Tokyo olympics : ಆಗಸ್ಟ್ 2ರ ಭಾರತದ ವೇಳಾಪಟ್ಟಿ, ಫಲಿತಾಂಶ!

ಟೋಕಿಯೋ (ಜಪಾನ್‌): ಇಂದು (ಸೋಮವಾರ) ಡಿಸ್ಕಸ್‌ ಥ್ರೋ ಮಹಿಳೆಯರ ವಿಭಾಗದ ಅಂತಿಮ ಸುತ್ತು ಜರುಗಲಿದ್ದು, ಭಾರತದ ಕಮಲ್‌ ಪ್ರೀತ್‌ ಕೌರ್‌ ಅವರು ಪ್ರಬಲ ಸ್ಪರ್ಧಿಯಾಗಿದ್ದಾರೆ. ಆ ಮೂಲಕ ಅವರು ಭಾರತಕ್ಕೆ ಮತ್ತೊಂದು ಪದಕ ಗೆದ್ದು ಕೊಡುವ ಸಾಧ್ಯತೆ ಇದೆ. ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ 64 ಮೀಟರ್‌ ಡಿಸ್ಕಸ್‌ ಎಸೆಯುವ ಮೂಲಕ ಕೌರ್‌, ನೇರವಾಗಿ ಫೈನಲ್‌ಗೆ ಪ್ರವೇಶ ಮಾಡಿದ್ದರು. ಮತ್ತೊಂದೆಡೆ ಭಾರತ ಮಹಿಳೆಯರ ಹಾಕಿ ತಂಡ ಇಂದು ಆಸ್ಟ್ರೇಲಿಯಾ ವಿರುದ್ಧ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೆಣಸಲಿದೆ. ಗುಂಪು ಹಂತದಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದ್ದ ರಾಣಿ ರಾಂಪಾಲ್‌ ಬಳಗ, ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದಲ್ಲಿ ಗೆದ್ದಿತ್ತು. ನಂತರ ಗ್ರೇಟ್‌ ಬ್ರಿಟನ್‌ ವಿರುದ್ಧ ಐರ್ಲೆಂಡ್ ಸೋತ ಹಿನ್ನೆಲೆಯಲ್ಲಿ ಭಾರತ ಕ್ವಾರ್ಟರ್‌ ಫೈನಲ್ಸ್‌ಗೆ ಅಧಿಕೃತವಾಗಿ ಲಟ್ಟಿ ಇಟ್ಟಿತ್ತು. ಅಂದಹಾಗೆ, ಭಾನುವಾರ ಪಿವಿ ಸಿಂಧೂ ಅವರು ಮಹಿಳೆಯರ ಬ್ಯಾಡ್ಮಿಂಟನ್‌ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ ಭಾರತಕ್ಕೆ ಎರಡು ಪದಕ ಸೇರಿದಂತಾಗಿದೆ. ಅಥ್ಲೆಟಿಕ್ಸ್‌ 07:24 : ಮಹಿಳೆಯರ 200ಮೀ ರೌಂಡ್‌-1 ಹೀಟ್4 (ದೂತೀ ಚಾಂದ್‌)- ಭಾರತದ ದೂತೀ ಚಾಂದ್‌ ಅವರು 200 ಮೀಟರ್ ಓಟವನ್ನು 23.85 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು. ಇದರ ಹೊರತಾಗಿಯೂ ಅವರು ಹೀಟ್‌-4ರಲ್ಲಿ 7ನೇ ಸ್ಥಾನ ಪಡೆದರು. ಆದರೂ ಅವರು ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ, ಪ್ರಸಕ್ತ ಆವೃತ್ತಿಯ ಅತ್ಯುತ್ತಮ ಸಮಯ ಇದಾಗಿದೆ. ಶೂಟಿಂಗ್‌ 08:00 : 50ಮೀ ರೈಫಲ್‌ 3ರ ಸ್ಥಾನಕ್ಕೆ ಪುರುಷರ ಅರ್ಹತಾ ಸುತ್ತು (ಐಶ್ವರ್ಯ್‌ ಪ್ರತಾಪ್‌ ಸಿಂಗ್‌ ಥೋಮರ್‌, ಸಂಜೀವ್‌ ರಜಪೂತ್‌) ಹಾಕಿ08:30 : ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮಹಿಳೆಯರ ಹಾಕಿ ಕ್ವಾರ್ಟರ್‌ ಫೈನಲ್‌ ಪಂದ್ಯ ಶೂಟಿಂಗ್‌ 01: 20 : 50 ಮೀಟರ್‌ ರೈಫಲ್‌ ಪುರುಷರ ಮೂರರ ಸ್ಥಾನಕ್ಕೆ ಫೈನಲ್‌ ಇಕ್ವೆಸ್ಟ್ರೀಯನ್‌ 1:30 : ಜಂಪಿಂಗ್‌ ವೈಯಕ್ತಿಕ ಅರ್ಹತಾ ಸುತ್ತು (ಫೌದಾ ಮಿರ್ಜಾ) ಅಥ್ಲೆಟಿಕ್ಸ್‌ 4:30 : ಮಹಿಳೆಯರ ಡಿಸ್ಕಸ್‌ ಥ್ರೋ ಫೈನಲ್‌ (ಕಮಲ್‌ ಪ್ರೀತ್ ಕೌರ್)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zUqF6A

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...