(): ದೇಶದೆಲ್ಲೆಡೆ ಕಟ್ಟುನಿಟ್ಟಿನ ಲಾಕ್‌ಡೌನ್ ನಿಮಯ ಜಾರಿಯಲ್ಲಿದೆ. ಅನಗತ್ಯವಾಗಿ ರಸ್ತೆಗಿಳಿಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಈ ನಡುವೆ ಪಂಜಾಬ್‌ನಲ್ಲಿ ಕಾರು ಚಾಲಕನೋರ್ವ ಕಾರಿನ ಬಾನೆಟ್ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಎಳೆದೊಯ್ದಿರುವ ದೃಶ್ಯಗಳು ಬಯಲಾಗಿದೆ. ಈ ಸಂಬಂಧ ದೃಶ್ಯವನ್ನು ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ತಕ್ಕ ಶಾಸ್ತಿ ಮಾಡಲಾಗಿದೆ. ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ಶನಿವಾರದಂದು ಘಟನೆ ನಡೆದಿತ್ತು. ತಪಾಸಣೆಗಾಗಿ ಪೊಲೀಸ್ ಅಧಿಕಾರಿ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದರು. ಈ ವೇಳೆಯಲ್ಲಿ ಪೊಲೀಸ್ ಆದೇಶವನ್ನು ಪಾಲಿಸದ ಕಾರು ಚಾಲಕ ರಭಸದಲ್ಲಿ ಕಾರು ಚಲಾಯಿಸಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಕರ್ತವ್ಯ ನಿರತವಾಗಿರುವ ಎಎಸ್‌ಐ ಮುಲ್ಕ್‌ರಾಜ್ ರಕ್ಷಣೆಗಾಗಿ ಕಾರಿನ ಬೊನೆಟ್ ಮೇಲೆ ಜಿಗಿಯುತ್ತಾರೆ. ಸ್ವಲ್ವ ದೂರದ ವರೆಗೂ ಚಾಲಕ ಕಾರು ನಿಲ್ಲಿಸದೇ ಪೊಲೀಸ್ ಅಧಿಕಾರಿಯನ್ನು ಎಳೆದಾಡುತ್ತಾನೆ. ಕೊನೆಗೊ ಅಪಾಯವನ್ನು ಅರಿತು ಬ್ರೇಕ್ ಹಾಕುತ್ತಾನೆ. ಈ ವೇಳೆಯಲ್ಲಿ ಕರ್ತವ್ಯದಲ್ಲಿದ್ದ ಇತರೆ ಪೊಲೀಸರು ಆರೋಪಿಯನ್ನು ಬಂಧಿಸುತ್ತಾರೆ. ಇದೀಗ ತನಿಖೆಯನ್ನು ನಡೆಸಲಾಗುತ್ತಿದೆ. ಎಎಸ್‌ಐ ಮುಲ್ಕ್‌ರಾಜ್‌ಗೆ ಯಾವುದೇ ರೀತಿಯ ಗಾಯವುಂಟಾಗಲಿಲ್ಲ ಎಂಬುದು ತಿಳಿದು ಬಂದಿದೆ.
from India & World News in Kannada | VK Polls https://ift.tt/2yiXS1z