ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಅಘ್ಘಾನ್‌ನಲ್ಲಿ ಚೀನಾ ಉಪಸ್ಥಿತಿಯಿಂದ ಶುರುವಾಗಲಿದೆ ತಂಟೆ!

ಅಮೆರಿಕ ಹಾಗೂ ಇಸ್ಲಾಮಿಕ್ ತೀವ್ರವಾದಿಗಳ ಯುದ್ಧಭೂಮಿಯಾಗಿ ಮಾರ್ಪಟ್ಟಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿ ದಶಕಗಳೇ ಉರುಳಿವೆ. ಈಗ ಅಘ್ಘಾನಿಸ್ತಾನ ನೆಲದಿಂದ ಎರಡು ದಶಕಗಳ ಬಳಿಕ ಅಮೆರಿಕ ಕಾಲ್ತೆಗೆಯುತ್ತಿದೆ. ಸೆಪ್ಟೆಂಬರ್ ಒಳಗಾಗಿ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವುದಾಗಿ ಅಮೆರಿಕ ಘೋಷಿಸಿದೆ. ಅಮೆರಿಕದ ಈ ನಿರ್ಧಾರ ಸಹಜವಾಗಿ ಜಾಗತಿಕ ಪರಿಣಾಮ ಬೀರಿದ್ದು, ಎರಡು ದಶಕಗಳ ಹೋರಾಟದ ಅಂತಿಮ ಫಲಿತಾಂಶ ಏನು ಎಂಬ ವಿಮರ್ಶೆ ಶುರುವಾಗಿದೆ. ಅಮೆರಿಕ ಕುಖ್ಯಾತ ಉಗ್ರ ಹಾಗೂ ಅಲ್ ಖೈದಾ ಉಗ್ರ ಸಂಘಟನೆಯ ನಾಯಕ ಹಾಗೂ 9/11 ದಾಳಿಯ ಸೂತ್ರಧಾರಿ ಓಸಾಮಾ ಬಿನ್ ಲಾಡೆನ್‌ನನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದರೂ, ತಾಲಿಬಾನ್ ಸಂಘಟನೆಯನ್ನೂ ಸಂಪೂರ್ಣವಾಗಿ ಮಟ್ಟಹಾಕುವಲ್ಲಿ ಯಶಸ್ವಿಯಾಗಿಲ್ಲ. ಅಮೆರಿಕನ್ ಪಡೆಗಳು ನಿರ್ಗಮನದ ತಯಾರಿ ನಡೆಸುತ್ತಿದ್ದಂತೇ ಮತ್ತೆ ಚುರುಕಾಗಿರುವ ತಾಲಿಬಾನ್, ಮತ್ತೆ ಅಫ್ಘಾನಿಸ್ತಾನದಲ್ಲಿ ತನ್ನ ವಿದ್ವಂಸಕ ಕೃತ್ಯಗಳನ್ನು ಮುಂದುವರೆಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಅಮೆರಿಕದ ನಿರ್ಗಮನದ ಲಾಭ ಪಡೆಯಲು ಮುಂದಾಗಿರುವ ಚೀನಾ, ಅಫ್ಘಾನಿಸ್ತಾನದಲ್ಲಿ ನುಸುಳಲು ಸಿದ್ಧತೆ ನಡೆಸಿದೆ. ಈಗಾಗಲೇ ತಾಲಿಬಾನ್‌ನೊಂದಿಗೆ ಚೀನಾ ಮಾತುಕತೆ ಆರಂಭಿಸಿದೆ. ಅಫ್ಘಾನಿಸ್ತಾನದಲ್ಲಿ ಚೀನಾದ ಉಪಸ್ಥಿತಿ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಭಾರತ ಈ ಕುರಿತು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಹಾಗಾದರೆ ಎರಡು ದಶಕಗಳ ಈ ರಕ್ತಸಿಕ್ತ ಹೋರಾಟ, ಅಮೆರಿಕದ ನಿರ್ಗಮನ ಹಾಗೂ ಚೀನಾದ ಹುನ್ನಾರ ಜೊತೆಗೆ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳನ್ನು ವಿಮರ್ಶೆ ಮಾಡುವುದಾದರೆ...

