮಾನ ಉಳಿಸಿಕೊಂಡಿತು. ಭರ್ಜರಿ ಜಯದೊಂದಿಗೆ ಭಾರತ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದಿದೆ. ಭಾರತ-ಶ್ರೀಲಂಕಾ ನಡುವಣ ಮೊದಲ ಟಿ20 ಪಂದ್ಯದ ಸಂಕ್ಷಿಪ್ತ ಭಾರತ: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 199 ರನ್‌ (ರೋಹಿತ್‌ ಶರ್ಮಾ 44, ಇಶಾನ್‌ ಕಿಶನ್ 89, ಶ್ರೇಯಸ್‌ ಅಯ್ಯರ್‌ 57*; ದಸುನ್‌ ಶನಕ 19ಕ್ಕೆ 1, ಲಾಹಿರು ಕುಮಾರ 43ಕ್ಕೆ 1). ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್‌ (ಚರಿತ್‌ ಅಸಲಂಕ ಔಟಾಗದೆ 53, ಚಮಿಕ ಕರುಣಾರತ್ನೆ 21, ದುಷ್ಮಾಂತ ಚಾಮೀರ 24*; ಭುವನೇಶ್ವರ್‌ ಕುಮಾರ್‌ 9ಕ್ಕೆ 2, ವೆಂಕಟೇಶ್ ಅಯ್ಯರ್‌ 36ಕ್ಕೆ 2). ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/QrFNlDR

ಶಾಲೆಗಳಲ್ಲಿ ಮೋಸದ ಪ್ರೀತಿ ಬಗ್ಗೆ ಜಾಗೃತಿ ಮೂಡಿಸಿ: ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಸೂಚನೆ

: ಇತ್ತೀಚಿಗೆ ಹದಿ ಹರೆಯದ ಹೆಣ್ಣು ಮಕ್ಕಳನ್ನು ಪ್ರೇಮಿಸುವುದಾಗಿ ಮೋಸದಿಂದ ನಂಬಿಸಿ, ವಂಚಿಸುವಂತಹ ಪ್ರಕರಣಗಳು ಸಂಭವಿಸುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕುರಿತು ಶಾಲೆಗಳಲ್ಲಿ ಮೂಡಿಸುವ ಮಾದರಿ ತರಗತಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್‌. ಪ್ರಮೀಳಾ ನಾಯ್ಡು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರ ರಕ್ಷಣೆ ಕುರಿತಂತೆ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪ್ರೇಮದ ಬಲೆಗೆ ಸಿಲುಕಿ ಕೆಲ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ತರಗತಿಗೆ ಬರುವುದನ್ನು ಬಿಟ್ಟು ಮನಸ್ಸನ್ನು ಬೇರೆಡೆಗೆ ಹರಿ ಬಿಟ್ಟು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಕೆಲಸ ಮಾಡಿರುತ್ತಾರೆ. ಕೊನೆಯದಾಗಿ ಮದುವೆಗೆ ಯುವಕ ಒಪ್ಪದಿದ್ದಾಗ ದೂರು ದಾಖಲಿಸುವುದಾಗಿ ಬರುತ್ತಾರೆ. ಇಂತಹ ಪ್ರಕರಣಗಳನ್ನು ಶಾಲಾ ಮಟ್ಟದಲ್ಲಿ ನಿಯಂತ್ರಿಸಬೇಂದು ತಾಕೀತು ಮಾಡಿದರು. ನೊಂದ ಮಹಿಳೆಯರ ರಕ್ಷಣೆಗೆ ಎಲ್ಲ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಮಹಿಳೆಯರ ದೂರು ಆಲಿಸಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತ್ವರಿತವಾಗಿ ಸಾಂತ್ವನ, ಆಪ್ತ ಸಮಾಲೋಚನೆ ದೊರೆಯುವಂತಾಗಬೇಕು ಎಂದು ಸಲಹೆ ನೀಡಿದರು. ಸೂಕ್ಷ್ಮ ವಲಯಗಳಲ್ಲಿ ಸಿ. ಸಿ. ಕ್ಯಾಮರಾ ಅಳವಡಿಸಿ ಪೊಲೀಸ್‌ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಬಾಲ್ಯವಿವಾಹ ಪ್ರಕರಣ ದಾಖಲಾದ ಕೂಡಲೇ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾಗಿ ದೂರು ನೀಡಲು ಪೊಲೀಸ್‌ ಠಾಣೆಗೆ ಬಂದರೆ ಅಲ್ಲಿನ ಅಧಿಕಾರಿಗಳ ಕೆಳ ಹಂತದ ಪೇದೆ ಹಾಗೂ ಸಿಬ್ಬಂದಿ ಮಹಿಳೆಯರನ್ನು ಗಂಟೆಗಟ್ಟಲೆ ಕಾಯಿಸುವ ಬಗ್ಗೆ ದೂರು ಬಂದಿದೆ. ಇದು ಮುಂದುವರಿಯಬಾರದು ಇಲ್ಲಿಗೆ ನಿಲ್ಲಬೇಕು. ಮಹಿಳೆಯರಿಗೆ ಧ್ಯರ್ಯ ತುಂಬವ ವಾತಾವರಣ ಠಾಣೆಗಳಲ್ಲಿ ಸೃಷ್ಟಿಯಾಗಿ, ನ್ಯಾಯ ದೊರಕಿಸುವ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು. ಕೋಲಾರ ಜಿಲ್ಲೆಯಲ್ಲಿ 2020 - 2021ನೇ ಸಾಲಿನಲ್ಲಿ ಒಟ್ಟು 232 ಹಾಗೂ 2021 - 22ನೇ ಸಾಲಿನಲ್ಲಿ 58 ನಾನಾ ಪ್ರಕರಣಗಳು ದಾಖಲಾಗಿದ್ದು, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಬಾಕಿ ಇರುವ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ. ಜಿ. ಪಾಲಿ ಸಭೆಗೆ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ್‌ ಮಾತನಾಡಿ, ಮಹಿಳೆಯರಿಗೆ ರಕ್ಷಣೆ ನೀಡುವ ಕುರಿತು ನಾನಾ ಸ್ಥಳಗಳಲ್ಲಿ ಕಾನೂನು ಅರಿವು ಕಾರ್ಯ ಕ್ರಮ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ರಕ್ಷಣೆಗೆ ಒತ್ತು ನೀಡಿ: ಅಧ್ಯಕ್ಷೆ ಆರ್‌. ಪ್ರಮೀಳಾ ನಾಯ್ಡು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಅನೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಮಹಿಳಾ ಕಾರ್ಮಿಕರು ಹೆಚ್ಚಿರುವ ಕಡೆ ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಕಾಲೇಜುಗಳಲ್ಲಿ ರಕ್ಷಣಾ ಘಟಕಗಳನ್ನು ತೆರೆಯಬೇಕು ಎಂದು ತಿಳಿಸಿದರು. ಸಣ್ಣಪುಟ್ಟ ವಿಚಾರಗಳಿಗೂ ಗಂಡ ಹೆಂಡತಿ ನಡುವೆ ಗಲಾಟೆಯಾಗಿ ಆಯೋಗಕ್ಕೆ ದೂರು ನೀಡಿರುವ ಪ್ರಕರಣಗಳು ಹೆಚ್ಚಾಗಿವೆ. ಪ್ರಕರಣವನ್ನು ದೊಡ್ಡದು ಮಾಡುವ ಬದಲು ಇಬ್ಬರನ್ನು ಕೂರಿಸಿ ರಾಜೀ ಸಂಧಾನ ಮಾಡುವ ಪ್ರಯತ್ನ ನಡೆಯುತ್ತಿದೆ. ಇದುವರೆಗೂ ರಾಜ್ಯದಲ್ಲಿ 2021-22 ಸಾಲಿನಲ್ಲಿ 4041 ಪ್ರಕರಣ ದಾಖಲಾಗಿದ್ದು, 1650 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಬಾಕಿ ಇರುವ ಪ್ರಕರಣಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು. ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಚಿನ್‌ ಘೋರ್ಪಡೆ ಹಾಜರಿದ್ದರು.


from India & World News in Kannada | VK Polls https://ift.tt/zYFDBGx

ಬಿಜೆಪಿ - ಬಿಎಸ್‌ಪಿ ಮರು ದೋಸ್ತಿ ಸುಳಿವು..! ಅಮಿತ್ ಶಾಗೆ 'ಮುತ್ಸದ್ದಿ' ಉಡುಗೊರೆ ನೀಡಿದ ಮಾಯಾವತಿ..!

ಲಖನೌ: ಉತ್ತರ ಪ್ರದೇಶದಲ್ಲಿ - ನಡುವೆ ಪರಸ್ಪರ ಮೆಚ್ಚುಗೆಯ ಸಖ್ಯದ ರಾಜಕಾರಣ ಶುರುವಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕೆಲವೇ ವಾರ ಬಾಕಿ ಉಳಿದಿರುವಾಗ ಉಭಯ ಪಕ್ಷಗಳ ಮುಖಂಡರು ಶತ್ರುತ್ವ ತೊರೆದು ಮೃದು ಮಾತುಗಳ ವಿನಿಮಯ ಮಾಡಿಕೊಂಡಿದ್ದು, ಹೊಸ ಬೆಳವಣಿಗೆಯ ಮುನ್ಸೂಚನೆ ನೀಡಿದೆ. 