ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಯ ಚಿತ್ರವನ್ನು ಟೈಮ್ ನಿಯತಕಾಲಿಕೆಯು ಮುಖಪುಟದಲ್ಲಿ ಮುದ್ರಿಸಿದ್ದಲ್ಲದೇ ಮುಖಪುಟ ಲೇಖನವನ್ನೂ ಪ್ರಕಟಿಸಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿ ದೇಶದ ಹಲವು ರಾಜ್ಯಗಳಿಂದ ಮಹಿಳಾ ಕೃಷಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಇದು ಸ್ತ್ರೀಶಕ್ತಿಯನ್ನು ತೋರಿಸುತ್ತದೆ ಎಂದು ಪತ್ರಿಕೆ ಬಣ್ಣಿಸಿದೆ. ಅಲ್ಲದೇ ಮಹಿಳೆಯರು ಕೃಷಿ ಕಾಯಿದೆಗಳ ಜತೆಗೆ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಲಿಂಗ ತಾರತಮ್ಯದ ಕುರಿತೂ ಧ್ವನಿ ಎತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ. ಇಂದು ನೂರನೇ ದಿನ! ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದಿಲ್ಲಿಹೊರವಲಯದಲ್ಲಿರೈತರು ನಡೆಸುತ್ತಿರುವ ಪ್ರತಿಭಟನೆಯು ಮಾರ್ಚ್ 6ಕ್ಕೆ ನೂರು ದಿನಗಳನ್ನು ಪೂರೈಸಲಿದೆ. ಕಳೆದ ವರ್ಷದ ನವೆಂಬರ್ 26ರಂದು ರೈತರು ಪ್ರತಿಭಟನೆ ಆರಂಭಿಸಿದ್ದರು. ರೈತರು ಈಗಾಗಲೇ ರಸ್ತೆ, ರೈಲು ತಡೆಗಳನ್ನು ನಡೆಸಿದ್ದರು. ನೂರನೇ ದಿನದ ಪ್ರಯುಕ್ತ ದಿಲ್ಲಿ, ಪಂಜಾಬ್, ಹರಿಯಾಣಗಳ ಎಲ್ಲ ಟೋಲ್ ಕೇಂದ್ರಗಳಲ್ಲಿ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೇ ದೇಶಾದ್ಯಂತ ಕರಾಳ ದಿನ ಆಚರಿಸಲಾಗುವುದು ಎಂದು ಪ್ರತಿಭಟನಾನಿರತ ರೈತ ಸಂಘಟನೆಗಳು ತಿಳಿಸಿವೆ. ಆಂತರಿಕ ವಿಚಾರ! ರೈತರ ಪ್ರತಿಭಟನೆಯು ಭಾರತದ ಆಂತರಿಕ ವಿಚಾರವಾಗಿದೆ ಎಂದು ಭಾರತದಲ್ಲಿಬ್ರಿ ಟನ್‌ನ ಹೊಸ ರಾಯಭಾರಿ ಅಲೆಕ್ಸ್ ಎಲ್ಲಿಸ್ ತಿಳಿಸಿದ್ದಾರೆ. ಆದಾಗ್ಯೂ, ಬ್ರಿಟನ್ ಸಂಸತ್ತು ರೈತ ಪ್ರತಿಭಟನೆ ಕುರಿತು ಮಾರ್ಚ್ 8ರಂದು ಚರ್ಚೆ ನಡೆಸುವ ಸಾಧ್ಯತೆ ಇದೆ.
from India & World News in Kannada | VK Polls https://ift.tt/3sSiGnd