ಹತ್ತಿರವಾಗಲಿದ್ದಾರೆ ನಾಗರಿಕ ಸೇವಾ ಅಧಿಕಾರಿಗಳು: ಮಿಷನ್ ಕರ್ಮಯೋಗಿಗೆ ಕೇಂದ್ರ ಸಂಪುಟ ಅಸ್ತು!

ನವದೆಹಲಿ: ದೇಶದ ನೌಕರ ವರ್ಗವನ್ನು ಮತ್ತಷ್ಟು ಚುರುಕುಗೊಳಿಸಲು ಮುಂದಡಿ ಇಟ್ಟಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ನಾಗರಿಕ ಸೇವಾ ಅಧಿಕಾರಿಗಳ ಕಾರ್ಯಕ್ಷಮತೆ ವೃದ್ಧಿಸಲು 'ಕರ್ಮಯೋಗಿ ಯೋಜನೆ'ಯನ್ನು ಜಾರಿಗೆ ತಂದಿದೆ. ಬಹು ನಿರೀಕ್ಷಿತ ಕರ್ಮಯೋಗಿ ಯೋಜನೆಗೆ ಅಸ್ತು ಎಂದಿದ್ದು, ನಾಗರಿಕ ಸೇವಾ ಅಧಿಕಾರಿಗಳ ಕಾರ್ಯಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸುವ ನಿರೀಕ್ಷೆ ಹೊಂದಲಾಗಿದೆ. ಆಧುನಿಕ ಭಾರತದ ಬೇಕು ಬೇಡಗಳಿಗೆ ಸ್ಪಂದಿಸುವ ಆಡಳಿತ ವರ್ಗವನ್ನು ನಿರ್ಮಿಸುವ ಗುರಿ ಹೊಂದಿರುವ ಮೋದಿ ಸರ್ಕಾರ. ಅದರಂತೆ ಈ ನೂತನ ಯೋಜನೆಯ ಮೂಲಕ ನಾಗರಿಕ ಸೇವಾ ಅಧಿಕಾರಿಗಳನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಕೈ ಹಾಕಿದೆ. ಏನಿದು ?: ಕರ್ಮಯೋಗಿ ಯೋಜನೆಯಡಿ ನಾಗರಿಕ ಸೇವಾ ಅಧಿಕಾರಿಯ ವೈಯಕ್ತಿಕ ಹಾಗೂ ಸಂಘಟನಾತ್ಮಕ ಶಕ್ತಿಯನ್ನು ವೃದ್ಧಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಜ್ಞರ ಸಹಯೋಗದಲ್ಲಿ ನಾಗರಿಕ ಸೇವಾ ಅಧಿಕಾರಿಗಳಿ ಸೂಕ್ತ ತರಬೇತಿ ನೀಡಲು ಸರ್ಕಾರ ರೂಪುರೇಷೆ ಸಿದ್ಧಪಡಿಸಿದೆ. ಅಷ್ಟೇ ಅಲ್ಲದೇ ಡಿಜಿಟಲ್ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅನುವಾಗುವಂತೆ ಅವರಿಗೆ ಅಗತ್ಯ ತರಬೇತಿಯನ್ನೂ ನೀಡಲು ನಿರ್ಣಯಿಸಲಾಗಿದೆ. ಅಧಿಕಾರಿ ವರ್ಗ ಭವಿಷ್ಯದ ಭಾರತದ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಬೇಕಿದ್ದು, ಅವರನ್ನು ಈಗಿನಿಂದಲೇ ಈ ಕಾರ್ಯಕ್ಕೆ ಸಜ್ಜುಗೊಳಿಸಲು ಮೋದಿ ಸರ್ಕಾರ ನಿರ್ಧರಸಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಕಾರ್ಯಕ್ಷಮತೆಯನ್ನು ತೋರಲು ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವುದು ಸರ್ಕಾರದ ಗುಡಿಯಾಗಿದೆ. ಸಮಾಜದ ಬೇಕು ಬೇಡಗಳಿಗೆ ಸ್ಪಂದಿಸುತ್ತಾ, ಅಭಿವೃದ್ಧಿ ಹಾಗೂ ಸದೃಢ ಭವಿಷ್ಯದೆಡೆಗೆ ಇಡೀ ಸಮಾಜವನ್ನು ಕೊಂಡೊಯ್ಯುವ ಜವಾಬ್ದಾರಿಯನ್ನು ಅಧಿಕಾರಿ ವರ್ಗ ನಿಭಾಯಿಸಬೇಕಿದ್ದು, ಕರ್ಮಯೋಗಿ ಯೋಜನೆ ಇದಕ್ಕೆ ಸಹಾಯಕಾರಿಯಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.


from India & World News in Kannada | VK Polls https://ift.tt/3jHE0r3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...