ರೆಪೊ ಇಳಿಕೆಯಾದಂತೆ ಎಫ್‌ಡಿ ನಂಬಿಕೊಂಡಿದ್ದವರ ಆದಾಯವೂ ಇಳಿಕೆಯಾಗುತ್ತದೆ!

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ರೆಪೊ ದರವನ್ನು ಶೇ.4ಕ್ಕೆ ಕಡಿತಗೊಳಿಸಿದ ಪರಿಣಾಮ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಗಳ (ಫಿಕ್ಸೆಡ್‌ ಡಿಪಾಸಿಟ್‌) ಮೇಲಿನ ಬಡ್ಡಿ ದರದಲ್ಲೂ ಗಣನೀಯ ಕಡಿತ ಖಚಿತವಾಗಿದೆ. ಇದರ ಪರಿಣಾಮ ಬ್ಯಾಂಕ್‌ಗಳ ಎಫ್‌.ಡಿಗಳ ಬಡ್ಡಿ ದರವನ್ನು ಅವಲಂಬಿಸಿರುವ ಅಸಂಖ್ಯಾತ ಜನತೆಗೆ, ಮುಖ್ಯವಾಗಿ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರಿಗೆ ಆದಾಯ ಇಳಿಕೆಯಾಗಲಿದೆ. ಈಗಾಗಲೇ ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಹಿರಿಯ ನಾಗರಿಕರು, ಸಣ್ಣ ಉಳಿತಾಯಗಾರರು ಸಂಕಷ್ಟದಲ್ಲಿದ್ದು, ಮುಂಬರುವ ದಿನಗಳಲ್ಲಿ ಬಡ್ಡಿ ದರದ ಆದಾಯ ಇಳಿಕೆಯನ್ನೂ ಎದುರಿಸಬೇಕಾಗಿದೆ. ಯಾರಿಗೆ ಅನ್ವಯ? ರೆಪೊ ದರ ಕಡಿತವಾದಾಗ ಬ್ಯಾಂಕ್‌ಗಳು ಹೊಸತಾಗಿ ಸಂಗ್ರಹಿಸುವ ಫಿಕ್ಸೆಡ್‌ ಡಿಪಾಸಿಟ್‌ಗಳ ಮೇಲೆ ಬಡ್ಡಿ ದರ ಕಡಿತ ಮಾಡುತ್ತವೆ. ಹಳೆಯ ಠೇವಣಿಗಳಿಗೆ ಅವಧಿ ಮುಕ್ತಾಯವಾಗುವ ತನಕ ಹಳೆಯ ದರವೇ ಚಾಲ್ತಿಯಲ್ಲಿರುತ್ತದೆ ಎನ್ನುತ್ತಾರೆ ಬ್ಯಾಂಕಿಂಗ್‌ ತಜ್ಞರಾದ ವೈ ಸುಧೀರ್‌. ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಕಡಿತಗೊಳಿಸಲು ಫಿಕ್ಸೆಡ್‌ ಡಿಪಾಸಿಟ್‌ಗಳ ಮೂಲಕ ಸಿಗುವ ನಿಧಿಯನ್ನು ಸಾಮಾನ್ಯವಾಗಿ ಸುಲಭವಾಗಿ ಬಳಸುತ್ತವೆ. ಇದರ ಜತೆಗೆ ಆರ್‌ಬಿಐನಿಂದ ರೆಪೊ ದರದಲ್ಲಿ ಸಿಗುವ ನಿಧಿಯನ್ನೂ ಬಳಸುತ್ತವೆ. ಬ್ಯಾಂಕ್‌ಗಳು ಮಾಡಬೇಕಾದ್ದೇನು?ರೆಪೊ ದರ ಇಳಿಕೆಯಾದಾಗ ಬ್ಯಾಂಕ್‌ಗಳು ಕೂಡಲೇ ಸಣ್ಣ ಮತ್ತು ಮಧ್ಯಮ ಉದ್ದಿಮೆ ಹಾಗೂ ಗೃಹ ಸಾಲ, ವಾಹನ ಸಾಲ ಇತ್ಯಾದಿ ರಿಟೇಲ್‌ ಸಾಲಗಳ ಬಡ್ಡಿ ದರವನ್ನು ಇಳಿಸಬೇಕಾಗುತ್ತದೆ. ಕಡಿಮೆ ಬಡ್ಡಿ ದರದಲ್ಲಿಸಾಲ ಕೊಟ್ಟಾಗ ಬ್ಯಾಂಕ್‌ಗಳ ಆದಾಯವೂ ಕಡಿಮೆಯಾಗುತ್ತದೆ. ಆಗ ಠೇವಣಿಯ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಇಳಿಸುತ್ತವೆ. ಇದರ ಪರಿಣಾಮ ಹೊಸ ಡಿಪಾಸಿಟ್‌ಗಳ ಬಡ್ಡಿ ಇಳಿಯುತ್ತದೆ ಎನ್ನುತ್ತಾರೆ ಬ್ಯಾಂಕಿಂಗ್‌ ತಜ್ಞರು. ಎಸ್‌ಬಿಐ, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಇತ್ತೀಚೆಗೆ ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳಲ್ಲಿ ಹೆಚ್ಚಿನ ಬಡ್ಡಿ ದರ ನೀಡುವ ಪ್ರತ್ಯೇಕ ಯೋಜನೆಗಳನ್ನು ಘೋಷಿಸಿವೆ. ಹೀಗಿದ್ದರೂ ಎಲ್ಲಬ್ಯಾಂಕ್‌ಗಳೂ ಇಂಥ ಯೋಜನೆಗಳನ್ನು ಹೊಂದಿಲ್ಲ.


from India & World News in Kannada | VK Polls https://ift.tt/2zYzYsO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...