ಟೋಕಿಯೋ (ಜಪಾನ್): ಆರಂಭಿಕ ಮೂರು ಕ್ವಾರ್ಟರ್‌ಗಳಲ್ಲಿನ ಕಠಿಣ ಹೋರಾಟದ ಹೊರತಾಗಿಯೂ ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ, ಪುರುಷರ ಹಾಕಿ ಸೆಮಿಫೈನಲ್ ಕಾದಾಟದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ 2-5 ಅಂತರದಲ್ಲಿ ಸೋಲು ಅನುಭವಿಸಿತು. ಆ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಪದಕದ ಕನಸು ಭಗ್ನವಾಯಿತು. ಕಳೆದ ಪಂದ್ಯಗಳ ಗೆಲುವಿನ ವಿಶ್ವಾಸದಲ್ಲಿ ಮಂಗಳವಾರ ಬೆಳಗ್ಗೆ ಅಂಗಳ ಪ್ರವೇಶಿಸಿದ್ದ ಭಾರತ ಪುರಷರ ಹಾಕಿ ತಂಡ, ಆರಂಭಿಕ ಮೂರು ಕ್ವಾರ್ಟರ್‌ಗಳ ಅಂತ್ಯದವರೆಗೂ ಅಂದುಕೊಂಡ ಯೋಜನೆಯಂತೆ ಅತ್ಯುತ್ತಮ ಪ್ರದರ್ಶನವನ್ನು ತೋರಿತ್ತು. ಅದರಂತೆ 2-2 ಸಮಬಲ ಕಾಯ್ದುಕೊಂಡಿತ್ತು. ಆದರೆ, ನಾಲ್ಕನೇ ಕ್ವಾರ್ಟರ್‌ನಲ್ಲಿ ಎಸಗಿದ ಕೆಲ ತಪ್ಪುಗಳಿಂದ ಮನ್‌ಪ್ರಿತ್ ಬಳಗ ವಿಶ್ವದ ಎರಡನೇ ಶ್ರೇಯಾಂಕದ ಬೆಲ್ಜಿಯಂಗೆ ಶರಣಾಗಬೇಕಾಯಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3CaJjsP