
ನಾಟಿಂಗ್‌ಹ್ಯಾಮ್: ಅತ್ಯಂತ ಪ್ರತಿಭಾನ್ವಿತ ಆಟಗಾರ ಎಂದು ಗುರುತಿಸಿಕೊಂಡಿರುವ , ಪ್ಲೇಯಿಂಗ್ ಇಲೆವೆನ್‌ನಿಂದ ಹೊರಬಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಅದ್ಭುತ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ. ಭಾರತ ತಂಡ ಇದೀಗ ಆತಿಥೇಯ ವಿರುದ್ಧ ಬರೋಬ್ಬರಿ ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡಲಿದ್ದು, ಟೀಮ್ ಇಂಡಿಯಾ ಎಕ್ಸ್-ಫ್ಯಾಕ್ಟರ್ ಆಟಗಾರನಾಗಿ ರಿಷಭ್ ಪಂತ್ ಗುರುತಿಸಿಕೊಂಡಿದ್ದಾರೆ. "ಇದೊಂದು ಅದ್ಭುತ ಪಯಣ. ನನ್ನ ವೃತ್ತಿಬದುಕಿನ ಆರಂಭಿಕ ದಿನಗಳಲ್ಲಿ ಸಾಕಷ್ಟು ಏಳು ಬೀಳನ್ನು ಕಂಡಿದ್ದೇನೆ. ಒಬ್ಬ ಕ್ರಿಕೆಟಿಗನಾಗಿ ನೀವು ಉತ್ತಮ ಆಟಗಾರರಾಗಿ ಬೆಳೆಯುತ್ತಲೇ ಇರಬೇಕು. ನಿಮ್ಮ ತಪ್ಪುಗಳಿಂದ ಪಾಠ ಕಲಿತು, ಉತ್ತಮ ಆಟಗಾರನಾಗಿ ಕಮ್‌ಬ್ಯಾಕ್ ಮಾಡಿ ಅತ್ಯುತ್ತಮ ಆಟವಾಡಬೇಕು ಅಷ್ಟೆ," ಎಂದು ರಿಷಭ್ ಪಂತ್ ಹೇಳಿಕೊಂಡಿದ್ದಾರೆ. "ನನ್ನ ತಪ್ಪುಗಳಿಂದ ಪಾಠ ಕಲಿತಿರುವುದಕ್ಕೆ ನನಗೆ ಬಹಳಾ ಸಂತಸವಿದೆ. ಬಳಿಕ ನನಗೆ ಸಿಕ್ಕಿರುವ ಎಲ್ಲ ಅವಕಾಶಗಳನ್ನೂ ನಾನು ಬಳಸಿಕೊಂಡಿದ್ದೇನೆ. ಈ ಬಗ್ಗೆ ಅತೀವ ಸಂತಸವಿದೆ," ಎಂದು ಬಿಸಿಸಿಐ ತನ್ನ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿರುವ ವಿಡಿಯೋದಲ್ಲಿ ಪಂತ್ ಮಾತನಾಡಿದ್ದಾರೆ. ಇದೇ ವೇಳೆ ತಂಡದ ಹಿರಿಯ ಆಟಗಾರರಿಂದ ಸಾಧ್ಯವಾದಷ್ಟನ್ನು ಕಲಿತು ಉತ್ತಮ ಆಟಗಾರನಾಗುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ. "ನಾನು ರೋಹಿತ್ ಭಾಯ್ ಬಳಿ ಆಟದ ಬಗ್ಗೆ ಮತ್ತು ಹಿಂದಿನ ಪಂದ್ಯಗಳ ಬಗ್ಗೆ ಹೆಚ್ಚು ಮಾತನಾಡುತ್ತೇನೆ. ಅಲ್ಲಿ ಏನು ಮಾಡಬಹುದಿತ್ತು ಎಂಬುದನ್ನು ಚರ್ಚಿಸುತ್ತೇನೆ. ಅಂಥದ್ದೇ ಪರಿಸ್ಥಿತಿ ಮುಂದೆ ಎದುರಾದರೆ ಏನು ಮಾಡಬೇಕು ಎಂಬದರ ಬಗ್ಗೆ ಆಲೋಚಿಸುತ್ತೇವೆ. ನನ್ನ ಆಟ ಸುಧಾರಣಗೆ ಏನೆಲ್ಲಾ ಅಳವಡಿಸಿಕೊಳ್ಳಬೇಕು ಎಂದು ಅವರೊಟ್ಟಿಗೆ ಚರ್ಚೆ ಮಾಡುತ್ತೇನೆ," ಎಂದಿದ್ದಾರೆ. "ವಿರಾಟ್ ಭಾಯ್ ಅವರಂದಲೂ ಹಲವು ತಾಂತ್ರಿಕ ಅಂಶಗಳ ಕುರಿತಾಗಿ ತಿಳಿದುಕೊಂಡಿದ್ದೇನೆ. ಪ್ರಮುಖವಾಗಿ ಇಂಗ್ಲೆಂಡ್‌ನಲ್ಲಿ ಬ್ಯಾಟ್ ಮಾಡುವ ಬಗ್ಗೆ ಅವರಲ್ಲಿ ಚರ್ಚೆ ಮಾಡಿದ್ದೇನೆ. ವಿಕೆಟ್‌ಗೆ ಹತ್ತಿರದಲ್ಲಿ ನಿಂತು ಕೀಪಿಂಗ್ ಮಾಡುವ ಬಗ್ಗೆಯೂ ಚರ್ಚಿಸಿದ್ದೇನೆ," ಎಂದು 23 ವರ್ಷ ಯುವತಾರೆ ಹೇಳಿದ್ದಾರೆ. ಪಂತ್, ಕೊರೊನಾ ವೈರಸ್ ಸೋಂಕಿಗೆ ತುತ್ತಾದ ಕಾರಣ ಜುಲೈ 20-23ರವರೆಗೆ ಡುರ್ಹ್ಯಾಮ್‌ನ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ನಡೆದ ಕೌಂಟಿ ಸೆಲೆಕ್ಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಈಗ ಸಂಪೂರ್ಣ ಚೇತರಿಸಿದ್ದು ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಪರಿಷ್ಕೃತ ತಂಡರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆಎಲ್ ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್. ಕಾಯ್ದಿರಿಸಲ್ಪಟ್ಟ ಆಟಗಾರರು: ಪ್ರಸಿಧ್ ಕೃಷ್ಣ ಮತ್ತು ಅರ್ಝಾನ್ ನಾಗವಾಸವಾಲ. ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಹೀಗಿದೆಜೋ ರೂಟ್ (ಯಾರ್ಕ್‌ಶೈರ್, ನಾಯಕ), ಜೇಮ್ಸ್ ಆಂಡರ್ಸನ್ (ಲಂಕಾಶೈರ್), ಜಾನಿ ಬೈರ್‌ಸ್ಟೋವ್ (ಯಾರ್ಕ್‌ಶೈರ್), ಡಾಮ್ ಬೆಸ್ (ಯಾರ್ಕ್‌ಶೈರ್), ಸ್ಟುವರ್ಟ್ ಬ್ರಾಡ್ (ನಾಟಿಂಗ್‌ಹ್ಯಾಮ್‌ಶೈರ್), ರೋರಿ ಬರ್ನ್ಸ್ (ಸರ್ರೆ), ಜೋಸ್ ಬಟ್ಲರ್ (ಲಂಕಾಶೈರ್), ಝ್ಯಾಕ್ ಕ್ರಾವ್ಲೀ (ಕೆಂಟ್), ಸ್ಯಾಮ್ ಕರ್ರನ್ (ಸರ್ರೆ), ಹಸೀಬ್ ಹಮೀದ್ (ನಾಟಿಂಗ್‌ಹ್ಯಾಮ್‌ಶೈರ್), ಡ್ಯಾನ್ ಲಾರೆನ್ಸ್ (ಎಸೆಕ್ಸ್), ಜಾಕ್ ಲೀಚ್ (ಸಮರ್‌ಸೆಟ್), ಓಲ್ಲೀ ಪೋಪ್ (ಸರ್ರೆ), ಓಲ್ಲೀ ರಾಬಿನ್ಸನ್ (ಸಸೆಕ್ಸ್), ಡಾಮ್ ಸಿಬ್ಲಿ (ವಾರ್ವಿಕ್‌ಶೈರ್), ಬೆನ್ ಸ್ಟೋಕ್ಸ್ (ಡುರ್ಹ್ಯಾಮ್), ಮಾರ್ಕ್ ವುಡ್ (ಡುರ್ಹ್ಯಾಮ್).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3liiHQM