ಬೆಂಗಳೂರು: ಯಾರ ಜೇಬಿನಲ್ಲಿ ಯಾರಿದ್ದಾರೋ ಎಂದು ಸೋನಿಯಾ ಗಾಂಧಿಗೆ ಗೊತ್ತಿರಬಹುದೇ? ಎಂದು ಕಾಂಗ್ರೆಸ್ ಕುರಿತಾಗಿ ಲೇವಡಿ ಮಾಡಿದೆ. ಡಿಕೆಶಿ ನನ್ನ ಜೇಬಿನಲ್ಲಿ ಇದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನಿಂದ ಅವಾಜ್ ಮಾಡಿರುವ ಆರೋಪದ ಬಗ್ಗೆ ಉಲ್ಲೇಖಿಸುತ್ತಾ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಈ ಪ್ರಶ್ನೆಯನ್ನು ಹಾಕಿದೆ. ಕೆಪಿಸಿಸಿ ಅಧ್ಯಕ್ಷ ಅವರು ತನ್ನ ಜೇಬಿನಲ್ಲಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ಅವಾಜ್ ಹಾಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬಣದ ಕಾರ್ಯಕರ್ತನ್ನೊಬ್ಬ ರಾಜ್ಯ ಉಸ್ತುವಾರಿಯ ಎದುರಲ್ಲೇ ಗೋಳು ತೋಡಿಕೊಂಡಿದ್ದಾನೆ. ಹಾಗಾದರೆ ಯಾರ ಜೇಬಿನಲ್ಲಿ ಯಾರಿದ್ದಾರೋ ಎಂದು ಸೋನಿಯಾ ಗಾಂಧಿಗೆ ಗೊತ್ತಿರಬಹುದೇ? ಎಂದು ಬಿಜೆಪಿ ಪ್ರಶ್ನಿಸಿದೆ. ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ವಿಭಾಗೀಯ ಸಮಾವೇಶದಲ್ಲಿ ಮುಖಂಡರು ಸಮಾಲೋಚನೆ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಭೆಗೆ ಬಂದ ವ್ಯಕ್ತಿಯೊಬ್ಬರು ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ಹಾಕಿರುವ ಆವಾಜ್ ಬಗ್ಗೆ ಆರೋಪ ಮಾಡುತ್ತಾ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಇದ್ದರು. ಇದೇ ವಿಚಾರವನ್ನು ಇದೀಗ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್ ಹಾಗೂ ಡಿಕೆ ಶಿವಕುಮಾರ್ ಅವರನ್ನು ಲೇವಡಿ ಮಾಡಿದೆ.
from India & World News in Kannada | VK Polls https://ift.tt/3lfbj8Q