ಬೆಂಗಳೂರು: ರಾಜ್ಯ ಸರಕಾರದ , ಹಾಗೂ ಕೇಂದ್ರ ಸರಕಾರದ ಕೃಷಿ ಮತ್ತು ಕಾರ್ಮಿಕ ಸಂಬಂಧಿತ ಕಾಯ್ದೆ ವಿರೋಧಿಸಿ ಶುಕ್ರವಾರ ರೈತ ಸಂಘಟನೆಗಳು ರಾಜ್ಯಾದ್ಯಂತ ಹೆದ್ದಾರಿ ತಡೆ, ಪ್ರತಿಭಟನೆ ನಡೆಸಲು ತೀರ್ಮಾನಿವೆ. ಕರ್ನಾಟಕದ ಯಾವ ಭಾಗದಲ್ಲಿ ಏನೇನಾಗುತ್ತಿದೆ ಎಂಬ ಕ್ಷಣ ಕ್ಷಣದ ಸಂಪೂರ್ಣ ಮಾಹಿತಿ ಇಲ್ಲಿದೆ. -ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ದಾವಣಗೆರೆಯಲ್ಲಿ ಬೆಂಗಳೂರು -ಪುಣೆ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬೆಳಗಿನ ಜಾವ ಟೈಯರ್ ಗೆ ಬೆಂಕಿ ಹಚ್ಚಿದ ರೈತರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. -ರಾಷ್ಟ್ರಮಟ್ಟದಲ್ಲಿ ಭಾರತ್ ಬಂದ್ ನಡೆಯುವುದರಿಂದ ರಾಜ್ಯದಲ್ಲಿ ಹೆದ್ದಾರಿ ಬಂದ್ ನಡೆಯಲಿದೆ. ರೈತಪರ ಸಂಘಟನೆಗಳಿಂದ ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಸೇರಿದಂತೆ ವಿವಿಧ ಸಮಸ್ಯೆಗಳು ಮಾತ್ರವಲ್ಲ ಬೆಂಗಳೂರಿಗೆ ಹೋಗೋರು ಕೂಡ ಸಂಕಷ್ಟ ಎದುರಿಸಬೇಕಾಗುತ್ತದೆ. ಹೆದ್ದಾರಿಗಳು ಬಂದ್ ಆಗುವುದರಿಂದ ವಾಹನಗಳ ಸಂಚಾರಕ್ಕೂ ಅಡೆತಡೆ ಉಂಟಾಗಲಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಈ ಬಂದ್ ನಡೆಯಲಿದೆ. -ಈ ಹೋರಾಟಕ್ಕೆ 34ಕ್ಕೂ ಹೆಚ್ಚು ಸಂಘಟನೆ ಬೆಂಬಲ ನೀಡಿದ್ದು, ಐಕ್ಯ ಹೋರಾಟ ಸಮಿತಿಯು ಜೈಲ್ ಭರೋ ಚಳುವಳಿಯನ್ನು ನಡೆಸಲಿದೆ. ರೈತರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದ ಬಳಿಯ ಎಲ್ಲ ರಸ್ತೆಗಳೂ ಬಂದ್ ಆಗಲಿವೆ. ಕಾರ್ಪೊರೇಷನ್, ಕೆ ಆರ್ ವೃತ್ತ, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್, ಮೌರ್ಯ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು ಕ್ಲೋಸ್ ಆಗಲಿವೆ.
from India & World News in Kannada | VK Polls https://ift.tt/3kN85pK