'ರಾಜ್ಯ ರಾಜಕಾರಣದಲ್ಲಿ ಬಿಎಸ್ಪಿ ಅಪ್ರಸ್ತುತ ಎಂದು ಭಾವಿಸುವುದು ತಪ್ಪು. ಅದು ಇವತ್ತಿಗೂ ಅತಿ ಪ್ರಸ್ತುತವಾಗಿ ಉಳಿದಿರುವ ಪಕ್ಷ. ಈ ಚುನಾವಣೆಯಲ್ಲಿ ಬಿಎಸ್‌ಪಿ ಅತ್ಯುತ್ತಮ ಮತಗಳನ್ನು ಪಡೆಯಲಿದೆ. ಆದರೆ, ಅದು ಪಡೆಯುವ ಮತಗಳು ಸೀಟ್‌ ಆಗಿ ಪರಿವರ್ತನೆಗೊಳ್ಳುವುದು ಎಷ್ಟು ಎನ್ನುವುದು ತಿಳಿದಿಲ್ಲ' ಎಂದು ಅಮಿತ್‌ ಶಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಸ್‌ಪಿ ನಾಯಕಿ , 'ಅಮಿತ್‌ ಶಾ ಅವರು ಮುತ್ಸದ್ದಿತನದ ಮಾತಾಡಿದ್ದಾರೆ. ವಾಸ್ತವ ಸತ್ಯವನ್ನು ಅವರು ಒಪ್ಪಿಕೊಂಡಿದ್ದಾರೆ. ಅವರ ಮಾತನ್ನು ನಾನು ಗೌರವಿಸುತ್ತೇನೆ' ಎಂದಿದ್ದಾರೆ. ಇದುವರೆಗೆ ಪರಸ್ಪರ ಕೆಂಡ ಕಾರುತ್ತಲೇ ಬಂದ ಬಿಜೆಪಿ - ಬಿಎಸ್‌ಪಿ ಈಗ ನಿಲುವು ಬದಲಿಸಿ, ಕೈ ಕುಲುಕುವ ಕೆಲಸಕ್ಕೆ ಇಳಿದಿವೆ. ಇದು ಮುಂದೆ ಎದುರಾಗುವ ಸನ್ನಿವೇಶ ಎದುರಿಸುವ ತಯಾರಿ ಇರಬಹುದು ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅಖಿಲೇಶ್‌ ವಿರುದ್ಧ ವಾಗ್ದಾಳಿ: 'ವಾಸ್ತವಿಕವಾಗಿ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು 2022ರ ಚುನಾವಣೆಯಲ್ಲಿ ಮುಖ್ಯ ವಿಚಾರಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಿರ್ದಿಷ್ಟ ಅಜೆಂಡಾವೇ ಇಲ್ಲ. ಈ ಹೋರಾಟದಲ್ಲಿ ಅವರು ತೀವ್ರ ಮುಖಭಂಗ ಅನುಭವಿಸಲಿದ್ದಾರೆ' ಎಂದು ಅಮಿತ್‌ ಶಾ ಹೇಳಿದ್ದರು. ಅದಕ್ಕೆ ಇಂಬು ನೀಡಿರುವ ಮಾಯಾವತಿ, 'ಮುಸ್ಲಿಮರು ಮತ್ತು ದಲಿತರ ಬೆಂಬಲದಿಂದ ಈ ಸಲ ರಾಜ್ಯದಲ್ಲಿ ಬಿಎಸ್ಪಿ ಸರಕಾರ ರಚನೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಸ್‌ಪಿ ಈಗಾಗಲೇ ಸೋಲೊಪ್ಪಿಕೊಂಡಿದೆ' ಎಂದು ಹೇಳಿದ್ದಾರೆ. 'ಅಮಿತ್‌ ಶಾ ಅವರ ವಿಶ್ಲೇಷಣೆ ಸರಿಯಾಗಿಯೇ ಇದೆ. ಸಮಾಜವಾದಿ ಪಾರ್ಟಿ ಕುರಿತು ಮುಸ್ಲಿಂ ಸಮುದಾಯಕ್ಕೆ ಬಹಳ ಅಸಮಾಧಾನವಿದೆ. ಸಮಾಜವಾದಿ ಪಾರ್ಟಿ ಎಂದರೆ ಗೂಂಡಾ ರಾಜ್‌ ಮತ್ತು ಮಾಫಿಯಾ ರಾಜ್‌ ಎನ್ನುವುದು ಅರ್ಥವಾಗಿರುವುದರಿಂದ ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದ ಜನರು ಆ ಪಕ್ಷವನ್ನು ತಿರಸ್ಕರಿಸಿದ್ದಾರೆ. ಆ ಪಕ್ಷದ ಆಡಳಿತವಿದ್ದಾಗ ಅನೇಕ ಗಲಭೆಗಳಾಗಿರುವುದನ್ನು ನೋಡಿದ್ದೇವೆ. ಪಕ್ಷ ಅಧಿಕಾರಕ್ಕೆ ಬರುವುದಿಲ್ಲವೆಂದು ಸಮಾಜವಾದಿ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ' ಎಂದು ಮಾಯಾವತಿ ತಿಳಿಸಿದ್ದಾರೆ. ಮುಸ್ಲಿಮರು ಹಾಗೂ ದಲಿತರು ತಮ್ಮ ಕೈ ಹಿಡಿಯಲಿದ್ದು ಬಹುಜನ ಸಮಾಜ ಪಾರ್ಟಿ ಪೂರ್ಣ ಬಹುಮತದೊಂದಿಗೆ ಸರಕಾರ ರಚಿಸಲಿದೆ ಎಂದು ಪಕ್ಷದ ವರಿಷ್ಠ ನಾಯಕಿ ವಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿವೆ. 'ಕುಂಡಾದ ಗೂಂಡಾ' ಎಸ್‌ಪಿ ಸವಾಲ್‌ ಉತ್ತರ ಪ್ರದೇಶದ ಕುಂಡಾ ವಿಧಾನಸಭಾ ಕ್ಷೇತ್ರದಲ್ಲಿ ಸತತ ಏಳನೇ ಬಾರಿಗೆ ಆಯ್ಕೆ ಬಯಸಿರುವ ರಘುರಾಜ್‌ ಪ್ರತಾಪ್‌ ಸಿಂಗ್‌ ಅಲಿಯಾಸ್‌ ರಾಜ್‌ ಭಯ್ಯಾಗೆ ಈ ಸಲ ಅವರ ಮಾಜಿ ಬಂಟನಿಂದಲೇ ತೀವ್ರ ಪೈಪೋಟಿ ಎದುರಾಗಿದೆ. ಕಳೆದ ಮೂರು ಚುನಾವಣೆಗಳಲ್ಲಿ ಅಂದರೆ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ರಾಜ್‌ ಭಯ್ಯಾ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೇ ಬೆಂಬಲ ನೀಡಿದ್ದ ಸಮಾಜವಾದಿ ಪಕ್ಷವು ಈ ಸಲ ರಾಜ್‌ ಭಯ್ಯಾ ಅವರ ಮಾಜಿ ಬಂಟ ಗುಲ್ಶನ್‌ ಯಾದವ್‌ ಅವರನ್ನು ಕಣಕ್ಕಿಳಿಸಿದೆ. ಮಾಯಾವತಿ ಮುಖ್ಯಮಂತ್ರಿಯಾಗಿದ್ದಾಗ ರಾಜ್‌ ಭಯ್ಯಾ ಅವರನ್ನು 2002ರಲ್ಲಿ ಬಂಧಿಸಿ, ಭಯೋತ್ಪಾದನೆ ನಿಗ್ರಹ ಕಾಯಿದೆ (ಪೊಟಾ) ಅಡಿ ಮೊಕದ್ದಮೆ ದಾಖಲಿಸಲಾಗಿತ್ತು. ನಂತರ 2003ರಲ್ಲಿ ಅಧಿಕಾರಕ್ಕೆ ಬಂದ ಅಖಿಲೇಶ್‌ ಯಾದವ್‌ ಅವರು ಪೊಟಾ ಸೇರಿದಂತೆ ರಾಜ್‌ ಭಯ್ಯಾ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂಪಡೆದಿದ್ದರು. ನಂತರ ಅವರ ರಾಜಕೀಯ ಜೀವನ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದಿತ್ತು. ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಅವರು ರಾಜ್‌ ಭಯ್ಯಾಗೆ 'ಕುಂಡಾ ಕಾ ಗೂಂಡಾ' ಎಂದು ನಾಮಕರಣ ಮಾಡಿದ್ದರು. ಅದೇ ಹೆಸರು ಈಗಲೂ ಚಾಲ್ತಿಯಲ್ಲಿದೆ. ಪ್ರತಾಪಗಢ ಜಿಲ್ಲೆಯ ಕುಂಡಾ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕನೇ ಹಂತದಲ್ಲಿ, ಫೆಬ್ರುವರಿ 27ರಂದು ಮತದಾನ ನಡೆಯಲಿದೆ. ನಾಲ್ಕನೇ ಹಂತದಲ್ಲೂ ಸಾಧಾರಣ ಮತದಾನ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಪೈಕಿ ಉತ್ತರಪ್ರದೇಶದಲ್ಲಿ ಬುಧವಾರ ನಡೆದ ನಾಲ್ಕನೇ ಹಂತದ ಮತದಾನದಲ್ಲಿ 60% ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಿಲಿಭಿತ್‌, ಲಖೀಮ್‌ಪುರ ಖೇರಿ, ಸೀತಾಪುರ, ಲಖನೌ, ಉನ್ನಾವೊ, ಫತೇಹ್‌ಪುರ, ಹರ್ದೊಯಿ, ಬಾಂಡಾ ಜಿಲ್ಲೆಗಳಲ್ಲಿನ ಒಟ್ಟು 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಬಹುತೇಕ ಶಾಂತಿಯುತ ಮತದಾನ ನಡೆದಿದ್ದು, ಲಖನೌ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರವೇ ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಉತ್ತರಪ್ರದೇಶ ಡಿಸಿಎಂ ದಿನೇಶ್‌ ಶರ್ಮಾ ಅವರು ಕುಟುಂಬ ಸಮೇತರಾಗಿ ಲಖನೌನಲ್ಲಿ ಮತ ಚಲಾಯಿಸಿದರು. ಒಟ್ಟಾರೆಯಾಗಿ 624 ಅಭ್ಯರ್ಥಿಗಳು ಈ ಹಂತದಲ್ಲಿ ಕಣದಲ್ಲಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ 59 ಸೀಟುಗಳ ಪೈಕಿ 51 ಸೀಟುಗಳನ್ನು ಬಾಚಿಕೊಂಡಿದ್ದ ಬಿಜೆಪಿಗೆ ಈ ಬಾರಿ ಸತ್ವಪರೀಕ್ಷೆ ಎದುರಾಗಿದೆ. ಈ ಮಧ್ಯೆ ಬುಧವಾರ ಸುದ್ದಿಗೋಷ್ಠಿ ನಡೆಸಿದ ಉತ್ತರಪ್ರದೇಶ ಸಿಇಒ ಅಜಯ್‌ ಕುಮಾರ್‌ ಶುಕ್ಲಾ, ನಾಲ್ಕನೇ ಹಂತದ ಮತದಾನಕ್ಕೆ ಮುನ್ನ ಒಂಭತ್ತು ಜಿಲ್ಲೆಗಳಿಂದ 6.85 ಕೋಟಿ ರೂ. ಅಕ್ರಮ ಹಣ ಹಾಗೂ 3.76 ಲಕ್ಷ ಲೀಟರ್‌ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಫೆಬ್ರುವರಿ 27ರಂದು ಉತ್ತರ ಪ್ರದೇಶದಲ್ಲಿ ಐದನೇ ಹಂತದ ಮತದಾನ ನಡೆಯಲಿದೆ. 'ರಾಹುಲ್‌ ಗಾಂಧಿ, ಅಖಿಲೇಶ್‌, ಪ್ರಿಯಾಂಕಾ ಹುಟ್ಟುವಾಗಲೇ ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಜನಿಸಿದವರು. ಬಡತನದ ಕಿಂಚಿತ್‌ ಅರಿವೂ ಅವರಿಗಿಲ್ಲ. ಹಾಗಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗಾಗಿ ಜಾರಿ ಮಾಡಿದ ಜನಧನ ಯೋಜನೆ ಬಗ್ಗೆ ಲೇವಡಿ ಮಾಡುತ್ತಾರೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹೇಳಿದ್ದಾರೆ. 