ಬೆಂಗಳೂರು: ದೇಶದ 18 ಪಕ್ಷಗಳ ನಾಯಕರೊಂದಿಗೆ ಕಾಂಗ್ರೆಸ್ ಅಧಿನಾಯಕಿ ವಿಡಿಯೋ ಸಂವಾದ ನಡೆಸಿದ್ದು ರಾಜ್ಯದಿಂದ ಮಾಜಿ ಪ್ರಧಾನಿ ಭಾಗಿಯಾಗುವ ಮೂಲಕ ಚರ್ಚೆ ನಡೆಸಿದರು. ಕೊರೊನಾ ಸೋಂಕು ಹಾಗೂ ಅದರ ಪರಿಣಾಮಗಳ ಕುರಿತಾಗಿ ವಿಪಕ್ಷಗಳ ಮುಖಂಡರ ಜೊತೆಗೆ ಸೋನಿಯಾ ಗಾಂಧಿ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಸ್ಥಿತಿಗತಿಗಳ ಕುರಿತಾಗಿ ದೇವೇಗೌಡರ ಜೊತೆಗೆ ಸೋನಿಯಾ ಚರ್ಚೆ ನಡೆಸಿದರು. ವಿಡಿಯೋ ಸಂವಾದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಲಾಗಿತ್ತು. ಸಂವಾದದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರಿಗೆ ಎದ್ದು ನಿಂತು ದೇವೇಗೌಡರು ವಂದಿಸಿದರು. ಈ ವೇಳೆ ಸೋನಿಯಾ ಗಾಂಧಿಯವರು ಕೈಮುಗಿದು ದೇವೇಗೌಡರ ಆರೋಗ್ಯ ವಿಚಾರಿಸಿದರು. ಕೊರೊನಾ ಪರಿಹಾರವಾಗಿ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ಪ್ಯಾಕೇಜ್, ವಲಸೆ ಕಾರ್ಮಿಕರ ಸಮಸ್ಯೆ, ರಾಜ್ಯಗಳಿಗೆ ಹಣ ಬಿಡುಗಡೆಗೊಳಿಸದ ವಿಚಾರಗಳು ಹಾಗೂ ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಸೇರಿದಂತೆ ಹಲವಾರು ವಿಚಾರಗಳ ಕುರಿತಾಗಿ ವಿಡಿಯೋ ಸಂವಾದಲ್ಲಿ ಚರ್ಚೆ ನಡೆಸಲಾಯಿತು.
from India & World News in Kannada | VK Polls https://ift.tt/2zVo4Qh