ರಾಜ್ಯದ 6 ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ; ಮತ್ತೆ 9 ಮಂದಿಗೆ ಪಾಸಿಟಿವ್‌

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್‌ಗೆ ಸಡಿಲಗೊಳ್ಳುವ ನಿರ್ಧಾರ ಕೈಗೊಳ್ಳುತ್ತಿರುವ ಬೆನ್ನಲ್ಲೇ ಮತ್ತೆ ಮಹಾಮಾರಿಯ ಅಟ್ಟಹಾಸ ಹೆಚ್ಚಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಶನಿವಾರ ಕೊರೊನಾ ಕಂಡುಬಂದಿದೆ. ಅಲ್ಲದೇ ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಪೈಕಿ ಒಬ್ಬರು ಕೋವಿಡ್‌ ಇಲ್ಲದೇ ಮೃತಪಟ್ಟಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. ಬೀದರ್‌, ತುಮಕೂರು, ಚಿಕ್ಕಬಳ್ಳಾಪುರ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದಿದೆ. ತುಮಕೂರು ಜಿಲ್ಲೆಯಲ್ಲಿ ಶನಿವಾರ ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 7ಕ್ಕೇರಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಏ.26ರಂದು ಮೃತಪಟ್ಟಿದ್ದ 73 ವರ್ಷದ ವೃದ್ಧ ಪಿ 535 ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಪತ್ನಿ ಪಿ 553 ಜತೆಗೆ ಸಂಪರ್ಕದಲ್ಲಿದ್ದ ಇಬ್ಬರಿಗೆ ಶನಿವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಇಬ್ಬರೂ ಪಿ 535 ಅವರ ನೆರೆ ಮನೆಯ ನಿವಾಸಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ತಿಳಿಸಿದ್ದಾರೆ. ತುಮಕೂರು, ವಿಜಯಪುರದಲ್ಲಿ ತಲಾ ಇಬ್ಬರಿಗೆ, ಚಿಕ್ಕಬಳ್ಳಾಪುರ, ಬೀದರ್‌, ಬೆಳಗಾವಿ, ಬಾಗಲಕೋಟೆ, ಬೆಂಗಳೂರಿನಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಶನಿವಾರ ದಾಖಲಾದ ಕೋವಿಡ್‌ 19 ಪ್ರಕರಣಗಳ ವಿವರ ಹೀಗಿದೆ ....
ಕ್ರಮ ಸಂಖ್ಯೆ ಪ್ರಕರಣ ಸಂಖ್ಯೆ ವಯಸ್ಸು ಲಿಂಗ ವಾಸ ಸ್ಥಳ
1 ಪಿ-590 82 ಗಂಡು ಬೀದರ್
2 ಪಿ-591 40 ಗಂಡು ತುಮಕೂರು
3 ಪಿ-592 29 ಹೆಣ್ಣು ತುಮಕೂರು
4 ಪಿ-593 54 ಗಂಡು ಚಿಕ್ಕಬಳ್ಳಾಪುರ
5 ಪಿ-594 22 ಗಂಡು ವಿಜಯಪುರ
6 ಪಿ-595 45 ಗಂಡು ವಿಜಯಪುರ
7 ಪಿ-596 23 ಗಂಡು ಬೆಳಗಾವಿ
8 ಪಿ-597 45 ಹೆಣ್ಣು ಬಾಗಲಕೋಟೆ
9 ಪಿ-598 32 ಹೆಣ್ಣು ಬೆಂಗಳೂರು


from India & World News in Kannada | VK Polls https://ift.tt/2xuVrIU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...