'ಕುಟುಂಬ ರಾಜಕಾರಣದ ಕುಡಿಗಳಿಗೆ ಬಡ ಜನರು ಸದಾಕಾಲ ಅವರ ಕಾಲ ಬಳಿಯಲ್ಲೇ ಕುಳಿತಿರಬೇಕು. ಶಾಲಾ-ಕಾಲೇಜಿಗೆ ತೆರಳುವ ನಮ್ಮ ಹೆಣ್ಣುಮಕ್ಕಳು ಗೂಂಡಾಗಳ ಉಪಟಳದಿಂದ ಮುಕ್ತರಾಗಿರಬೇಕು ಎಂದಾದರೆ ಪುನಃ ಎಸ್‌ಪಿ ಆಡಳಿತ ರಾಜ್ಯದಲ್ಲಿ ಬರಬಾರದು. ಬಿಜೆಪಿ ಆಡಳಿತದಲ್ಲಿ ಗೂಂಡಾಗಳನ್ನು ನಿಗ್ರಹಿಸಿ, ಬಡವರಿಗೆ ಬೆನ್ನೆಲುಬಾಗಿ ಸರಕಾರ ನಿಲ್ಲಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. '2017ಕ್ಕೂ ಮುನ್ನ ರಾಜ್ಯದಲ್ಲಿ ಸರಕಾರಿ ನೌಕರಿಗಳಲ್ಲಿ ಹುದ್ದೆಗಳು ಖಾಲಿ ಆದ ಕೂಡಲೇ ಕುಟುಂಬ ರಾಜಕಾರಣಿಗಳು ಸಕ್ರಿಯರಾಗುತ್ತಿದ್ದರು. ಒಂದೇ ಕುಟುಂಬವು ಕೆಲಸ ಕೊಡಿಸುವ ಭರವಸೆ ನೀಡಿ, ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿತ್ತು. ಬಿಜೆಪಿ ಸರಕಾರವು 5 ಲಕ್ಷ ಸರಕಾರಿ ನೌಕರಿ ಹುದ್ದೆಗಳನ್ನು ರಾಜ್ಯ ಯುವಕರಿಗೆ ಅವರ ಅರ್ಹತೆ ಪರಿಗಣಿಸಿ ನೀಡಿದೆ' ಎಂದು ಉ. ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.


from India & World News in Kannada | VK Polls https://ift.tt/hy0prO7

ಲಂಕಾ ವಿರುದ್ಧದ ಸರಣಿಗೂ ಮುನ್ನ ಭಾರತಕ್ಕೆ ಶಾಕ್‌, ಸ್ಟಾರ್‌ ಬ್ಯಾಟ್ಸ್‌ಮನ್‌ ಔಟ್‌!

ಬೆಂಗಳೂರು: ಪ್ರವಾಸಿ ವಿರುದ್ಧದ ಟಿ20 ಕ್ರಿಕೆಟ್‌ ಸರಣಿ ಆರಂಭಕ್ಕೂ ಮೊದಲೇ ವೇಗದ ಬೌಲರ್‌ ದೀಪಕ್‌ ಚಹರ್‌ ಅವರ ಸೇವೆ ಕಳೆದುಕೊಂಡಿದ್ದ ಈಗ ಮತ್ತೊಂದು ಆಘಾತಕ್ಕೊಳಗಾಗಿದೆ. ಇತ್ತೀಚೆಗಷ್ಟೇ ಅಂತ್ಯಗೊಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಆನೆ ಬಲ ತಂದಿದ್ದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ , ಗಾಯದ ಸಮಸ್ಯೆಗೆ ತುತ್ತಾಗಿದ್ದು ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ವಿಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಕೈ ಬೆರಳಿನ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಎಕ್ಸ್‌-ರೇ ವರದಿಯಲ್ಲಿ ಮೂಳೆಯಲ್ಲಿ ಬಿರುಕು ಪತ್ತೆಯಾಗಿರುವ ಕಾರಣ 3-4 ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದ್ದು, ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಬೀಳುವಂತ್ತಾಗಿದೆ. ಇದರರ್ಥ ಮಾರ್ಚ್‌ 26ಕ್ಕೆ ಶುರುವಾಗಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಮೂಲಕ ಸೂರ್ಯಕುಮಾರ್‌ ಯಾದವ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ 31 ಎಸೆತಗಳಲ್ಲಿ ಅಜೇಯ 65 ರನ್‌ಗಳ ಸ್ಫೋಟಕ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್‌ ಯಾದವ್‌ ದಾಖಲೆಯ 7 ಸಿಕ್ಸರ್‌ಗಳನ್ನು ಕೂಡ ಸಿಡಿಸಿದ್ದರು. ಇದೇ ಕಾರಣಕ್ಕೆ ಪಂದ್ಯ ಮತ್ತು ಸರಣಿ ಶ್ರೇಷ್ಠ ಎರಡೂ ಗೌರವ ಅರಿಗೆ ಲಭ್ಯವಾಗಿತ್ತು.