ಬಾದಾಮಿ ಗೆಳೆಯರಿಂದ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ; 15 ರೂ.ನಲ್ಲಿ 120 ಕಿ.ಮೀ ಪಯಣ!

ಬಾಗಲಕೋಟೆ: ಕೊರೊನಾ ಲಾಕ್ ಡೌನ್ ಅದೆಷ್ಟೋ ಜನರ ಜೀವನ ಕಸಿದುಕೊಂಡಿದೆ. ಲಾಕ್ ಡೌನ್ ಟೈಮ್ ನಲ್ಲಿ ಉದ್ಯೋಗ ಇಲ್ಲದೇ ಜನರ ಜೇಬು ಖಾಲಿ ಆಗಿತ್ತು. ಈ ಮಧ್ಯೆ ಪೆಟ್ರೋಲ್ ರೇಟ್ ಕೂಡ ಗಗನಕ್ಕೆ ಏರಿದೆ. ಆದರೇ ಇದೇ ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತಿದ್ದ ಬಾಗಲಕೋಟೆ ಜಿಲ್ಲೆಯ ಪಟ್ಟಣದ ಇಬ್ಬರು ಸ್ನೇಹಿತರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಹೌದು ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್ ಹಾಗೂ ಮಂಜುನಾಥ ಜಲಗೇರಿ ಎಂಬುವರು ತಯಾರು ಮಾಡಿದ್ದಾರೆ. ಹೀಗೆ ವಿಶೇಷವಾಗಿ ತಯಾರಾಗಿರುವ ಬೈಕ್ ಗೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ. ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್ ಹಾಗೂ ಮಂಜುನಾಥ ಜಲಗೇರಿ ರೂವಾರಿಯ ವಿಶೇಷ ಬೈಕ್ ಗೆ ಕೇವಲ ಬ್ಯಾಟರಿ ಅಷ್ಟೇ ಸಾಕು. ಅದು ಕೇವಲ ಮೂರು ಗಂಟೆಗಳ ಕಾಲ ಚಾರ್ಜ್ ಮಾಡಿದ್ರೆ ಸಾಕು 120 ಕಿ.ಮೀ ವರೆಗೆ ಸಂಚಾರ ಮಾಡುತ್ತದೆ. ಹಾಗಾಗಿ 15 ರೂಪಾಯಿ ಖರ್ಚಿನಲ್ಲಿ 120 ಕಿ.ಮೀ ಸಂಚರಿಸಬಹುದಾಗಿದೆ. ಇನ್ನು ಬಾದಾಮಿ ಪಟ್ಟಣದ ಮೊಹಮ್ಮದ್ ಇಕ್ಬಾಲ್‌ ಎಲೆಕ್ಟ್ರಿಕ್ ಅಂಗಡಿ ಹೊಂದಿದ್ದಾರೆ. ಹಾಗೇ ಮಂಜುನಾಥ ಜಲಗೇರಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ. ಲಾಕ್ ಡೌನ್ ವೇಳೆ ಇಬ್ಬರ ಅಂಗಡಿಗಳು ಗ್ರಾಹಕರಿಲ್ಲದೇ ಬಂದ್‌ ಆಗಿದ್ದವು. ಈ ವೇಳೆ ಇಬ್ಬರೂ ಸೇರಿ ಎಲೆಕ್ಟ್ರಿಕ್ ಬೈಕ್ ತಯಾರಿಸುವ ಫ್ಲ್ಯಾನ್ ಮಾಡುತ್ತಾರೆ. ಹಾಗೆ ಸುಮಾರು 3-4 ತಿಂಗಳ ಕಾಲ ಸಮಯ ತೆಗೆದುಕೊಂಡು ಕೊನೆಗೂ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ.‌ ಈ ಬೈಕ್ ಗೆ ಒಟ್ಟು ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದೇ ಬ್ಯಾಟರಿಗಳ‌ ಮೂಲಕ ಬೈಕ್ ಸಂಚಾರ ಮಾಡುತ್ತದೆ. ಈ ಬೈಕ್ ಕೇವಲ ಸಿಟಿಯಲ್ಲಿ ಓಡಾಟಕ್ಕೆ ಬಳಸಬಹುದಾಗಿದೆ. ಅಂಗಡಿ, ಮನೆ, ಮಾರುಕಟ್ಟೆ ಸೇರಿ ಸ್ಥಳೀಯ ಓಡಾಟಕ್ಕೆ ಹೆಚ್ಚು ಅನುಕೂಲಕರವಾಗಿದೆ. ಒಟ್ಟು 40ರಿಂದ 50 ಸಾವಿರ ರೂಪಾಯಿ ಖರ್ಚಿನಲ್ಲಿ ಈ ಬೈಕ್ ರೂಪಗೊಂಡಿದೆ. ಈ ಬೈಕ್ ಪರಿಸರ ಸ್ನೇಹಿಯಾಗಿದೆ. ವೇಗಮಿತಿ 30 ಕಿ.ಮೀ ಇರುವುದರಿಂದ ಬೈಕ್ ಗೆ ಯಾವುದೇ ನೋಂದಣಿ ಅಥವಾ ಪರವಾನಗಿ ಬೇಕಾಗಿಲ್ಲ. ಒಟ್ಟಿನಲ್ಲಿ ಈ ಲಾಕ್‌ಡೌನ್ ಟೈಮ್ ನಲ್ಲಿ ಖಾಲಿ ಕುಳಿತ ಇಬ್ಬರೂ ಸ್ನೇಹಿತರು ಸೇರಿ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸ್ನೇಹಿತರ ಈ ಎಲೆಕ್ಟ್ರಿಕ್ ಬೈಕ್ ಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.


from India & World News in Kannada | VK Polls https://ift.tt/3l2QWLz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...