ಹೊಸದಿಲ್ಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಮ್ಮ ನೆಚ್ಚಿನ ಭಾರತ ತಂಡವನ್ನು ಆಯ್ಕೆ ಮಾಡಿರುವ ಮಾಜಿ ವಿಕೆಟ್ ಕೀಪರ್ , ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂಡಿಯಾ ನ್ಯೂಸ್ ಜೊತೆ ಮಾತನಾಡಿದ ಸಬಾ ಕರೀಮ್, "ತಾನು ಆಯ್ಕೆ ಮಾಡಿರುವ ತಂಡದಲ್ಲಿ ಬಹುತೇಕ ಇಂಗ್ಲೆಂಡ್ ಪ್ರವಾಸದಲ್ಲಿರುವ ಆಟಗಾರರೇ ಇದ್ದಾರೆ. ಏಕೆಂದರೆ, ಇಂಗ್ಲೆಂಡ್ ಪ್ರವಾಸದಲ್ಲಿರುವ ಆಟಗಾರರು ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಆಡಲು ಸಾಧ್ಯವಾಗಿರಲಿಲ್ಲ. ಈ ಕಾರಣ, ಆಯ್ಕೆದಾರರು ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಟಿ20 ವಿಶ್ವಕಪ್‌ಗೆ ಪರಿಗಣಿಸಬಹುದು. ಅದಲ್ಲದೆ, ಟೆಸ್ಟ್ ಸರಣಿ ಬಳಿಕ ಭಾರತಕ್ಕೆ ಯಾವುದೇ ಅಂತಾರಾಷ್ಟ್ರೀಯ ಸರಣಿ ಇಲ್ಲದೇ ಇರುವುದು ಕೂಡ ಒಂದು ಕಾರಣ," ಎಂದು ಹೇಳಿದರು. "ಸ್ಥಿರ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಕಟ್ಟಿದ್ದೇನೆ. ಅಂದಹಾಗೆ, ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್‌ಗೆ ತಂಡದಲ್ಲಿ ಅವಕಾಶ ಕಲ್ಪಿಸಿದ್ದೇನೆ. ಏಕೆಂದರೆ, ಯುಎಇಯಲ್ಲಿ ಟೂರ್ನಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಫ್ ಸ್ಪಿನ್ ಆಲ್‌ರೌಂಡರ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ," ಎಂದರು. ಗಾಯದ ಬಳಿಕ ಬೌಲಿಂಗ್ ಲಯಕ್ಕೆ ಮರಳುತ್ತಿರುವ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಗಮನ ಸೆಳೆದಿದ್ದ ರಾಹುಲ್ ಚಹರ್ ಅವರಿಗೆ ತಮ್ಮ ತಂಡದಲ್ಲಿ ಮಾಜಿ ಆಟಗಾರ ಅವಕಾಶ ಕಲ್ಪಿಸಿದ್ದಾರೆ. "ವಾಷಿಂಗ್ಟನ್ ಸುಂದರ್ ಜೊತೆಗೆ ರಾಹುಲ್ ಚಹರ್ ಅವರನ್ನು ಆಯ್ಕೆ ಮಾಡುತ್ತೇನೆ. ಏಕೆಂದರೆ ಅವರು ಆಕ್ರಮಣಕಾರಿ ಬೌಲರ್, ವಿಕೆಟ್ ಪಡೆಯುವ ಬೌಲರ್ ಹಾಗೂ ಮ್ಯಾಚ್ ವಿನ್ನರ್. ಇನ್ನು ಗಾಯದಿಂದ ದೀರ್ಘ ಕಾಲ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಸದ್ಯ ಫಾರ್ಮ್‌ಗೆ ಮರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತೇನೆ," ಎಂದು ತಿಳಿಸಿದರು. "ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇನೆ. ಏಕೆಂದರೆ ಅವರು ಇಂಗ್ಲೆಂಡ್ ವಿರುದ್ಧ ಈ ಹಿಂದೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. 2021ರ ಐಪಿಎಲ್ ಮೊದಲ ಅವಧಿಯಲ್ಲಿ ಅವರು ಕಣಕ್ಕೆ ಇಳಿದಿರಲಿಲ್ಲ ಎಂದು ನೀವು ಹೇಳಬಹುದು. ಆದರೆ, ಅವರು 2020ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಎಂಬುದು ಮರೆಯಬಾರದು. ಈ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ನೀಡಲಾಗಿದೆ," ಎಂದು ಸಬಾ ಕರೀಮ್ ಮಾತು ಮುಗಿಸಿದರು. ಸಬಾ ಕರೀಮ್‌ರ 2021ರ ಟಿ20 ವಿಶ್ವಕಪ್ ಭಾರತ ತಂಡ
- ರೋಹಿತ್ ಶರ್ಮಾ
- ಕೆ.ಎಲ್ ರಾಹುಲ್
- (ನಾಯಕ)
- ಶ್ರೇಯಸ್ ಅಯ್ಯರ್
- ಇಶಾನ್ ಕಿಶನ್ (ವಿ.ಕೀ)
- ಸೂರ್ಯಕುಮಾರ್ ಯಾದವ್
- ರಿಷಭ್ ಪಂತ್(ವಿ.ಕೀ)
- ಹಾರ್ದಿಕ್ ಪಾಂಡ್ಯ
- ವಾಷಿಂಗ್ಟನ್ ಸುಂದರ್
- ಟಿ ನಟರಾಜನ್
- ಜಸ್‌ಪ್ರಿತ್ ಬುಮ್ರಾ
- ರವೀಂದ್ರ ಜಡೇಜಾ
- ರಾಹುಲ್ ಚಹರ್
- ದೀಪಕ್ ಚಹರ್
- ಭುವನೇಶ್ವರ್ ಕುಮಾರ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lhi6il