ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಮೈಸೂರಿನ ಯಾವ ಮನೆಯಲ್ಲೂ ಬಿಪಿಎಲ್‌ ಕಾರ್ಡಿಲ್ಲ!

ನಾಗರಾಜ್‌ ನವೀಮನೆ ಮೈಸೂರು: ಖಂಡಿತ, ನಮ್ಮ ಮನೆಯಲ್ಲಿ ಬಿಪಿಎಲ್‌ ಕಾರ್ಡ್‌ ಇಲ್ಲ ಸಾರ್‌ ! -ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗೆ ಮೈಸೂರಿನ ಬಹುತೇಕ ಎಲ್ಲ ಮನೆಗಳಲ್ಲಿ ದೊರೆಯುತ್ತಿರುವ ಉತ್ತರವಿದು. 'ಟಿವಿ, ಫ್ರಿಡ್ಜ್‌, ಬೈಕ್‌ ಇದ್ದರೆ ಬಿಪಿಎಲ್‌ ಚೀಟಿ ರದ್ದುಗೊಳಿಸಲಾಗುವುದು' ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ನೀಡಿದ ಹೇಳಿಕೆಯ ಪರಿಣಾಮ, ಬಹುತೇಕರು ತಮ್ಮ ಬಳಿ ಬಿಪಿಎಲ್‌ ಕಾರ್ಡೇ ಇಲ್ಲ ಎಂದು ಹೊಸ ವರಸೆ ತೆಗೆದಿದ್ದಾರೆ. ನಗರಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಮೈಸೂರಿನಲ್ಲಿ ಫೆ.10ರಿಂದ ನಡೆಯುತ್ತಿದೆ. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸುತ್ತಿರುವ ಗಣತಿದಾರರು ಸರಕಾರದಿಂದ ತಯಾರಾಗಿರುವ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಪೋಷಕರು ತಮ್ಮ ಪಡಿತರ ಕಾರ್ಡ್‌ ಕೊಟ್ಟರೆ ಅದರ ನಂಬರ್‌ ಅನ್ನು ಆ್ಯಪ್‌ನಲ್ಲಿ ನಮೂದಿಸಿದರೆ ಸಾಕು ಆ ಮನೆಯಲ್ಲಿ ಎಷ್ಟು ಜನ ಇದ್ದಾರೆ. ಅದರಲ್ಲಿ 18 ವರ್ಷದೊಳಗಿನ ಮಕ್ಕಳು ಎಷ್ಟಿದ್ದಾರೆ ಎಂಬ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಮಕ್ಕಳ ಆಧಾರ್‌ ಕಾರ್ಡ್‌ ಸ್ಕ್ಯಾ‌ನ್‌ ಮಾಡಿದರೆ ಆ ಮಗು ಎಷ್ಟನೆ ತರಗತಿ ಓದುತ್ತಿದೆ? ಯಾವ ಶಾಲೆ? ಶಾಲೆಗೆ ಮಗು ಹೋಗುತ್ತಿದೆಯೋ? ಇಲ್ಲವೋ? ವಯಸ್ಸೆಷ್ಟಾಗಿದೆ? ಎಂಬಿತ್ಯಾದಿ ಮಾಹಿತಿ ಸಿಗುತ್ತದೆ. ಆದರೆ, ಇದರ ಅರಿವು ಇಲ್ಲದ ಪೋಷಕರು ಎಲ್ಲಿಬಿಪಿಎಲ್‌ ಕಾರ್ಡ್‌ ತೋರಿಸಿದರೆ ಸಚಿವರ ಮಾತಿನಂತೆ ಪಡಿತರ ರದ್ದು ಮಾಡುತ್ತಾರೋ ಎಂಬ ಆತಂಕದಲ್ಲಿಮಾಹಿತಿ ನೀಡದೆ ಕಳುಹಿಸುತ್ತಿದ್ದಾರೆ. ಸದ್ಯ ನಗರದಲ್ಲಿ5 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸರ್ವೆ ಮಾಡಲಾಗಿದೆ. ಏನಿದು ಸಮೀಕ್ಷೆ?: 18 ವರ್ಷದವರೆಗೆ ಮಕ್ಕಳು ಕಡ್ಡಾಯ ಶಿಕ್ಷಣ ಪಡೆದುಕೊಳ್ಳಬೇಕಾ ದದ್ದು ಅವರ ಹಕ್ಕು. ಯಾವ ಮಗುವೂ ಶಿಕ್ಷಣ ದಿಂದ ವಂಚಿತವಾಗಬಾರದು ಎಂಬ ಉದ್ದೇಶ ದಿಂದ ಈ ಸಮೀಕ್ಷೆ ಕಾರ‍್ಯ ಕೈಗೊಳ್ಳಲಾಗಿತ್ತು. ಕೊರೊನಾದಿಂದ ಶಾಲೆ ಮುಚ್ಚಿದ್ದ ಕಾರಣ ಬಹುತೇಕ ಮಕ್ಕಳು ಹೋಟೆಲ್‌, ಕಾರ್ಖಾನೆ, ಹೊಲ ಗದ್ದೆಗಳಲ್ಲಿಕೆಲಸಕ್ಕೆ ಸೇರಿಕೊಂಡಿದ್ದರು. ಹಾಗಾಗಿ ಶಾಲೆಗೆ ಪದೇ ಪದೆ ಗೈರಾಗುತ್ತಿರುವ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮತ್ತೆ ಅವರನ್ನು ಶಾಲೆಗೆ ಹೋಗುವಂತೆ ಪ್ರೇರೇಪಿ ಸುವುದೇ ಸಮೀಕ್ಷೆಯ ಪ್ರಮುಖ ಉದ್ದೇಶ. ಕೆಲವು ಎನ್‌ಜಿಒಗಳು ಇದರಲ್ಲಿ ಕೈಜೋಡಿ ಸಿವೆ. ಮೈಸೂರಿನ ಕೆ.ಆರ್‌.ಕ್ಷೇತ್ರವನ್ನು ಕ್ರೆಡಿಟ್‌ ಐ ಸಂಸ್ಥೆ, ಜ್ಞಾನಜ್ಯೋತಿ ಸಂಸ್ಥೆಗೆ ಎನ್‌.ಆರ್‌.ಕ್ಷೇತ್ರ ಹಾಗೂ ಜೈ ಭೀಮ್‌ ಮಹಿಳಾ ಸ್ವ ಸಹಾಯ ಸಂಘಕ್ಕೆ ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರವನ್ನು ನಿರ್ವಹಣೆಗೆ ವಹಿಸಲಾಗಿದೆ.


from India & World News in Kannada | VK Polls https://ift.tt/3c2r0Kb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...