ಚೀನಾದ ಟಿಯಾಂಜಿನ್‌ನಲ್ಲಿ ಭಾರತೀಯ ವಿದ್ಯಾರ್ಥಿ ಕೊಲೆ: ವಿದೇಶಿಗನ ಬಂಧನ

ಬೀಜಿಂಗ್: ಚೀನಾದ ಟಿಯಾಂಜಿನ್ ನಗರದಲ್ಲಿ ಕಳೆದ ತಿಂಗಳು 20 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿಗನೊಬ್ಬನನ್ನು ಬಂಧಿಸಲಾಗಿದೆ ಎಂದು ಮಂಗಳವಾರ ತಿಳಿಸಿದೆ. ಆರೋಪಿ ಯಾವ ದೇಶದವನು ಎಂಬುದನ್ನು ಬಹಿರಂಗಪಡಿಸಿಲ್ಲ. ಟಿಯಾಂಜಿನ್ ವಿದೇಶಿ ಅಧ್ಯಯನ ವಿಶ್ವವಿದ್ಯಾಲಯದಲ್ಲಿ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ವಿದ್ಯಾರ್ಥಿಯಾಗಿದ್ದ ಬಿಹಾರದ ಗಯಾ ಮೂಲದ ಅಮನ್ ನಾಗಸೇನ್ ಎಂಬಾತ ಜುಲೈ 29ರಂದು ಶವವಾಗಿ ಪತ್ತೆಯಾಗಿದ್ದ. 'ವಸತಿ ನಿಲಯದ ನೆಲದ ಮೇಲೆ ಬಿದ್ದಿದ್ದು, ಆತನಲ್ಲಿ ಜೀವ ಇರುವ ಸೂಚನೆ ಕಾಣಿಸುತ್ತಿಲ್ಲ ಎಂದು ನಮಗೆ ರಾತ್ರಿ 8 ಗಂಟೆ ಸುಮಾರಿಗೆ ಮಾಹಿತಿ ಬಂದಿತ್ತು' ಎಂದು ಟಿಯಾಂಜಿನ್ ಪೊಲೀಸರು ತಿಳಿಸಿದ್ದಾರೆ. 'ಸಾರ್ವಜನಿಕ ಭದ್ರತೆ ತಂಡ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಇದು ನರಹತ್ಯೆ ಪ್ರಕರಣವೆಂದು ಕಂಡುಬಂದಿದೆ. ವಿಶ್ವವಿದ್ಯಾಲಯದ ಮತ್ತೊಬ್ಬ ವಿದೇಶಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಶಂಕಿತನ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ ಎಂದು ಸಚಿವಾಲಯ ತಿಳಿಸಿದೆ. ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣ ವಿಕೋಪಕ್ಕೆ ತೆರಳಿದ್ದ ಸಂದರ್ಭದಲ್ಲಿ ಸುಮಾರು 23,000 ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದರು. ಅವರು ಈಗ ಮರಳಿ ಚೀನಾಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ ಈ ವೇಳೆಯಲ್ಲಿಯೂ ಚೀನಾದಲ್ಲಿಯೇ ಉಳಿದುಕೊಂಡಿದ್ದ ಕೆಲವೇ ಭಾರತೀಯ ವಿದ್ಯಾರ್ಥಿಗಳಲ್ಲಿ ಅಮನ್ ನಾಗಸೇನ್ ಒಬ್ಬನಾಗಿದ್ದ. ಅಮನ್ ಹತ್ಯೆಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ತನಿಖೆಯ ಪ್ರಗತಿಯ ವಿವರಗಳನ್ನು ಅಮನ್ ಕುಟುಂಬಕ್ಕೆ ನೀಡಲಾಗುತ್ತಿದೆ ಎಂದು ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ.


from India & World News in Kannada | VK Polls https://ift.tt/3ftLLkq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...