ಅಮೆರಿಕ ಹಾಗೂ ಇಸ್ಲಾಮಿಕ್ ತೀವ್ರವಾದಿಗಳ ಯುದ್ಧಭೂಮಿಯಾಗಿ ಮಾರ್ಪಟ್ಟಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿ ದಶಕಗಳೇ ಉರುಳಿವೆ. ಈಗ ಅಘ್ಘಾನಿಸ್ತಾನ ನೆಲದಿಂದ ಎರಡು ದಶಕಗಳ ಬಳಿಕ ಅಮೆರಿಕ ಕಾಲ್ತೆಗೆಯುತ್ತಿದೆ. ಆದರೆ ಅಮೆರಿಕದ ನಿರ್ಗಮನ ಚೀನಾಗೆ ಅಫ್ಘಾನಿಸ್ತಾನದಲ್ಲಿ ನುಸುಳಲು ಅವಕಾಶ ಮಾಡಿಕೊಟ್ಟಿದ್ದು, ಭಾರತ ಈ ಕುರಿತು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಅಘ್ಘಾನ್‌ನಲ್ಲಿ ಚೀನಾ ಉಪಸ್ಥಿತಿಯಿಂದ ಶುರುವಾಗಲಿದೆ ತಂಟೆ!

ಅಮೆರಿಕ ಹಾಗೂ ಇಸ್ಲಾಮಿಕ್ ತೀವ್ರವಾದಿಗಳ ಯುದ್ಧಭೂಮಿಯಾಗಿ ಮಾರ್ಪಟ್ಟಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿ ದಶಕಗಳೇ ಉರುಳಿವೆ. ಈಗ ಅಘ್ಘಾನಿಸ್ತಾನ ನೆಲದಿಂದ ಎರಡು ದಶಕಗಳ ಬಳಿಕ ಅಮೆರಿಕ ಕಾಲ್ತೆಗೆಯುತ್ತಿದೆ. ಸೆಪ್ಟೆಂಬರ್ ಒಳಗಾಗಿ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವುದಾಗಿ ಅಮೆರಿಕ ಘೋಷಿಸಿದೆ. ಅಮೆರಿಕದ ಈ ನಿರ್ಧಾರ ಸಹಜವಾಗಿ ಜಾಗತಿಕ ಪರಿಣಾಮ ಬೀರಿದ್ದು, ಎರಡು ದಶಕಗಳ ಹೋರಾಟದ ಅಂತಿಮ ಫಲಿತಾಂಶ ಏನು ಎಂಬ ವಿಮರ್ಶೆ ಶುರುವಾಗಿದೆ. ಅಮೆರಿಕ ಕುಖ್ಯಾತ ಉಗ್ರ ಹಾಗೂ ಅಲ್ ಖೈದಾ ಉಗ್ರ ಸಂಘಟನೆಯ ನಾಯಕ ಹಾಗೂ 9/11 ದಾಳಿಯ ಸೂತ್ರಧಾರಿ ಓಸಾಮಾ ಬಿನ್ ಲಾಡೆನ್‌ನನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದರೂ, ತಾಲಿಬಾನ್ ಸಂಘಟನೆಯನ್ನೂ ಸಂಪೂರ್ಣವಾಗಿ ಮಟ್ಟಹಾಕುವಲ್ಲಿ ಯಶಸ್ವಿಯಾಗಿಲ್ಲ. ಅಮೆರಿಕನ್ ಪಡೆಗಳು ನಿರ್ಗಮನದ ತಯಾರಿ ನಡೆಸುತ್ತಿದ್ದಂತೇ ಮತ್ತೆ ಚುರುಕಾಗಿರುವ ತಾಲಿಬಾನ್, ಮತ್ತೆ ಅಫ್ಘಾನಿಸ್ತಾನದಲ್ಲಿ ತನ್ನ ವಿದ್ವಂಸಕ ಕೃತ್ಯಗಳನ್ನು ಮುಂದುವರೆಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಅಮೆರಿಕದ ನಿರ್ಗಮನದ ಲಾಭ ಪಡೆಯಲು ಮುಂದಾಗಿರುವ ಚೀನಾ, ಅಫ್ಘಾನಿಸ್ತಾನದಲ್ಲಿ ನುಸುಳಲು ಸಿದ್ಧತೆ ನಡೆಸಿದೆ. ಈಗಾಗಲೇ ತಾಲಿಬಾನ್‌ನೊಂದಿಗೆ ಚೀನಾ ಮಾತುಕತೆ ಆರಂಭಿಸಿದೆ. ಅಫ್ಘಾನಿಸ್ತಾನದಲ್ಲಿ ಚೀನಾದ ಉಪಸ್ಥಿತಿ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಭಾರತ ಈ ಕುರಿತು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಹಾಗಾದರೆ ಎರಡು ದಶಕಗಳ ಈ ರಕ್ತಸಿಕ್ತ ಹೋರಾಟ, ಅಮೆರಿಕದ ನಿರ್ಗಮನ ಹಾಗೂ ಚೀನಾದ ಹುನ್ನಾರ ಜೊತೆಗೆ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳನ್ನು ವಿಮರ್ಶೆ ಮಾಡುವುದಾದರೆ...

