ಕಲಬುರಗಿ: ಪ್ರಧಾನಿ ಚಿನ್ನದ ಗಟ್ಟಿ ಇದ್ದಹಾಗೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಎಂಬ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇಡೀ ವಿಶ್ವವೇ ಮೋದಿಯನ್ನು ಮೆಚ್ಚಿಕೊಂಡಿದೆ. ಖರ್ಗೆಯವರು ಹೇಳಿದ್ರೆ ಇಡೀ ವಿಶ್ವ ಮೆಚ್ಚುತ್ತಾ? ಎಂದು ಪ್ರಶ್ನಿಸಿದರು. ಕಲಬುರಗಿಯಲ್ಲಿ ಸೋಮವಾರ ಮಾತನಾಡಿದ ಅವರು, ನರೇಂದ್ರ ಮೋದಿ ಚಿನ್ನದ ಗಟ್ಟಿ ಇದ್ದಹಾಗೆ. ಚಿಲ್ಲರೆ ಮನುಷ್ಯ ಅಂದ್ರೆ ಯಾರಾದ್ರೂ ಒಪ್ಪುತ್ತಾರಾ? ಖರ್ಗೆಯವರು ಬಾಯಿ ತಪ್ಪಿ ಹೇಳಿದ್ರೆ ಕ್ಷಮೆ ಕೇಳಲಿ. ಈ ಮಾತಿಂದ ನನಗಂತೂ ಬಹಳ ಬೇಜಾರಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು. ಕಲಬುರಗಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಖರ್ಗೆ, ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗೆ ಪ್ರಧಾನಿ ಮೋದಿ ಅವರು ಒಂದೇ ಒಂದು ದಿನವೂ ತಯಾರಿಲ್ಲ. ಬರೀ ಸುಳ್ಳು ಹೇಳಿ ಜನರನ್ನ ಮರಳು ಮಾಡುವುದರಲ್ಲಿ ಮಾತ್ರ ಮೋದಿ ನಿಸ್ಸೀಮರಾಗಿದ್ದಾರೆ ಎಂದು ಕಿಡಿ ಕಾರಿದ್ದರು. ವ್ಯಾಕ್ಸಿನ್ ಜನ ತಗೊಂಡ್ರೆ ದುಷ್ಪರಿಣಾಮ ವಿಪಕ್ಷಗಳಿಗೆ ಆಗಿದೆ ಎನ್ನುವ ಮೋದಿ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಮೋದಿ ಅವರದ್ದು ಚಿಲ್ಲರೇ ಮಾತು, ಅಂತಹ ಚಿಲ್ಲರೆ ಮಾತುಗಳಿಗೆ ಜಾಸ್ತಿ ಮಹತ್ವ ಕೊಡಬೇಡಿ. ಅವರು ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಅಡ್ವಾಣಿ ಅವರಂತ ಹಿರಿಯರು ಎದುರು ಬಂದ್ರೂ ನೋಡದೇ ಹೋಗುವ ಗುಣ ಮೋದಿ ಅವರದ್ದಾಗಿ ಅಂತ ಹೇಳಿದ್ದರು. ಬಿಜೆಪಿ ಶಾಸಕರ ಪಕ್ಷಾಂತರ ವದಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿಯ ಶಾಸಕರು ಸಿಂಹ ಇದ್ದಂತೆ. ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಹೋಗೋದೇ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಪೀಸ್ ಪೀಸ್ ಆಗಿದೆ. ನಮ್ಮ ಶಾಸಕರೆಲ್ಲ ಚಿನ್ನದ ಗಟ್ಟಿ ತರ ಇದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು, ಚುನಾವಣೆ ಬಂದ್ರೆ ಬಿಜೆಪಿಗೆ ಖುಷಿ ಕಾಂಗ್ರೆಸ್ ಗೆ ನಡುಕ. ಚುನಾವಣೆ ಅಂದ್ರೆ ಗೆಲುವು ಬಿಜೆಪಿಗೆ ಫಿಕ್ಸ್. ಸಾಯೋ ಪಾರ್ಟಿ ಅಂದ್ರೆ ಅದು ಕಾಂಗ್ರೆಸ್ ಹೀಗಾಗಿ ಎರಡೂ ಬೈ ಎಲೆಕ್ಷನ್ ನಾವು ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2024 ರೊಳಗೆ ಮನೆಮನೆಗೆ ಶುದ್ದ ಕುಡಿಯೋ ನೀರು ಪೂರೈಕೆ ಮಾಡಲಾಗುವುದು. ರಾಜ್ಯದಲ್ಲಿ 750 ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಪ್ರತಿ ಪಂಚಾಯತಿಗೆ 25 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಹೇಳಿದರು.
from India & World News in Kannada | VK Polls https://ift.tt/3a6WkXP