ಬಿಜೆಪಿ ಸರ್ಕಾರ ಬ್ರಿಟಿಷರಿಗಿಂತ ಒಂದು ಕೈ ಮೇಲು! ಡಿಕೆಶಿ ವಾಗ್ದಾಳಿ

ಬೆಂಗಳೂರು: ಬಿಜೆಪಿ ಸರ್ಕಾರ ಬ್ರಿಟಿಷರಿಗಿಂತ ಒಂದು ಕೈ ಮೇಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಉತ್ತರ ಪ್ರದೇಶದಲ್ಲಿ ರೈತ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರ ಘಟನೆಯನ್ನು ಖಂಡಿಸಿದರು. ಅಲ್ಲದೆ ಮೃತಪಟ್ಟ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದರು. ರೈತರು ಕಳೆದ 10 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದನ್ನು ಸಹಿಸಲಾಗದೆ ಈ ರೀತಿ ಮಾಡಲಾಗಿದೆ ಎಂದು ಆರೋಪ ಮಾಡಿದರು. ಭಾರತ ದೇಶ ಯಾವ ಕಡೆ ಸಾಗತ್ತಿದೆ ಎಂದ ಅವರು, ದೇಶದ ಜನರಿಗೆ ಗಾಬರಿಯಾಗುತ್ತಿದೆ. ದೇಶದ ಅನ್ನದಾತನಿಗೆ ರಕ್ಷಣೆ ಇಲ್ಲದಂತಾಗಿದೆ. ಅನ್ನದಾತ ತನ್ನ ರಕ್ಷಣೆಗೋಸ್ಕರ ಹೋರಾಟ ಮಾಡುತ್ತಿದ್ದಾನೆ. ಹೋರಾಟ ಮಾಡುವ ರೈತನ ಮೇಲೆ ಬಿಜೆಪಿಯ ಮಂತ್ರಿಗಳ ಬೆಂಗಾವಲು ಕಾರು ಹರಿಸಿ ಕೊಲೆ ಮಾಡಲಾಗಿದೆ. ಇದು ಇಡೀ ದೇಶದ ರೈತ ಸಮುದಾಯದ ಕೊಲೆ, ಪ್ರಜಾಪ್ರಭುತ್ವದ ಕೊಲೆ ಎಂದು ಕಿಡಿಕಾರಿದರು. ಮೃತರ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರ ಅವರ ಮೈಮೇಲೆ ಕೈಹಾಕಿ ಪೊಲೀಸರು ಎಳೆದಾಡಿದ್ದಾರೆ. ಇದು ಭಾರತೀಯ ಹೆಣ್ಣುಮಗಳಿಗೆ ಆದ ಅವಮಾನ. ಹಿಂಸಾಚಾರದಲ್ಲಿ ಎಂಟು ಜನರ ಸಾವಾಗಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನ್ ಹಾಗೂ ಕೇಂದ್ರ ಸಚಿವರು ರಾಜೀನಾಮೆ ನೀಡಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಪೇಪರ್‌ಗಳಲ್ಲಿ ಜಾಹೀರಾತು ಕೊಟ್ಟು ಮಾಧ್ಯಮಗಳ ಮೂಲಕ ಆಚಾರ ವಿಚಾರ ಪ್ರಚಾರ ಮಾಡುವ ಪ್ರಯತ್ನ ಅಲ್ಲ ಭಾರತದ ಸಂಸ್ಕೃತಿ, ರೈತರು ದೇಶದಲ್ಲಿ ಸಿಡಿದೆದ್ದಿದ್ದಾರೆ. ಕೊಲೆ ನಡೆದಿದೆ. ಕೊಲೆಯಾದ ರೈತರ ಕುಟುಂಬವನ್ನು ಭೇಟಿ ಮಾಡಲು ಮುಂದಾದ ಪ್ರಿಯಾಂಕ ಗಾಂಧಿ ಬಂಧನ ಖಂಡನೀಯ. ಕಾಂಗ್ರೆಸ್ ಪಕ್ಷ ಪ್ರಿಯಾಂಕ ಗಾಂಧಿ ಅವರ ಬೆಂಬಲಕ್ಕೆ ನಿಂತಿರುತ್ತದೆ. ಪ್ರತಿಭಟನೆ ನಿಯಂತ್ರಣ, ಬಂಧನ ಬಿಜೆಪಿ ಸಂಸ್ಕೃತಿ, ಪ್ರಜಾಪ್ರಭುತ್ವ ವವ್ಯವಸ್ಥೆ ಸತ್ತಿದೆ. ಸರ್ವಾಧಿಕಾರ ಎದ್ದು ಕಾಣುತ್ತಿದೆ. ಹಿಟ್ಲರ್ ಮನಸ್ಥಿತಿ ಸರ್ಕಾರ ಈ ದೇಶದಲ್ಲಿ ಇದೆ ಎಂಬುವುದಕ್ಕೆ ಇಂತಹ ಘಟನೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/3uDgult

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...