'ತಂಡದಲ್ಲಿ ವೀಕ್ನೆಸ್‌ ಇದೆ, ಕನ್ನಡಿಗನಿಗೆ ಚಾನ್ಸ್ ಕೊಡಿ' ಟೀಮ್‌ ಇಂಡಿಯಾಗೆ ಚೋಪ್ರಾ ಎಚ್ಚರಿಕೆ!

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಮ್‌ ಇಂಡಿಯಾಗೆ ಬ್ಯಾಟಿಂಗ್‌ ವಿಭಾಗದಲ್ಲಿ ದೌರ್ಬಲ್ಯ (ವೀಕ್ನೆಸ್‌)ವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ , ಈ ಕಾರಣದಿಂದಾಗಿ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ಇತ್ತೀಚೆಗೆ ನಡದಿದ್ದ ಕೌಂಟಿ ಚಾಂಪಿಯನ್‌ಷಿಪ್‌ ಇಲೆವೆನ್‌ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ ಶತಕ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೂಲದ ಬ್ಯಾಟ್ಸ್‌ಮನ್‌ಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ಸಿಗಲಿದೆ ಎಂಬುದು ಚೋಪ್ರಾ ಅವರ ಅಭಿಪ್ರಾಯ. ಒಂದು ವೇಳೆ ಬಲಗೈ ಬ್ಯಾಟ್ಸ್‌ಮನ್‌ ಅಂತಿಮ 11ರ ಬಳಗದಲ್ಲಿ ಕಾಣಿಸಿಕೊಂಡರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ. ಶುಭಮನ್‌ ಗಿಲ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಆವೇಶ್‌ ಖಾನ್‌ ಗಾಯಕ್ಕೆ ತುತ್ತಾಗಿರುವ ಕಾರಣ, ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಅವರನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಇಂಗ್ಲೆಂಡ್‌ಗೆ ಕರೆಸಿಕೊಂಡಿದೆ. ಇದರ ನಡುವೆ, ಕೀ ಆಟಗಾರರಾದ ಚೇತೇಶ್ವರ್‌ ಪೂಜಾರ, ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ ಅವರು ಇತ್ತೀಚೆಗೆ ರನ್‌ ಗಳಿಸಿದೆ ಇರುವುದು ಕೂಡ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿದೆ. ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ಲ್ಲಿಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಆಕಾಶ್‌ ಚೋಪ್ರಾ, ಕೆ.ಎಲ್‌ ರಾಹುಲ್ ಅವರನ್ನು ಅಂತಿಮ 11ರ ಬಳಗದಲ್ಲಿ ಆಡಿಸಿದರೆ, ತಂಡದ ಬ್ಯಾಟಿಂಗ್‌ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಇಂಗ್ಲೆಂಡ್‌ ಪರಿಸ್ಥಿತಿಗಳಲ್ಲಿ ಆಡಿರುವ ಅನುಭವವನ್ನು ಕೆಎಲ್‌ ರಾಹುಲ್‌ ಹೊಂದಿದ್ದಾರೆ. ವಿರುದ್ಧ ಅವರದೇ ನೆಲದಲ್ಲಿ ರಾಹುಲ್‌ ಶತಕ ಸಿಡಿಸಿದ್ದಾರೆ ಹಾಗೂ ಇತ್ತೀಚೆಗೆ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿಯೂ ಮೂರಂಕಿ ವೈಯಕ್ತಿಕ ಮೊತ್ತ ಕಲೆ ಹಾಕಿದ್ದಾರೆ. ಹಾಗಾಗಿ, ಅವರು ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾರೆ," ಎಂದು ಅವರು ತಿಳಿಸಿದರು. "ಇದರ ಹೊರತಾಗಿಯೂ ಭಾರತ ತಂಡದ ಬ್ಯಾಟಿಂಗ್‌ನಲ್ಲಿ ವೀಕ್ನೆಸ್‌ ಇದೆ. ಅಭಿಮನ್ಯು ಈಶ್ವರನ್‌ ಫಾರ್ಮ್‌ ಕಳೆದುಕೊಂಡಿದ್ದಾರೆ. ಅಲ್ಲದೆ, ವಿದೇಶಿ ನೆಲದಲ್ಲಿ ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್‌ ಜೋಡಿ ಹೇಳಿಕೊಳ್ಳುವಂತಹ ಸಕ್ಸಸ್‌ ಕಂಡಿಲ್ಲ. ಇನ್ನು ಬ್ಯಾಟಿಂಗ್‌ನಲ್ಲಿ ಹನುಮ ವಿಹಾರಿ ಸ್ಥಿರ ಪ್ರದರ್ಶನದ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕೆ.ಎಲ್‌ ರಾಹುಲ್‌ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ಪಕ್ಕಾ," ಎಂದು ಆಕಾಶ್‌ ಚೋಪ್ರಾ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rLoijM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...