9/11 ಇತಿಹಾಸ!
9/11 ಇತಿಹಾಸ!

ಅದು ಸೆಪ್ಟೆಂಬರ್ 11, 2001. ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾದಿಂದ ತರಬೇತಿ ಪಡೆದ ಉಗ್ರರು ಪ್ರಯಾಣಿಕರ ವಿಮಾನ ನುಗ್ಗಿಸಿದ್ದರು. ನೋಡನೋಡುತ್ತಿದ್ದಂತೇ WTC ಕಟ್ಟಡಕ್ಕೆ ಮೂರು ವಿಮಾನಗಳು ಅಪ್ಪಳಿಸಿದವು. ಈ ಭಯೋತ್ಪಾದಕ ದಾಳಿಯಲ್ಲಿ 19 ಉಗ್ರರೂ ಸೇರಿ ಸುಮಾರು 2,996 ಜನ ತಮ್ಮ ಪ್ರಾಣ ಕಳೆದುಕೊಂಡರು. ಅಮೆರಿಕ ಅಷ್ಟೇ ಏಕೆ ಜಗತ್ತಿನ ಇತಿಹಾಸದಲ್ಲೇ ಈ ದಾಳಿಯನ್ನು ಅತ್ಯಂತ ಕ್ರೂರ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ.

ಅಮೆರಿಕದ ಮೇಲಿನ ಭಯೋತ್ಪಾದಕ ದಾಳಿಗೆ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಓಸಾಮಾ ಬಿನ್ ಲಾಡೆನ್ ರೂವಾರಿ ಎಂದರಿತ ಅಂದಿನ ಜಾರ್ಜ್ ಡಬ್ಲೂ. ಬುಷ್ ಆಡಳಿತ, ಆತನ ಬೇಟೆ ಆರಂಭಿಸಿತು. ಲಾಆಡೆನ್ ಆಶ್ರಯ ಪಡೆದಿದ್ದ ಅಫ್ಘಾನಿಸ್ತಾನದಲ್ಲಿ ಆಗ ಇಸ್ಲಾಂ ಮೂಲಭೂತವಾದಿ ತಾಲಿಬಾನ್ ಆಡಳಿತವಿತ್ತು. ಲಾಡೆನ್ ಹಸ್ತಾಂತರಿಸುವಂತೆ ಅಮೆರಿಕ ಮಾಡಿದ್ದ ಮನವಿಯನ್ನು ತಾಲಿಬಾನ್ ತಿರಸ್ಕರಿಸದಾಗ, ಅಧ್ಯಕ್ಷ ಬುಷ್ ಅಫ್ಘಾನಿಸ್ತಾನದ ಮೇಲೆ ಯುದ್ಧ ಸಾರಿದರು.

ಡಬ್ಲ್ಯೂಟಿಸಿ ದಾಳಿಯ ಕರಾಳ ನೆನಪು: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 11

ಮುಂದೆ 2011ರಲ್ಲಿ ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಓಸಾಮಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಪತ್ತೆ ಹಚ್ಚಿ ಕೊಲ್ಲಲಾಯಿತು. ಆದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಜೊತೆಗಿನ ಯುದ್ಧ ಮುಂದುವರೆಯಿತು. ಇದೀಗ ಅಮೆರಿಕ ಈ ಯುದ್ಧವನ್ನು ಕೊನೆಗಾಣಿಸಲು ಬಯಸಿದ್ದು, ಸೆಪ್ಟೆಂಬರ್‌ ಒಳಗಾಗಿ ತನ್ನ ಸೈನ್ಯವನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಳ್ಳುವುದಾಗಿ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ.

