ಲಾಕ್‌ಡೌನ್ ನಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ: ಚಾಮರಾಜನಗರ ಜಿಲ್ಲೆಯಲ್ಲಿ 33 ಬಾಲ್ಯ ವಿವಾಹಗಳಿಗೆ ತಡೆ!

ಫಾಲಲೋಚನ ಆರಾಧ್ಯ ಚಾಮರಾಜನಗರ: ಜಿಲ್ಲೆ ಹೇಳಿ, ಕೇಳಿ ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿ ಮೌಢ್ಯ, ಅರಿವಿನ ಕೊರತೆಯೂ ಹೆಚ್ಚು. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಸಹ ನಡೆಯುತ್ತಲೇ ಇರುತ್ತವೆ. ಇಂಥ ಬಾಲ್ಯ ವಿವಾಹಗಳಿಗೆ ಕೊರೊನಾ ಲಾಕ್‌ಡೌನ್‌ ಅವಧಿ ವರವಾಗಿ ಪರಿಣಮಿಸಿರಬಹುದು. ಜಿಲ್ಲೆಯ ಅಧಿಕೃತ ಮಾಹಿತಿ ಪ್ರಕಾರವೇ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ 33 ಬಾಲ್ಯ ವಿವಾಹಗಳಿಗೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಈ ನಡುವೆಯೂ 1 ನಡೆದೇ ಹೋಗಿದ್ದು, ಆ ಬಗ್ಗೆ ಪ್ರಕರಣ ದಾಖಲಾಗಿದೆ. ಇದಿಷ್ಟು ಅಧಿಕೃತ ಮಾಹಿತಿ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿದು ಸ್ಥಳಕ್ಕೆ ಹೋಗಿ ತಡೆದಿರುವಂಥದ್ದು 33. ಆದರೆ, ಅಧಿಕಾರಿಗಳ ಗಮನಕ್ಕೇ ಬಾರದೇ ಗುಟ್ಟಾಗಿ ನಡೆದು ಹೋಗಿರುವ ಬಾಲ್ಯವಿವಾಹಗಳು ಎಷ್ಟಿರಬಹುದು ? ಎಂಬ ವಿಚಾರ ಆತಂಕ ಮೂಡಿಸುತ್ತದೆ. ಎಲ್ಲೆಲ್ಲಿ ಬಾಲ್ಯ ವಿವಾಹಕ್ಕೆ ತಡೆ?ಜಿಲ್ಲೆಯಲ್ಲಿಈ ವರ್ಷದ ಏಪ್ರಿಲ್‌ ನಿಂದ ಆಗಸ್ಟ್‌ವರೆಗೆ 33 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪೊಲೀಸರ ನೆರವಿನಿಂದ ತಡೆಹಿಡಿದಿದ್ದಾರೆ. ಬಾಲ್ಯ ವಿವಾಹ ನಡೆಸಲು ಮುಂದಾಗಿದ್ದ 33 ಪ್ರಕರಣಗಳ ಪೈಕಿ ಚಾಮರಾಜನಗರ ತಾಲೂಕಿನಿಂದ 9, ಸಂತೆಮರಹಳ್ಳಿ ವ್ಯಾಪ್ತಿಯಲ್ಲಿ 7, ಕೊಳ್ಳೇಗಾಲ ತಾಲೂಕಿನಲ್ಲಿ 9, ಗುಂಡ್ಲುಪೇಟೆ ತಾಲೂಕಿನಲ್ಲಿ 5, ಯಳಂದೂರು ತಾಲೂಕಿನಲ್ಲಿ 3 ಪ್ರಕರಣಗಳನ್ನು ತಡೆ ಹಿಡಿಯಲಾಗಿದೆ. ಇದೇ ಅವಧಿಯಲ್ಲಿ ಯಳಂದೂರು ತಾಲೂಕಿನಲ್ಲಿ 1 ಬಾಲ್ಯ ವಿವಾಹ ಪ್ರಕರಣ ನಡೆದಿದ್ದು ಈ ಬಗ್ಗೆ ಪೋಷಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಬಾಲ್ಯ ವಿವಾಹಕ್ಕೆ ಮೂಲ ಕಾರಣ ಬಡತನ. ಬಡತನದ ಕಾರಣದಿಂದ ಸೂಕ್ತ ಶಿಕ್ಷಣ ಪೋಷಕರಿಗಿರುವುದಿಲ್ಲ. ಹೀಗಾಗಿ ಮೌಢ್ಯವು ಬೆಳೆದಿರುತ್ತದೆ. ವಯಸ್ಸಿಗೆ ಬರುವವರಿಗೂ ಹೆಣ್ಣು ಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳಬಾರದೆಂಬ ಕಾರಣಕ್ಕೆ ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಮಂದಿ ಬಹಳಷ್ಟು. ಬಾಲ್ಯ ವಿವಾಹ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಲೇ ಇವೆ. ಕಾನೂನು ಸೇವಾ ಪ್ರಾಧಿಕಾರ ಸಹ ಹಿಂದುಳಿದ ಪ್ರದೇಶಗಳಿಗೆ ತೆರಳಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಜಿಲ್ಲೆಯಲ್ಲಿ 33 ಬಾಲ್ಯ ವಿವಾಹಗಳನ್ನು ತಡೆಯಲು ಯಶಸ್ವಿಯಾಗಿವೆ. ತಡೆಯಲು ಹೋದರೆ ಘರ್ಷಣೆ, ರದ್ಧಾಂತ ಬಾಲ್ಯ ವಿವಾಹ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ, ಈ ಲಾಕ್‌ಡೌನ್‌ ಅವಧಿಯಲ್ಲಿ ಅವು ಹೆಚ್ಚಾಗಿ ಆಯೋಜನೆಗೊಂಡಿದ್ದವು ಎಂಬುದು ಗಮನಾರ್ಹ. ಇಂಥ ವಿವಾಹಗಳನ್ನು ತಡೆಯುವುದು ಸುಲಭದ ಮಾತಲ್ಲ. ಮನೆಗಳಲ್ಲಿ, ಸಮುದಾಯ ಭವನಗಳಲ್ಲಿ ನಡೆಯುತ್ತಿದ್ದ ಈ ವಿವಾಹಗಳನ್ನು ಅಧಿಕಾರಿಗಳು ತಡೆಯಲು ಹೋದಾಗ ಘರ್ಷಣೆ ನಡೆದಿರುವ ಸಾಕಷ್ಟು ನಿದರ್ಶನಗಳಿವೆ. ಸಾಕಷ್ಟು ರಾದ್ದಾಂತವೇ ನಡೆದು ಹೋಗುತ್ತದೆ. ಕೆಲವೊಮ್ಮೆ ಹಲ್ಲೆಗೂ ಮುಂದಾಗುವುದಿದೆ. ಈಗಿರುವ ಸಹಾಯವಾಣಿಯೂ ಹಲ ಬಾಲ್ಯ ವಿವಾಹಗಳನ್ನು ತಡೆದಿದೆ. ಜಿಲ್ಲೆಯಲ್ಲೂ ಬಾಲ್ಯ ವಿವಾಹ ನಡೆಯುತ್ತದೆ ಎಂಬುದನ್ನು ಅರಿತು ಆ ಬಾಲಕಿಯೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿರುವ ನಿದರ್ಶನವೂ ಇದೆ. ಬಾಲ್ಯ ವಿವಾಹ ನಡೆಯುವ ಸಿದ್ಧತೆ ಇದ್ದರೆ 24*7 ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಬಹುದು. ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಈವರೆಗೆ 33 ಬಾಲ್ಯ ವಿವಾಹಗಳನ್ನು ತಡೆದಿದ್ದೇವೆ. ಅಲ್ಲದೇ ನಡೆದು ಹೋಗಿದ್ದ ಬಾಲ್ಯ ವಿವಾಹ ಪ್ರಕರಣದಲ್ಲಿ ಪೋಷಕರ ವಿರುದ್ಧ ಮೊಕದ್ದಮೆಯನ್ನು ದಾಖಲು ಮಾಡಲಾಗಿದೆ. ಬಸವರಾಜು, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ


from India & World News in Kannada | VK Polls https://ift.tt/3cCvIhX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...