ಈಗ ಸೂರ್ಯಕುಮಾರ್‌ ಅಲಭ್ಯತೆ ತಂಡಕ್ಕೆ ಭಾರಿ ಹಿನ್ನಡೆ ತಂದೊಡ್ಡಿದೆ. ಪ್ರಮುಖವಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಕೊಂಚ ಕುಸಿದಂತ್ತಾಗಿದೆ. "ವಿಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ದೀಪಕ್‌ ಚಹರ್‌ ಬಲ ತೊಡೆಯ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿದ್ದಾರೆ. ಫೀಲ್ಡಿಂಗ್‌ ವೇಳೆ ಸೂರ್ಯಕುಮಾರ್‌ ಯಾದವ್‌ ಕೂಡ ಗಾಯಗೊಂಡಿದ್ದಾರೆ. ಇಬ್ಬರೂ ಕೂಡ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರಕ್ಕೆ ಒಳಪಡಲಿದ್ದಾರೆ," ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ. "ಸೂರ್ಯಕುಮಾರ್‌ ಅಲಭ್ಯತೆ ಭಾರತ ತಂಡಕ್ಕೆ ಬಹುದೊಡ್ಡ ಹಿನ್ನಡೆ. ಆತ ಅಮೋಘ ಲಯದಲ್ಲಿ ಬ್ಯಾಟ್‌ ಮಾಡುತ್ತಿದ್ದ. ಆದರೂ ನಮ್ಮ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಆಟಗಾರರಿದ್ದಾರೆ. ಇನ್ನು ಸೂರ್ಯ ಬಗ್ಗೆ ನನನಗೆ ಬೇಸರವಿದೆ. ಅದು ಅತ್ಯಂತ ಕೆಟ್ಟ ಗಾಯವಾಗಿತ್ತು. ಇವುಗಳನ್ನು ನಿಯಂತ್ರಿಸುವುದು ನಮ್ಮ ಕೈಲಿರುವುದಿಲ್ಲ ಎಂಬದೇ ವಿಪರ್ಯಾಸ," ಎಂದು ಕ್ಯಾಪ್ಟನ್ ರೋಹಿತ್‌ ಶರ್ಮಾ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಗೆ ಭಾರತದ ಪರಿಷ್ಕೃತ ತಂಡ ಹೀಗಿದೆರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್‌ಕೀಪರ್‌), ವೆಂಕಟೇಶ್ ಅಯ್ಯರ್, ದೀಪಕ್ ಹೂಡ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಅವೇಶ್ ಖಾನ್. ಶ್ರೀಲಂಕಾದ ಪರಿಷ್ಕೃತ ಟಿ20 ಕ್ರಿಕೆಟ್‌ ತಂಡದಸುನ್‌ ಶನಕ (ನಾಯಕ), ಪತುನ್ ನಿಸಂಕ, ಕುಶಲ್‌ ಮೆಂಡಿಸ್‌, ಚರಿತ್‌ ಅಸಲಂಕ, ದಿನೇಶ್‌ ಚಾಂದಿಮಾಲ್‌, ದನುಷ್ಕ ಗುಣತಿಲಕ, ಕಮಿಲ್‌ ಮಿಶ್ರಾ, ಜತಿನ್‌ ಲಿಯನಾಗೆ, ದುಶ್ಮಾಂತ ಚಾಮೀರ, ಲಾಹಿರು ಕುಮಾರ, ಬಿನುರ ಫರ್ನಾಂಡೊ, ಶಿರನ್‌ ಫರ್ನಾಂಡೊ, ಮಹೀಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್‌ ಜಯವಿಕ್ರಮ, ಆಶಿಯಾನ್‌ ಡೇನಿಯೆಲ್ಸ್‌ (ಲಭ್ಯತೆ ಖಾತ್ರಿಯಾಗಬೇಕಿದೆ).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/6tomACf

ರಷ್ಯಾ ಸೇನೆಯ ಆಕ್ರಮಣ ಭೀತಿ..! ಉಕ್ರೇನ್‌ನಲ್ಲಿ 30 ದಿನಗಳ ಕಾಲ ಎಮರ್ಜೆನ್ಸಿ ಘೋಷಣೆ..!

ಕೀವ್‌: ಸೇನೆಯಿಂದ ಆಕ್ರಮಣದ ಭೀತಿ ಹೆಚ್ಚುತ್ತಿರುವ ನಡುವೆಯೇ ಉಕ್ರೇನ್‌ ಸರಕಾರ ಮುಂದಿನ 30 ದಿನಗಳವರೆಗೆ ಆಂತರಿಕ ಘೋಷಣೆ ಮಾಡಿದೆ. ಬಳಿಕ ಕೂಡ ಈ ತುರ್ತು ಪರಿಸ್ಥಿತಿಯನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಿಸಿ, ರಷ್ಯಾದ ರಣತಂತ್ರವನ್ನು ವಿಫಲಗೊಳಿಸಲಾಗುವುದು ಎಂದು ಉಕ್ರೇನ್‌ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ಒಲಿಕ್ಸಿ ಡ್ಯಾನಿಲೊವ್‌ ಹೇಳಿದ್ದಾರೆ. ರಷ್ಯಾ ಸೇನೆಯು ಗಡಿಯಲ್ಲಿ ಬಂಡುಕೋರರು, ಪ್ರತ್ಯೇಕತಾವಾದಿಗಳನ್ನು ಉಕ್ರೇನ್‌ ಸರಕಾರದ ವಿರುದ್ಧ ಪ್ರಚೋದಿಸಿದಂತೆಯೇ, ಉಕ್ರೇನ್‌ನಲ್ಲಿ ಆತಂಕ ಭರಿತ ವಾತಾವರಣ ಇರುವುದನ್ನೇ ಬಂಡವಾಳ ಮಾಡಿಕೊಂಡು ಆಂತರಿಕ ದಂಗೆ ಉಂಟು ಮಾಡುವುದು ರಷ್ಯಾದ ಕುತಂತ್ರವಾಗಿದೆ. ಈ ಮೂಲಕ ಉಕ್ರೇನ್‌ ಒಳನುಗ್ಗುವ ಷಡ್ಯಂತ್ರವನ್ನು ಪುಟಿನ್‌ ಹೆಣೆದಿರುವುದು ಗುಪ್ತಚರ ಮೂಲಗಳಿಂದ ಸಿಕ್ಕಿದೆ. ಹಾಗಾಗಿ ಹೇರಿಕೆ ಅಗತ್ಯ ಎಂದು ಡ್ಯಾನಿಲೊವ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. ಉಕ್ರೇನ್‌ ಗಡಿಯ ದಕ್ಷಿಣ ಬೆಲಾರಸ್‌ನಲ್ಲಿ ರಷ್ಯಾ ಮಿಲಿಟರಿಯ 100 ಟ್ಯಾಂಕರ್‌, ವಿಮಾನಗಳು ಬಂದು ನಿಂತಿವೆ. ಸಮರ ಸನ್ನದ್ಧ ಸ್ಥಿತಿಯಲ್ಲಿ ಶಸ್ತ್ರಾಸ್ತ್ರ ಸಂಗ್ರಹವನ್ನು ಕೂಡ ಮಾಡಿಕೊಂಡಿರುವ ರಷ್ಯಾ ಸೇನಾ ನೆಲೆಗಳ ಫೋಟೋಗಳನ್ನು ಉಪಗ್ರಹಗಳು ಸೆರೆ ಹಿಡಿದಿವೆ. ಈ ಫೋಟೊಗಳನ್ನು ಅಮೆರಿಕ ಮತ್ತು ನ್ಯಾಟೋ ಸದಸ್ಯ ರಾಷ್ಟ್ರಗಳ ಸೇನಾಪಡೆಗಳಿಗೆ ರವಾನಿಸಲಾಗಿದೆ. ಅದರಂತೆ ರಷ್ಯಾ ಸೇನೆ ಯುದ್ಧ ಆರಂಭಿಸಿದಲ್ಲಿ ಕೂಡಲೇ ಪ್ರತಿತಂತ್ರಕ್ಕೂ ಅಮೆರಿಕ ಸೇನೆ ಸಿದ್ಧವಾಗಿದೆ. ಉಕ್ರೇನ್‌ ಬೆಂಬಲಕ್ಕೆ ನಿಂತಿರುವ ಅಮೆರಿಕ ಸರಕಾರವು ಈಗಾಗಲೇ ರಷ್ಯಾ ವಿರುದ್ಧ ಹಲವು ರೀತಿಯ ಆರ್ಥಿಕ ನಿರ್ಬಂಧ ಹೇರಿದ ಬೆನ್ನಿಗೇ ಜಪಾನ್‌ ಮತ್ತು ಆಸ್ಪ್ರೇಲಿಯಾ ಕೂಡ ಆರ್ಥಿಕ ನಿರ್ಬಂಧಗಳನ್ನು ಘೋಷಿಸಿವೆ. ನಾಗರಿಕರು ಶಸ್ತ್ರಾಸ್ತ್ರ ಹಿಡಿಯಲು ಸಂಸತ್‌ ಒಪ್ಪಿಗೆ: ರಷ್ಯಾದಿಂದ ದಾಳಿ ನಡೆದಲ್ಲಿ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ ಪ್ರಜೆಗಳಿಗೆ ಅಲ್ಲಿನ ಸಂಸತ್‌ ಅನುಮತಿ ನೀಡಿದೆ. ಈ ಬಗ್ಗೆ ಸಂಸತ್ತಿನಲ್ಲಿ ಮತ ಚಲಾವಣೆಯಾಗಿ ಎಲ್ಲ ಸಂಸದರು ಕೂಡ ಶಸ್ತ್ರಾಸ್ತ್ರಗಳನ್ನು ಪ್ರಜೆಗಳು ಬಳಸುವ ಪರವಾಗಿ ಒಮ್ಮತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮಾಜಿ ಸೈನಿಕರು, ಸ್ಥಳೀಯ ಸುರಕ್ಷತಾ ಪಡೆಗಳು, ರಾಷ್ಟ್ರ ಸೇವೆ, ಮೀಸಲು ಪಡೆಗಳ ಸದಸ್ಯರಿಗೆ ಬಂದೂಕು ಚಲಾಯಿಸುವ ತರಬೇತಿಯನ್ನು ಉಕ್ರೇನ್‌ ಸೇನೆ ನಡೆಸುತ್ತಿದೆ. ಜತೆಗೆ, 18 ರಿಂದ 60 ವರ್ಷ ವಯಸ್ಸಿನ ಉಕ್ರೇನ್‌ ಪ್ರಜೆಗಳು ಸ್ವಯಂಪ್ರೇರಣೆಯಿಂದ ಸೇನಾ ಸೇವೆಗೆ ಸೇರ್ಪಡೆಯಾಗಲು ಕೂಡ ಉಕ್ರೇನ್‌ ಸರಕಾರ ಅವಕಾಶ ಕಲ್ಪಿಸಿದೆ. ಗರಿಷ್ಠ ಒಂದು ವರ್ಷದವರೆಗೆ ಇವರುಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ, ತುರ್ತು ಪರಿಸ್ಥಿತಿಗಳಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ನಿರಂತರ ಕದನ ವಿರಾಮ ಉಲ್ಲಂಘನೆ ರಷ್ಯಾದಿಂದ ಸ್ವಾಯತ್ತ ಪ್ರದೇಶವಾಗಿ ಗುರುತಿಸಲ್ಪಟ್ಟಿರುವ ಉಕ್ರೇನ್‌ ಗಡಿ ಭಾಗದ ಡೊನ್‌ಬಾಸ್‌ ಪ್ರಾಂತ್ಯದಲ್ಲಿ ದಿನೇ ದಿನೇ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ರಷ್ಯಾ ಸೇನೆ ಪೋಷಿತ ಬಂಡುಕೋರರು ಮತ್ತು ಪ್ರತ್ಯೇಕವಾದಿಗಳು ಉಕ್ರೇನ್‌ ಗಡಿ ಗ್ರಾಮಗಳ ಮೇಲೆ ಶೆಲ್‌ ದಾಳಿ ಮತ್ತು ಬಂದೂಕು ದಾಳಿಗಳನ್ನು ನಡೆಸುತ್ತಲೇ ಇದ್ದಾರೆ. ದಿನವೊಂದಕ್ಕೆ ಮೂರು ಸಾವಿರ ಬಾರಿ ಕದನ ವಿರಾಮ ಉಲ್ಲಂಘನೆ ಆಗುತ್ತಿದೆ ಎಂದು