ಸಂಸತ್ತಿಗೆ ವಿಪಕ್ಷ ನಾಯಕರ ಸೈಕಲ್ ಜಾಥಾ: ಮೋದಿ ವಿರೋಧಿ ಬಣ ರಚಿಸಿದ ರಾಹುಲ್ ಉಪಹಾರ ಕೂಟ?

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗಾಗಿ ಮೋದಿ ವಿರೋಧಿ ಬಣ ರಚಿಸುವತ್ತ ವಿಪಕ್ಷಗಳು ಮುಂದಡಿ ಇಟ್ಟಿದ್ದು, ಕಾಂಗ್ರೆಸ್ ನಾಯಕ ಮನೆಯಲ್ಲಿ ಇಂದು(ಆ.03-ಮಂಗಳವಾರ) ನಡೆದ ಉಪಹಾರ ಕೂಟ ವಿಪಕ್ಷ ನಾಯಕರ ಒಗ್ಗೂಡುವಿಕೆಗೆ ವೇದಿಕೆ ಕಲ್ಪಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ಸದ್ದು ಮಾಡುತ್ತಿದ್ದು, ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿವೆ. ಈ ಮಧ್ಯೆ ರಾಹುಲ್ ಗಾಂಧಿ ವಿಪಕ್ಷ ನಾಯಕರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿದ್ದು, ಅದರಂತೆ ಪ್ರಮುಖ ವಿಪಕ್ಷ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ್ನು ಸೈದ್ಧಾಂತಿಕವಾಗಿ ವಿರೋಧಿಸುವ ವಿಪಕ್ಷಗಳ ಧ್ವನಿ ಗಟ್ಟಿಯಾಗಬೇಕಾದ ಸಮಯ ಬಂದಿದೆ ಎಂದು ಹೇಳಿದರು. ದೇಶದ ಜ್ವಲಂತ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಫಲವಾಗಿರುವ , ಜನರನ್ನು ಒಡೆದು ಆಳುವ ಆರ್‌ಎಸ್‌ಎಸ್‌ನ ದುಷ್ಟ ನೀತಿಯ ಮೊರೆ ಹೋಗಿದೆ. ಕೋಮುವಾದಿ ರಾಜಕಾರಣವನ್ನು ಸೋಲಿಸಲು ಜಾತ್ಯಾತೀತ ಮನೋಭಾವದ ಪಕ್ಷಗಳು ಒಂದಾಗಲೇಬೇಕಿದೆ ಎಂದು ರಾಹುಲ್ ಹೇಳಿದರು. ಸಂಸತ್ತಿಗೆ : ರಾಹುಲ್ ಗಾಂಧಿ ಮನೆಯಲ್ಲಿ ನಡೆದ ಉಪಹಾಋ ಕೂಟದ ಬಳಿಕ ವಿಪಕ್ಷ ನಾಯಕರು ಸಂಸತ್ತಿಗೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದು ವಿಶೇವಾಗಿತ್ತು. ರಾಹುಲ್ ನೇತೃತ್ವದಲ್ಲಿ ನಡೆದ ಈ ಸೈಕಲ್ ಜಾಥಾದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ವಿಪಕ್ಷ ನಾಯಕರು ಕಿಡಿಕಾರಿದರು. ಅಲ್ಲದೇ ಪೆಗಾಸಸ್ ಹಗರಣದ ತನಿಖೆ ನಡೆಸುವಂತೆಯೂ ವಿಪಕ್ಷ ನಾಯಕರು ಈ ವೇಳೆ ಒತ್ತಾಯಿಸಿದರು. ರಾಹುಲ್ ಕರೆದಿದ್ದ ಸಭೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಪ್ರಮುಖ ವಿಪಕ್ಷ ಸದಸ್ಯರು ಭಾಗವಹಿಸಿದ್ದರು. ಆದರೆ ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಭಾಗವಹಿಸದಿರುವುದು ಕೂಡ ಗಮನ ಸೆಳೆದಿದೆ.


from India & World News in Kannada | VK Polls https://ift.tt/3ykSiWf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...