ಮಂಗಳೂರು: ಪಿಎಚ್‌ಡಿ ವಿದ್ಯಾರ್ಥಿನಿಯ ಫೊಟೋ ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟಿದ್ದಲ್ಲದೆ ಆಕೆಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಾಧ್ಯಾಪಕನೊಬ್ಬನನ್ನು ನಗರ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೊಂಡೂರು ಸುಧೀರ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಈತನೇ ನೀಡಿದ ಆರೋಪಿಯಾಗಿದ್ದಾನೆ. ವಿದ್ಯಾರ್ಥಿನಿ 2019ರಿಂದ ಮಂಗಳೂರಿನ ಖಾಸಗಿ ಪ್ರಾಧ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು. 2018ರಲ್ಲಿ ಪರಿಚಯವಾದ ಡಾ. ಕೊಂಡೂರು ಸುಧೀರ್ ಕುಮಾರ್ ತನ್ನನ್ನು ಮಾರ್ಗದರ್ಶಕನನ್ನಾಗಿ ನೇಮಿಸುವಂತೆ ವಿದ್ಯಾರ್ಥಿನಿಯಲ್ಲಿಒತ್ತಾಯಿಸಿದ್ದ. ಅದಕ್ಕೆ ಒಪ್ಪಿ ವಿಶ್ವವಿದ್ಯಾಲಯಕ್ಕೆ ಅನುಮತಿಗೆ ಕಳುಹಿಸಿದಾಗ ಆ ವ್ಯಕ್ತಿಗೆ ಅರ್ಹತೆಯಿಲ್ಲ ಎನ್ನುವ ಕಾರಣಕ್ಕೆ ಕೋರಿಕೆ ನಿರಾಕರಿಸಲಾಗಿತ್ತು. ಇದಾದ ಬಳಿಕ ಈತ ವಿದ್ಯಾರ್ಥಿನಿಗೆ ಮತ್ತು ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಆರೋಪಿ ಡಾ ಕೊಂಡೂರು ಸುಧೀರ್ ಕುಮಾರ್, ವಿದ್ಯಾರ್ಥಿನಿಗೆ ತಿಳಿಯದಂತೆ ಆಕೆಯ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಿ ಮನೆಯವರು ಮಂಗಳೂರು ನಗರದ ಸೈಬರ್ ಠಾಣೆಗೆ 2021ರ ಮಾ.10ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ನೀಡುವುದು ಅತ್ಯಗತ್ಯ ಕುದೂರು: ಸಮಾಜದಲ್ಲಿನ ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆಯುವುದು ಅತ್ಯಗತ್ಯವಾಗಿದೆ ಎಂದು ಮಾಗಡಿ ಜೆಎಂಎಫ್‌ಸಿ ಪ್ರಧಾನ ಹಿರಿಯ ನ್ಯಾಯಧೀಶರಾದ ಎಂ.ಮನೋಹರ್ ಹೇಳಿದರು. ಕುದೂರು ಕೆಪಿಎಸ್ ಶಾಲೆಯ ಆವರಣದಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಮತ್ತು ಲೋಕ್ ಆದಾಲತ್‌ನ ಉಪಯೋಗ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅರಿವಿಲ್ಲದೆ ತಪ್ಪುಗಳಾಗುತ್ತವೆ. ತಪ್ಪು ಮಾಡಿದವರಿಗೆ ಶಿಕ್ಷೆ ನಿಶ್ಚಿತ ಬಡವರಿಗೆ, ಅಲ್ಪಸಂಖ್ಯಾತರಿಗೆ, ದುರ್ಬಲರಿಗೆ, ಶ್ರೀಮಂತರಿಗೆ ಒಂದೊಂದು ಕಾನೂನು ಇಲ್ಲ. ಎಲ್ಲರಿಗೂ ಒಂದೇ ಕಾನೂನು. ಇದಕ್ಕೆ ಪ್ರತಿಯೊಬ್ಬರೂ ತಲೆಬಾಗಲೇ ಬೇಕು. ಮಹಾತ್ಮ ಗಾಂಧೀಜಿ ತತ್ತ್ವದಂತೆ ಹಿಂಸೆಯಿಂದ ಕಾನೂನನ್ನು ಉಲ್ಲಂಘನೆ ಮಾಡುವುದರಿಂದ ಗೆಲುವು ಸಾಧಿಸುವುದು ಅಸಾಧ್ಯ. ಅಹಿಂಸಾ ತತ್ತ್ವವನ್ನು ವಿಶ್ವದ್ಯಾಂತ ಎತ್ತಿಹಿಡಿದ ಏಕೈಕ ವ್ಯಕ್ತಿ ಗಾಂಧೀಜಿ. ಅವರು ಹಿಂಸೆಯಿಂದ ಗೆಲ್ಲಬಹುದೆಂಬುದನ್ನು ಸುಳ್ಳು ಮಾಡಿದ್ದರು ಎಂದು ಹೇಳಿದರು. ಸೋಲು ಸವಾಲನ್ನು ಮೂಡಿಸುತ್ತದೆ: ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಟಿ.ಮಹೇಶ್ ಮಾತನಾಡಿ, ಮಹಾತ್ಮಾಗಾಂಧಿ ಲಾಲ್‌ಬಹದ್ದೂರ್ ಶಾಸ್ತ್ರಿಗಳಂತಹ ಮಹಾನ್ ನಾಯಕರ ಶ್ರಮದಿಂದ ಭಾರತ ಇಂದು ವಿಶ್ವದ ಜಗದ್ಗುರು ಎಂಬ ಪಟ್ಟವಿದು. ಶಾಶ್ವತವಾಗಿ ಆ ಪಟ್ಟವನ್ನು ಉಳಿಸಬೇಕಿರುವುದು ನನ್ನ ಮೇಲಿದ್ದು ಎಲ್ಲರೂ ದೇಶದ ಉನ್ನತಿಗಾಗಿ ಶ್ರಮಿಸಬೇಕಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ವಿಷಯಗಳಿಗೆ ಮಾತ್ರ ಸೀಮಿತವಾಗದೆ ಮೊಬೈಲ್ ದಾಸರಾಗದೆ ನಿಮ್ಮ ಭವಿಷ್ಯದ ಗುರಿಯನ್ನಿಟ್ಟುಕೊಂಡು ಕಾನೂನು ನೀತಿ ನಿಯಮಗಳನ್ನು ಪಾಲಿಸಿ ಭವಿಷ್ಯದಲ್ಲಿ ಯಶಸ್ಸನ್ನು ಕಾಣಿ. ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂಜಿಕೆ ಬೇಡ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಕೀಲರಾದ ಎಚ್.ನಾರಾಯಣ ಸ್ವಾಮಿ ಮಕ್ಕಳ ಹಕ್ಕುಗಳ ಬಗ್ಗೆ, ವಕೀಲೆ ವತ್ಸಲಾ ಮಹಾತ್ಮಾ ಗಾಂಧಿ ಜಯಂತಿ ಮತ್ತು ಲೋಕ್ ಅದಾಲತ್‌ನ ಉಪಯೋಗ ಕುರಿತು ಉಪನ್ಯಾಸ ನೀಡಿದರು.
from India & World News in Kannada | VK Polls https://ift.tt/3A7zDxb