ಚಂದ್ರನ ಮೇಲೆ ನಿವೇಶನ ಕೊಡಿಸುವುದಾಗಿ ಆಸೆಯೊಡ್ಡಿ ಬೆಂಗಳೂರು ಮಹಿಳೆಗೆ ಸಾವಿರಾರು ರೂಪಾಯಿ ವಂಚನೆ!

ಬೆಂಗಳೂರು: ಚಂದ್ರ ಗ್ರಹದಲ್ಲಿ ನಿವೇಶನ ಕೊಡಿಸುವುದಾಗಿ ಆಸೆ ಹುಟ್ಟಿಸಿದ ಸೈಬರ್‌ ಖದೀಮರು ಮಹಿಳೆಯಿಂದ 25 ಸಾವಿರ ರೂ. ಪಡೆದು ವಂಚಿಸಿದ್ದಾರೆ. ಆಕಾಶ್‌ ನಾರಾಯಣ್‌ ಎಂಬಾತ ತನಗೆ ಚಂದ್ರಗ್ರಹದಲ್ಲಿ ನಿವೇಶನ ಕೊಡಿಸುವುದರ ಜತೆಗೆ ಚೈನ್‌ ಲಿಂಕ್‌ ಬ್ಯುಸಿನೆಸ್‌ನಲ್ಲಿ ಹೆಚ್ಚಿನ ಲಾಭಂಶ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾನೆ ಎಂದು ಮಹಿಳೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏನಿದು ಘಟನೆ? ಸಾಮಾಜಿಕ ಜಾಲತಾಣದಲ್ಲಿ ಉಸ್ಕಾ ಅಬೂಬಕರ್‌ ಎಂಬ ಹೆಸರಿನಲ್ಲಿ ಗುರುತಿಸಿಕೊಂಡ ಮಹಿಳೆ ದೂರುದಾರ ಮಹಿಳೆಗೆ ಪರಿಚಯವಾಗಿದ್ದಳು. ಕ್ರಿಪ್ಟೊ ಕರೆನ್ಸಿ ವ್ಯವಹಾರ ತಜ್ಞೆ ಎಂದು ಆಕೆ ಹೇಳಿಕೊಂಡಿದ್ದಳು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ಆಮಿಷವೊಡ್ಡಿ 45,700 ರೂ. ಹೂಡಿಕೆ ಮಾಡುವಂತೆ ಪುಸಲಾಯಿಸಿದಳು. ಅದಕ್ಕೆ ಒಪ್ಪಿ 25 ಸಾವಿರ ರೂ. ಗೂಗಲ್‌ ಪೇ ಮೂಲಕ ವರ್ಗಾವಣೆ ಮಾಡಿದೆ. ಆದರೆ, ಯಾವುದೇ ಲಾಭಾಂಶ ಕೊಡಲಿಲ್ಲ. ಸಂಪರ್ಕ ಮಾಡಲು ಪ್ರಯತ್ನಿಸಿದಾಗ ಲಭ್ಯವಾಗಲಿಲ್ಲ ಎಂದು ಮೋಸಕ್ಕೆ ಒಳಗಾದ ಮಹಿಳೆ ಆರೋಪಿಸಿದ್ದಾರೆ. ಇದಾದ ಮೇಲೆ ಗೂಗಲ್‌ ಪೇ ಮೂಲಕ ಹಣ ವರ್ಗಾವಣೆಯಾದ ಬ್ಯಾಂಕ್‌ ಖಾತೆ ಜಾಡು ಪತ್ತೆ ಮಾಡಿದಾಗ ಆಕಾಶ್‌ ನಾರಾಯಣ್‌ ಎಂಬಾತನಿಗೆ ಸೇರಿದ ಐಸಿಐಸಿಐ ಬ್ಯಾಂಕ್‌ ಖಾತೆ ಆಗಿತ್ತು. ಈತ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಸಹ ಬೆಳಕಿಗೆ ಬಂದಿದೆ. ಅಲ್ಲದೆ, ಕೊಡಿಸುವುದಾಗಿ ನಂಬಿಸಿ ಅಕ್ರಮವಾಗಿ ಹಲವರಿಂದ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಂಚಲೋಹ, ಕಲಾಕೃತಿ ಕಳವು ಆರೋಪಿಗಳ ಬಂಧನಮಡಿಕೇರಿ: ಪಂಚಲೋಹ, ಕಂಚಿನ ಪುರಾತನ ಕಲಾಕೃತಿಗಳು ಹಾಗೂ ಕಾಫಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿ ಬಳಿಯ ನೀರು ಕೊಲ್ಲಿಯ ಲವ ಅಲಿಯಾಸ್‌ ಚೀಯಣ್ಣ (30), ಮಂಜು (22) ಮತ್ತು ಮೇಕೇರಿಯ ಐ.ಎಂ ರೋಹಿತ್‌ (32) ಬಂಧಿತ ಆರೋಪಿಗಳು. ಕಳೆದ ವರ್ಷ ಅ. 7ರಂದು ಮುಂಬೈಯಲ್ಲಿ ವಾಸವಿರುವ ಕರ್ಣಂಗೇರಿ ಗ್ರಾಮದ ಆಶಾ ಕುಮಾರ್‌ ಎಂಬವರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಗೆ ಮುಂದಾದ ಪೊಲೀಸರಿಗೆ ಶನಿವಾರ ಮೂವರು ಆರೋಪಿತರು ಸೆರೆ ಸಿಕ್ಕಿದ್ದಾರೆ. ಸುಮಾರು 7 ಲಕ್ಷ ಮೌಲ್ಯದ ಪುರಾತನ ಕಲಾಕೃತಿಗಳಲ್ಲದೆ, ಕಗ್ಗೋಡ್ಲಿನ ಖಾಸಗಿ ತೋಟದಿಂದ ಕಳುವಾಗಿದ್ದ ವೀಡ್‌ ಕಟ್ಟರ್‌ ಮತ್ತಿತರ 3 ಲಕ್ಷ ಮೌಲ್ಯದ ಕೃಷಿ ಯಂತ್ರೋಪಕರಣಗಳು ಹಾಗೂ ಕೆ.ನಿಗಡುಗಣೆಯ ಮಾದಪ್ಪ ಎಂಬವರ ದಿನಸಿ ಅಂಗಡಿಯಿಂದ ಕಳುವಾಗಿದ್ದ 20,000 ಮೌಲ್ಯದ 3.5 ಚೀಲ ಕಾಫಿಯನ್ನೂ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಲಾಗಿದ್ದ 3.5 ಲಕ್ಷ ಮೌಲ್ಯದ ವ್ಯಾನ್‌ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೊಡಗು ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ತಿಳಿಸಿದ್ದಾರೆ.


from India & World News in Kannada | VK Polls https://ift.tt/2YfnAkI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...