ಮತ್ತೆ ಚಿಗುರಿದ ತಾಲಿಬಾನ್
ಮತ್ತೆ ಚಿಗುರಿದ ತಾಲಿಬಾನ್

ಇನ್ನು ಅಫ್ಘಾನಿಸ್ತಾನದಿಂದ ಅಮೆರಿಕ ಕಾಲ್ಕಿಳುವ ನಿರ್ಧಾರ ಘೋಷಣೆಯಾಗುತ್ತಿದ್ದಂತೇ, ಇಸ್ಲಾಮಿಕ್ ಮೂಲಭೂತವಾದಿ ತಾಲಿಬಾನ್ ಮತ್ತೆ ಚಿಗುರಿದೆ. ಈಗಾಗಲೇ ದೇಶಾದ್ಯಂತ ಹಿಂಸಾಕೃತ್ಯಕ್ಕೆ ಕುಮ್ಮಕ್ಕು ನೀಡಿರುವ ತಾಲಿಬಾನ್, ಅಫ್ಘಾನಿಸ್ತಾನ ಸೈನಿಕರನ್ನು ಹಾಗೂ ಮುಗ್ಧ ನಾಗರಿಕರನ್ನು ಹತ್ಯೆ ಮಾಡುತ್ತಿದೆ.

ವಾಯುದಾಳಿಯ ಬೆನ್ನಲ್ಲೇ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ರಾಕೆಟ್ ದಾಳಿ

ಅಫ್ಘಾನ್ ಸರ್ಕಾರದೊಂದಿಗೆ ಯಾವುದೇ ಶಾಂತಿ ಒಪ್ಪಂದವಿಲ್ಲ ಎಂದು ಘೋಷಿಸಿರುವತಾಲಿಬಾನ್, ಅಮೆರಿಕನ್ ಪಡೆಗಳು ದೇಶದಿಂದ ನಿರ್ಗಮಿಸುತ್ತಿದ್ದಂತೇ ಅಧಿಕಾರವನ್ನು ವಶಕ್ಕೆ ಪಡೆಯುವುದಾಗಿ ಘೋಷಿಸಿದೆ. ಅಫ್ಘಾನ್ ಪಡೆಗಳು ಹಾಗೂ ತಾಲಿಬಾನ್ ನಡುವೆ ಸಂಘರ್ಷ ಜೋರಾಗಿದ್ದು, ಅಫ್ಘಾನಿಸ್ತಾನದಲ್ಲಿ ಮತ್ತೆ ತನ್ನ ಕರಾಳ ಶಾಸನಗಳನ್ನು ಜಾರಿಗೊಳಿಸಲು ತಾಲಿಬಾನ್ ಸಿದ್ಧವಾಗುತ್ತಿದೆ.

ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಡ್ರ್ಯಾಗನ್!
ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಡ್ರ್ಯಾಗನ್!

ಇನ್ನು ಅಫ್ಘಾನಿಸ್ತಾನದಿಂದ ಅಮೆರಿಕ ಕಾಲ್ಕಿಳುತ್ತಿರುವಂತೆಯೇ, ಪರಿಸ್ಥಿತಿಯ ಲಾಭ ಪಡೆಯಲು ಚೀನಾ ಹವಣಿಸುತ್ತಿದೆ. ಈಗಾಗಲೇ ತಾಲಿಬಾನ್ ಜೊತೆ ಸಂಪರ್ಕ ಸಾಧಿಸಿರುವ ಚೀನಾ, ತಾಲಿಬಾನ್ ನಾಯಕರೊಂದಿಗೆ ಮಾತುಕತೆ ಆರಂಭಿಸಿದೆ.

ಇತ್ತೀಚಿಗೆ ತಾಲಿಬಾನ್ ಪ್ರತಿನಿಧಿಗಳ ನಿಯೋಗವೊಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದೆ. ಉತ್ತರ ಚೀನಾದ ಟಿಯಾಂಜಿನ್ ನಗರಕ್ಕೆ ಎರಡು ದಿನಗಳ ಭೇಟಿಗೆ ತೆರಳಿದ್ದ ಈ ತಂಡ, ಶಾಂತಿ ಪ್ರಕ್ರಿಯೆ ಮತ್ತು ಭದ್ರತಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದವು ಎಂದು ಹೇಳಲಾಗಿದೆ. ಅಲ್ಲದೇ ಅಫ್ಘಾನಿಸ್ತಾನ ನೆಲದಲ್ಲಿ ಚೀನಾ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದೂ ತಾಲಿಬಾನ್ ಈ ವೇಳೆ ಭರವಸೆ ನೀಡಿದೆ.

