ಮುಂಬಯಿ: ಬಾಲಿವುಡ್ ನಟ ಪುತ್ರ ಸೇರಿದಂತೆ ಹಲವರನ್ನು ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಭಾನುವಾರ ಬಂಧಿಸಿದೆ. ಮುಂಬಯಿ-ಗೋವಾ ನಡುವೆ ಸಮುದ್ರದ ಮಧ್ಯೆ ಐಷಾರಾಮಿ ಕ್ರೂಸ್ ಶಿಪ್‌ನಲ್ಲಿನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಮತ್ತು ವೈದ್ಯಕೀಯ ತಪಾಸಣೆ ಬಳಿಕ 23 ವರ್ಷದ ಆರ್ಯನ್ ಖಾನ್, ಆತನ ಇಬ್ಬರು ಸ್ನೇಹಿತರಾದ ಅರ್ಬಾಜ್ ಸೇಠ್ ಹಾಗೂ ಮುನ್‌ಮುನ್ ಧಮೇಛಾನನ್ನು ಬಂಧಿಸಲಾಗಿದೆ. ಕೋರ್ಟ್ ಮುಂದೆ ಹಾಜರು ಪಡಿಸಿದ ಬಳಿಕ ಮೂವರೂ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಎನ್‌ಸಿಬಿ ವಶಕ್ಕೆ ಪಡೆದುಕೊಂಡಿದೆ. ಎರಡು ದಿನ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತಾದರೂ ನ್ಯಾಯಾಲಯ ಒಂದು ದಿನಕ್ಕೆ ಸಮ್ಮತಿ ಸೂಚಿಸಿದೆ. ಈ ಮಧ್ಯೆ, ಆರ್ಯನ್ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಹಿರಿಯ ವಕೀಲ ಸತೀಸ್ ಮನ್‌ಶಿಂಧೆ ಹೇಳಿದ್ದಾರೆ. ಎನ್‌ಸಿಬಿ ವಶಕ್ಕೆ ಪಡೆದ ಎಂಟು ಜನರಲ್ಲಿಮೂವರು ಯುವತಿಯರೂ ಇದ್ದಾರೆ. ಅವರೆಲ್ಲರೂ ದಿಲ್ಲಿಮೂಲದವರೆಂದು ತಿಳಿದುಬಂದಿದೆ. ಮಾದಕ ವಸ್ತು ವಶ: ದಾಳಿ ವೇಳೆ ಕ್ರೂಸ್‌ಶಿಪ್‌ನಲ್ಲಿಮಾದಕ ವಸ್ತು ಪತ್ತೆಯಾಗಿದ್ದು, 13 ಗ್ರಾಮ್ ಕೊಕೇನ್, 6 ಗ್ರಾಮ್ ಎಂಡಿ, 21 ಗ್ರಾಮ್ ಚರಸ್ ಹಾಗೂ 1,33,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಹೇಗೆ?
- 15 ದಿನಗಳ ಮುನ್ನವೇ ನಡೆದಿತ್ತು ರೇವ್ ಪಾರ್ಟಿ ಬಗ್ಗೆ ಸುಳಿವು ಪಡೆದಿದ್ದ ಎನ್‌ಸಿಬಿ
- ಡ್ರಗ್ಸ್ ಸೇವನೆ ಮಾಡುವ ಅತಿಥಿಗಳ ಸೋಗಿನಲ್ಲಿ ಕ್ರೂಸ್ ಹಡಗು ಏರಿದ್ದ ಎನ್‌ಸಿಬಿ ಸಿಬ್ಬಂದಿ
- ರೇವ್ ಪಾರ್ಟಿ ಬಗ್ಗೆ ಸುಳಿವಿದ್ದರೂ, ಅದರಲ್ಲಿ ಭಾಗಿಯಾಗುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ
- ದಾಳಿ ವೇಳೆ ಸೆಲೆಬ್ರಿಟಿಗಳು, ಅವರ ಸಂಬಂಧಿಕರನ್ನು ಕಂಡು ಶಾಕ್ ಆದ ಅಧಿಕಾರಿಗಳು
- ರೇವ್ ಪಾರ್ಟಿಗೂ ನಮಗೂ ಸಂಬಂಧ ಇಲ್ಲವೆಂದ ಕಾರ್ಡಿಲಿಯಾ ಕ್ರೂಸ್ ಶಿಪ್ ಮಾಲೀಕ
from India & World News in Kannada | VK Polls https://ift.tt/3oIIjrZ