ಮಂಗಳವಾರ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ ಬೊಮ್ಮಾಯಿ; ಸಚಿವಾಕಾಂಕ್ಷಿಗಳಿಗೆ ಸಿಗುತ್ತಾ ಸಿಹಿ ಸುದ್ದಿ?

ಬೆಂಗಳೂರು: ಸರ್ಕಸ್ ನಡೆಯುತ್ತಿದ್ದು ಸದ್ಯ ದೆಹಲಿಯಲ್ಲಿ ಇರುವ ಸಿಎಂ ಅವರು ಮಂಗಳವಾರ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. ಮಧ್ಯಾಹ್ಮ ಎರಡು ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು ಹೈಕಮಾಂಡ್ ಕೊಟ್ಟ ಸಿಹಿ ಸುದ್ದಿಯ ಸುಳಿವು ನೀಡುತ್ತಾರಾ? ಎಂಬ ಕುತೂಹಲ ಕೆರಳಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಸುದೀರ್ಘ ಮಾತುಕತೆಯ ಸಂದರ್ಭದಲ್ಲಿ ತಮ್ಮ ಪಟ್ಟಿಯನ್ನು ನೀಡಿದ್ದಾರೆ. ಈ ಪಟ್ಟಿಯನ್ನು ಪರಿಶೀಲನೆ ನಡೆಸಿ ಅಂತಿಮ ಒಪ್ಪಿಗೆಯನ್ನು ಹೈಕಮಾಂಡ್ ನೀಡಲಿದೆ. ಮಂಗಳವಾರ ಸಂಜೆ ಮತ್ತೊಂದು ಸುತ್ತಿನ ಸಭೆಯ ಬಳಿಕ ಪಟ್ಟಿಗೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆ ಇದೆ. ಆದರೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುವುದು ಇನ್ನು ಗೌಪ್ಯವಾಗಿದೆ. ಹೀಗಿದ್ದರೂ ದೆಹಲಿ ಹಾಗೂ ಬೆಂಗಳೂರು ಶಕ್ತಿ ಕೇಂದ್ರಗಳಲ್ಲಿ ಲಾಬಿ ಮುಂದುವರಿದಿದೆ. ಆಕಾಂಕ್ಷಿಗಳಲ್ಲಿ ನಿರೀಕ್ಷೆ ಸಚಿವ ಸಂಪುಟ ರಚನೆಗೆ ಬಹುತೇಕ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲೂ ನಿರೀಕ್ಷೆ ಗರಿಗೆದರಿದೆ. ಹಲವು ಜನರು ದೆಹಲಿಯಲ್ಲಿ ಬೀಡುಬಿಟ್ಟು ಅಂತಿಮ ಹಂತದ ಲಾಬಿಯಲ್ಲಿ ತೊಡಗಿದ್ದಾರೆ. ಆದರೆ ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ. ಸಂಪುಟ ರಚನೆಯ ವೇಳೆ ಮೂರು ಸೂತ್ರವನ್ನು ಅನುರಿಸಲು ನಿರ್ಧಾರ ಮಾಡಲಾಗಿದೆ. ಪ್ರಾದೇಶಿಕ ಪಾತಿನಿಧ್ಯ, ಜಾತಿ ಸಮೀಕರಣ ಹಾಗೂ ಡಿಸಿಎಂ ಹುದ್ದೆ ಸೃಷ್ಟಿ ಮಾಡಲು ಪಕ್ಷ ನಿರ್ಧರಿಸಿದೆ. ಸಂಜೆಯೊಳಗಾಗಿ ಲಿಸ್ಟ್ ಫೈನಲ್ ಸಂಪುಟದಲ್ಲಿ ಯಾರು ಯಾರು ಇದ್ದಾರೆ ಎಂಬ ಲಿಸ್ಟ್‌ ಮಂಗಳವಾರ ಸಂಜೆಯೊಳಗಾಗಿ ಅಂತಿಮಗೊಳ್ಳಲಿದೆ. ಮಧ್ಯಾಹ್ಮ ಸಿಎಂ ರಾಜ್ಯಕ್ಕೆಆಗಮಿಸಲಿದ್ದು ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.


from India & World News in Kannada | VK Polls https://ift.tt/2WOiwma

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...