ಬೀದಿ ಜಗಳ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿ: ಕಾಂಗ್ರೆಸ್‌ ಮುಖಂಡರಿಗೆ ಸೋನಿಯಾ ಗಾಂಧಿ ಕಿವಿಮಾತು

: ಪಂಚ ರಾಜ್ಯಗಳ ವಿಧಾನಸಭೆ ಒತ್ತಡ ಹೆಚ್ಚುತ್ತಿರುವ ನಡುವೆಯೇ ಮಂಗಳವಾರ ಪಕ್ಷದ ಪ್ರಮುಖರ ಸಭೆ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷೆ ಅವರು, ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕಿವಿ ಮಾತು ಹೇಳಿದ್ದಾರೆ. 'ವೈಯಕ್ತಿಕ ಮಹತ್ವಾಕಾಂಕ್ಷೆಗಿಂತ ಪಕ್ಷದ ಹಿತ ಮುಖ್ಯ. ಬೀದಿಗಿಳಿದು ಪರಸ್ಪರ ಕಚ್ಚಾಡಬೇಡಿ. ಅಶಿಸ್ತಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿ' ಎಂದು ಕಾಂಗ್ರೆಸ್‌ ನಾಯಕರಿಗೆ ಸೋನಿಯಾ ಗಾಂಧಿ ಸಲಹೆ ನೀಡಿದರು. ಪಕ್ಷದಲ್ಲಿ ಹೆಚ್ಚುತ್ತಿರುವ ಅಶಿಸ್ತು ಮತ್ತು ಬಂಡಾಯದ ಪ್ರತಿಧ್ವನಿ ಬಗ್ಗೆ ಕಳೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿಯೇ ಸೋನಿಯಾ ಗಾಂಧಿ ಖಾರವಾಗಿ ಮಾತನಾಡಿದ್ದರು. ನಾಯಕತ್ವದ ವಿರುದ್ಧ ಬಹಿರಂಗ ಅಪಸ್ವರ ಎತ್ತಿದ್ದ ಹಿರಿಯ ನಾಯಕರ ವಿರುದ್ಧ ಕಠಿಣ ನೀಡಿದ್ದರು. ಪಂಚ ರಾಜ್ಯ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ಮಂಗಳವಾರ ನಡೆದ ಸಭೆಯಲ್ಲಿಯೂ ನಾಯಕರ ಅಶಿಸ್ತಿನ ವರ್ತನೆ ಕುರಿತೇ ಹೆಚ್ಚಿನ ಪ್ರಸ್ತಾಪ ನಡೆಯಿತು. 'ಪಕ್ಷದ ನೀತಿ ನಿಯಮಗಳ ವಿಷಯದಲ್ಲಿ ರಾಜ್ಯ ಮುಖಂಡರ ನಡುವೆ ಸ್ಪಷ್ಟತೆ ಇಲ್ಲ. ಪರಸ್ಪರ ಹೊಂದಾಣಿಕೆ ಬಗ್ಗೆಯಂತೂ ಕೇಳಲೇ ಬೇಡಿ. ಪ್ರಮುಖ ವಿಷಯಗಳ ಚರ್ಚೆ ತಳ ಹಂತದ ಕಾರ್ಯಕರ್ತರವರೆಗೆ ಮುಟ್ಟುವುದೇ ಇಲ್ಲ. ಇಂತಹ ಅಶಿಸ್ತು ಇಟ್ಟುಕೊಂಡು ಪಕ್ಷ ಬಲಪಡಿಸುವುದು ಹೇಗೆ' ಎಂದು ಮುಖಂಡರನ್ನು ಸೋನಿಯಾ ಗಾಂಧಿ ಪ್ರಶ್ನಿಸಿದರು. ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಮತ್ತು ಪ್ರದೇಶ ಕಾಂಗ್ರೆಸ್‌ ಸಮಿತಿಗಳ ಅಧ್ಯಕ್ಷರು ಸೋನಿಯಾ ಗಾಂಧಿ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸದ್ಯದ ಸ್ಥಿತಿಯಲ್ಲಿ ಪಕ್ಷಕ್ಕೆ ಚೈತನ್ಯ ನೀಡಲು ಕಾರ್ಯಕರ್ತರಿಗೆ ಸರಿಯಾದ ತರಬೇತಿ ನೀಡುವ ಅಗತ್ಯ ಇದೆ ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದರು. 'ಬಿಜೆಪಿಯ ಸುಳ್ಳು ಪ್ರಚಾರ ಮಿತಿ ಮೀರಿದೆ. ಇದರ ವಿರುದ್ಧ ಹೋರಾಡಲು ಕಾರ್ಯಕರ್ತರಿಗೆ ಸರಿಯಾದ ತರಬೇತಿ ಬೇಕು. ಆ ತರಬೇತಿ ಮಾದರಿ ಹೇಗಿರಬೇಕು ಎನ್ನುವ ಕುರಿತು ರೂಪುರೇಷೆ ಸಿದ್ಧಪಡಿಸಿ' ಎಂದು ರಾಜ್ಯ ಸಮಿತಿಗಳ ಪ್ರಮುಖರಿಗೆ ಸೋನಿಯಾ ಗಾಂಧಿ ಸಲಹೆ ನೀಡಿದರು. ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ, ಪಕ್ಷ ಸೂಕ್ತ ಸಿದ್ದತೆಗಳನ್ನು ಮಾಡಿಕೊಳ್ಳಲು ಸಜ್ಜಾಗುತ್ತಿದೆ.


from India & World News in Kannada | VK Polls https://ift.tt/3ntcoJH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...