ಉಕ್ರೇನ್‌ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯುದ್ಧ ಸಾರುವ ಮುನ್ನ ಇಂಥ ದಾಳಿಗಳ ಮೂಲಕ ಉಕ್ರೇನ್‌ ಜನರ ಧೃತಿಗೆಡಿಸುವ ರಣತಂತ್ರವನ್ನು ರಷ್ಯಾ ಸೇನೆ ಹೆಣೆದಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕ ವಿರುದ್ಧ ಚೀನಾ ಕಿಡಿ ರಷ್ಯಾ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇರಿರುವ ನಿರ್ಬಂಧಗಳನ್ನು ಚೀನಾ ಖಂಡಿಸುತ್ತದೆ. ಉಕ್ರೇನ್‌ ಸೇನೆಗೆ ಶಸ್ತ್ರಾಸ್ತ್ರಗಳ ಸರಬರಾಜು ಮಾಡುವ ಮೂಲಕ ಗಡಿ ಬಿಕ್ಕಟ್ಟಿಗೆ ಪ್ರಚೋದಿಸಿದ್ದೇ ಅಮೆರಿಕ ಸರಕಾರ. ಗಡಿಯಲ್ಲಿ ರಷ್ಯಾ ಸೇನೆಯ ತಾಲೀಮನ್ನು ಆಕ್ರಮಣ ಎಂದು ಜಗತ್ತಿನ ಎದುರು ಬಿಂಬಿಸಿ, ದೊಡ್ಡ ಯುದ್ಧ ನಡೆಯುವ ಭೀತಿ ಹುಟ್ಟಿಸಿದ್ದು ಅಮೆರಿಕ ಸರಕಾರ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರೆ ಹುವಾ ಛುನ್‌ಯಿಂಗ್‌ ಆರೋಪಿಸಿದ್ದಾರೆ. ಕಳೆದ ತಿಂಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಚೀನಾಗೆ ಭೇಟಿ ನೀಡಿದ್ದರು. ಆ ವೇಳೆ ಚೀನಾ ಅಧ್ಯಕ್ಷ ಹಾಗೂ ಕಮ್ಯುನಿಸ್ಟ್‌ ಪಕ್ಷದ ವರಿಷ್ಠ ಕ್ಸಿ ಜಿನ್‌ಪಿಂಗ್‌ ಖುದ್ದು ಪುಟಿನ್‌ ಅವರನ್ನು ಬರಮಾಡಿಕೊಂಡು ಆಪ್ತ ಸಮಾಲೋಚನೆ ನಡೆಸಿದ್ದರು. ಈ ಮೂಲಕ ರಷ್ಯಾ ಜತೆಗೆ ಬಾಂಧವ್ಯ ವೃದ್ಧಿಗೆ ಯತ್ನಿಸಿದ್ದರು. 'ರಾಜತಾಂತ್ರಿಕ ಪರಿಹಾರ ಕಡೆಗಣಿಸಿಲ್ಲ. ಆದರೆ, ರಷ್ಯಾದ ಹಿತರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮ ಪ್ರಜೆಗಳ ಸುರಕ್ಷತೆ ಮುಖ್ಯ, ಆ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. 'ರಷ್ಯಾ - ಉಕ್ರೇನ್‌ ನಡುವೆ ಬಹಳ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಳ್ಳುತ್ತಿದೆ. ಇದು ವಿಶ್ವದ ಶಾಂತಿಯನ್ನು ಭಂಗಗೊಳಿಸಲಿದೆ. ದಿನಂಪ್ರತಿ ಯುದ್ಧದ ಭೀತಿ ಹೆಚ್ಚಿಸುವ ಬದಲು ಒಂದು ಬಾರಿ ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಎದುರಾಗಿ ಕೂತು ಮಾತುಕತೆ ನಡೆಸುವುದು ಸೂಕ್ತ' ಎಂದು ಕ್ಯಾಥೊಲಿಕ್‌ ಚರ್ಚ್ ಮುಖ್ಯಸ್ಥ ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ. 'ಭಾರತದ ಜತೆಗೆ ನಮ್ಮ ಪಾಲುದಾರಿಕೆ , ದ್ವಿಪಕ್ಷೀಯ ಸಂಬಂಧಕ್ಕೆ ಭವಿಷ್ಯದಲ್ಲಿ ಯಾವುದೇ ರೀತಿಯ ಧಕ್ಕೆ ಅಥವಾ ಹಿನ್ನಡೆ ಉಂಟಾಗುವುದಿಲ್ಲ ಎಂದು ನಿರೀಕ್ಷಿಸಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ 10 ವರ್ಷಗಳವರೆಗೆ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಉಕ್ರೇನ್‌ ಗಡಿ ಬಿಕ್ಕಟ್ಟಿನ ಪರಿಣಾಮವು ಇದರ ಮೇಲೆ ಆಗಲ್ಲ ಎಂಬ ನಂಬಿಕೆಯಿದೆ' ಎಂದು ಭಾರತದಲ್ಲಿನ ರಷ್ಯಾ ರಾಯಭಾರ ಕಚೇರಿ ಉಪ ಮುಖ್ಯಸ್ಥ ರೊಮನ್‌ ಬಬುಶ್ಕಿನ್‌ ಹೇಳಿದ್ದಾರೆ.


from India & World News in Kannada | VK Polls https://ift.tt/Hn5uwo4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...