ಚೀನಾ ವಿರುದ್ಧ ಆಫ್ಘನ್ ನೆಲ ಬಳಸಿಕೊಳ್ಳಲು ಯಾರಿಗೂ ಬಿಡುವುದಿಲ್ಲ: ತಾಲಿಬಾನ್ ಉಗ್ರರ ಹೇಳಿಕೆ

ಪರಿಸ್ಥಿತಿಯ ಲಾಭ ಪಡೆಯುವ ಇರಾದೆ ಒಂದೆಡೆಯಾದರೆ, ತನ್ನ ಮಹತ್ವಾಕಾಂಕ್ಷಿ ಬೆಲ್ಟ್ ಮತ್ತು ರೋಡ್ ಯೋಜನೆಯ ವಿಸ್ತರಣೆಗಾಗಿ ತಾಲಿಬಾನ್ ಜೊತೆ ಸ್ನೇಹ ಸಂಪಾದಿಸಲು ಚೀನಾ ಮುಂದಡಿ ಇಟ್ಟಿದೆ. ಅಲ್ಲದೇ ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವ ವೃದ್ಧಿಸಿ ಆ ಮೂಲಕ ಭಾರತಕ್ಕೆ ಹೊಡೆತ ನೀಡುವುದು ಚೀನಾದ ಯೋಜನೆಯಾಗಿದೆ.

ಭಾರತ ಇಡಬೇಕಿದೆ ಎಚ್ಚರಿಕೆಯ ಹೆಜ್ಜೆ!
ಭಾರತ ಇಡಬೇಕಿದೆ ಎಚ್ಚರಿಕೆಯ ಹೆಜ್ಜೆ!

ಇನ್ನು ಅಫ್ಘಾನಿಸ್ತಾನದಿಂದ ಅಮೆರಿಕ ಕಾಲ್ಕಿಳುತ್ತಿರುವುದು ಮತ್ತು ತಾಲಿಬಾನ್‌ನೊಂದಿಗೆ ಚೀನಾ ಹತ್ತಿರವಾಗುತ್ತಿರುವುದು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದೆ. ಅಫ್ಘಾನಿಸ್ತಾನ ಅಭಿವೃದ್ಧಿಯಲ್ಲಿ ತನ್ನದೇ ಪಾತ್ರ ನಿರ್ವಹಿಸುತ್ತಿರುವ ಭಾರತ, ಅಷ್ಟು ಸುಲಭವಾಗಿ ಚೀನಾದ ತೆಕ್ಕೆಗೆ ಆ ದೇಶ ಜಾರುವುದುನ್ನು ಸುಮ್ಮನೆ ಕುಳಿತು ನೋಡಲಾರದು.

ಅಫ್ಘಾನಿಸ್ತಾನ ಕೂಡ ಸಂಕಷ್ಟ ಬಂದಾಗಲೆಲ್ಲಾ ಭಾರತದತ್ತ ದೃಷ್ಟಿ ನೆಟ್ಟಿದ್ದು, ಶಾಂತಿ ಮತ್ತು ಅಭಿವೃದ್ಧಿಗಾಗಿ ಭಾರತದ ನೆರವಿನ ಮಹತ್ವವನ್ನು ಅರಿತಿದೆ. ಈಗಾಗಲೇ ಮೋದಿ ಸರ್ಕಾರ ಅಫ್ಘಾನಿಸ್ತಾನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ದಾಳ ಉರುಳಿಸುವ ತನ್ನ ಸರದಿಗಾಗಿ ಕಾಯುತ್ತಿದೆ. ತಾಲಿಬಾನ್ ಜೊತೆಗಿನ ಹಹೋರಾಟದಲ್ಲಿ ಭಾರತೀಯ ಸೇನೆಯ ನೆರವು ಪಡೆಯುವ ಕುರಿತು ಚಿಂತನೆ ನಡೆಸಿದ್ದೇವೆ ಎಂಬ ಅಫ್ಘಾನಿಸ್ತಾನ ಸರ್ಕಾರದ ಹೇಳಿಕೆಯೇ, ಈ ಭಾಘದಲ್ಲಿ ಭಾರತದ ಮಹತ್ವ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತಿದೆ.

ತಾಲಿಬಾನ್ ಜತೆಗಿನ ಮಾತುಕತೆ ವಿಫಲವಾದರೆ, ಭಾರತದ ಸೇನೆಯ ನೆರವು ಕೋರಲು ಅಫ್ಘಾನಿಸ್ತಾನ ನಿರ್ಧಾರ

ಒಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ ಚೀನಾದ ಪ್ರಭಾವವನ್ನು ತಗ್ಗಿಸಿ ತನ್ನ ಹಿಡಿತ ಸಾಧಿಸುವುದು ಭಾರತಕ್ಕೆ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಮೋದಿ ಸರ್ಕಾರದ ನಿರ್ಧಾರಗಳು ತೀವ್ರ ಕುತೂಹಲ ಕೆರಳಿಸಿವೆ.

from India & World News in Kannada | VK Polls https://ift.tt/3C4VcRa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...