ಹಾರ್ದಿಕ್‌ ಪಾಂಡ್ಯಗೆ ಇನ್ನೂ ಬೌಲಿಂಗ್‌ ನೀಡದ ಬಗ್ಗೆ ಕಾರಣ ರವೀಲ್‌ ಮಾಡಿದ ಮುಂಬೈ ಕೋಚ್‌!

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಸ್ಟಾರ್‌ ಆಲ್‌ರೌಂಡರ್‌ ಅವರಿಗೆ ಬೌಲಿಂಗ್‌ ನೀಡದೇ ಇರುವುದು ಹಲವರಿಗೆ ಅಚ್ಚರಿ ಉಂಟಾಗಿದೆ. ಕಳೆದ ವಿಶ್ವಕಪ್‌ ಬಳಿಕ ಗಾಯಕ್ಕೆ ತುತ್ತಾಗಿದ್ದ ಆಟಗಾರ ಕೋವಿಡ್‌-19 ಲಾಕ್‌ಡೌನ್‌ಗೂ ಮುನ್ನ ಅಂಗಳಕ್ಕೆ ಮರಳಿದ್ದರು. ಈ ವರ್ಷಾರಂಭದಲ್ಲಿ ಪೂರ್ಣ ಪ್ರಮಾಣದಲ್ಲಿ ತರಬೇತಿ ಆರಂಭಿಸಿದ್ದ ಹಾರ್ದಿಕ್‌ ಪಾಂಡ್ಯ, ಆಸ್ಟ್ರೇಲಿಯಾ ವಿರುದ್ಧದ ಮುಂಬೈ ಓಡಿಐ ಪಂದ್ಯಕ್ಕೆ ಟೀಮ್‌ ಇಂಡಿಯಾ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ್ದರು. ಆದರೆ, ಇದುವರೆಗೂ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡದೆ ಇರುವ ಬಗ್ಗೆ ಹಲವರಿಗೆ ಅಚ್ಚರಿಯಾಗಿರುವುದಂತೂ ನಿಜ. ಹಾರ್ದಿಕ್‌ ಪಾಂಡ್ಯ ಅವರಿಗೆ ಕಳೆದ ಎರಡು ಪಂದ್ಯಗಳಿಂದ ಏಕೆ ಬೌಲಿಂಗ್‌ ನೀಡುತ್ತಿಲ್ಲ ಎಂಬ ಬಗ್ಗೆ ಕೋಲ್ಕತಾ ನೈಡ್‌ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಕೋಚ್‌ ಬಹಿರಂಗ ಪಡಿಸಿದ್ದಾರೆ. ಆದರೆ, ಸ್ಟಾರ್‌ ಆಲ್‌ರೌಂಡರ್ ಪ್ರಸ್ತುತ ಫಿಟ್‌ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆಲ್‌ರೌಂಡರ್‌ನೊಂದಿಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಿದ್ದವಿಲ್ಲ ಮತ್ತು ಅವರು ಇನ್ನೂ ಫಿಟ್‌ ಆದ ಬಳಿಕ ಮಾತ್ರ ಅವರ ಬೌಲಿಂಗ್ ಸೇವೆಗಳನ್ನು ಪಡೆಯಲಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ತಿಳಿಸಿದ್ದಾರೆ. "ದಿನದಿಂದ ದಿನಕ್ಕೆ ಅವರು ಸಕ್ರೀಯರಾಗುತ್ತಿದ್ದಾರೆ. ನಾವು ಯಾವುದೇ ಅಪಾಯವನ್ನು ಸ್ವೀಕರಿಸಲು ಸಿದ್ದರಿಲ್ಲ. ಅವರು ಇದೀಗ ನೋಡಲು ಆರೋಗ್ಯವಾಗಿದ್ದಾರೆ. ಮುಂದೆ ಅವರು ಇನ್ನೂ ಫಿಟ್‌ ಆಗಿ ಕಂಡರೆ ಅಥವಾ ಎಲ್ಲರ ದೃಷ್ಟಿಯಲ್ಲಿ ಅವರು ಚೆನ್ನಾಗಿ ಕಂಡರೆ ಬೌಲಿಂಗ್‌ ನೀಡಲಾಗುವುದು," ಎಂದು ಪಂದ್ಯದ ವೇಳೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ 49 ರನ್‌ಗಳ ಗೆಲುವಿನ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಸೇವೆಯನ್ನು ನಿಜವಾಗಲೂ ತಂಡ ಕಳೆದುಕೊಂಡಿರಲಿಲ್ಲ. ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ, ಐದು ವಿಕೆಟ್‌ಗಳನ್ನು ಕಳೆದುಕೊಂಡು 195 ರನ್‌ಗಳನ್ನು ಗಳಿಸಿತ್ತು. ಎರಡು ಬಾರಿ ಚಾಂಪಿಯನ್‌ ಕೆಕೆಆರ್‌ ತಂಡವನ್ನು 149 ರನ್‌ಗಳಿಗೆ ನಿಯಂತ್ರಿಸಲಾಗಿತ್ತು. ಹಾರ್ದಿಕ್‌ ಪಾಂಡ್ಯ ಈ ಪಂದ್ಯದಲ್ಲಿ 18 ರನ್ ಗಳಿಸಿದ್ದರು. ಆದರೆ, ಆಂಡ್ರೆ ರಸೆಲ್‌ ಅವರ ಎಸೆತದಲ್ಲಿ ಹಿಟ್‌ ವಿಕೆಟ್ ಮಾಡಿಕೊಂಡರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kGWDf9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...