ಹೆಚ್ಚುತ್ತಿದೆ ಜಿಕಾ ಸೋಂಕು ಭೀತಿ! ಏನಿದು Zika Virus? ಇದರಿಂದ ಯಾರಿಗೆ ಹೆಚ್ಚು ಅಪಾಯ?

ಹೊಸದಿಲ್ಲಿ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರಿಗೆ ಜಿಕಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಇದರಿಂದ ದೇಶದಲ್ಲಿ ಈ ಸೋಂಕಿಗೆ ತುತ್ತಾದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಕೇರಳದಲ್ಲೇ 60 ಜನರಿಗೆ ಸೋಂಕು ತಗುಲಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಕೊರೊನಾ ಮಧ್ಯೆಯೇ ಜಿಕಾ ಸೋಂಕಿನ ಭೀತಿ ಹೆಚ್ಚುತ್ತಿದೆ. ಏನಿದು ಜಿಕಾ?ಡೆಂಘೀ, ಕಾಮಾಲೆ ಸೋಂಕಿನ ರೀತಿಯೇ ಜಿಕಾ ಸಹ ಒಂದು ಸೋಂಕಾಗಿದೆ. ಇದು ಈಡಿಸ್‌ ತಳಿಯ ಸೊಳ್ಳೆಗಳು, ಅದರಲ್ಲೂ ಈಡಿಸ್‌ ಈಜಿಪ್ಟಿ ಸೊಳ್ಳೆಗಳ ಕಡಿತದಿಂದ ಸೋಂಕು ತಗುಲುತ್ತದೆ. ಈ ಸೊಳ್ಳೆಗಳು ಹಗಲು ವೇಳೆಯಲ್ಲೇ ಕಚ್ಚುತ್ತವೆ. ಗರ್ಭಿಣಿಯಿಂದ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಲೈಂಗಿಕ ಸಂಪರ್ಕ, ರಕ್ತ ನೀಡುವಿಕೆ, ಅಂಗಾಗ ಕಸಿ ಮೂಲಕವೂ ಸೋಂಕು ಹರಡುತ್ತದೆ. ಲಕ್ಷಣಗಳು ಯಾವುವು? ಜ್ವರ, ತಲೆನೋವು, ಸುಸ್ತು, ಕೀಲು ಮತ್ತು ಸ್ನಾಯು ನೋವು, ಚರ್ಮದ ಮೇಲೆ ಕೆಂಪು ಗುಳ್ಳೆ (ದದ್ದು)ಗಳು ಜೈಕಾ ಸೋಂಕಿನ ಸಾಮಾನ್ಯ ಲಕ್ಷಣಗಳು. ತಗುಲಿದ ತುಂಬ ಜನರಿಗೆ ಲಕ್ಷಣಗಳೇ ಇರುವುದಿಲ್ಲ. ಒಂದೊಮ್ಮೆ ಸೋಂಕಿನ ಲಕ್ಷಣ ಕಾಣಿಸಿಕೊಂಡರೂ ಅವು ಸೌಮ್ಯವಾಗಿರುತ್ತವೆ. ಸೋಂಕು ತಗುಲಿದ ಮೂರರಿಂದ 14 ದಿನಗಳ ಒಳಗೆ ಲಕ್ಷಣಗಳು ಕಾಣಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ. ಚಿಕಿತ್ಸೆ ಹೇಗೆ?ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಸೋಂಕಿನಿಂದ ಸಾಯುವವರ ಸಂಖ್ಯೆ ತುಂಬ ವಿರಳವಾಗಿದೆ. ಇದಕ್ಕೆ ನಿರ್ದಿಷ್ಟ ಔಷಧಿ ಇಲ್ಲ. ಸೊಳ್ಳೆಗಳಿಂದ ಆದಷ್ಟು ರಕ್ಷಣೆ ಪಡೆಯುವುದು ತುಂಬ ಒಳ್ಳೆಯದು. ದೃಢವಾದ ತಕ್ಷಣ ಏನು ಮಾಡಬೇಕು?ಮೂತ್ರ, ರಕ್ಷ ಪರೀಕ್ಷೆ ಸೇರಿ ಹಲವು ರೀತಿಯ ತಪಾಸಣೆಯಿಂದ ಜಿಕಾ ಸೋಂಕು ಪತ್ತೆ ಹಚ್ಚಬಹುದು. ಸೋಂಕು ತಗುಲಿರುವುದು ದೃಢಪಟ್ಟ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹೆಚ್ಚು ವಿಶ್ರಾಂತಿ ಪಡೆಯುವುದರ ಜತೆಗೆ ನಿರ್ಜಲೀಕರಣ ತಡೆಗೆ ಹೆಚ್ಚು ನೀರು ಕುಡಿಯಬೇಕು. ವೈದ್ಯರ ಸಲಹೆ ಪಡೆದೇ ಔಷಧಿ ಸೇವಿಸಬೇಕು. ಮಾರಣಾಂತಿಕವೇ? ಸಾಮಾನ್ಯವಾಗಿ ಜಿಕಾ ಸೋಂಕಿನಿಂದ ಸಾವಿನ ಪ್ರಮಾಣ ತುಂಬ ಕಡಿಮೆ ಇದೆ. ಆದರೆ, ಇದು ಗರ್ಭಿಣಿಯರಿಗೆ ತಗುಲಿದರೆ ಮಾತ್ರ ಅಪಾಯಕಾರಿಯಾಗಿದ್ದು, ಸೋಂಕಿತೆ ಮೃತಪಡುವ ಸಾಧ್ಯತೆ ಇದೆ. ಅಲ್ಲದೆ, ಗರ್ಭಪಾತ, ದೋಷಯುಕ್ತ ಮಕ್ಕಳ ಜನನ ಸಾಧ್ಯತೆಯೂ ಇದೆ. ಹಾಗಾಗಿ ಗರ್ಭಿಣಿಯರು ಹೆಚ್ಚಿನ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ.


from India & World News in Kannada | VK Polls https://ift.tt/3jeIZAK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...